ಅಥಣಿ: ಕೋರ್ಟ್ ಕಲಾಪದ ವೇಳೆ ಮಹಿಳೆ ಮೇಲೆ ಹಲ್ಲೆ, ಆರೋಪಿ ಬಂಧನ
ಅಥಣಿ ಕೋರ್ಟ್ ಆವರಣದಲ್ಲೇ ಮಹಿಳೆಯ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ :
ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆ. ಬಾಬಾಸಾಹೇಬ್ ಚೌಹಾಣ್ ಹಲ್ಲೆ ಮಾಡಿದ ಆರೋಪಿ. ಘಟನೆಯಲ್ಲಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಕೆಯನ್ನು ಅಥಣಿ ಸಮುದಾಯದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನ್ಯಾಯಾಲಯಕ್ಕೆ ಮೀನಾಕ್ಷಿ ಆಗಮಿಸಿದ್ದು, ಮಹಿಳೆಯನ್ನು ಕಂಡ ಆರೋಪಿ ಬಾಬಾಸಾಹೇಬ್ ಆಕೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಆರೋಪಿಯನ್ನು ಅಥಣಿ ಪೊಲಿಸರು ದಸ್ತಗಿರಿ ಮಾಡಿದ್ದಾರೆ.
ಕಲಾಪಕ್ಕೆ ಬಂದಿದ್ದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಕೋರ್ಟ್ ಕಲಾಪದ ವೇಳೆಯೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಅಥಣಿ ನ್ಯಾಯಾಲಯದಲ್ಲಿ ಜರುಗಿದೆ. ಮಂಗಳವಾರ ಈ ಘಟನೆ ನಡೆದಿದ್ದು ಇಂದು ಬೆಳಕಿಗೆ ಬಂದಿದೆ.
ಈ ವೇಳೆ ಆರೋಪಿಯು ಮಹಿಳೆ ತಲೆಗೆ ಗಂಭೀರವಾಗಿ ಹೊಡೆದಿದ್ದಾನೆ. ಮತ್ತೊಂದು ಏಟಿಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲೇ ಇದ್ದ ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ವಕೀಲರು ತಕ್ಷಣವೇ ಆ್ಯಂಬುಲೆನ್ಸ್ ಮುಖಾಂತರ ಅಥಣಿ ಸಮುದಾಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಮಾತನಾಡಿದ ವಕೀಲ ಎಸ್ ಎಸ್. ಪಾಟೀಲ್, ಈ ಪ್ರಕರಣ ಸಿವಿಲ್ ಮ್ಯಾಟರ್ ಆಗಿದ್ದರಿಂದ ಇಬ್ಬರೂ ಮಂಗಳವಾರ ನ್ಯಾಯಾಲಯಕ್ಕೆ ಬಂದಿದ್ದರು. ಮೊದಲು ಗ್ರಾಮದಲ್ಲಿ ಹಲವು ಬಾರಿ ಈ ಬಗ್ಗೆ ರಾಜಿ ಪಂಚಾಯಿತಿ ಮಾಡಲಾಗಿತ್ತು. ಆದರೂ, ನ್ಯಾಯಾಲಯಕ್ಕೆ ಬಂದಿದ್ದರಿಂದ ಆರೋಪಿ ಕೋಪ ಮಾಡಿಕೊಂಡು ಮಹಿಳೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲೇ ಎಲ್ಲರೂ ಇದ್ದಿದ್ದರಿಂದ ಆರೋಪಿ ತಡೆದು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಥಣಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದರು.
ಘಟನೆ ವಿವರ:
ಹಲ್ಲೆಗೆ ಒಳಗಾಗಿರುವ ಮಹಿಳೆ ಮೀನಾಕ್ಷಿ ಹಾಗೂ ಆರೋಪಿ ಬಾಬಾಸಾಹೇಬ್ ಮೂಲತಃ ಅಥಣಿ ತಾಲೂಕಿನ ಕೋತನಟ್ಟಿ ಗ್ರಾಮದವರು. ಇಬ್ಬರೂ ಸಂಬಂಧಿಕರಾಗಿದ್ದು, ಪಿತ್ರಾರ್ಜಿತ ಆಸ್ತಿಗಾಗಿ ಗಾಯಾಳು ಮೀನಾಕ್ಷಿ ಅವರು ನ್ಯಾಯಾಲಯದ ಮೂರೆ ಹೋಗಿದ್ದರು. ಆದರೆ, ಸೋದರತ್ತೆ ಪಿತ್ರಾರ್ಜಿತ ಆಸ್ತಿ ಕೇಳುತ್ತಿದ್ದಾಳೆ ಎಂದು ಸಿಟ್ಟಿಗೆದ್ದು, ಅಳಿಯ ಬಾಬಾಸಾಹೇಬ್ ಕೋರ್ಟ್ ಆವಣದಲ್ಲಿಯೇ ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ, ಮೀನಾಕ್ಷಿ ಓಡಿ ಹೋಗಿ ಕೋರ್ಟ್ ಕಲಾಪ ನಡೆಸುತ್ತಿದ್ದ ನ್ಯಾಯಾಧೀಶರ ಮುಂದೆ ನಿಂತಿದ್ದಾಳೆ.
ಇನ್ನಷ್ಟು ಓದಿರಿ :
ಮೈಸೂರು: ರೈತನ ಬಲಿ ಪಡೆದ ಹುಲಿ ಸೇರಿ 32 ದಿನಗಳಲ್ಲಿ 15 ಹುಲಿಗಳ ಸೆರೆ