belagavi news:
ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ಒಟ್ಟು ಒಂಬತ್ತು ದಿನಗಳ ಕಾಲ ರಜೆ ಇರುವ ಸಾಧ್ಯತೆ ಇದೆ. ಮೇ 1ರಂದು ಕಾರ್ಮಿಕರ ದಿನಾಚರಣೆ ಹಾಗೂ ಮೇ 28ರಂದು ಬಕ್ರೀದ್ ಸೇರಿದಂತೆ ಎರಡು ಪ್ರಮುಖ ಸಾರ್ವತ್ರಿಕ ರಜೆಗಳು ಈ ಪಟ್ಟಿಯಲ್ಲಿ ಸೇರಿವೆ. ಇದಕ್ಕೆ ಜೊತೆಯಾಗಿ 5 ಭಾನುವಾರಗಳು ಹಾಗೂ 2ನೇ ಮತ್ತು 4ನೇ ಶನಿವಾರಗಳ ವಾರಾಂತ್ಯ ರಜೆಗಳು ಸೇರುವುದರಿಂದ ಒಟ್ಟು ರಜೆಗಳ ಸಂಖ್ಯೆ ಹೆಚ್ಚಾಗಿದೆ. ಈ ವೇಳೆಯಲ್ಲಿ ನೌಕರರು ವಾರಾಂತ್ಯದ ಜೊತೆಗೆ ಒಂದೆರಡು ದಿನ ಹೆಚ್ಚುವರಿ ರಜೆಗಳನ್ನು ಯೋಚಿಸಿಕೊಂಡರೆ ದೀರ್ಘಸರಣೆ ರಜೆಯ (ಸಾಲು ರಜೆ) ಸೌಲಭ್ಯವನ್ನು ಪಡೆಯುವ ಅವಕಾಶವೂ ಇದೆ.
ಬೆಂಗಳೂರು: ಮೇ ತಿಂಗಳು ಈ ಬಾರಿ ರಜೆಯೊಂದಿಗೆ ಆರಂಭವಾಗಿ ರಜೆಯೊಂದಿಗೆ ಅಂತ್ಯವಾಗುವಂತಾಗಿದೆ. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಹಬ್ಬಗಳು ಹಾಗೂ ವಾರಾಂತ್ಯದ ಪ್ರಜೆಗಳನ್ನು ಸೇರಿಸಿ ಒಟ್ಟಾರೆ 9 ದಿನಗಳ ರಜೆ ಇರುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ.
ಮೇ ತಿಂಗಳಲ್ಲಿ ಕಾರ್ಮಿಕರ ದಿನಾಚರಣೆ ಮತ್ತು ಬಕ್ರೀದ್ ಹಿನ್ನೆಲೆಯಲ್ಲಿ ಸರಕಾರಿ ರಜೆಗಳು ಇರಲಿವೆ. ಇದರ ಜೊತೆಗೆ 2ನೇ ಹಾಗೂ 4ನೇ ಶನಿವಾರಗಳು ಮತ್ತು 5 ಭಾನುವಾರ ಗಳನ್ನು ಸೇರಿಸಿ ಒಟ್ಟು ಒಂಬತ್ತು ದಿನಗಳ ರಜೆಗಳಾಗಲಿದೆ. ಈ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ಸಂಪೂರ್ಣ ಬಂದ್ ಆಗಿದ್ದು, ಯಾವುದೇ ವಹಿವಾಟು ನಡೆಯುವುದಿಲ್ಲ. ಮೇ ತಿಂಗಳಲ್ಲಿ ಉಳಿದ 22 ದಿನಗಳು ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. (2026 ಕರ್ನಾಟಕ ಸಾರ್ವತ್ರಿಕ ರಜೆ ಪಟ್ಟಿ)
ಮೇ ಬ್ಯಾಂಕ್ ರಜಾ ಪಟ್ಟಿ:
ಮೇ 1 (ಶುಕ್ರವಾರ)- ಕಾರ್ಮಿಕರ ದಿನ ಸರ್ಕಾರಿ ರಜೆ
