Belagavi News :
ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಕೊರತೆ ಹಾಗೂ ಸಾರ್ವಜನಿಕರ ನಿತ್ಯದ ಪ್ರಯಾಣದ ಸಂಕಷ್ಟದ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಎಂಟಿಸಿ ಬಸ್ ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸು" ಎಂದು ಹೇಳಿರುವ ಅವರು, ಸರ್ಕಾರದ ಸಾರಿಗೆ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, "ಐಟಿ ನಗರಿಗೆ ಹೊಸ ಸರ್ಕಾರ ಬಂದಿದೆ, ಹೊಸ ಸಾರಿಗೆ ಸಚಿವರು ಬಂದಿದ್ದಾರೆ. ಆದರೆ ಬಿಎಂಟಿಸಿ ಬಸ್ಗಳ ಕೊರತೆಯಿಂದ ಜನರ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ. ಜನರು ಕೆಲಸ ಮಾಡಬೇಕೋ ಅಥವಾ ಬಸ್ ಗಾಗಿ ರಸ್ತೆಯಲ್ಲೇ ಗಂಟೆಗಟ್ಟಲೆ ಕಾಯಬೇಕೋ?" ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.
ಸೋಮವಾರ ತೇಜಸ್ವಿ ಸೂರ್ಯ ಅವರು ಕತ್ರಿಗುಪ್ಪೆ ಇಂದ ಬನಶಂಕರಿವರೆಗೆ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದರು. ಬಳಿಕ ನಗರದ ಬಿಎಂಟಿಸಿ ಬಸ್ ನಿಲ್ದಾಣ ಒಂದರಲ್ಲಿ ಸಾರ್ವಜನಿಕರೊಂದಿಗೆ ಮಾತನಾಡಿ, ಬಸ್ ಗಳ ಕೊರತೆ, ವಿಳಂಬ ಹಾಗೂ ಹೆಚ್ಚುತ್ತಿರುವ ಪ್ರಯಾಣಿಕರ ಪರದಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬೆಂಗಳೂರಿನ ಲಕ್ಷಾಂತರ ಜನರು ಪ್ರತಿದಿನ ಬಿಎಂಟಿಸಿ ಬಸ್ ಗಾಗಿ ಕಾಯುವ ಪರಿಸ್ಥಿತಿಯನ್ನು "ಒಂದು ದೊಡ್ಡ ತಪಸ್ಸು" ಎಂದು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತಕ್ಷಣ ಸುಧಾರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತೇಜಸ್ವಿ ಸೂರ್ಯ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುರಿತು ಮತ್ತೆ ರಾಜಕೀಯ ಭಾಗವಾದಕ್ಕೆ ವೇದಿಕೆ ಕಲ್ಪಿಸಿದೆ.
ಬೆಂಗಳೂರು ಬಿಎಂಟಿಸಿ ಸಮಸ್ಯೆ - ಎಂಟು ತಿಂಗಳ ಹಿಂದಿನ ಪೋಸ್ಟ್ ನೆನಪಿಸಿಕೊಂಡ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ :
ಉತ್ತಮ ರಸ್ತೆಗಳು ಮತ್ತು ಸುರಕ್ಷಿತ ಪಾದಚಾರಿ ಮಾರ್ಗಗಳಿಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬಸ್ ಗಳ ಸಂಖ್ಯೆಯನ್ನು ಕನಿಷ್ಠ 15 ಸಾವಿರಕ್ಕೆ ಹೆಚ್ಚಿಸಬೇಕು. ನಗರದ ಯಾವುದೇ ಭಾಗದಲ್ಲಿ ಇದ್ದರೂ ಪ್ರತಿಯೊಬ್ಬ ನಾಗರಿಕನಿಗೂ 5 ನಿಮಿಷಗಳೊಳಗೆ ಬಸ್ ಸಿಗುವಂತಾಗಲು ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕು" ಎಂದು ತಾವು ಎಂಟು ತಿಂಗಳ ಹಿಂದೆ ಮಾಡಿದ್ದ ಪೋಸ್ಟ್ ಅನ್ನು ಸಂಸದ ತೇಜಸ್ವಿ ಸೂರ್ಯ ಮತ್ತು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಆ ಪೋಸ್ಟ್ ಮಾಡಿದ ಬಳಿಕ ಎಂಟು ತಿಂಗಳು ಕಳೆದಿವೆ. ಈ ಅವಧಿಯಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ, ಹೊಸ ಉಪಮುಖ್ಯಮಂತ್ರಿ ಹಾಗೂ ಹೊಸ ಸಾರಿಗೆ ಸಚಿವರು ಬಂದಿದ್ದರೂ, ಬೆಂಗಳೂರಿನ ಬಿಎಂಟಿಸಿ ಸೇವೆಯ ಸಿಟಿಯಲ್ಲಿ ಯಾವುದೇ ಗಮನ ಅರ್ಹ ಬದಲಾವಣೆ ಕಾಣಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಬಸ್ಗಳ ಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಒತ್ತಾಯಿಸಿರುವ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರವು ಸಾವಿರಾರು ಎಲೆಕ್ಟ್ರಿಕ್ ಬಸ್ಗಳಿಗೆ ಅನುಮೋದನೆ ನೀಡಿದ್ದರೂ ಅವುಗಳ ಕಾರ್ಯಗತಗೊಳಿಸುವಿಕೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೈನಂದಿನ ಪ್ರಯಾಣಿಕರಿಗೆ ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಾಗುವ ಸಾರ್ವಜನಿಕ ಸಾರಿಗೆ ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಸಂಚಾರದಟ್ಟನೆ ಮತ್ತು ಬಿಎಂಟಿಸಿ ಸೇವೆಗಳ ಕುರಿತು ತೇಜಸ್ವಿ ಸೂರ್ಯ ಅವರ ಈ ಹೇಳಿಕೆ ಮತ್ತೊಮ್ಮೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಬಸ್ ಗಳ ಕೊರತೆ ಹಾಗೂ ನಗರದ ಮೂಲ ಸೌಕರ್ಯ ಕುರಿತ ಚರ್ಚೆಗಳಿಗೆ ಕಾರಣವಾಗಿದೆ.
