<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಸೋಲಿನ ನೋವಿನಲ್ಲಿದ್ದ ಕಮ್ಮಿನ್ಸ್ ಗೆ ಬಿಸಿಸಿಐನಿಂದ ಬಿಗ್ ಶಾಕ್

ಸೋಲಿನ ನೋವಿನಲ್ಲಿದ್ದ ಕಮ್ಮಿನ್ಸ್ ಗೆ ಬಿಸಿಸಿಐನಿಂದ ಬಿಗ್ ಶಾಕ್
Summary: The BCCI has now given another shock to Australian captain Pat Cummins, who has not recovered from the shock of his humiliating defeat in the IPL. The new decision taken by the BCCI has caused a huge debate in the cricket world and has also disappointed Cummins fans. What is the reason behind this decision? Let's see..

Belagavi news:

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ ಕಮ್ಮಿನ್ಸ್ ಗೆ ಇದೀಗ ಬಿಸಿ ಸಿಐ ಮತ್ತೊಂದು ಶಾಕ್ ನೀಡಿದೆ. ನಿಧಾನ ಗತಿಯ ಓವರ್ ದರ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಕಮ್ಮಿನ್ಸ್ ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಈ ದಂಡ ವಿಧಿಸಲಾಗಿದ್ದು, ನಿಗದಿತ ಸಮಯದಲ್ಲಿ ಓವರ್ ಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಬಿಸಿಸಿಐ ಕ್ರಮ ಕೈಗೊಂಡಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೇವಲ 86 ರನ್ಗಳಿಗೆ ಅವಮಾನಕರ ಸೋಲು ಕಂಡಿತ್ತು. ಮುದ್ದು ಮಗಳೇ ಈ ಸೋಲಿನ ಆಘಾತದಿಂದ ಹೊರಬರುವ ಮುನ್ನವೇ ಕಮ್ಮೆನ್ಸ್ ಗೆ ದಂಡದ ರೂಪದಲ್ಲಿ ಮತ್ತೊಂದು ಹೊಡೆತ ಬಿದ್ದಿದೆ.

ಐಪಿಎಲ್ 2026ರಲ್ಲಿ ವಿಧಾನ ಗತಿಯ ಓವರ್ಧರ ಉಲ್ಲಂಘನೆ ಪ್ರಕರಣದಲ್ಲಿ ದಂಡಕ್ಕೊಳಗಾದ ನಾಯಕರ ಪಟ್ಟಿಗೆ ಇದೀಗ ಪ್ಯಾಟ್ ಕಮ್ಮಿನ್ಸ್ ಕೂಡ ಸೇರಿದ್ದಾರೆ. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಎರಡು ಬಾರಿ ಇದೇ ಕಾರಣಕ್ಕೆ ದಂಡ ಕಟ್ಟಿದ್ದಾರೆ.

Sponsored

ಸನ್ ರೈಸರ್ಸ್ ತಂಡದ ಕಳಪೆ ಪ್ರದರ್ಶನ ಹಾಗೂ ನಾಯಕತ್ವದ ನಿರ್ಧಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಬಿಸಿಸಿಐ ಕ್ರಮ ಐಪಿಎಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂದೇಶ ನೀಡಿದೆ.

ನಿಧಾನ ಗತಿಯ ಓವರ್ಧರ ಉಲ್ಲಂಘನೆ:

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ ಕಮ್ಮಿನ್ಸ್ ಗೆ ಬಿಸಿಸಿಐ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಐಪಿಎಲ್ ನಲ್ಲಿ ನಿಧಾನ ಗತಿಯ ಓವರ್ಧರ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ಉಲ್ಲಂಘನೆಯಾದ ಕಾರಣಕ್ಕೆ ಕಮ್ಮಿನ್ಸ್ ವಿರುದ್ಧ ಕ್ರಮ ಜರುಗಿಸಲಾಗಿದೆ. ನಿಧಾನ ಗತಿಯ ಓವರ್ಧರ ಉಲ್ಲಂಘನೆಗೆ ಕನಿಷ್ಠ 12 ಲಕ್ಷ ರೂಪಾಯಿ ದಂಡ ವಿಧಿಸುವ ನಿಯಮವಿದ್ದು, ಇದೆ ಮೊದಲ ಬಾರಿಗೆ ಈ ತಪ್ಪು ಮಾಡಿದ ಕಾರಣ ಕಮ್ಮಿನ್ಸ್ ಗೆ ಕನಿಷ್ಠ ದಂಡ ವಿಧಿಸಲಾಗಿದೆ.

Sponsored

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ನಿಗದಿತ ಸಮಯಕ್ಕೆ ಓವರ್ ಗಳನ್ನು ಪೂರ್ಣಗೊಳಿಸಲು ವಿಫಲವಾಗಿತ್ತು. ಇದರಿಂದಾಗಿ ಪಂದ್ಯ ಮುಗಿದ ಬಳಿಕ ಬಿಸಿಸಿಐ ಅಧಿಕೃತವಾಗಿ ದಂಡ ಘೋಷಿಸಿತು.

ಐಪಿಎಲ್ 2026ರಲ್ಲಿ ನಿಧಾನ ಗತಿಯ ಓವರ್ದರ ಉಲ್ಲಂಘನೆ ಪ್ರಕರಣದಲ್ಲಿ ದಂಡಕ್ಕೊಳಗಾದ ನಾಯಕರ ಪಟ್ಟಿಗೆ ಇದೀಗ ಪ್ಯಾಟ್ ಕಮ್ಮಿನ್ಸ್ ಕೂಡ ಸೇರಿದ್ದಾರೆ. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ಗುಜರಾತ್ ಟೈಟನ್ಸ್ ನಾಯಕ ಶುಬ್ ಮನ್ ಗಿಲ್ , ಚೆನ್ನೈ ಸೂಪರ್ ಕಿಂಗ್ಸ್ ನ ಅಜಿಂಕ್ಯ ರಹನೆ ಮತ್ತು ರುತುರಾಜ್ ಗಾಯಕ್ವಾಡ್, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಡೆಲ್ಲಿ ಕ್ಯಾಪಿಟಲ್ ನಾಯಕ ಅಕ್ಷರ್ ಪಟೇಲ್ ಕೂಡ ಇದೆ ಕಾರಣಕ್ಕೆ ದಂಡ ಕಟ್ಟಿದ್ದಾರೆ.

ಸತತವಾಗಿ ನಾಯಕರು ವಿಧಾನ ಗತಿಯ ಓವರ್ ದರ ಉಲ್ಲಂಘಿಸುತ್ತಿರುವ ಹಿನ್ನೆಲೆ ಐಪಿಎಲ್ ನಲ್ಲಿ ನಿಯಮ ಜಾರಿಯ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಐಪಿಎಲ್ ೨೦೨೬ರಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಬಾರಿ ಹೀನಾಯ ಸೋಲು ಅನುಭವಿಸಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ 82 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

Sponsored

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಲ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿದೆ. ತಂಡದ ಪರ ತಾಯಿ ಸುದರ್ಶನ್ ಅದ್ಭುತ 61 ಸಿಡಿಸಿದರೆ, ವಾಷಿಂಗ್ಟನ್ ಸುಂದರ್ ಐವತ್ತೆರಡು ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇಬ್ಬರ ಜವಾಬ್ದಾರಿಯುತ್ತ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.

169 ರನ್ನುಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ ಆರಂಭದಿಂದಲೇ ಕುಸಿತ ಅನುಭವಿಸಿತು. ಗುಜರಾತ್ ಟೈಟಲ್ ಬೌಲರ್ ಗಳ ದಾಳಿಗೆ ತತ್ತರಿಸಿದ ಎಸ್ ಆರ್ ಎಚ್ ಕೇವಲ 86 ರನ್ಗಳಿಗೆ ಆಲ್ ಔಟ್ ಆಯ್ತು. ತಂಡವು 20 ಓವರ್ ಗಳನ್ನು ಪೂರ್ಣಗೊಳಿಸುವುದಕ್ಕೂ ವಿಫಲವಾಗಿ ಕೇವಲ 14.5 ಓವರ್ ಗಳಲ್ಲಿ ತನ್ನ ಇನ್ನಿಂಗ್ಸ್ ಮುಗಿಸಿತು.

ಗುಜರಾತ್ ಪರ ಕಗಿಸೋ ರಬಾಡ ಮತ್ತು ಜೇಸನ್ ಫೋಲ್ಡರ್ ತಲಾ ಮೂರು ವಿಕೆಟ್ ಪಡೆದು ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಸೋಲಿನಿಂದ ಸನ್ ರೈಸರ್ ತಂಡದ ಪ್ಲೇ ಆಫ್ ಕನಸಿಗೂ ಭಾರಿ ಹೊಡೆತ ಬಿದ್ದಿದೆ.

ಇದೆ ವೇಳೆ ನಿಧಾನಗತಿಯ ಓವರ್ ಇದರ ಉಲ್ಲಂಘನೆ ಹಿನ್ನೆಲೆಯಲ್ಲಿ ಎಸ್ ಆರ್ ಹೆಚ್ ನಾಯಕ ಪ್ಯಾಟ್ ಕಮ್ಮಿನ್ಸ್ ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿರುವುದು ತಂಡಕ್ಕೆ ಮತ್ತೊಂದು ಆಘಾತವಾಗಿದೆ.

Sponsored

Also Read:

West Bengal Politics: ನಂದಿಗ್ರಾಮ MLA ಸ್ಥಾನಕ್ಕೆ ಸುವೇಂದು ಅಧಿಕಾರಿ ರಾಜೀನಾಮೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online