<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಯೋಧ್ಯ ರಾಮ ಮಂದಿರ ಪ್ರಕರಣ : ದೇಣಿಗೆ ಕಳ್ಳತನದ ಹಿಂದೆ ಇದ್ದ ಚಾಣಾಕ್ಷ ಯೋಜನೆ ಬಯಲು

ಅಯೋಧ್ಯ ರಾಮ ಮಂದಿರ ಪ್ರಕರಣ : ದೇಣಿಗೆ  ಕಳ್ಳತನದ ಹಿಂದೆ ಇದ್ದ ಚಾಣಾಕ್ಷ ಯೋಜನೆ ಬಯಲು
Summary: Explosive information has now been revealed regarding the case of theft of donation money in the Ayodhya Ram Mandir. Details of how the accused committed the theft and how they misused the system have now come to light, giving the case a new twist.

belagavi news :

ಅಯೋಧ್ಯ ರಾಮ ಮಂದಿರ ಕಾಣಿಕೆ ಹಣ ಕಳ್ಳತನ : ಶೌಚಾಲಯದಲ್ಲಿ ಹಣ ಬಚ್ಚಿಟ್ಟು ಕಳ್ಳಾಟ! ಸಿಸಿಟಿವಿಗೂ ಮೀರಿದ ಚಾಣಾಕ್ಷ ಯೋಜನೆ ಬಯಲು

ಲಖನೌ, ಜುಲೈ 01 : ಅಯೋಧ್ಯ ರಾಮ ಮಂದಿರ ಕಾಣಿಕೆ ಹಣ ಕಳ್ಳತನ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರೋಪಿಗಳ ವಿಚಾರಣೆ ವೇಳೆ ಕಳುವು ಮಾಡಲಾದ ಹಣವನ್ನು ಹೇಗೆ ವ್ಯವಸ್ಥಿತವಾಗಿ ಸಾಗಿಸಲಾಗುತ್ತಿತ್ತು ಎಂಬ ಚಾಣಾಕ್ಷ ಯೋಜನೆ ಬೆಳಕಿಗೆ ಬಂದಿದೆ.

ತನಿಖಾ ಮಾಹಿತಿಯ ಪ್ರಕಾರ, ಆರೋಪಿಗಳು ಸಿಸಿಟಿವಿ ಕಣ್ಗಾವಲು ತಪ್ಪಿಸಲು ಕಳವು ಮಾಡಿದ ಹಣವನ್ನು ಮೊದಲು ಮಂದಿರದ ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಅಡಗಿಸಿಡುತ್ತಿದ್ದರು. ನಂತರ ಸೂಕ್ತ ಸಮಯ ಸಿಕ್ಕಾಗ ಅಲ್ಲಿಂದ ಹಣವನ್ನು ಹೊರಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಮೂಲಕ ಅವರು ಪೂರ್ವ ನಿಯೋಜಿತವಾಗಿ ಭದ್ರತಾ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುವುದು ಸ್ಪಷ್ಟವಾಗಿದೆ.

ಇದಲ್ಲದೆ, ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ ಹಣದಿಂದ ಆರೋಪಿಗಳು ಆಸ್ತಿ ಖರೀದಿಸುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾನೂನು ಪ್ರಕ್ರಿಯೆ ಆರಂಭವಾಗುವ ಮುನ್ನವೇ ದುರ್ಬಳಕೆಯಾದ ಹಣವನ್ನು ಮರುಪಡೆಯಲು ಪ್ರಯತ್ನಗಳು ನಡೆದಿದ್ದವು ಎಂಬ ಮಾಹಿತಿಯು ಬಹಿರಂಗಗೊಂಡಿದೆ.

ಈ ಪ್ರಕರಣದಿಂದ ಭದ್ರತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳು ಮತ್ತೆ ಪ್ರಶ್ನೆಗೆ ಒಳಪಟ್ಟಿದ್ದು, ತನಿಖೆ ಇನ್ನಷ್ಟು ತೀವ್ರಗೊಂಡಿದೆ.

ರಾಮ ಮಂದಿರ ಕಾಣಿಕೆ ಹಣ ಕಳ್ಳತನ ಪ್ರಕರಣ : ವಿಚಾರಣೆಯಲ್ಲಿ ಟ್ರಸ್ಟಿ ಹೆಸರು ಪ್ರಸ್ತಾಪ! ಸ್ಪೋಟಕ ಹೇಳಿಕೆ ಬಯಲು

ಅಯೋಧ್ಯ ರಾಮ ಮಂದಿರ ಕಾಣಿಕೆ ಹಣ ಕಳ್ಳತನ ಪ್ರಕರಣದ ತನಿಕೆಯಲ್ಲಿ ಹೊಸ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನ್ಯಾಯಾಲಯದ ಅನುಮತಿ ಬಳಿಕ ಬಂಧಿತರಾಗಿರುವ 8 ಆರೋಪಿಗಳ ಪೈಕಿ ಅವಿನಾಶ್ ಶುಕ್ಲಾನನ್ನು ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಅವಿನಾಶ್ ಶುಕ್ಲಾ ಮಂದಿರದ ಟ್ರಸ್ಟಿ ಅನಿಲ್ ಮಿಶ್ರಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಾನೆ ಎಂದು ತಿಳಿದು ಬಂದಿದೆ. ಕಾಣಿಕೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯಿಂದ ಪ್ರಕರಣ ಮತ್ತಷ್ಟು ಸಕ್ರಿಯವಾಗಿದ್ದು, ತನಿಖಾ ತಂಡ ಹೆಚ್ಚಿನ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದೆ.