"ಜನರು ಕೆಲಸ ಮಾಡಬೇಕೋ, ರಸ್ತೆಯಲ್ಲಿ ಕಾಯಬೇಕೋ?' - ಬಿಎಂಟಿಸಿ ಬಸ್ ವಿಳಂಬಕ್ಕೆ ಸಿಎಂ ಗೆ ತೇಜಸ್ವಿ ಸೂರ್ಯ ನೇರ ಪ್ರಶ್ನೆ :
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಕೊರತೆ ಮತ್ತು ಪ್ರಯಾಣಿಕರ ಸಂಕಷ್ಟದ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬಿಎಂಟಿಸಿ ಸೇವೆ ಸುಧಾರಿಸದಿರುವುದನ್ನು ಟೀಕಿಸಿರುವವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ "ಜನರು ತಮ್ಮ ಕೆಲಸ ಮಾಡಬೇಕೋ ಅಥವಾ ರಸ್ತೆ ಬದಿಯಲ್ಲಿ ಗಂಟೆಗಟ್ಟಲೆ ಬಸ್ ಗಾಗಿ ಕಾಯಬೇಕೋ?" ಎಂದು ನೇರ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, "ನಾನು ಈ ವಿಷಯವನ್ನು ಕೆಲವು ತಿಂಗಳ ಹಿಂದೆಯೇ ಪ್ರಸ್ತಾಪಿಸಿದ್ದೆ. ಆದರೆ ಇಂದಿಗೂ ಬಿಎಂಟಿಸಿ ಪ್ರಯಾಣಿಕರು ಬಸ್ ಗಳಿಗಾಗಿ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವಂತಾಗಿದೆ. ಬಿಎಂಟಿಸಿ ಬಸ್ ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸಿನಂತಾಗಿದೆ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ದೈನಂದಿನ ಸಂಕಷ್ಟವನ್ನು ಉಲ್ಲೇಖಿಸಿರುವ ಅವರು, "ಪ್ರಯಾಣಿಕರ ನಿತ್ಯದ ಗೋಳು ಇದೇ ಆಗಿದ್ದರೆ, ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕೋ ಅಥವಾ ರಸ್ತೆ ಬದಿಯಲ್ಲಿ ನಿಂತು ಅಮೂಲ್ಯ ಸಮಯ ವ್ಯರ್ಥ ಮಾಡಬೇಕೋ? ಗೌರವಾನ್ವಿತ ಮುಖ್ಯಮಂತ್ರಿಗಳೇ, ಇದಕ್ಕೆ ಉತ್ತರ ನೀಡಿ " ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಬೆಂಗಳೂರಿನಲ್ಲಿ ವಿಶ್ವಾಸಾರ್ಹ, ಸಮಯ ಪಾಲನೆಯ ಹಾಗೂ ನಿರಂತರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಾರಿಗೆ ಸಚಿವ ಭೈರತಿ ಸುರೇಶ್ ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮೊದಲ ಆದ್ಯತೆ ನೀಡಿ, ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಪ್ರಯಾಣಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
"ಬಿಎಂಟಿಸಿ ಬಸ್ ಗಾಗಿ ಕಾಯುವುದೇ ಒಂದು ದೊಡ್ಡ ತಪಸ್ಸು!" ಎಂಬ ಸಾಲಿನೊಂದಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ, ಬಸ್ಗಳ ಕೊರತೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕಾರ್ಯಕ್ರಮಕ್ಕೆ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.