ಬೆಂಗಳೂರು: ದೇವಸ್ಥಾನಕ್ಕೆ ಕರೆದೊಯ್ದು ಮಗಳ ಮೇಲೆ ಮಚ್ಚು ಬೀಸಿದ ಆರೋಪ
ದೇವಸ್ಥಾನಕ್ಕೆ ಕರೆದೊಯ್ದು ಮಗಳ ಮೇಲೆ ಮಚ್ಚು ಬೀಸಿದ ಆರೋಪದಡಿ ತಾಯಿಯನ್ನು ಬಂಧಿಸಲಾಗಿದ್ದು, ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು:
ಆನೇಕಲ್ನಲ್ಲಿ ಪತಿಯೊಂದಿಗೆ ವಾಸವಿದ್ದ ರಮ್ಯಾ ಆಗಾಗ್ಗೆ ತವರು ಮನೆಗೆ ಬರುತ್ತಿದ್ದಳು. ತಾಯಿ-ಮಗಳು ಇಬ್ಬರೂ ಮನೆಯ ಸಮೀಪದಲ್ಲಿರುವ ಹರಿಹರೇಶ್ವರ ದೇವಾಲಯಕ್ಕೆ ಪೂಜೆಗೆಂದು ಬರುತ್ತಿದ್ದರು. ಅದೇ ರೀತಿ ಇಂದು ಬೆಳಗ್ಗೆ 4ಗಂಟೆ ಸುಮಾರಿಗೆ ದೇವಸ್ಥಾನದ ಬಳಿ ತಾಯಿ ಮಗಳು ಬಂದಿದ್ದರು.
ದೇವರಿಗೆ ತಲೆಭಾಗಿ ನಮಸ್ಕರಿಸುತ್ತಿದ್ದ ಮಗಳು ರಮ್ಯಾಳ ಮೇಲೆ ಸುಜಾತಾ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ರಮ್ಯಾಳನ್ನು ಸ್ಥಳೀಯರು ಗಮನಿಸಿ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ-ಮಗಳು ದೇವಸ್ಥಾನಕ್ಕೆ ಬರುವಾಗಲೇ ಮಚ್ಚು ತಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸದ್ಯ ಸುಜಾತಾ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಗಾಯಾಳು ರಮ್ಯಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ ತಿಳಿಸಿದ್ದಾರೆ.
ದೇವಾಲಯದಲ್ಲೇ ತಾಯಿಯೋರ್ವಳು ತನ್ನ ಮಗಳ ಮೇಲೆ ಮಚ್ಚು ಬೀಸಿ ಹತ್ಯೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಆಘಾತಕಾರಿ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಪಿಗೆಹಳ್ಳಿಯ ಅಗ್ರಹಾರ ಲೇಔಟ್ನ ಹರಿಹರೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ರಮ್ಯಾ (22) ತೀವ್ರವಾಗಿ ಗಾಯಗೊಂಡಿದ್ದಾಳೆ. ಆಕೆಯ ತಾಯಿ ಸುಜಾತ ಎಂಬುವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೋರ್ಟ್ ಕಲಾಪದ ವೇಳೆ ಅತ್ತೆ ಮೇಲೆ ಅಳಿಯನಿಂದ ಹಲ್ಲೆ:
ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಸಂಬಂಧಿಕರು. ಪಿತ್ರಾರ್ಜಿತ ಆಸ್ತಿಗಾಗಿ ಕೋರ್ಟ್ಗೆ ಮೀನಾಕ್ಷಿ ಬಂದಿದ್ದರು. ಈ ವೇಳೆ ಸೋದರತ್ತೆ ಪಿತ್ರಾರ್ಜಿತ ಆಸ್ತಿ ಕೇಳುತ್ತಿದ್ದಾಳೆ ಎಂದು ಸಿಟ್ಟಿಗೆದ್ದ ಅಳಿಯ ಬಾಬಾಸಾಹೇಬ್ ಕೋರ್ಟ್ ಆವರಣದಲ್ಲಿಯೇ ಅತ್ತೆ ಮೀನಾಕ್ಷಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ತಕ್ಷಣ ಕೋರ್ಟ್ ಕಲಾಪ ನಡೆಸುತ್ತಿದ್ದ ನ್ಯಾಯಾಧೀಶರ ಮುಂದೆ ಮೀನಾಕ್ಷಿ ಓಡಿ ಹೋಗಿ ನಿಂತಿದ್ದರು. ಈ ವೇಳೆ ಆರೋಪಿಯು ಮಹಿಳೆಯ ತಲೆಗೆ ಗಂಭೀರವಾಗಿ ಹೊಡೆದಿದ್ದು, ಮತ್ತೊಂದು ಏಟಿಗೆ ಮುಂದಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಮಹಿಳೆಯ ಮೇಲೆ ವ್ಯಕ್ತಿ ಅಥಣಿ ಕೋರ್ಟ್ ಆವರಣದಲ್ಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಮೀನಾಕ್ಷಿ ರಾಮಚಂದ್ರ ಶಿಂಧೆ (50) ಗಾಯಗೊಂಡಿರುವ ಮಹಿಳೆ. ಬಾಬಾಸಾಹೇಬ್ ಚೌಹಾಣ್ ಆರೋಪಿ.
ಇನ್ನಷ್ಟು ಓದಿರಿ :
ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