<?= $pageTitle ?>
Logo
ಮುಖಪುಟ ಓದುವುದು ಕೇಳು
Business

SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !

SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !
Summary: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ ಬಿಐ (SBI ) ತನ್ನ ಐಎಂಪಿಎಸ್ (IMPS) ಹಣ ವರ್ಗಾವಣೆ ಶುಲ್ಕಗಳನ್ನು ಪರಿಸ್ಕರಿಸಿದೆ. ಈ ಹೊಸ ಶುಲ್ಕಗಳು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿವೆ.
belagavi news:
ಬ್ಯಾಂಕಿಂಗ್ ದೈತ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ) ತನ್ನ ಗ್ರಾಹಕರಿಗೆ ಆಘಾತ ನೀಡಲಿದೆ. ತಕ್ಷಣದ ಪಾವತಿ ಸೇವೆ (IMPS) ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪರಿಷ್ಕೃತ ಹಸ್ತ ಶುಲ್ಕಗಳು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿವೆ, ಎಂದು ಎಸ್ ಬಿಐ ಘೋಷಿಸಿದೆ. ಹೊಸ ಸೇವಾ ಶುಲ್ಕಗಳನ್ನು ಜಾರಿಗೆ ತರಲಾಗುವುದು ಎಂದು ಬಹಿರಂಗಪಡಿಸಿದೆ. ಇದವರಿಗೆ ಆನ್ಲೈನ್ ನಲ್ಲಿ ಮಾಡಿದ ಕೆಲವು ರೀತಿಯ ವಹಿವಾಟುಗಳ ಮೇಲಿನ ಉಚಿತ ಸೌಲಭ್ಯವನ್ನು ರದ್ದುಗೊಳಿಸಿದೆ.

IMPS ಎಂದರೇನು? IMPS ಎಂದರೆ ತಕ್ಷಣದ ಹಣ ವರ್ಗಾವಣೆ ಪಾವತಿ ವ್ಯವಸ್ಥೆ . ಇದನ್ನು ರಾಷ್ಟ್ರೀಯ ಪಾವತಿ ನಿಗದಿ (NPCI) ನಿರ್ವಹಿಸುತ್ತದೆ. ವಿಶೇಷವಾಗಿ ಯುಪಿಐ ಮಿತಿಗಳನ್ನು ದಾಟಿದಾಗ ಅಥವಾ ದೊಡ್ಡ ಪ್ರಮಾಣದ ಹಣವನ್ನು ವರ್ಗಾಯಿಸಬೇಕಾದಾಗ ಇದನ್ನು ಬಳಸಲಾಗುತ್ತದೆ. ಈ ಐ ಎಂಪಿಎಸ್ ಕಾರ್ಯವಿಧಾನವನ್ನು ತ್ವರಿತವಾಗಿ ಹಣವನ್ನು ಕಳಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಕಾರ್ಯವಿಧಾನದ ಮೂಲಕ ಬಳಕೆದಾರರು ಮೊಬೈಲ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ, ಎಸ್ ಎಂಎಸ್ ಮುಂತಾದ ವಿವಿಧ ಚಾನೆಲ್ಗಳಲ್ಲಿ ಇಂಟರ್ ಬ್ಯಾಂಕ್ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ ಸೇವೆಗಳನ್ನು ಕೆಲವೇ ಸೆಕೆಂಡ್ ಗಳಲ್ಲಿ, 24/7, ರಜಾದಿನಗಳಲ್ಲಿಯೂ ಸಹ, ಬ್ಯಾಂಕುಗಳು ಮತ್ತು ಆರ್ ಬಿಐ - ಅಧಿಕೃತ ಪಿಪಿಐಗಳು ಪ್ರಿಪೇಯ್ಡ್ ಪಾವತಿ ಉಪಕರಣಗಳಿಂದ ಮಾಡಬಹುದಾಗಿದೆ.
ಈ ನಿಯಮಗಳು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿವೆ. ಅದಾಗ್ಯೂ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳಿಂದಾಗಿ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಅಪ್ಲಿಕೇಶನ್ ಬಳಸಿ ಮಾಡಿದ ದೊಡ್ಡ ವಹಿವಾಟುಗಳಿಗೆ ಶುಲ್ಕ ವಿಧಿಸಲು ಎಸ್ ಬಿಐ ನಿರ್ಧರಿಸಿದೆ. ಹಸನ್ ನಿಯಮಗಳ ಪ್ರಕಾರ ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಮಾಡಿದ ವಹಿವಾಟಿನ ಪ್ರಕಾರ ಶುಲ್ಕಗಳನ್ನು ಅನ್ವಯವಾಗುತ್ತವೆ.

