<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಮುರುಡೇಶ್ವರದಲ್ಲಿ ತಪ್ಪಿದ ದುರಂತ : ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ

ಮುರುಡೇಶ್ವರದಲ್ಲಿ ತಪ್ಪಿದ ದುರಂತ : ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿ
Summary: A railway staff saved a youth from falling from a moving train at Murudeshwar railway station with a sense of time. The video of this adventure has gone viral on social media.

Balagavi News:

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದೆ. ಚಲಿಸುತ್ತಿದ್ದ ರೈಲಿಗೆ ಏರಲು ಯತ್ನಿಸಿದ ವೇಳೆ ಜಾರಿ ಬೀಳುತ್ತಿದ್ದ ಯುವಕನನ್ನು ಸಿಬ್ಬಂದಿ ಕ್ಷಣಾರ್ಧದಲ್ಲಿ ರಕ್ಷಿಸಿ ಜೀವ ಉಳಿಸಿದ್ದಾರೆ.

ಘಟನೆಯ ವೇಳೆ ಯುವಕನು ಸಮತೋಲನ ಕಳೆದುಕೊಂಡು ರೈಲು ಮತ್ತು ಪ್ಲಾಟ್ ಫಾರ್ಮ್ ಕಡೆಗೆ ಜಾರುತ್ತಿದ್ದಾಗ, ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಸುರಕ್ಷಿತವಾಗಿ ಮೇಲಕ್ಕೆ ಎಳೆದಿದ್ದಾರೆ. ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಈ ಘಟನೆಯಾ ದೃಶ್ಯಗಳು ಸಿಸಿಟಿವಿಯಲ್ಲಿ ಸರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಗಿದೆ. ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಅಧಿಕಾರಿಗಳು ಚಲಿಸುತ್ತಿರುವ ರೈಲಿಗೆ ಏರಲು ಅಥವಾ ಇಳಿಯಲು ಪ್ರಯತ್ನಿಸಬಾರದು ಎಂದು ಪ್ರಯಾಣಿಕರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಇಂತಹ ಅಪಘಾತಗಳನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.

ಮುರುಡೇಶ್ವರ ರೈಲು ನಿಲ್ದಾಣದಲ್ಲಿ ತಪ್ಪಿದ ಭೀಕರ ದುರಂತ - ಕೊಂಕಣ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಗೆ ಯುವಕನ ಜೀವ ಉಳಿಯಿತು :

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಕಂಕಣ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭೀಕರ ರೈಲು ಅವಗಡ ಒಂದು ಕೂದಲೆಡೆ ಅಂತರದಲ್ಲಿ ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ 22 ವರ್ಷದ ಯುವಕನನ್ನು ಸಿಬ್ಬಂದಿ ಕ್ಷಣಾರ್ಧದಲ್ಲಿ ರಕ್ಷಿಸಿ ಜೀವ ಉಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಕೇರಳದಿಂದ ರಾಜಸ್ಥಾನಕ್ಕೆ ತೆರಳುತ್ತಿದ್ದ ರೈಲು ಮುರುಡೇಶ್ವರ ರೈಲು ನಿಲ್ದಾಣದಿಂದ ಹೊರಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲು ಚಲಿಸುತ್ತಿದ್ದಾಗಲೇ ಯುವಕ ಕೆಳಗಡೆಯಲು ಪ್ರಯತ್ನಿಸಿದ್ದು, ಕಳೆದುಕೊಂಡು ಅಪಾಯಕ್ಕೆ ಸಿಲುಕಿದ್ದಾನೆ.

ಆ ವೇಳೆ ಕರ್ತವ್ಯದಲ್ಲಿದ್ದ ಕೊಂಕಣ ರೈಲ್ವೆ ಸಿಬ್ಬಂದಿ ತಕ್ಷಣ ಧಾವಿಸಿ ಯುವಕನನ್ನು ಸುರಕ್ಷಿತವಾಗಿ ಎಳೆದು ರಕ್ಷಿಸಿದ್ದಾರೆ. ಅವರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ಘಟನೆಯ ಬಳಿಕ ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಟ್ಟುಗೆ ವ್ಯಕ್ತವಾಗಿದ್ದು, ಚಲಿಸುತ್ತಿರುವ ರೈಲಿಗೆ ಏರಲು ಅಥವಾ ಇಳಿಯಲು ಪ್ರಯತ್ನಿಸಬಾರದು ಎಂದು ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಮುರುಡೇಶ್ವರ ರೈಲು ನಿಲ್ದಾಣದಲ್ಲಿ ತಪ್ಪಿದ ದುರಂತ - ಪಾಯಿಂಟ್ಸ್ ಮನ್ ಗಣಪತಿ ನಾಯ್ಕ ಸಮಯ ಪ್ರಜ್ಞೆಗೆ ಯುವಕನ ಜೀವ ಉಳಿಸಿ :

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭೀಕರ ರೈಲು ಅವಗಡ ಒಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಕಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ 22 ವರ್ಷದ ಯುವಕನನ್ನುಮನ್ ಗಣಪತಿ ನಾಯಕ್ ಜೀವ ಉಳಿಸಿದ್ದಾರೆ.

