belagavi news:
ಕೊಲೆ, ಕೊಲೆ ಯತ್ನ, ಮಟಕಾ ಸೇರಿದಂತೆ ಹಲವು ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ 18 ರೌಡಿ ಶೀಟರ್ ಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಗಡಿಪಾರು ಮಾಡಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮಾಹಿತಿ ನೀಡಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಘೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳು "ಟಗರು ಬಾಯ್ಸ್", "ಹುಲಿ ವಾಯ್ಸ್","ಬ್ಯಾಡ್ ಬಾಯ್ಸ್" ಎಂಬ ಹೆಸರಿನಲ್ಲಿ ಸಮಾಜದಲ್ಲಿ ಭೀತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
"ಇಂಥವರಿಗೆ ಜಿಲ್ಲೆಯಲ್ಲಿ ಅವಕಾಶ ಇಲ್ಲ, ಇಲ್ಲೇನಿದ್ದರೂ ಮೇರಿ ಗುಡ್ ಬಾಯ್ಸ್ ಗಳಿಗೆ ಮಾತ್ರ ಅವಕಾಶ"ಎಂದು ಎಸ್ಪಿ ಖಡಕ್ ಎಚ್ಚರಿಕೆ ನೀಡಿದರು.. ಇವರು ರೌಡಿಸಂ ಹಿನ್ನೆಲೆಯ ಹಾಡುಗಳನ್ನು ಬಳಸಿಕೊಂಡು ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದು, ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕಳೆದ ಒಂದುವರೆ ತಿಂಗಳ ಅವಧಿಯಲ್ಲಿ 18 ಆರೋಪಗಳನ್ನು ಜಿಲ್ಲೆಯಲ್ಲಿ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಡಿಪಾರು ಆದವರು ಇವರು: ಗೋಕಾಕ್ ಶಹರ್ ಠಾಣೆ ವ್ಯಾಪ್ತಿಯ ಗಂಗಪ್ಪ ನಾಯಕ್, ಸಂಜು ಮೇಸ್ತ್ರಿ ಗೋಕಾಕ್ ಗ್ರಾಮೀಣ ಠಾಣೆಯ ಸಾಗರ್ ಖಾನಾಪುರ್, ಪಾಸ್ಕಲ್ ಮುತ್ತುಸ್ವಾಮಿ, ಕುಲಗೋಡ ಠಾಣೆಯ ದಸ್ತಗೀರ್ ಸಾಬ್ ನವಲಗಿ, ಮುರುಗೋಡು ಠಾಣೆಯ ಹನುಮಂತ್ ಮಾದರ, ನೀಲಕಂಠ ಮಣವಾಡಕರ, ನಿಪ್ಪಾಣಿ ಶಹರ್ ಠಾಣೆ ಸೈಫ್ ಅಲಿ ನಾಗರ್ಜಿ, ಸಂಕೇಶ್ವರ್ ಠಾಣೆಯ ಸಚಿನ್ ಚೌಡಕನ್ನವರ್, ನಿಪ್ಪಾಣಿ ಶಹರ್ ಠಾಣೆಯ ಪ್ರದೀಪ್ ಚೌಗಲೆ, ನಿಪ್ಪಾಣಿ ಗ್ರಾಮೀಣ ಠಾಣೆಯ ಚಂದ್ರಕಾಂತ್ ವಡ್ಡರ್, ಯಮಕನಮರಡಿ ಠಾಣೆಯ ಲಡಾಜಿಸಾಬ್ ಮುಲ್ತಾನಿ, ಪರೇಶ ನಾಶಿಪುಡಿ, ಕಟಕೋಳ ಠಾಣೆಯ ಚೇತನ್ ನಾಯ್ಕರ್, ಸವದತ್ತಿ ಠಾಣೆಯ ಹುಸೇನ್ ಸಾಬ್ ಬೀಳಗಿ, ಸುರೇಬಾನ ಠಾಣೆಯ ಚೂರಚಪ್ಪ ಘಟ್ನೂರ, ಕಿತ್ತೂರ್ ಠಾಣೆಯ ದೀಪಕ ಕೆಳಗಡೆ, ಕುಮಾರ್ ಬೆಂಡಿಗೇರಿ ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ "ಬ್ಯಾಡ್ ಬಾಯ್ಸ್","ಟಗರು ಬಾಯ್ಸ್","ಕಿಂಗ್ ಮೇಕರ್"ಎಂಬ ಹೆಸರಿನಲ್ಲಿ ರಿಲ್ಸ್ ಮತ್ತು ವಿಡಿಯೋಗಳನ್ನು ಹಾಕಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಪ್ರಕರಣಗಳನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಪ್ರಾಪ್ತರನ್ನು ಬಳಸಿಕೊಂಡು ಗ್ಯಾಂಗ್ ಶೈಲಿಯ ವಿಡಿಯೋಗಳು, ಚಾಕು- ತಲ್ವಾರ್ ಪ್ರದರ್ಶನ ಹಾಗೂ"ಹವಾ ಕ್ರಿಯೆಟ್" ಮಾಡುವ ರೀತಿಯ ಕಂಟೆಂಟ್ ಗಳನ್ನು ಹರಿಬಿಡುತ್ತಿರುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತಿದೆ.
ಎಂದು ಪೊಲೀಸರು ತಿಳಿಸಿದ್ದಾರೆ. ಇಂಥ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸು ವ್ಯವಸ್ಥೆ ಕಾಪಾಡಲು ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಸಮಾಜದಲ್ಲಿ ಬದುಕಬೇಕಾದರೆ ಎಲ್ಲವೂ 'ಗುಡ್ ಬಾಯ್ಸ್' ಆಗಿರಬೇಕು ಎಂದು ಹೇಳಿದ ಅವರು, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಲು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ರೌಡಿಸಂ ಶೈಲಿಯ ವಿಡಿಯೋಗಳು ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದನ್ನು ಸಹಿಸಲಾಗುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರೌಡಿಶೀಟರ್ ಗಳ ವಿರುದ್ಧ ಗಡಿಪಾರು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷಪಡುತ್ತಿದ್ದಾರೆ. ಜಿಲ್ಲಾಧ್ಯಂತ ಸಾಮಾಜಿಕ ಜಾಲತನಗಳ ಮೇಲೆ ಕಟ್ಟುನಿಟ್ಟು ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಅಪಾಯಕಾರಿ ಮತ್ತು ತಪ್ಪು ದಾರಿಯ ಚಟುವಟಿಕೆಗಳಿಂದ ದೂರವಿರಬೇಕು ಎಂದು ಮನವಿ ಮಾಡಿದ ಅವರು, ಚಾಕು ಹಿಡಿದು ಅಥವಾ ತಳವಾರು ಬಳಸಿ ಕೇಕ್ ಕಟ್ ಮಾಡುವಂತಹ ಫೋಟೋಗಳು ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತನಗಳಲ್ಲಿ ಅಪ್ಲೋಡ್ ಮಾಡಿದ್ದರೆ ತಕ್ಷಣವೇ ತೆಗೆದು ಹಾಕಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Also Read:
ಕರ್ನಾಟಕದಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ! 18ಕ್ಕೂ ಹೆಚ್ಚು ಜಿಲ್ಲೆಗಳಿಗೆ ಅಲರ್ಟ್