<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಬೆಳಗಾವಿ ಪ್ರತಿಭೆಗಳ ಮೆರಗು: ಅಂತರಾಷ್ಟ್ರೀಯ ರೋಬೊ ಸಾಕರ್ ಲೀಗ್ ನಲ್ಲಿ ಚಾಂಪಿಯನ್

ಬೆಳಗಾವಿ ಪ್ರತಿಭೆಗಳ ಮೆರಗು: ಅಂತರಾಷ್ಟ್ರೀಯ ರೋಬೊ ಸಾಕರ್ ಲೀಗ್ ನಲ್ಲಿ ಚಾಂಪಿಯನ್
Summary: The Belgaum boys' team put in a brilliant performance and won the championship title in the international 'Robo Soccer League' football competition held in Indonesia.

belagavi news :

ಇಂಡೋನೇಷ್ಯಾದಲ್ಲಿ ಭಾರತ ಕೀರ್ತಿಯಸಿದ ಬೆಳಗಾವಿ ಹುಡುಗರು: ಅಂತರಾಷ್ಟ್ರೀಯ ರೋಬೋ ಸಾಕರ್ ಲೀಗ್ ನಲ್ಲಿ ಚಾಂಪಿಯನ್

ಇಂಡೋನೇಷ್ಯಾದ ಜಕಾರ್ತಾ ಅಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ "ರೋಬೋ ಸಾಕರ್ ಲೀಕ್"ಫುಟ್ಬಾಲ್ ಸ್ಪರ್ಧೆಯಲ್ಲಿ ಬೆಳಗಾವಿ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಭಾರತಕ್ಕೆ ಹೆಮ್ಮೆಯ ಕ್ಷಣ ತಂದಿದೆ. ಈ ಸಾಧನೆಯ ಮೂಲಕ ಬೆಳಗಾವಿ ಜಿಲ್ಲೆಯ ಕೀರ್ತಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಾಗಿದೆ.

ಸ್ಟೆಂಪಿಡಿಯಾ ಮತ್ತು FSEF ಸಂಸ್ಥೆಗಳ ಸಂಯೋಗದಲ್ಲಿ ಮೇ 16ರಂದು ಮತ್ತು 17ರಂದು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಕೊಡಿವಿಯರ್ 7ನೇ ಆವೃತ್ತಿಯ ಅಂತರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧಿಯಲ್ಲಿ ಈ ಸಾಧನೆ ಮೂಡಿಬಂದಿದೆ. ಸ್ಪರ್ಧೆಯ ಟ್ರ್ಯಾಕ್-ಮೂರು ರೋಬೋ ಸಾಕರ್ ಲೀಕ್ ಸಿನಿಯರ ವಿಭಾಗದಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಸ್ಟೀಮ್-ಹೆಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ವಿಠ್ಠಲ ಮಲ್ಲಿಕಾರ್ಜುನ್ ಗದಗ್ ಮತ್ತು ಸುಶಾಂತ್ ಲಕ್ಕಪ್ಪ ಬಂಡಿವಡ್ಡರ್ ತಂಡ ಅದ್ಬುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿದೆ.

Sponsored

ತಾಂತ್ರಿಕ ಕೌಶಲ್ಯ, ರೋಬೋಟಿಕ್ಸ್ ಜ್ಞಾನ ಹಾಗೂ ತಂಡದ ಸಮನ್ವಯದ ಮೂಲಕ ವಿಶ್ವದ ವಿವಿಧ ದೇಶಗಳ ಸ್ಪರ್ಧಿಗಳನ್ನು ಮನಿಸಿದ ಈ ಕನ್ನಡಿಗರ ಸಾಧನೆ ಎಲ್ಲರ ಗಮನ ಸೆಳೆದಿದೆ. ಯುವ ಪ್ರತಿಭೆಗಳ ಈ ಗೆಲುವು ರಾಜ್ಯದ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯಾಗಿದೆ.

ಬೆಳಗಾವಿಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಧ್ವಜ ಹಾರಿಸುವುದು ಶಿಕ್ಷಣ ಕ್ಷೇತ್ರಕ್ಕೂ ಹೆಮ್ಮೆಯ ವಿಚಾರವಾಗಿದ್ದು, ಇವರ ಸಾಧನೆಗೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇಂಡೋನೇಷ್ಯಾ, ನೇಪಾಳ, ಅಲ್ಜೆರಿಯಾ ಸೇರಿ 22 ರಾಷ್ಟ್ರಗಳ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು . ಘಟಾನುಘಟಿ ಆಟಗಾರರನ್ನು ಮಣಿಸಿ ಗೆಲುವು ದಾಖಲಿಸಿದ ವಿಠ್ಠಲ್ ಮತ್ತು ಸುಶಾಂತ್ ಸಾಧನೆ ಭಾರತವು ಆಧುನಿಕ ರೋಬೋಟಿಕ್ಸ್, ವಿಜ್ಞಾನ, ತಂತ್ರಜ್ಞಾನ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ ಎಂದು ಸಂದೇಶಗಳು ಸಾರಿದೆ.

ಗ್ರಾಮೀಣ ಪ್ರತಿಭೆಗಳ ವಿಶ್ವ ಗೆಲುವು: ರೋಬೋ ಸಾಕರ್ ಲೀಗ್ ನಲ್ಲಿ ಬೆಳಗಾವಿ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ

Sponsored

ಬೆಳಗಾವಿಯ ಗ್ರಾಮೀಣ ಹಿನ್ನಲೆಯ ಇಬ್ಬರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ರೋಬೊ ಸಾಕರ್ ಲೀಗ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಇಂಡೋನೇಷ್ಯಾದ ಜರ್ಕಾತ್ನಳ್ಳಿ ನಡೆದ ಕೊಡಿವಿಯರ್ 7ನೇ ಆವೃತ್ತಿಯ ಅಂತರಾಷ್ಟ್ರೀಯ ರೋಬೋಟಿಕ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿರುವ ಈ ಸಾಧನೆ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಜರಕಾತದಲ್ಲೂ ಗೆಲುವಿನ ಪತಾಕೆ ಹಾರಿಸಿ ಹೊಸ ಇತಿಹಾಸ ನಿರ್ಮಿಸಿರುವುದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.

ವಿಶೇಷವೇನೆಂದರೆ, ರೋಬೋ ಸಾಕರ್ ಸ್ಪರ್ಧೆಗೆ ಬಳಸಿದ ರೋಬೋಟ್ ಗಳನ್ನು ಈ ವಿದ್ಯಾರ್ಥಿಗಳೇ ಸ್ವತಹ ವಿನ್ಯಾಸಗೊಳಿಸಿ ಸಿದ್ದಪಡಿಸಿದ್ದರು. ತಮ್ಮ ತಾಂತ್ರಿಕ ಕೌಶಲ್ಯದಿಂದ ರೋಬೋಟ್ ಗಳ ಮೂಲಕ ಲೀಲಾಜಾಲವಾಗಿ ಪುಟ್ಬಾಲ್ ಆಡಿದ ಅವರು ಎದುರಾಳಿ ತಂಡದ ರೋಬೋಟ್ ಗಳ ದಿಕ್ಕು ತಪ್ಪಿಸಿ ಗೋಲ್ಗಳನ್ನು ಬಾರಿಸಿ ಗೆಲುವು ಸಾಧಿಸಿದರು.

ಇನ್ನಷ್ಟು ಹೆಮ್ಮೆಯ ಸಂಗತಿ ಏನೆಂದರೆ, ಈ ಇಬ್ಬರು ವಿದ್ಯಾರ್ಥಿಗಳು ಗ್ರಾಮೀಣ ಮತ್ತು ಬಡ ಕುಟುಂಬಗಳಿಂದ ಬಂದ ಪ್ರತಿಭೆಗಳು. ಶಶಾಂಕ್ ತಂದೆ ಲಕ್ಕಪ್ಪ ಬಂಡಿ ವಡ್ಡರ್ ಆಟೋ ರಿಕ್ಷಾ ಚಾಲಕರಾಗಿದ್ದರೆ, ವಿಠ್ಠಲ್ ತಂದೆ ಮಲ್ಲಿಕಾರ್ಜುನ್ ಗದಗ್ ರೈತರಾಗಿದ್ದಾರೆ. ಸೀಮಿತ ಸೌಲಭ್ಯಗಳ ನಡುವೆಯೂ ತಮ್ಮ ಪ್ರತಿಭೆ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಜಾಗತಿಕ ವೇದಿಕೆಯಲ್ಲಿ ಮಿಂಚಿರುವ ಈ ವಿದ್ಯಾರ್ಥಿಗಳು ಇಂದಿನ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ.