ಮೇ3 - ಭಾನುವಾರ
ಮೇ 9 - 2ನೇ ಶನಿವಾರ
ಮೇ 10 - ಭಾನುವಾರ
ಮೇ 17 -ಭಾನುವಾರ
ಮೇ 23 - 4ನೇ ಶನಿವಾರ
ಮೇ 24 - ಭಾನುವಾರ
ಮೇ 28 - (ಗುರುವಾರ) ಬಕ್ರೀದ್ ಸರ್ಕಾರಿ ರಜೆ
ಮೇ 31- ಭಾನುವಾರ
ಸರಣಿ ರಜೆಗೆ ಅವಕಾಶ:
ಸರಣಿ ರಜೆಗೆ ಅವಕಾಶ ಇರುವಂತೆಯೇ ಈ ಬಾರಿ ಮೇ ತಿಂಗಳಲ್ಲಿ ನೌಕರರಿಗೆ ಉತ್ತಮ ಅವಕಾಶ ಸಿಗಲಿದೆ. ಮೇ 1 ರಂದು ಶುಕ್ರವಾರ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಇರಲಿದೆ. ಅದಕ್ಕೆ ಶನಿವಾರ ಒಂದು ದಿನ ರಜೆ ಸೇರಿಸಿಕೊಂಡರೆ ಭಾನುವಾರ ಜೊತೆಯಾಗುವ ಮೂಲಕ ಒಟ್ಟು ಮೂರು ದಿನಗಳ ಸರಣಿ ರಜೆಯನ್ನು ಪಡೆಯಬಹುದು. ಇದೇ ರೀತಿ ಬಕ್ರೀದ್ ಗುರುವಾರ ಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಎರಡು ದಿನ ರಜೆ ತೆಗೆದುಕೊಂಡರೆ ವಾರಾಂತ್ಯದ ರಜೆರೊಂದಿಗೆ ಒಟ್ಟಾಗಿ 4 ದಿನಗಳ ಸಾಲು ರಜೆ ಸೌಲಭ್ಯ ಲಭ್ಯವಾಗಲಿದೆ. ಖಾಸಗಿ ಕಂಪನಿಗಳ ಉದ್ಯೋಗಿಗಳು ಶುಕ್ರವಾರ ಒಂದೇ ದಿನ ರಜೆ ಹಾಕಿದರೂ ಸಹ ದೀರ್ಘ ವಾರಾಂತ್ಯದ ಪ್ರಯೋಜನ ಪಡೆಯುವ ಅವಕಾಶ ಇದೆ.
ಜೂನ್ ಒಂದು, ಜುಲೈಯಲ್ಲಿ ಶೂನ್ಯ ಸಾರ್ವತ್ರಿಕ ರಜೆ!
ಧಾರ್ಮಿಕ ಹಬ್ಬ, ರಾಷ್ಟ್ರೀಯ ಹಬ್ಬಗಳ ಇಲ್ಲದ ಕಾರಣ ಜೂನ್ 1 ಹಾಗು ಜುಲೈನಲ್ಲಿ ಶೂನ್ಯ ಸಾರ್ವತ್ರಿಕ ರಜೆಗಳಿವೆ. ಜೂನ್ 26ಕ್ಕೆ ಮೊಹರಂ ಕಡೆಯ ದಿನವಾಗಿದೆ. ಇನ್ನು ಜುಲೈನಲ್ಲಿ ಯಾವುದೇ ಹಬ್ಬ ಇಲ್ಲ ರಜೆಯೂ ಇಲ್ಲ. ವಾರಾಂತ್ಯ ಹಾಗೂ 2ನೇ, 4 ನೇ ಶನಿವಾರಕ್ಕಾಗಿ ಕಾಯಬೇಕಿದೆ. ಇನ್ನು ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಿನ್ನೆಲೆ ಸೆಪ್ಟೆಂಬರ್ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಸಾಲು ರಜೆ ಗಳಿವೆ.
Also Read:
ಡಾಲಿ ಧನಂಜಯ್ ಕುಟುಂಬಕ್ಕೆ ಹೊಸ ಅತಿಥಿ! ಗಂಡು ಮಗು ಜನನ