<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಹಾವೇರಿಯಲ್ಲಿ ಸೋಯಾಬೀನ್ ಬಿತ್ತನೆ ಬೀಜ ಖಾಲಿ: ವಿತರಣಾ ಕೇಂದ್ರಕ್ಕೆ ರೈತರ ಆಕ್ರೋಶ

ಹಾವೇರಿಯಲ್ಲಿ ಸೋಯಾಬೀನ್ ಬಿತ್ತನೆ ಬೀಜ ಖಾಲಿ: ವಿತರಣಾ ಕೇಂದ್ರಕ್ಕೆ ರೈತರ ಆಕ್ರೋಶ
Summary: The shortage of soybean seeds in Haveri district has caused concern among farmers. As the sowing season begins, the seeds are completely empty at the distribution centers. Farmers have expressed anger. Farmers have demanded that the government take action for the urgent supply of soybean seeds. Agriculture department officials have assured that a new stock will be brought in soon.

Balagavi News:

ಹಾವೇರಿ: ರೈತ ಸಂಪರ್ಕ ಕೇಂದ್ರದಲ್ಲಿ ಸೋಯಾಬೀನ್ ಬೀಜಗಳ ಕೊರತೆ ರೈತರ ಪರದಾಟಕ್ಕೆ ಕಾರಣವಾಗಿದೆ. ಕಳೆದ ಸಾಲ್ಕು ದಿನಗಳಿಂದ ರಿಯಾಯಿತಿ ದರದಲ್ಲಿ ಸೋಯಾಬೀನ್ ಬೀಜ ವಿತರಿಸಿದ್ದ ಕೃಷಿ ಇಲಾಖೆ, ಇದೀಗ ಸ್ಟಾಕ್ ಖಾಲಿಯಾದ ಹಿಂನ್ನೆಲೆಯಲ್ಲಿ ವಿತರಣಾ ಕೇಂದ್ರಕ್ಕೆ ಬೀಗ ಹಾಗಿದೆ.

ಮಂಗಳವಾರ ಮುಂಜಾನೆಯಿಂದಲೇ ರೈತರು ಬಿತ್ತನೆ ಬೀಜ ಖರೀದಿಸಲು ರೈತ ಸಂಪರ್ಕ ಕೇಂದ್ರದ ಮುಂದೆ ಸರತಿಯಲ್ಲಿ ನಿಂತಿದ್ದರು. ಬೆಳಿಗ್ಗೆ 10:30ಕ್ಕೆ ತೆರೆಯಬೇಕಿದ್ದ ಕೇಂದ್ರ 11 ಗಂಟೆಯಾದರೂ ಆರಂಭವಾದ ಹಿನ್ನೆಲೆಯಲ್ಲಿ ರೈತರು ಆತಂಕ ವ್ಯಕ್ತಪಡಿಸಿದ್ದರು.

ಈ ವೇಳೆ ಅಧಿಕಾರಿಗಳು, "ಸೋಯಾಬಿನ್ ಬೀಜಗಳನ್ನು ಸಾಗಿಸುತ್ತಿದ್ದ ಲಾರಿ ತಡವಾಗಿ ಬರುತ್ತಿದೆ. ಚಿಗುರದಲ್ಲಿ ವಾಹನ ತಲುಪಲಿದೆ. ರೈತರು ಶಾಂತವಾಗಿ ಸರತಿಯಲ್ಲಿ ನಿಂತು ಬೀಜ ಪಡೆದುಕೊಳ್ಳಬೇಕು" ಎಂದು ಮನವಿ ಮಾಡಿದರು.

Sponsored

ರೈತರು ತಮ್ಮ ಸ್ಥಾನ ಕಾಯ್ದುಕೊಳ್ಳಲು ಸರತಿಯಲ್ಲಿ ಟವರ್ ಇಟ್ಟು ಕಾಯುತ್ತಿದ್ದರು. ಕೆಲವರು ಅಲ್ಲಿ ನಿದ್ರೆಗೆ ಜಾರಿದರೆ, ಇನ್ನು ಕೆಲವರು ಕೃಷಿ ಚಟುವಟಿಕೆಗಳು ಮತ್ತು ಮಳೆಯ ಪರಿಸ್ಥಿತಿಗಳ ಬಗ್ಗೆ ಚರ್ಚೆಸುತ್ತಿರುವ ದೃಶ್ಯ ಕಂಡು ಬಂತು.

ಬಿತ್ತನೆ ಪೀಸನ್ನು ಆರಂಭವಾಗಿರುವ ಸಂದರ್ಭದಲ್ಲಿ ಬೀಜಗಳ ಕೊರತೆಯಿಂದ ರೈತರು ಸಂಕಷ್ಟ, ಅನುಭವಿಸುತ್ತಿದ್ದು. ತಕ್ಷಣ ಹೆಚ್ಚುವರಿ ಸ್ಟಾಕ್ ಪೂರೈಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಆಕ್ರೋಶ: ಸೋಯಾಬಿನ್ ಬಿತ್ತನೆ ಬೀಜಗಳು ಕೊರತೆಯಿಂದ ರೈತರು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲೋ ದಿನಗಳಿಂದ ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿದ್ದರೂ ಸಿಗದ 12 ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