ಬೆಳಗಾವಿಯ ಈವ ಪ್ರತಿಭೆಗಳ ಸಾಧನೆ ಕರ್ನಾಟಕ ಮಾತ್ರವಲ್ಲ, ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಇವರಲ್ಲಿನ ಪ್ರತಿಭೆ ಗುರುತಿಸಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿಗಳಾದ ಡಾ. ಅಲ್ಲಮ ಪ್ರಭು ಸ್ವಾಮೀಜಿ,'ತಮ್ಮ ಸಂಸ್ಥೆಯಲ್ಲಿ ಆರಂಭಿಸಿರುವ ಸ್ಟೀಮ್ ಹೆಚ್ ತರಬೇತಿ ಹಾಗೂ ಸಂಶೋಧನಾ ಪ್ರತಿಷ್ಠಾನದ'ಜೂನಿಯರ್ ಸೈಂಟಿಸ್ಟ್ ಪ್ರೋಗ್ರಾಮ್' ನಲ್ಲಿ ಆಯ್ಕೆ ಮಾಡಿ ಅವರಿಗೆ ಸೂಕ್ತ ತರಬೇತಿ ಕೊಡಿಸಿದ್ದರು. ಅಲ್ಲದೆ ಇಂಡೋನೇಷ್ಯಾಗಿ ಹೋಗಿ, ಬರಲು, ರೋಬೋಟ್ ಸಾಕರ್ ತಯಾರಿಸಲು, ಉಡಲು ಬಟ್ಟೆ ಸೇರಿ ಸಂಪೂರ್ಣ ಖರ್ಚು ವೆಚ್ಚವನ್ನು ಸ್ವಾಮೀಜಿ ಬರೆಸಿದ್ದಾರೆ. ಸ್ವಾಮೀಜಿ ಆಶೀರ್ವಾದ ಮತ್ತು ಸಹಕಾರದಿಂದಲೇ ನಾವು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳು ಸ್ಮರಿಸಿಕೊಂಡರು.

Sponsored

"ನಾವು ಸೋಲಬಾರದು ಅಂತ ಸಂಕಲ್ಪ ಮಾಡಿದ್ದೆವು": ಇಂಡೋನೇಷ್ಯಾದಲ್ಲಿ ಚಾಂಪಿಯನ್ ಆದ ಬೆಳಗಾವಿ ವಿದ್ಯಾರ್ಥಿಗಳ ಮಾತು ವೈರಲ್.

ಗೆಲುವಿನ ಬಳಿಕ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ವಿಠ್ಠಲ್ ಮಂಜುನಾಥ್ ಗದಗ್,"ಕನಸಲ್ಲಿಯೂ ನಾವು ವಿದೇಶಕ್ಕೆ ಹೋಗುತ್ತೇವೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಆದರೆ ಡಾ. ಅಲ್ಲಮ ಪ್ರಭು ಅಜ್ಜನವರ ಆಶೀರ್ವಾದ ಮತ್ತು ಬೆಂಬಲದಿಂದ ಇದು ಸಾಧ್ಯವಾಗಿದೆ. ತುಂಬಾ ಸಂತೋಷವಾಗುತ್ತಿದೆ. ನಮ್ಮ ಮನೆಯವರು ಮಾತ್ರವಲ್ಲ, ಇಡೀ ಊರೇ ಹೆಮ್ಮೆಪಡುತ್ತಿದೆ. ಇದನ್ನೆಲ್ಲಾ ನೋಡಿದಾಗ ಇನ್ನಷ್ಟು ದೊಡ್ಡ ಸಾಧನೆ ಮಾಡಬೇಕು ಎಂಬ ಆತ್ಮವಿಶ್ವಾಸ ಬಂದಿದೆ"ಎಂದು ಭಾವುಕರಾಗಿ ಹೇಳಿದರು.

