Belagavi News:
ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಆಟೋ ಚಾಲಕರ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ. ಪೆಟ್ರೋಲ್, ಡಿಸೈಲ ಹಾಗೂ ಸಿಎನ್‌ಜಿ ಇದರ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಆಟೋ ಚಾಲಕರು ಸರ್ಕಾರದ ಮೊರೆ ಹೋಗಿದ್ದಾರೆ. ಇರಾನ್-ಅಮೆರಿಕ ಯುದ್ಧದ ಪರಿಣಾಮ ಹಾಗೂ ಆಮದು ವೆಚ್ಚ ಹೆಚ್ಚಳದಿಂದ ಇಂಧನ ದರಗಳು ಏರಿಕೆಯಾಗಿದ್ದು, ಜನಸಾಮಾನ್ಯರ ಜೊತೆಗೆ ಆಟೋ ಚಾಲಕರಿಗೂ ದೊಡ್ಡ ಹೊರೆ ತಂದಿದೆ.
ಸ್ನೇಹಜೀವಿ ಆಟೋ ಚಾಲಕರ ಟ್ರೆಂಡ್ ಯೂನಿಯನ್ ಸರ್ಕಾರಕ್ಕೆ ಹಲವು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದು, ಆಟೋ ಮಿಟರ್ ದರ ಹೆಚ್ಚಳಕ್ಕೆ ಒತ್ತಾಯಿಸಿದೆ. ಪ್ರಸ್ತುತ ಇಂಧನ ಬೆಲೆ, ವಾಹನ ನಿರ್ವಹಣಾ ವೆಚ್ಚ ಮತ್ತು ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ,"ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಬರಿಸಬೇಕು" ಎಂಬ ಬೇಡಿಕೆಯನ್ನು ಸಹ ಸರ್ಕಾರದ ಮುಂದೆ ಇಟ್ಟಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಮೂರು ರೂಪಾಯಿ ಏರಿಕೆ ಆಗಿರುವುದರ ಜೊತೆಗೆ ಸಿ ಎನ್ ಜಿ ಹಾಗೂ ಎಲ್ಪಿಜಿ ಗ್ಯಾಸ್ ದರವು ಹೆಚ್ಚಳವಾಗಿದೆ. ಇದರ ಪರಿಣಾಮ ಆಟೋ ಚಾಲಕರ ಆದಾಯ ಮತ್ತು ಜೀವನ ಮಟ್ಟದ ಮೇಲೆ ನೇರವಾಗಿ ಬಿದ್ದಿದೆ. ಸರ್ಕಾರ ಶೀಘ್ರಕ್ರಮ ಕೈಗೊಂಡು ಆಟೋ ಮೀಟರ್ ಇದರ ಪರಿಷ್ಕರಣೆ ಸೇರಿದಂತೆ ಚಾಲಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರೋ ಇಂಧನ ದರಗಳಿಂದ ಆಟೋ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಪೆಟ್ರೋಲ್, ಡೀಸೆಲ್, ಸಿಎನ್ ಜಿ ಹಾಗೂ ಎಲ್ಪಿಜಿ ದರಗಳು ಗಗನಕೇರಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ಸರ್ಕಾರದ ಮೊರೆ ಹೋಗಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ದರ ಏರಿಕೆ ಹೊರೆ ತಾಳಲಾರದೆ ಕತ್ತರಿಸಿರುವ ಚಾಲಕರು, ವನ್ ಸಿಟಿ ವನ್ ರೇಟ್ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸ್ನೇಹಜೀವಿ ಚಾಲಕರ ಟ್ರೆಂಡ್ ಯೂನಿಯನ್ ಈ ಕುರಿತು ಮಾತನಾಡಿ,ದುಬಾರಿ ದುನಿಯಾದಲ್ಲಿ ದಿನಕ್ಕೆ 14 ಗಂಟೆಗಳ ಕಾಲ ದುಡಿದರು ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದೆ. ಇಂಧನ ದರ ಏರಿಕೆಯೊಂದಿಗೆ ವಾಹನ ನಿರ್ವಹಣಾ ವೆಚ್ಚವು ಹೆಚ್ಚಾಗಿದ್ದು, ಆಟೋ ಚಾಲಕರ ಆದಾಯದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಸಂಘಟನೆ ತಿಳಿಸಿದೆ.
ಇದೇ ವೇಳೆ ಆಟೋ ಮೀಟರ್ ದರ ಪರಿಷ್ಕರಣೆ ಮಾಡಬೇಕು, ಚಾಲಕರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ ನೀಡಬೇಕು ಹಾಗೂ ಮಕ್ಕಳ ಶಿಕ್ಷಣವೆಚ್ಚ ಬರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸರ್ಕಾರ ಶೀಘ್ರ ಕ್ರಮ ಕೈಗೊಂಡು ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಇಂದಿನ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರು ಸರ್ಕಾರದ ಮೊರೆ ಹೋಗಿದ್ದು, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ರಾಜ್ಯದ್ಯಂತ "ವನ್ ಸಿಟಿ ಒನ್ ರೇಟ್" ನಿಖಿ ಜಾರಿಗೊಳಿಸಬೇಕು ಹಾಗೂ ಪ್ರಸ್ತುತ ಇರುವ ಆಟೋಮೇಟರ್ ದರವನ್ನು ಪರಿಷ್ಕರಿಸಿ ಹೆಚ್ಚಿಸಬೇಕು ಎಂದು ಯೂನಿಯನ್ ಒತ್ತಾಯಿಸಿದೆ. ದರಗಳ ಏರಿಕೆಯಿಂದ ಆಟೋ ಚಾಲಕರ ಆದಾಯ ಮತ್ತು ಜೀವನದ ಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಸಂಘಟನೆ ಹೇಳಿದೆ.
ಇದೇ ವೇಳೆ ಕ್ಯಾಬ್ ಅಗ್ರಿಗೇಟರ್ಗಳಲ್ಲಿ ಕಡಿಮೆ ದರದಲ್ಲಿ ಸೇವೆ ಸಿಗುತ್ತಿರುವುದರಿಂದ ಆಟೋ ಚಾಲಕರ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಯೂನಿಯನ್ ಆರೋಪಿಸಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ದಿನಕ್ಕೆ ಹಲವು ಗಂಟೆಗಳ ಕಾಲ ದುಡಿದರೂ ಸಮರ್ಪಕ ಆದಾಯ ಸಿಗುತ್ತಿಲ್ಲ ಎಂದು ತಮ್ಮ ಸಂಕಷ್ಟವನ್ನು ವಿವರಿಸಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಆಟೋ ಚಾಲಕರ ಕುಟುಂಬಗಳಿಗೆ ಸರ್ಕಾರ ನೆರವಾಗಬೇಕು ಎಂಬ ಆಗ್ರಹವು ಕೇಳಿಬಂದಿದೆ. ವಿಶೇಷವಾಗಿ, ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಮಹತ್ವದ ಬೇಡಿಕೆಯನ್ನು ಯೂನಿಯನ್ ಮುಂದಿಟ್ಟಿದೆ. ಇಂಧನ ಬೆಲೆ ಏರಿಕೆಯ ನೇರ ಪರಿಣಾಮ ಆಟೋ ಚಾಲಕರ ದೈನಂದಿನ ಬದುಕಿನ ಮೇಲೆ ಬಿದ್ದಿದ್ದು, ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಮನವಿ ಮಾಡಿದೆ.
Also Read: