<?= $pageTitle ?>
Logo
ಮುಖಪುಟ ಓದುವುದು ಕೇಳು
Trending

"ಅಸ್ಸೋಂ ಚುನಾವಣೆ: ಹ್ಯಾಟ್ರಿಕ್ ಗುರಿಯಲ್ಲಿ ಬಿಜೆಪಿ, ಕಾಂಗ್ರೆಸ್ ಸವಾಲು"

"ಅಸ್ಸೋಂ ಚುನಾವಣೆ: ಹ್ಯಾಟ್ರಿಕ್ ಗುರಿಯಲ್ಲಿ ಬಿಜೆಪಿ, ಕಾಂಗ್ರೆಸ್ ಸವಾಲು"
Summary: The counting of votes for the Assam Assembly elections will be held today. It is an important day when the fate of political parties will be decided, and everyone's attention is on the results. Today, it will be clear who the voters have given their support to.

BELAGAVI NEWS :

ಪಂಚ ರಾಜ್ಯಗಳ ಪೈಕಿ ಬಿಜೆಪಿ ಆಡಳಿತದಲ್ಲಿರುವ ಅಸ್ಸೋಂನಲ್ಲಿ ಇಂದು ಮತ ಎಣಿಕೆ ನಡೆಯುತ್ತಿದೆ. ಚುನಾವಣಾ ಉತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಅಂದಾಜುಗಳು ಹೊರಹೊಮ್ಮಿಗೆ. ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 772 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅದರಲ್ಲಿ 56 ಮಂದಿ ಮಹಿಳೆಯರು ಭಾಗವಹಿಸಿದ್ದಾರೆ. 35 ಜಿಲ್ಲೆಗಳ 40 ಎಣಿಕೆ ಕೇಂದ್ರಗಳಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಮ್ಗಳಲ್ಲಿ ಮತಪೆಟ್ಟಿಗೆಯನ್ನು ಸುರಕ್ಷಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಅಧಿಕಾರದಿಂದ ದೂರವಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿ ಇದೆ ಆದರೆ ಮತದಾರರು ಯಾರಿಗೆ ಬೆಂಬಲ ನೀಡಿದ್ದಾರೆ ಎಂಬುದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗುವ ನಿರೀಕ್ಷೆ ಇದೆ.ನಾಗಾಂವ್ ಜಿಲ್ಲೆಯಲ್ಲಿ ಮೂರು ಎಣಿಕೆ ಕೇಂದ್ರಗಳಿದ್ದು, ಕೊಕ್ರಜಾರ್ ಮತ್ತು ಟಿನ್ಸುಕಿಯ ಮತ್ತು ಜೋರ್ಹತ್ ಜಿಲ್ಲೆಗಳಲ್ಲೂ ತಲಾ ಎರಡು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.ಎಲೆಕ್ಟ್ರಾನಿಕ್ ಮತ ಯಂತ್ರಗಳು(EVM) ಇರಿಸಿರುವ ಎಣಿಕೆ ಕೇಂದ್ರಗಳು ಮತ್ತು ಸ್ಟ್ರಾಂಗ್ ರೂಮ್ ಗಳಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜೊತೆಗೆ ಸ್ಟ್ರಾಂಗ್ ರೂಮ್ ಗಳಿಂದ ಎಣಿಕೆ ಕೇಂದ್ರಗಳಿಗೆ ಸುರಕ್ಷಿತವಾಗಿ ಸಾಗಿಸಲು ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಜ್ಯದಲ್ಲಿ ಏಪ್ರಿಲ್ ೯ರಂದು ನಡೆದ ಮತದಾನದಲ್ಲಿ 2.50 ಕೋಟಿಗೂ ಹೆಚ್ಚು ಮತದಾರರಲ್ಲಿ 85.96 ರಷ್ಟು ಮಂದಿ ತಮ್ಮ ಮತದ ಹಕ್ಕು ಚಲಾಯಿಸಿದ್ದಾರೆ.

ವಿರೋಧಪಕ್ಷಗಳ ಮೈತ್ರಿಕೂಟದಲ್ಲಿ ರೈ ಜೋರ್ ದಳ 13, ಅಸ್ಸೋಂ ಜಾತಿಯ ಪರಿಷತ್ 10, ಸಿಪಿಐ(ಎಂ ) ಮೂರು ಹಾಗೂ ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಜೊತೆಗೆ ಆಮ್ ಆದ್ಮಿ ಪಕ್ಷ ಹಾಗೂ ಯುನೈಟೆಡ್ ಪೀಪಲ್ಸ್ ಪಾರ್ಟಿ ಲೇಬರಲ ತಲಾ 18, ಟಿಎಂಸಿ 22 ಮತ್ತು ಜೆಎಂಎಂ 16 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಒಟ್ಟು 72 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಕಾಂಗ್ರೆಸ್ ಪಕ್ಷ ಅತಿ ಹೆಚ್ಚು 99 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಒಟ್ಟು 72 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಅತಿ ಹೆಚ್ಚು 99 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ 90 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ.ಎಐಯುಡಿಎಫ್ 30 ಸ್ಥಾನಗಳಲ್ಲಿ ಸ್ಪರ್ಧಿಸಿದೆ.(ಎನ್ ಡಿ ಎ) ಮಿತ್ರ ಪಕ್ಷಗಳಾದ ಗಣ ಪರಿಷತ್ 26 ಮತ್ತು ಬೋಡೋ ಪೀಪಲ್ಸ್ ಫ್ರಂಟ್ 11 ಸ್ಥಾನಗಳಲ್ಲಿ ಸ್ಪರ್ದಿಸಿದೆ. ಇದಲ್ಲದೆ 258 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರಲು ಕನಿಷ್ಠ 64 ಸ್ಥಾನಗಳನ್ನು ಗೆಲ್ಲಬೇಕಾಗಿದೆ.

ಮುಖ್ಯ ಚುನಾವಣಾ ಅಧಿಕಾರಿ ಅನುರಾಗ್ ಗೋಯೆಲ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಎರಡು ಹೆಚ್ಚುವರಿ ಕೇಂದ್ರ ಸಶಕ್ತ ಪೊಲೀಸ್ ಪಡೆ ದಳಗಳನ್ನು ಕರ್ತವ್ಯದಲ್ಲಿ ನಿಯೋಜಿಸಲಾಗುವುದು. ರಾಜ್ಯ ಸಶಕ್ತ ಪೊಲೀಸರ 93 ದಳಗಳನ್ನು ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ, ಜೊತೆಗೆ ಎಣಿಕೆ ದಿನದಂದು ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು 65 ಹೆಚ್ಚುವರಿ ದಳಗಳ ಬೆಂಬಲವನ್ನು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

Also Read:

Election Result Live: ದಾವಣಗೆರೆಯಲ್ಲಿ ಕಾಂಗ್ರೆಸಗೆ ಮುನ್ನಡೆ-ಸಮರ್ಥ್ ಶಾಮನೂರು ಅಚ್ಚರಿ ಲೀಡ್!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online