ಸುಶಾಂತ್ ಲಕ್ಕಪ್ಪ ಬಂಡಿ ವಡ್ಡರ್ ಮಾತನಾಡಿ,"ನಾವು ಒಟ್ಟು ಎಂಟು ಪಂದ್ಯಗಳನ್ನು ಗೆದ್ದು ಚಾಂಪಿಯನ್ ಆಗಿದ್ದೇವೆ. ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾ ತಂಡವನ್ನು ನಾಲ್ಕು ಗೋಲು ಗಳಿಂದ ಸೋಲಿಸಿ ವಿಜಯಶಾಲಿಯಾಗಿದ್ದೆವು. ನಾವು ಸೋಲುವ ತಂಡ ಆಗಬಾರದು, ಗೆಲುವು ನಮ್ಮದೇ ಆಗಬೇಕು ಎಂಬ ದೃಢ ಸಂಕಲ್ಪ ಇಬ್ಬರಲ್ಲೂ ಇತ್ತು. ನಮ್ಮ ಮೇಲೆ ಸ್ವಾಮೀಜಿ, ಕಾಲೇಜ್ ಮತ್ತು ನಮ್ಮ ತಂದೆ ತಾಯಿ ಇಟ್ಟಿದ್ದ ವಿಶ್ವಾಸವನ್ನು ಹುಸಿಗೊಳಿಸಲಿಲ್ಲ"ಎಂದು ಹೇಳಿದರು. ಅವರು ಮುಂದುವರೆಸಿ,"ನಮ್ಮದೇ ಆದ ಗುರಿ ಇಟ್ಟುಕೊಂಡಿದ್ದೇವೆ. ನಮ್ಮ ಸಂಸ್ಥೆ ಮತ್ತು ಬೆಳಗಾವಿ ಜಿಲ್ಲೆ ಇನ್ನಷ್ಟು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದೇವೆ"ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಸ್ಟೀಮ್ ಹೆಚ್? ಬೆಳಗಾವಿಯ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಚೇತನ ಮೂಡಿಸಿದ ಅನನ್ಯ ಸಂಸ್ಥೆ

Sponsored

ಬೆಳಗಾವಿ ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ರೋಬೊ ಸಾಕರ್ ಲೀಗ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ" ಸ್ಟೀಮ್ ಹೆಚ್ "ಸಂಸ್ಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಮನೋಭಾವನೆ ಬೆಳೆಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಈ ಸಂಸ್ಥೆ ಅನೇಕ ಯುವ ಪ್ರತಿಭೆಗಳಿಗೆ ಹೊಸ ದಾರಿ ತೋರಿಸುತ್ತಿದೆ.

ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಪೀಠಾಧಿಪತಿ ಡಾ. ಅಲ್ಲಮ ಪ್ರಭು ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ"ಸ್ಟೀಮ್ ಹೆಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನ" ಆರಂಭಿಸಲಾಯಿತು. ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರ ಮತ್ತು ಸಂಶೋಧನಾ ಚಿಂತನೆ ಬೆಳೆಸುವುದು ಅದರ ಪ್ರಮುಖ ಉದ್ದೇಶವಾಗಿದೆ.

ವಿಶೇಷವೇನೆಂದರೆ, ಇಸ್ರೋ, ನಾಸಾ, ಸ್ಟೆಂಪಿಡಿಯಾ, ರೋಬೋ ಮಂಥನ ಸೇರಿದಂತೆ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಹಾಗೂ ಸಂಪನ್ಮೂಲಗಳ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇದರ ಮೂಲಕ ಗ್ರಾಮೀಣ ಭಾಗದಲ್ಲೇ ಯುವ ವಿಜ್ಞಾನಿಗಳನ್ನು ತಯಾರು ಮಾಡುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಉಚಿತವಾಗಿ ತರಬೇತಿ ಪಡೆದು, ವಿವಿಧ ವೈಜ್ಞಾನಿಕ ಸಂಶೋಧನೆ ಹಾಗೂ ರೋಬೋಟಿಕ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂಡೋನೇಷ್ಯಾದ ಜಳಕಾತ್ತಿನಲ್ಲಿ ನಡೆದ ಅಂತರಾಷ್ಟ್ರೀಯ ರೋಬೊ ಸಾಕರ್ಲಿಕ್ ಸ್ಪರ್ಧೆಯಲ್ಲಿ ಬೆಳಗಾವಿಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿ ರುವುದು ರಾಜ್ಯಕ್ಕೆ ಹೆಮ್ಮೆ ವಿಚಾರವಾಗಿದೆ. ಗ್ರಾಮೀಣ ಹಾಗೂ ಬಡ ಹಿನ್ನೆಲೆಯ ವಿದ್ಯಾರ್ಥಿಗಳಾದ ವಿಠಲ್ ಗದಗ್ ಮತ್ತು ಸುಶಾಂತ್ ಬಂಡಿ ವಡ್ಡರ್ ಸಾಧನೆಗೆ ಇದೀಗ ಎಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ. ಈ ಕುರಿತು ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮ ಪ್ರಭು ಸ್ವಾಮೀಜಿ,"ಅಂತರಾಷ್ಟ್ರೀಯ ಮಠದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಂದನೆಗಳು.