ರಾಮಮಂದಿರ ಕಾಣಿಕೆ ಹಣ ಕಳ್ಳತನ : ಕೀ ವ್ಯವಸ್ಥೆ, ಸಿಸಿಟಿವಿ ತಪ್ಪಿಸಿ ನಡೆದ ಚಾಣಾಕ್ಷ ಕಳ್ಳಾಟ ಬಯಲು! ಆಸ್ತಿ ಖರೀದಿ ಲಿಂಕ್ ಸಹ ಶಾಕ್

ಅಯೋಧ್ಯ ರಾಮ ಮಂದಿರ ಕಾಣಿಕೆ ಹಣ ಕಳ್ಳತನ ಪ್ರಕರಣದಲ್ಲಿ ಆರೋಪಿಯ ವಿಚಾರಣೆಯಿಂದ ಮತ್ತಷ್ಟು ಸ್ಪೋಟಕ ವಿವರಗಳು ಹೊರಬಂದಿವೆ. ಆರೋಪಿ ಹೇಳಿದಂತೆ, ಕಾಣಿಕೆ ಹಣ ಎಣಿಕೆ ಕೊಠಡಿಯ ಒಂದು ಕಿ ತಿನ್ನು ಯಾದವ್ ಬಳಿ ಇದ್ದರೆ, ಮತ್ತೊಂದು ಕಿ ಬ್ಯಾಂಕ್ ಸಿಬ್ಬಂದಿ ಬಳಿ ಇತ್ತು ಎಂದು ತಿಳಿದು ಬಂದಿದೆ.

ಕಳ್ಳತನದ ವೇಳೆ ಒಬ್ಬ ವ್ಯಕ್ತಿ ಹಣವನ್ನು ತೆಗೆದುಕೊಳ್ಳುತ್ತಿದ್ದರೆ, ಉಳಿದವರು ಆತನನ್ನು ಸುತ್ತುವರೆದು ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದರು ಎಂಬುವುದು ತನಿಕೆಯಲ್ಲಿ ಬೆಳಕಿಗೆ ಬಂದಿದೆ. ಮಂದಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಸ್ಥಳದ ಬಗ್ಗೆ ಆರೋಪಿಗಳಿಗೆ ಸಂಪೂರ್ಣ ಮಾಹಿತಿ ಇದ್ದದ್ದರಿಂದ, ಕ್ಯಾಮರಾ ಕಣ್ಣಿಗೆ ಬೀಳದಂತೆ ಹಣವನ್ನು ಯೋಜಿತವಾಗಿ ಸಾಗಿಸುತ್ತಿದ್ದರು ಎಂದು ಆರೋಪಿಯ ಹೇಳಿಕೆಯಿಂದ ಗೊತ್ತಾಗಿದೆ.

ವಿಚಾರಣೆ ವೇಳೆ ಅವಿನಾಶ್ ಶುಕ್ಲಾ ಕಳವು ಮಾಡಿದ ಹಣವನ್ನು ಭೂಮಿ ಮತ್ತು ಮನೆ ಖರೀದಿಗೆ ಬಳಸಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆರೋಪಿಗಳ ಹಣಕಾಸು ವೈವಾಟು ಮತ್ತು ಆಸ್ತಿ ವಿವರಗಳ ಕುರಿತು ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಇದಲ್ಲದೆ, ದೇಗುಲದ ಹುಂಡಿ ಹಣ ಕಳ್ಳತನ ಆರೋಪದ ಹಿನ್ನೆಲೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಆದರೆ ಎಫ್.ಐ.ಆರ್ ದಾಖಲಾಗುವ ಮೊದಲೇ, ಜೂನ್ 5 ರಂದು ಅವಿನಾಶ್ ಶುಕ್ಲಾ ಮನೆಯಿಂದ 58 ಲಕ್ಷ ರೂಪಾಯಿಯನ್ನು ಟ್ರಸ್ಟ್ ವಶಪಡಿಸಿಕೊಂಡಿತ್ತು ಎಂದು ಮಾಹಿತಿ ಕೂಡ ಹೊರಬಂದಿದೆ.

ಈ ಬೆಳವಣಿಗೆಯಿಂದ, ಕಾನೂನು ಪ್ರಕ್ರಿಯೆ ಆರಂಭವಾಗುವ ಮುನ್ನವೇ ದುರ್ಬಳಕೆಯಾದ ಹಣವನ್ನು ಮರುಪಡೆಯುವ ಪ್ರಯತ್ನಗಳು ನಡೆದಿದ್ದವು ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online