<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಬೆಳಗಾವಿ : ಪ್ರೇಮ ಪ್ರಕರಣದ ಆರೋಪಕ್ಕೆ ಯುವಕನ ಮನೆ ದ್ವಂಸ

ಬೆಳಗಾವಿ : ಪ್ರೇಮ ಪ್ರಕರಣದ ಆರೋಪಕ್ಕೆ ಯುವಕನ ಮನೆ ದ್ವಂಸ
Summary: It has been alleged that he met his friend's wife while going to work together and then both of them left home. In the backdrop of this incident, the woman's relatives attacked the young man's residence and vandalized the belongings of the family members in Belgaum.

belagavi news :

ವಿವಾಹಿತೆಯನ್ನು ಓಡಿಸಿಕೊಂಡು ಹೋದ ಆರೋಪದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆಯ ಪೋಷಕರು ಹಾಗೂ ಆಕೆಯ ಪತಿ ಕಡೆಯ ಸಂಬಂಧಿಕರು ಯುವಕನ ಮನೆ ಮೇಲೆ ದಾಳಿ ನಡೆಸಿ, ಮನೆಯನ್ನು ದ್ವಂಸಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಐವತ್ತಕ್ಕೂ ಹೆಚ್ಚು ಮಂದಿ ಮಾರಕಾಸ್ತ್ರಗಳೊಂದಿಗೆ ಯಲ್ಲಪ್ಪ ನಾಯಕ್ ಅವರ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ತಲ್ವಾರ್, ಜಂಬೆ, ಕುಡುಗೋಲು ಹಾಗೂ ಬಡಿಗೆಗಳಂತಹ ಆಯುಧಗಳನ್ನು ಹಿಡಿದು ಬಂದ ಗುಂಪು ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದೆ ಎನ್ನಲಾಗಿದೆ.

ಮನೆಗೆ ಅಳವಡಿಸಿದ್ದ ಕಿಟಕಿ, ಬಾಗಿಲು, ಪೀಠೋಪಕರಣಗಳು ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ಆರೋಪಿತರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಮುಂದುವರೆದಿದೆ.

.ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾದ ಆರೋಪ : ಮನೆ ಮೇಲೆ ದಾಳಿ

.ವಿವಾಹಿತೆಯೊಂದಿಗೆ ಪರಾರಿಯಾಗಿರುವ ಆರೋಪದಡಿ ಯುವಕ ಯಲ್ಲಪ್ಪ ನಾಯಕನ ಮನೆ .ಮೇಲೆ ದಾಳಿ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಯಲ್ಲಪ್ಪ ನಾಯಕ್ ಸ್ನೇಹಿತನ ಪತ್ನಿಯೊಂದಿಗೆ ಮನೆ ಬಿಟ್ಟು ತೆರಳಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ವರ್ಷವೇ ಬಸಪ್ಪ ನಾಯಕ ಅವರೊಂದಿಗೆ ಮಹಿಳೆಯು ವಿವಾಹವಾಗಿದ್ದು, ಬಸಪ್ಪ ಮತ್ತು ಯಲ್ಲಪ್ಪ ಸ್ನೇಹಿತರಾಗಿದ್ದರು. ಅಲ್ಲದೆ, ಬಸಪ್ಪ ದಂಪತಿ ಹಾಗೂ ಎಲ್ಲಪ್ಪ ಬೆಳಗಾವಿಯ ಉದ್ಯಮ ಪ್ರದೇಶಗಳಲ್ಲಿರುವ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಯಲ್ಲಪ್ಪ ಮತ್ತು ಮಹಿಳೆಯ ನಡುವೆ ಪರಿಚಯ ಬೆಳೆದು, ಬಳಿಕ ಇಬ್ಬರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಗೆ ಆಕ್ರೋಶಗೊಂಡ ಮಹಿಳೆಯ ಪೋಷಕರು ಹಾಗೂ ಪತಿ ಬಸಪ್ಪ ನಾಯಕ್ ಅವರ ಕಡೆಯ ಸಂಬಂಧಿಕರು ಯಲ್ಲಪ್ಪ ನಾಯಕನ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯ ವೇಳೆ ಮನೆಯ ಮೇಲ್ಚಾವಣಿಯ ಹಂಚುಗಳನ್ನು ಹೊಡೆದು, ಮನೆಯೊಳಗಿದ್ದ ಟಿವಿ, ಟ್ರೆಜರಿ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ದಾಳಿಯಲ್ಲಿ ಭಾಗಿಯಾಗಿರುವ ಆರೋಪಿತರನ್ನು ಗುರುತಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ದಾಳಿ ನಡೆದ ವೇಳೆ ಕುಟುಂಬದವರು ಅಲ್ಲಿಂದ ಓಡಿ ಹೋಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಯಲ್ಲಪ್ಪ ನಾಯಕನ ಕುಟುಂಬಸ್ಥರು ತಿಳಿಸಿದ್ದಾರೆ. ಗಾಳಿಯ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ 25 ಕುರಿಗಳನ್ನು ದುಷ್ಕರ್ಮಿಗಳು ಇದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಯಲ್ಲಪ್ಪನ ಕುಟುಂಬಸ್ಥರು ನಗರ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಮರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಮನೆ ಮೇಲೆ ದಾಳಿ ನಡೆಸಿದ ಆರೋಪದಡಿ ನಾಗರಾಜ ನಾಯಕ, ರವಿ ಬಿಜಗಟ್ಟಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Also Read:

ಮಳೆರಾಯನ ಅಬ್ಬರಕ್ಕೆ ಕಾರವಾರ ತತ್ತರ; ಹಲವೆಡೆ ಜಲಾವೃತ ರಸ್ತೆಗಳು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online