ರೈತ ಪಕ್ಕೇರಪ್ಪ ಮಾತನಾಡಿ, " ಕಡೆದ ಮೂರು ದಿನಗಳಿಂದ ಬಿತ್ತನೆ ಬೀಜ ಪಡೆಯಲು ಬರುತ್ತಿದ್ದೇನೆ. ಪ್ರತಿದಿನವೂ 'ಇವತ್ತು ಬರುತ್ತೆ. ನಾಳೆ ಬರುತ್ತೆ' ಎಂದು ಹೇಳಿ ಕಳಿಸುತ್ತಿದ್ದಾರೆ. ಜಮೀನ ಬಿತ್ತನೆಗೆ ಸಿದ್ಧವಾಗಿದೆ. ಈಗಲೇ ಬೀಜ ಬೇಕಾಗಿದೆ. ಆದರೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

Sponsored

ಇನ್ನೊಬ್ಬ ರೈತ ಒಂಕಾರ ಗೌಡ ಮಾತನಾಡಿ, "ನಾನು ಶುಕ್ರವಾರದಿಂದ ಕೇಂದ್ರಕ್ಕೆ ಬರುತ್ತಿದ್ದೇನೆ. ಕೆಲವರಿಗೆ ಮಾತ್ರ ಬೀಜ ವಿತರಣೆ ಮಾಡುತ್ತಾರೆ. ಎರಡು ಗಂಟೆ ವಿತರಣೆ ಮಾಡಿ ಮತ್ತೆ ಕೇಂದ್ರ ಬಂದ್ ಮಾಡುತ್ತಾರೆ. ಇಷ್ಟೊಂದು ದಿನಗಳಿಂದ ಕಾಯುತ್ತಿದ್ದರೂ ಒಂದು ಕಾಡು ಬೀಜವು ಸಿಕ್ಕಿಲ್ಲ" ಎಂದು ಆತಂಕ ಹೊರಹಾಕಿದರು.

ರೈತರು ಸರ್ಕಾರ ಮತ್ತು ಸಂಬಂಧ ಪಟ್ಟ ಸಚಿವರು ತಕ್ಷಣ ಕ್ರಮ ಕೈಗೊಂಡು ಸೋಯಾಬೀನ್ ಬೀಜಗಳ ಸಮರ್ಪಕ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬಿತ್ತನೆ ಸೀಸನ್ ಆರಂಭವಾಗಿರುವ ಸಂದರ್ಭದಲ್ಲಿ ಈ ಸಮಸ್ಯೆ ರೈತರಲ್ಲಿ ಹೆಚ್ಚುವರಿ ಆತಂಕ ಉಂಟುಮಾಡಿದೆ.

ಅವರು ಮತ್ತಷ್ಟು ಆರೋಪಿಸಿ, "21ನೇ ತಾರೀಕಿನಿಂದ ಬೀಜ ವಿತರಣೆ ಆರಂಭವಾಗಿದೆ. ನಾನು ಐದು ದಿನಗಳಿಂದ ಕೇಂದ್ರಕ್ಕೆ ಬರುತ್ತಿದ್ದರು ಇನ್ನೂ ಒಂದು ಕಾಲು ಬೀಜವು ಸಿಕ್ಕಿಲ್ಲ. ಕೆಲವರು ಲಂಚ ನೀಡಿದರೆ ಅವರಿಗೆ ಬೇಕಾದಷ್ಟು ಬೀಜ ಸಿಗುತ್ತಿದೆ" ಎಂದು ಅಸಮಾಧಾನ ಹೊರಹಾಕಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ್," ಕಳೆದ ವರ್ಷ ಹಾವೇರಿ ತಾಲೂಕಿನಲ್ಲಿ 1,700 ಕ್ವಿಂಟಲ್ ಸೋಯಾಬಿನ್ ಬೀಜ ವಿತರಿಸಿದ್ದೇವೆ. ಈ ವರ್ಷ ಈಗಾಗಲೇ 2,700 ಕ್ವಿಂಟಲ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12,500 ಕ್ವಿಂಟಲ್ ಬೀಜ ವಿತರಣೆ ಮಾಡುವ ಗುರಿ ಹೊಂದಿದ್ದೇವೆ" ಎಂದು ತಿಳಿಸಿದರು.

Sponsored

ಸೋಯಾಬಿನ್, ಬೇಳೆ ಬಗ್ಗೆ ರೈತರು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದ ಅವರು, "ಸೋಯಾಬೀನ್ ಒಂದು ಸೂಕ್ಷ್ಮ ಬೆಳೆ. ಭೂಮಿಯಲ್ಲಿ ಕನಿಷ್ಠ ಶೇ.50ರಷ್ಟು ತೇವಾಂಶವಿದ್ದರೆ ಮಾತ್ರ ಮೊಳಕೆಯೊಡೆಯುತ್ತದೆ. ತೇವಾಂಶ ಇಲ್ಲದಿದ್ದರೆ ಬಿತ್ತನೆ ವಿಫಲವಾಗಬಹುದು" ಎಂದು ಎಚ್ಚರಿಸಿದರು.

ಮುಂಗಾರು ಆರಂಭವಾದ ಬಳಿಕವೇ ಬಿತ್ತನೆ ಮಾಡುವುದು ಉತ್ತಮ ಎಂದು ಕೃಷಿ ಇಲಾಖೆ ಸಲಹೆ ನೀಡಿದ್ದು, ರೈತರು ಭೂಮಿಯ ತೇವಾಂಶ ಪರಿಶೀಲಿಸಿ ಬಿತ್ತನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

Also Read:

ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನಕ್ಕೆ ಪ್ರಿಯಾಂಕ ಗಾಂಧಿ ಬೆಂಬಲ?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online