ಘಟನೆಯ ವೇಳೆ ಯುವಕನು ನಿಯಂತ್ರಣ ತಪ್ಪಿ ರೈಲು ಮತ್ತು ಪ್ಲಾಟ್ ಫಾರ್ಮ್ ನಡುವಿನ ಅಂತರಕ್ಕೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಕಂಕಣ ರೈಲ್ವೆಯ ಪಾಯಿಂಟ್ಸ್ಮನ್ ಗಣಪತಿ ನಾಯಕ್ ಮಿಂಚಿನ ವೇಗದಲ್ಲಿ ಭಾವಿಸಿ ಯುವಕನನ್ನು ಹಿಂದಕ್ಕೆ ಎಳೆದು ಸುರಕ್ಷಿತ ಸ್ಥಳಕ್ಕೆ ಕರೆತಂದರು.

ಅವರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದ್ದು, ತಳದಲ್ಲಿದ್ದ ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿ ಗಣಪತಿ ನಾಯಕ್ ಅವರ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

ಈ ಘಟನೆ ಮತ್ತೊಮ್ಮೆ ಚಲಿಸುತ್ತಿರುವ ರೈಲಿಗೆ ಏರಲು ಅಥವಾ ಇಳಿಯಲು ಪ್ರಯತ್ನಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ನೆನಪಿಸಿದ್ದು, ಪ್ರಯಾಣಿಕರು ರೈಲ್ವೆಯ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುರುಡೇಶ್ವರ ರೈಲು ರಕ್ಷಣಾ ಸಾಹಸ ವೈರಲ್ - ಗಣಪತಿ ನಾಯ್ಕ್ ಗೆ ₹ 10,000 ನಗದು ಬಹುಮಾನ :

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೆಯ ಪಾಯಿಂಟ್ ಮನ್ ಗಣಪತಿ ನಾಯ್ಕ ಸಮಯಪ್ರಜ್ಞೆಯಿಂದ ಯುವಕನ ಜೀವ ಉಳಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬೀಳಲು ಹೋಗಿದ್ದ 22 ವರ್ಷದ ಯುವಕನನ್ನು ಕ್ಷಣಾರ್ಧದಲ್ಲಿ ರಕ್ಷಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆಯ ವಿಡಿಯೋದಲ್ಲಿ, ರೈಲು ಮತ್ತು ಫ್ಲಾಟ್ ಫಾರ್ಮ್ ನಡುವಿನ ಅಂತರಕ್ಕೆ ಬೀಳುವ ಹಂತದಲ್ಲಿದ್ದ ಯುವಕನನ್ನು ಗಣಪತಿ ನಾಯ್ಕ್ ಮಿಂಚಿನ ವೇಗದಲ್ಲಿ ಹಿಂದಕ್ಕೆ ಎಳೆದು ಸುರಕ್ಷಿತವಾಗಿ ರಕ್ಷಿಸುವ ದೃಶ್ಯ ಕಾಣಿಸುತ್ತದೆ. ಅವರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭೀಕರ ರೈಲು ದುರಂತ ತಪ್ಪಿದೆ.

ಗಣಪತಿ ನಾಯ್ಕ್ ಅವರ ಈ ಶ್ಲಾಘನೀಯ ಸಾಹಸವನ್ನು ಗುರುತಿಸಿ ಕೊಂಕಣ ರೈಲ್ವೆ ಮಂಡಳಿ ₹ 10,000 ನಗದು ಬಹುಮಾನ ನೀಡಿ ಗೌರವಿಸಿದೆ. ಅವರ ಕರ್ತವ್ಯ ನಿಷ್ಠೆ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರು ಹಾಗೂ ರೈಲ್ವೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಈ ಘಟನೆ ಪ್ರಯಾಣಿಕರಿಗೆ ಮಹತ್ವದ ಸಂದೇಶವನ್ನು ನೀಡಿದ್ದು, ಚಲಿಸುತ್ತಿರುವ ರೈಲಿಗೆ ಏರಲು ಅಥವಾ ಇಳಿಯಲು ಪ್ರಯತ್ನಿಸಬಾರದು ಎಂದು ರೈಲ್ವೆ ಇಲಾಖೆ ಮತ್ತೊಮ್ಮೆ ಸುರಕ್ಷತಾ ಸೂಚನೆ ನೀಡಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online