<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಕೆಂಪೇಗೌಡ ಏರ್ಪೋರ್ಟ್ ನಿರ್ಬಂಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಬಲೂನ್ ಹಾರಾಟ

ಕೆಂಪೇಗೌಡ ಏರ್ಪೋರ್ಟ್ ನಿರ್ಬಂಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಬಲೂನ್ ಹಾರಾಟ
Summary: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ನಿರ್ಬಂಧಿತ ಪ್ರದೇಶದಲ್ಲಿ ಬೃಹತ್ ಬಲೂನ್ ಹಾರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬಲೂನ್ ಹಾರಾಟಕ್ಕೆ ಕಾರಣವೇನು? ನೋಡೋಣ ಬನ್ನಿ...

Belagavi news:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದ ಬಳಿ ಬೃಹತ್ ಆದ ಬಲೂನ್ ಹಾರಾಟ ನಡೆದಿರುವ ಘಟನೆ ಈಗಾಗಲೇ ತಿಳಿದಿದೆ.ಇದು ಏರ್ಪೋರ್ಟ್ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಬಲೂನ್ ಹಾರಿಸಲಾಗಿದ್ದು,ಈ ಘಟನೆ ಭದ್ರತಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.ಪ್ರಕರಣ ಸಂಬಂಧಾಧಿಕಾರಿಗಳು ತನಿಖೆ ಆರಂಭಿಸಿದ್ದು,ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಏರ್ಪೋರ್ಟ್ ಸುತ್ತಮುತ್ತ ಇರುವ ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಹಾರಾಟ ಅಥವಾ ಚಟುವಟಿಕೆಗಳ ಕಠಿಣ ನಿಯಮಗಳು ಇದ್ದರೂ,ಈ ಘಟನೆ ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆ ಮೂಡಿಸದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಲೂನ್ ಹಾರಾಟ ನಡೆದಿರುವ ಘಟನೆ ಆತಂಕಕ್ಕೆ ಕಾರಣವಾಗಿರುವುದರಿಂದ,ಘಟನೆಯ ಸಂಬಂಧ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಹೊಸಕೋಟೆಯ ಬಿಸಿಡಿ ಎಂಬ ಖಾಸಗಿ ಕಂಪನಿಗೆ ಸೇರಿದ ಬಲೂನ್ ಇದಾಗಿದೆ ಎಂದು ತಿಳಿದುಬಂದಿದೆ.ತದನಂತರ ನಿಯಂತ್ರಣ ತಪ್ಪಿ ಬಲೂನ್ ಏರ್ಪೋರ್ಟ್ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ್ದು,ಭದ್ರತಾ ವಲಯದಲ್ಲಿ ಆತಂಕವನ್ನು ಮೂಡಿಸಿದೆ.ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು ಬಲೂನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿಗಳು ತಿಳಿದು ಬಂದಿದೆ.

Sponsored

ಸಿಐಎಸ್ಎಫ್ ವಾಯು ಯಾನ ಭದ್ರತಾ ಗುಂಪಿನ ಎಲ್ ನಾಗೇಂದ್ರ ಅವರು ಫೆಬ್ರವರಿ 8ರಂದು ದೂರು ದಾಖಲಿಸಿದ್ದಾರೆ.ದೂರಿನಲ್ಲಿ ಜನವರಿ 5ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಪ್ರದೇಶದಲ್ಲಿ "ಬಿಸಿಡಿ ಕನ್ಸ್ಟ್ರಕ್ಷನ್" ಎಂಬ ಹೆಸರಿನ ಬಲು ಅನಧಿಕೃತ್ಯವಾಗಿ ಹಾರುತ್ತಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಭಾರಿ ಡ್ರಗ್ಸ್ ಜಾಲ ಪತ್ತೆ :

ಹೌದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಲಾಗುತ್ತಿದ್ದ 2.97 ಕೋಟಿ ರೂಪಾಯಿ ವೆಚ್ಚದ ಹೈಡ್ರೋಪೋನಿಕ್ ಗಾಂಜಾವನ್ನು ಇತ್ತೀಚಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.ಇದರ ಹಿಂದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಸುದ್ದಿಯು ಕೇಳಿಬಂದಿದೆ.

ಹಾಗೆ ಥೈಲ್ಯಾಂಡ್ ನ ಪುಕೆಟ್ ಹಾಗೂ ಮಲೇಶಿಯಾದಿಂದ ಕೆಐಎಬಿಗೆ ಆಗಮಿಸಿದ್ದ ಪ್ರಯಾಣಿಕರ ಲಗೇಜ್ ಬ್ಯಾಗ್ ಗಳನ್ನು ಇಮಿಗ್ರೇಶನ್ ವಿಭಾಗದಲ್ಲಿ ಪರಿಶೀಲಿಸಿದಾಗ,ಪ್ಯಾಕೆಟ್ಗಳಾಗಿ ಅಡಗಿಸಿದ್ದಿದ್ದು ಒಟ್ಟು 8.5 ಕೆಜಿ ಹೈಡ್ರೋಪೋನಿಕ್ ಗಾಂಜಾ ಸಿಕ್ಕಿದೆ ಇದನ್ನು ವರ್ಷಕ್ಕೆ ಪಡೆದ ಅಧಿಕಾರಿಗಳು ಇನ್ನೂ ತನಿಖೆಯನ್ನು ಆರಂಭಿಸಿದ್ದಾರೆ. ಬೇರೆ ದೇಶದಿಂದ ಬರುವಂತಹ ಎಲ್ಲಾ ಲಗೇಜ್ ಬ್ಯಾಗ್ ಗಳನ್ನು ಪರಿಶೀಲಿಸಿ ಬಿಡುತ್ತಿದ್ದಾರೆ.

Sponsored

ಓಡಿಸ್ಸಾದ ವ್ಯಕ್ತಿಯೊಂದಿಗೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಪ್ರತ್ಯೇಕ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ ಠಾಣೆ ವ್ಯಕ್ತಿಯಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಾಲ ಬಯಲಾಗಿದ್ದು, ₹53,03,000 ಮೌಲ್ಯದ ಒಂದು ಕ್ವಿಂಟಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರಿಂದ ಮಾಹಿತಿ ತಿಳಿದು ಬಂದಿದೆ.

ಇದರ ಜೊತೆ ಜೊತೆಗೆ ಅಬುದಾಬಿ ಮಾರ್ಗವಾಗಿ ಅಮೆರಿಕಕ್ಕೆ ತೆರಳುತ್ತಿದ್ದ ಮಹಿಳೆಗೆ ಸೇರಿದ್ದ ಕೋಟ್ಯಂತರ ಹಾಗೂ ನಗದು ಕಳ್ಳತನವಾಗಿರುವ ಘಟನೆ ಇದೇ ವಿಮಾನ ನಿಲ್ದಾಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ಪ್ರಕಾರ ಹೇಳಲಾಗುತ್ತಿದೆ.

ಇನ್ನಷ್ಟು ಓದಿರಿ:

ಹೋಟೆಲ್ ಶೈಲಿಯಲ್ಲಿ ಮೈಸೂರು ಬಜ್ಜಿ: ಹೊರಗೆ ಕ್ರಿಸ್ಪಿ ಒಳಗೆ ಸೂಪರ್ ಸಾಫ್ಟ್!

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online