Sponsored

ಇವರು ಅತ್ಯಂತ ಬಡಾತನದ ಹಿನ್ನೆಲೆಯಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳು. ಇವರಲ್ಲಿನ ಸಾಮರ್ಥ್ಯವನ್ನು ಗುರುತಿಸಿ ನಮ್ಮ ಸಂಸ್ಥೆಯ ಸ್ಟೀಮ್ ಹೆಚ್ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತರಬೇತಿ ನೀಡಿದ್ದೆವು. ಅದರ ಫಲ ಇಂದು ವಿಶ್ವ ಮಟ್ಟದಲ್ಲಿ ಕಾಣಿಸಿದೆ"ಎಂದು ಸಂತಸ ವ್ಯಕ್ತಪಡಿಸಿದರು.

ಅವರು ಮುಂದುವರೆಸಿ,"ಇಂಡೋನೇಷ್ಯಾದಲ್ಲಿ ಭಾರತ ದೇಶದ ಕೀರ್ತಿಪತಾಕೆಯನ್ನು ಹಾರಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸವನ್ನು ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ನೀಡಲಾಗುವುದು"ಎಂದು ಭರವಸೆ ನೀಡಿದರು.

ಇನ್ನೊಂದೆಡೆ ಸ್ಟೀಮ್ ಹೆಚ್ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಮೆಂಟರ್ ದಯಾನಂದ್ ಮಗದುಮ್ಮ ಮಾತನಾಡಿ,"ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ರೋಬೋಟಿಕ್ ಕುರಿತು ವಿಶೇಷ ತರಬೇತಿ ನೀಡುತ್ತಿದ್ದೇವೆ. ಮೊದಲಿಗೆ ಬೆಂಗಳೂರಿನಲ್ಲಿ ನಡೆದ ಪ್ರಾದೇಶಿಕ ಮಟ್ಟದ ಸ್ಪರ್ಧೆಯಲ್ಲಿ, ಬಳಿಕ ಅಂತರಾಷ್ಟ್ರೀಯ ಕೊಡಿವಿಯರ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಇಂಡಿಯನ್ ಅಂತರಾಷ್ಟ್ರೀಯ ವೇದಿಕೆಯಲ್ಲಿ ಚಾಂಪಿಯನ್ ಆಗಿರುವುದು ನಮಗೆ ಅಪಾರ ಸಂತೋಷ ತಂದಿದೆ"ಎಂದು ಹೇಳಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ಅವರು ಜಾಗತಿಕ ಮಟ್ಟದಲ್ಲೂ ಸಾಧಿಸಬಹುದು ಎಂಬುದಕ್ಕೆ ಬೆಳಗಾವಿಯ ಈ ಯುವ ಪ್ರತಿಭೆಗಳು ಜೀವಂತ ಉದಾಹರಣೆಯಾಗಿವೆ. ಸ್ಟೀಮ್ ಹೆಚ್ ಸಂಸ್ಥೆ ಈ ಸಾಧನೆ ಇದೀಗ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

Sponsored

Also Read:

NEET UG 2026 Refund Alert: ಬ್ಯಾಂಕ್ ಡೀಟೇಲ್ಸ್ ಸಲ್ಲಿಸಲು ಮೇ 27 ಡೆಡ್ ಲೈನ್ ನೀಡಿದ NTA

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online