BELAGAVI NEWS :
ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರದಿಂದ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಹಲವು ವರ್ಷಗಳಿಂದ ಜನರು ಕೇಳುತ್ತಿದ್ದ ಬೇಡಿಕೆಗೆ ಕೊನೆಗೂ ಮುನ್ನಡೆ ದೊರೆತಿದ್ದು, ಈಗಾಗಲೇ ವಿಶೇಷ ರೈಲು ಗಳಾಗಿ ಓಡುತ್ತಿದ್ದ ಮೂರು ರೈಲುಗಳನ್ನು ಕಾಯಂಸೇವೆಯಾಗಿ ಪರಿವರ್ತಿಸಲಾಗಿದೆ. ಸೋಮವಾರ ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಅವರು ಈ ರೈಲುಗಳಿಗೆ ಹಸಿರು ನಿಶಾ ನೆ ತೋರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಈ ನಿರ್ಧಾರದಿಂದ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ. ಅಲ್ಲದೆ ವಿಶೇಷ ರೈಲುಗಳಿಗಿಂತ ಸಾಮಾನ್ಯ ನಿಯಮಿತ ರೈಲುಗಳ ಟಿಕೆಟ್ ದರ ಕಡಿಮೆಯಾಗಿರುವುದರಿಂದ ದಿನವೇ ಪ್ರಯಾಣಿಕರಿಗೆ ಸುಮಾರು 25 ರಿಂದ 30 ಶೇಕಡಾ ವರೆಗೆ ಹಣ ಉಳಿತಾಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಳಜೋಷಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಯ ಈ ಕ್ರಮದಿಂದ ಉತ್ತರ ಕರ್ನಾಟಕ ಭಾಗದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲವಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗೆ ಸಹ ಹೆಚ್ಚಿನ ಅನುಕೂಲ ಸಿಗಲಿದೆ.
ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರಿಗೆ ಇಂದು ಐತಿಹಾಸಿಕ ದಿನವಾಗಿದ್ದು, ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ವಿಜಯನಗರ ನೂತನ ನಿಯಮಿತ ಮೆಮು ರೈಲು ಸೇವೆಗೆ ಕೇಂದ್ರ ಸಚಿವ ಪ್ರಯಾಣ ಜೋಶಿ ಹಸಿರು ನಿಶಾನೆ ತೋರಿಸಿದರು. ರೈಲು ಸಂಖ್ಯೆ 66501 ಇನ್ನು ಮುಂದೆ ನಿಯಮಿತ ಸೇವೆಯಾಗಿ ಸಂಚರಿಸಲಿದ್ದು, ನಿತ್ಯ ಪ್ರಯಾಣಿಕರಿಗೆ ದೊಡ್ಡ ಅನುಕೂಲ ಕಲ್ಪಿಸಿದೆ. ಇದೆ ವೇಳೆ ಹೈದರಾಬಾದಿಗೆ ನೇರ ಸಂಪರ್ಕ ಕಲ್ಪಿಸುವ ರೈಲುಗಳನ್ನು ಒಳಗೊಂಡಂತೆ ಒಟ್ಟು ಮೂರು ವಿಶೇಷ ರೈಲುಗಳನ್ನು ಖಾಯಂ ಸೇವೆಯಾಗಿ ಪರಿವರ್ತಿಸಲಾಗಿದೆ ಈ ನಿರ್ಧಾರದಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಬಾರಿ ಪ್ರಯೋಜನವಾಗಲಿದೆ.
ವಿಶೇಷವಾಗಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಳ್ಳಾರಿ, ರಾಯಚೂರು, ಹಾಗೂ ಯಾದಗಿರಿ ಜಿಲ್ಲೆಗಳ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸುಲಭ ಹಾಗೂ ಕಡಿಮೆ ವೆಚ್ಚದ ಪ್ರಯಾಣ ಸಿಗಲಿದೆ. ಹಬ್ಬ ಹರಿದಿನ ಹಾಗೂ ರಜೆ ಸಂದರ್ಭಗಳಲ್ಲಿ ಟಿಕೆಟ್ ಸಿಗದ ಸಮಸ್ಯೆ ಕಡಿಮೆಯಾಗಲಿದ್ದು, ವಿಶೇಷ ರೈಲುಗಳಿಗಿಂತ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಾಗಲಿದೆ. ರೈಲ್ವೆ ಇಲಾಖೆಯ ಈ ಕ್ರಮ ಉತ್ತರ ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬುವಂತಾಗಿದೆ.
ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ನೈರುತ್ಯ ರೈಲ್ವೆಯ ಪ್ರಮುಖ ವಿಶೇಷ ರೈಲುಗಳನ್ನು ಇಂದಿನಿಂದ 'ನಿಯಮಿತ ಸೇವೆ'ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದು ಉತ್ತರ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ ಎಂದು ಹೇಳಿದರು. ಹುಬ್ಬಳ್ಳಿ ವಿಜಯಪುರ ಮಾರ್ಗದ ರೈಲು ಪ್ರಯಾಣಿಕರಿಗೆ ಮತ್ತೊಂದು ಬಾರಿ ಗುಡ್ ನ್ಯೂಸ್ ಸಿಕ್ಕಿದೆ. ರೈಲು ಸಂಖ್ಯೆ 56919/20 ಹಾಗೂ 66501/02 ರೈಲುಗಳು ಇನ್ನು ಮುಂದೆ ನಿಯಮಿತ ಸೇವೆಯಾಗಿ ಸಂಚರಿಸಲಿದ್ದು, ಇದರಿಂದ ಹುಬ್ಬಳ್ಳಿ ನಿತ್ಯ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರು ಇದೀಗ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಸಂಚರಿಸಲು ಸಾಧ್ಯವಾಗಲಿದೆ. ವಿಶೇಷ ರೈಲುಗಳಿಗಿಂತ ನಿಯಮಿತ ರೈಲುಗಳ ದರ ಕಡಿಮೆಯಾಗಿರುವುದರಿಂದ ಪ್ರಯಾಣಿಕರಿಗೆ ಆರ್ಥಿಕ ಲಾಭವು ದೊರೆಯಲಿದೆ.
ವಿಶೇಷವಾಗಿ ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಫಾಸ್ಟ್ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಜೊತೆಗೆ ಮೀಸಲು ದರ್ಜೆ ಟಿಕೆಟ್ ತರದಲ್ಲಿ ಸುಮಾರು 30 ಶೇಕಡಾ ರಷ್ಟು ಇಳಿಕೆಯಾಗಲಿದ್ದು, ಕಡಿಮೆ ದರದಲ್ಲಿ ಹೆಚ್ಚು ಆರಾಮದಾಯಕ ಪ್ರಯಾಣ ಸಿಗಲಿದೆ. ಇದೇ ವೇಳೆ ಉತ್ತರ ಭಾರತದ ಯಾತ್ರಾರ್ಥಿಗಳಿಗೆ ಸ ರೈಲು ಇಲಾಖೆ ದೊಡ್ಡ ಸೌಲಭ್ಯ ನೀಡಿದೆ, ರೈಲು ಸಂಖ್ಯೆ 17363/64 ಹುಬ್ಬಳ್ಳಿ- ಯೋಗನಗರಿ ಹೃಷಿಕೇಶ್ ವಾರಾಂತ್ಯ ವಿಶೇಷ ರೈಲು ಇದೀಗ ನಿಯಮಿತ ಸೇವೆಯಾಗಿ ಪರಿವರ್ತನೆಯಾಗಿದ್ದು,
ವರ್ಷಪೂರ್ತಿ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ಇದರಿಂದ ಉತ್ತರ ಭಾರತಕ್ಕೆ ತೆರಳಿರುವ ಭಕ್ತರು ಮತ್ತು ಪ್ರವಾಸಿಗರಿಗೆ ಸುಲಭ ಪ್ರಯಾಣದ ಅವಕಾಶ ಸಿಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಅಮೃತ ಭಾರತ ಯೋಜನೆ ಅಡಿ ಅಭಿವೃದ್ಧಿಪಡಿಸಿರುವ ಅಲ್ಲಾವರ ರೈಲು ನಿಲ್ದಾಣವು ಉದ್ಘಾಟನೆಗೆ ಸಜ್ಜಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಮಹಾ ಪ್ರಬಂದಕ ಪಿ ಅನಂತ, ಸೇರಿದಂತೆ ಇನ್ನಿತರ ರೈಲ್ವೆ ಅಧಿಕಾರಿಗಳು ಕೂಡ ಅಲ್ಲಿ ಭಾಗವಹಿಸಿದ್ದರು. ಮುಖ್ಯವತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗವನ್ನು ಹೆಚ್ಚಿಸಿದೆ, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಇದ್ದರು ಸುಲಭವಾಗಿ ಮತ್ತು ಸುಗಮವಾಗಿ ಹಾಗೂ ಸುರಕ್ಷಿತವಾಗಿ ವೇಗದಾಯಕದಿಂದ ಬೆಳೆಯುತ್ತಿದೆ ಎಂದು ಸಚಿವ ಜೋಶಿ ಅವರು ಹೇಳಿದರು.
Also Read:
Belagavi Hostel Tragedy: ಹುಟ್ಟುಹಬ್ಬದಂದೇ ಬಿಎಸ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