ಹೊಸ ಶುಲ್ಕಗಳಿಂದ ಈ ಖಾತೆದಾರರಿಗೆ ವಿನಾಯಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ರೀತಿಯ ಖಾತೆಗಳನ್ನು ನೀಡಿದೆ. ಅಲ್ಲದೇ, ಶೌರ್ಯ ಕುಟುಂಬ ಪಿಂಚಣಿ ಖಾತೆ ಮತ್ತು SBI RISHTEY ನಂತಹ ವಿಶೇಷ ಖಾತೆದಾರರಿಗೆ IMPS ಸೇವೆಗಳು ಉಚಿತವಾಗಿ ಲಭ್ಯವಿರುತ್ತವೆ ಎಂದು ಬ್ಯಾಂಕ್ ತಿಳಿಸಿದೆ. ಕೇಂದ್ರ ಸರ್ಕಾರ, ರಕ್ಷಣಾ, ರೈಲ್ವೆ, ಪೋಲಿಸ್ ನಂತಹ ಸಂಬಳದ ಖಾತೆಗಳನ್ನು ಹೊಂದಿರುವವರಿಗೆ ಈ ಶುಲ್ಕಗಳು ಅನ್ವಯಿಸುವುದಿಲ್ಲ.

ಶುಲ್ಕದ ವಿವರಗಳು:

25,000 ರೂ. ವರೆಗೆ ಯಾವುದೇ ಶುಲ್ಕವಿರುವುದಿಲ್ಲ ( ಉಚಿತ)

25,001 ರೂ ದಿಂದ 1 ಲಕ್ಷ ರೂ. ವರೆಗೆ 2 ರೂ. + ಜಿಎಸ್ ಟಿ ಜೊತೆಗೆ

1 ಲಕ್ಷದಿಂದ 2 ಲಕ್ಷ ರೂವರೆಗೆ. 6 ರೂ. + GST

2 ಲಕ್ಷದಿಂದ 5 ಲಕ್ಷ ರೂ.ವರೆಗೆ 10ರೂ. + GST

ಬ್ಯಾಂಕ್ ಶಾಖೆಗೆ ಹೋಗಿ ನೇರವಾಗಿ IMPS ವಹಿವಾಟು ನಡೆಸುವ ಗ್ರಾಹಕರಿಗೆ ಹಳೆಯ ಶುಲ್ಕಗಳು ಅನ್ವಯಿಸುತ್ತವೆ. ಆದಾಗ್ಯೂ ಬಳಕೆದಾರರಿಗೆ ಸ್ವಲ್ಪ ಸಮಾಧಾನ ತರುವ ವಿಷಯ ಎಂದರೆ ಆನ್ಲೈನ್ ಬದಲಿಗೆ ಶಾಖೆಗಳ ಮೂಲಕ ಮಾಡುವವರಿಗೆ ಶುಲ್ಕಗಳಿಗೆ ಯಾವುದೇ ಬದಲಾವಣೆ ಇಲ್ಲ. ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶಾಖೆಯ ವಹಿವಾಟುಗಳಿಗೆ ಮೊತ್ತವನ್ನು ಅವಲಂಬಿಸಿ ರೂ.2 ರಿಂದ ರೂ. 20 ರವರಿಗೆ ಶುಲ್ಕ ವಿಧಿಸಲಾಗುತ್ತದೆ.

ಇನ್ನಷ್ಟು ಓದಿರಿ:
2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್ ವಾರದ ಪಟ್ಟಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online