<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಬಿಸಿಸಿಐ ಪ್ರಕಟಿಸಿದ ಏಷ್ಯನ್ ಗೇಮ್ಸ್ ಗೆ ಬಲಿಷ್ಠ ಭಾರತದ ತಂಡ

ಬಿಸಿಸಿಐ ಪ್ರಕಟಿಸಿದ ಏಷ್ಯನ್ ಗೇಮ್ಸ್ ಗೆ ಬಲಿಷ್ಠ ಭಾರತದ ತಂಡ
Summary: The BCCI today announced a strong Indian squad for the Asian Games to be held in September. With a balance of experienced and young players, this team is one of the main favorites to win the title. Who are the players in the team? Who will be the captain? Know the complete team details here.

BELAGAVI NEWS :

ಐಸಿಸಿ ಮಹಿಳಾ T-20 ವಿಶ್ವಕಪ್ 2026ರಲ್ಲಿ ನಿರಾಸೆ ಅನುಭವಿಸಿದ ಬಳಿಕ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇದೀಗ ಏಷ್ಯನ್ ಗೇಮ್ಸ್ ಮೇಲೆ ಸಂಪೂರ್ಣ ಗಮನ ಹರಿಸಿದೆ. ಸೆಪ್ಟೆಂಬರ್ ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗಾಗಿ ಬಿಸಿಸಿಐ ಬಲಿಷ್ಠ ಮಹಿಳ ತಂಡವನ್ನು ಪ್ರಕಟಿಸಿದ್ದು, ಹರ್ಮನ್ ಪ್ರೀತ್ ಕೌರ್ ತಂಡದ ನಾಯಕಿಯಾಗಿ ಮುಂದುವರಿದಿದ್ದಾರೆ. ಸ್ಮೃತಿ ಮಂಧಾನ ಉಪ ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಕಳೆದ ಬಾರಿ ಚೀನಾದ ಹ್ಯಾಂಗ್‌ಝೌ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಕೂಡ ಸತತ ಎರಡನೇ ಚಿನ್ನದ ಪದಕ ಗೆಲ್ಲುವ ಗುರಿಯೊಂದಿಗೆ ಅನುಭವಿ ಹಾಗೂ ಯುವ ಆಟಗಾರ್ತಿಯರ ಸಂಯೋಜನೆಯ ಬಲಿಷ್ಠ ತಂಡವನ್ನು ಆಯ್ಕೆ ಮಾಡಲಾಗಿದೆ. ವಿಶ್ವಕಪ್ ನ ನಿರಾಸೆಯನ್ನು ಮರೆತು ಏಷ್ಯನ್ ಗೇಮ್ಸ್ ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಇಂಡಿಯಾ ಸಜ್ಜಾಗಿದೆ. ಈಗಾಗಲೇ ಪ್ರಕಟಗೊಂಡಿರುವ ತಂಡದಲ್ಲಿ ಹಲವು ಪ್ರಮುಖ ಆಟಗಾರ್ತಿಯರಿಗೆ ಸ್ಥಾನ ದೊರೆಯುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯು ಹೆಚ್ಚಾಗಿದೆ.

T-20 ವಿಶ್ವಕಪ್ 2026ರಲ್ಲಿ ನಿರಾಸೆ ಅನುಭವಿಸಿದ್ದರು ಭಾರತೀಯ ಮಹಿಳಾ ತಂಡದ ಮೇಲೆ ಆಯ್ಕೆದಾರರು ವಿಶ್ವಾಸ ಮುಂದುವರಿಸಿದ್ದಾರೆ. ಏಷ್ಯನ್ ಗೇಮ್ಸ್ ಗಾಗಿ ಪ್ರಕಟಿಸಿರುವ ತಂಡದಲ್ಲಿ, ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಸೇರಿದಂತೆ ಬಹುತೇಕ ಹಿರಿಯ ಆಟಗಾರ್ತಿಯರು ಸ್ಥಾನ ಉಳಿಸಿಕೊಂಡಿದ್ದಾರೆ.

Sponsored

ಯುವ ವಿಕೆಟ್ ಕೀಪರ್ ಜಿ.ಕಮಲಿನಿಗೆ ಅವಕಾಶ ನೀಡಲಾಗಿದ್ದು, ಯಾಸ್ತಿಕಾ ಭಾಟಿಯಾ ತಂಡದಿಂದ ಹೊರಗೂಳಿದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಠಾಕೂರ್, ಅರುಂಧತಿ ರೆಡ್ಡಿ, ರಾಧಾ ಯಾದವ್ , ಶ್ರೀ ಚರಣಿ ಮತ್ತು ಕ್ರಾಂತಿ ಗೌಡ ಸ್ಥಾನ ಪಡೆದಿದ್ದಾರೆ. ಫಿಟ್ನೆಸ್ ಅನುಮೋದನೆಗೆ ಒಳಪಟ್ಟು ಶ್ರೇಯಾಂಕ ಪಾಟೀಲ್ ತಂಡ ಸೇರಲಿದ್ದು, ಭಾರತೀ ಪುಲ್ಮಾಲಿ ಮತ್ತು ನಂದಿನಿ ಶರ್ಮ ಕೂಡ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವಿಶ್ವಕಪ್‌ನ ನಿರಾಸೆಯನ್ನು ಮರೆತು ಸತತ ಎರಡನೇ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆಲುವು ಗುರಿಯೊಂದಿಗೆ ಟೀಮ್ ಇಂಡಿಯಾ ಈ ಬಾರಿ ಕಣಕ್ಕಿಳಿಯಲಿದೆ.

T-20 ವಿಶ್ವಕಪ್ ನಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ವಿಫಲವಾದ ಬಳಿಕ, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇದೀಗ ಏಷ್ಯನ್ ಗೇಮ್ಸ್ 2026 ಗಮನ ಹರಿಸಿದೆ. ಆತ್ಮವಿಶ್ವಾಸ ಮರಳಿ ಪಡೆಯಲು ಹಾಗೂ ಗೆಲುವಿನ ಲಯಕ್ಕೆ ಮರಳಲು ಈ ಟೂರ್ನಿ ತಂಡಕ್ಕೆ ಮಹತ್ವದ ಅವಕಾಶವಾಗಿದೆ.

ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿಯೂ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ನಾಯಕಿಯಾಗಿ ಹರ್ಮನ್ ಪ್ರೀತ್ ಕೌರ್ ಹಾಗೂ ಉಪನಯಕಿಯಾಗಿ ಸ್ಮೃತಿ ಮಂಧಾನ ಮುಂದುವರೆದಿದ್ದಾರೆ.

ತಂಡದಲ್ಲಿ ಶಿಪಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಜಿ. ಕಮಲಿನಿ ಸೇರಿದಂತೆ ಪ್ರಮುಖ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಠಾಕೂರ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶ್ರೀ ಚರಣಿ ಮತ್ತು ಕ್ರಾಂತಿ ಗೌಡ ಸ್ಥಾನ ಪಡೆದಿದ್ದಾರೆ.

Sponsored

ಏಷ್ಯನ್ ಗೇಮ್ಸ್ 2026ರಲ್ಲಿ ಬಲಿಷ್ಠ ಪ್ರದರ್ಶನ ನೀಡಿ ಸತತ ಎರಡನೇ ಬಾರಿ ಚಿನ್ನದ ಪದಕ ಗೆಲ್ಲುವುದು ಹರ್ಮನ್ ಪ್ರೀತ್ ಕೌರ್ ನೇತೃತ್ವದ ತಂಡದ ಪ್ರಮುಖ ಗುರಿಯಾಗಿದೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online