<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಫಿಫಾ ವಿಶ್ವಕಪ್ ನಲ್ಲಿ ಮಹಾ ಅಚ್ಚರಿ: ಜರ್ಮನಿಗೆ ಶಾಪ್ ಕೊಟ್ಟು ಹೊರಹಾಕಿದ ಪರಾಗ್ವೆ

ಫಿಫಾ ವಿಶ್ವಕಪ್ ನಲ್ಲಿ ಮಹಾ ಅಚ್ಚರಿ: ಜರ್ಮನಿಗೆ ಶಾಪ್ ಕೊಟ್ಟು ಹೊರಹಾಕಿದ ಪರಾಗ್ವೆ
Summary: The 2026 FIFA World Cup has been a surprise. Former champions Germany have crashed out of the tournament after losing in the round of 32. Four-time World Cup winners Germany suffered a shock defeat against Paraguay, leaving fans disappointed.

belagavi news :

ಫಿಫಾ ವಿಶ್ವಕಪ್ 2026ರಲ್ಲಿ ಭಾರಿ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ನಾಲ್ಕು ಬಾರಿಯ ಚಾಂಪಿಯನ್, ಜರ್ಮನಿ ತಂಡವು 32 ನೇ ಸುತ್ತಿನ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ ನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿಯ ಈ ಸೋಲು ಅಚ್ಚರಿಯ ಫಲಿತಾಂಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕೊನೆಯ ಶ್ರೇಯಾಂಕಿತ ಪರಾಗ್ವೆ ವಿರುದ್ಧ ನಡೆದ ಪಂದ್ಯದಲ್ಲಿ ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯದ ಅಂತ್ಯಕ್ಕೆ ಎರಡು ತಂಡಗಳು ತಲಾ ಒಂದು ಗೋಲುಗಳಿಸಿದ್ದವು. ಬಳಿಕ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ಶೂಟೌಟ್‌ ನಲ್ಲಿ ಜರ್ಮನಿ ತಂಡವು ಮೂರು ನಿರ್ಣಾಯಕ ಕಿಕ್ ಗಳನ್ನು ತಪ್ಪಿಸಿಕೊಂಡರೆ, ಪರಾಗ್ವೆ 4-3 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾಟರ್ ಹಂತದತ್ತ ಮುನ್ನಡೆಯಿತು.

Sponsored

ಪಂದ್ಯದ ಮೊದಲಾರ್ಧದಲ್ಲಿ ಪರಾಗ್ವೆ ಆಕ್ರಮಣಕಾರಿ ಆಟ ಪ್ರದರ್ಶಿಸಿ 42ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿತು. ಮಟಿಯಾಸ್ ಗಲಾರ್ಜಾ ಅವರ ಅದ್ಭುತ ಕ್ರಾಸ್‌ಗೆ ಜೂಲಿಯೊ ಎನ್ಸಿಸೊ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಆದರೆ ವಿದ್ಯಾರ್ಥಿದಲ್ಲಿ ಜರ್ಮನಿ ತಿರುಗೇಟು ನೀಡಿತು. 54ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದಿತು. ಬಳಿಕ ಎರಡು ತಂಡಗಳು ಹೆಚ್ಚುವರಿ ಸಮಯದಲ್ಲೂ ಸಮಬಲ ಕಾಯ್ದುಕೊಂಡಿದ್ದು, ಅಂತಿಮವಾಗಿ ಶೂಟೌಟ್ ನಲ್ಲಿ ಪರಾಗವೇ ಐತಿಹಾಸಿಕ ಗೆಲುವು ದಾಖಲಿಸಿತು.

ಜರ್ಮನಿ ತಂಡ ದ್ವಿತೀಯಾರ್ಧದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿತು. ಎಡಬಾಗದಿಂದ ಫ್ಲೋರಿಯನ್ ವಿರ್ತ್ ನೀಡಿದ ಅದ್ಭುತ ಕ್ರಾಸ್ ಗೆ ಕೈ ಹ್ಯಾವರ್ಟ್ಜ್ ಹೆಡರ್ ಮೂಲಕ ಚಂದನು ಗೋಲು ಬಳಿಗೆ ಸೇರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಬಳಿಕ ಎರಡು ತಂಡಗಳು ಗೆಲುವಿನ ಗೋಲುಗಳಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಫಲಿತಾಂಶ ಬದಲಾಗಲಿಲ್ಲ.

ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಾಣದ ಜರ್ಮನಿ ತಂಡಕ್ಕೆ ಈ ಬಾರಿ ಭಾರೀ ಹಿನ್ನಡೆ ಎದುರಾಯಿತು. ಶೂಟೌಟ್‌ನಲ್ಲಿ ಜರ್ಮನಿಯ ಕೈ ಹ್ಯಾವರ್ಟ್ಜ್ ಹಾಗೂ ನಿಕ್ ವೋಲ್ಟ್‌ಮೀಡ್ ಅವರ ಕಿಕ್‌ಗಳನ್ನು ಪರಾಗ್ವೆ ಗೋಲ್‌ಕೀಪರ್ ಒರ್ಲ್ಯಾಂಡೊ ಅದ್ಭುತವಾಗಿ ತಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು.

Sponsored

ಆದರೆ ಪರಾಗ್ವೆ ಕೂಡ ಮುಂದಿನ ಕಿಕ್ ಗಳನ್ನು ಒತ್ತಡಕ್ಕೆ ಸಿಲುಕಿತು .ಕೊನೆಯ ಎರಡು ಪಂದ್ಯಗಳಲ್ಲಿ ಅವಕಾಶ ಕಳೆದುಕೊಂಡ ಪರಿಣಾಮ ಪಂದ್ಯವು ಸಡನ್ ಡೆತ್ ಹಂತಕ್ಕೆ ತಲುಪಿತು.

ಸಡನ್ ಡೆತ್ ನಲ್ಲಿ ಮೊದಲ ಕಿಕ್ ತೆಗೆದುಕೊಂಡ ಜರ್ಮನಿಯ ಜೊನಾಥನ್ ತಾಹ್ ಅವರ ಶಾಟ್ ಕ್ರಾಸ್‌ಬಾರ್‌ಗೆ ತಾಗಿ ಹೊರಹೋಯಿತು. ಬಳಿಕ ಜೋಸ್ ಕೆನಾಲೆ ನಿರ್ಣಾಯಕ ಗೋಲು ದಾಖಲಿಸಿ ಪರಾಗ್ವೆಗೆ ಇತಿಹಾಸ ಗೆಲುವು ತಂದು ಕೊಟ್ಟರು. ಈ ಮೂಲಕ ಅವರು ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯ ವಿಶ್ವಕಪ್ ಪಯಣ ಅಂತ್ಯಗೊಂಡಿತು.

ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿಗೆ ಮೊದಲ ಶೂಟೌಟ್ ಸೋಲು

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ತಂಡವು ಇದೇ ಮೊದಲ ಬಾರಿಗೆ ಪೆನಾಲ್ಟಿ ಶೂಟೌಟ್ ನಲ್ಲಿ ಸೋಲು ಅನುಭವಿಸಿದೆ. ಇದಕ್ಕೂ ಮುನ್ನ ಜರ್ಮನಿ ಆಡಿದ ನಾಲ್ಕು ಶೂಟೌಟ್ ಗಳಲ್ಲಿಯೂ ಗೆಲುವು ಸಾಧಿಸಿತ್ತು.

Sponsored

ಪ್ರಮುಖ ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಜರ್ಮನಿ ಶೂಟೌಟ್ ನಲ್ಲಿ ಸೋತಿರುವುದು ಇದು ಎರಡನೇ ಬಾರಿ, ಇದಕ್ಕೂ ಮೊದಲು 1976 ರ ಯುರೋಪ್ನ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಜೆಕೊ ಸ್ಲಾವಾಕಿಯಾ ವಿರುದ್ಧ ಜರ್ಮನಿ ಸೋಲು ಕಂಡಿತು. ಆ ಪಂದ್ಯದಲ್ಲಿ ಜರ್ಮನಿ 5-3 ಅಂತರದಲ್ಲಿ ಸೋಲು ಅನುಭವಿಸಿತ

ನಾಲ್ಕು ಬಾರಿ ವಿಶ್ವ ಚಾಂಪಿಯನ್ ಜರ್ಮನಿಯನ್ನು ಟೂರ್ನಿಯಿಂದ ಹೊರ ದಬ್ಬುವ ಮೂಲಕ ಪರಾಗ್ವೆ ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಪರಾಗ್ವೆ 2026 ರ ವಿಶ್ವಕಪ್ ನ ಪ್ರಿ-ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ .

.

32ನೇ ಸುತ್ತಿನ ಉಳಿದ ಪಂದ್ಯಗಳ ಫಲಿತಾಂಶದ ಬಳಿಕ ಪರಾಗ್ವೆ ಮುಂದಿನ ನಾಕ್ಔಟ್ ಪಂದ್ಯದಲ್ಲಿ ಎದುರಿಸಲಿರುವ ತಂಡ ಸ್ಪಷ್ಟವಾಗಲಿದೆ. ವಿಶ್ವ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಜರ್ಮನಿಯನ್ ಅನಿರೀಕ್ಷಿತ ನಿರ್ಗಮನ ಫುಟ್ಬಾಲ್ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online