<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ

ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ
Summary: ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ನೀವು, ನಿಮ್ಮ ಸರಕಾರದ ವಿರುದ್ಧ 80% ಆರೋಪಗಳಿವೆ. ಕಾಂಟ್ರಾಕ್ಟ್ ಗಳೇ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
belagavi news :
ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ವಾಗ್ದಾಳಿ : ವಿಧಾನಸಭೆಯಲ್ಲಿ ಇಂದು ನಡೆದ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧತೀವ್ರ ವಾಗ್ದಾಳಿ ನಡೆಸಿದರು. ಸಿಎಂ ಅವರ ಆಡಳಿತ ಶೈಲಿ ಹಾಗೂ ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದ ಅವರು, ವ್ಯಂಗ್ಯವಾಡುವ ಮೂಲಕ ಟೀಕೆ ಮಾಡಿದರು. ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್. "ಸಿಎಂ ಸಿದ್ದರಾಮಯ್ಯ ಈಗ ಮೊದಲಿನಂತೆ ಕಾಣುತ್ತಿಲ್ಲ, ಅವರು ಡಲ್ ಆಗಿದ್ದಾರೆ. ಒಮ್ಮೆ' ಹೌದ ಹುಲಿಯ' ಎಂದಿದ್ದವರು ಈಗ 'ಹೌದು ಇಲಿಯಾ; ಆಗಿದ್ದಾರೆ ಎಂದು ಲೇವಡಿ ಮಾಡಿದರು. ಇನ್ನು ಸರ್ಕಾರದ ಆಡಳಿತದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ಲೂಟಿಕೋರ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಇಲಾಖೆಗಳಲ್ಲಿ ಲೂಟಿ ನಿಲ್ಲುತ್ತಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವವಾಡುತ್ತಿದೆ.ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಆರೋಪಿಸಿದರು. ವಿಪಕ್ಷ ನಾಯಕನ ಈ ಹೇಳಿಕೆಗಳು ವಿಧಾನಸಭೆಯಲ್ಲಿ ಗದಲಕ್ಕೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ಧದ ರಾಜಕೀಯ ಹೋರಾಟ ಇನ್ನಷ್ಟು ತೀವ್ರ ವಾಗುವ ಸೂಚನೆ ನೀಡಿವೆ.

‘ಡಿಕೆಶಿ ಬ್ರ್ಯಾಂಡ್ ಬೆಂಗಳೂರು ಬೇಡ’: ಬೆಂಗಳೂರಿನ ಇಂದಿನ ಸ್ಥಿತಿಗತಿಗಳ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜಧಾನಿಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, "ಸದ್ಯ ಬೆಂಗಳೂರು ಉಳಿದರೆ ಸಾಕೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಅವರು, "ನಮಗೆ ಡಿಕೆಶಿ ಬ್ರ್ಯಾಂಡ್ ಬೆಂಗಳೂರು ಬೇಡ. ಗುಂಡಿ ತುಂಬಿದ ಬೆಂಗಳೂರು ಬೇಡ. ಎಂಬಿ ಪಾಟೀಲ್ ಬಿ ಬಿಯಾಂಡ್ ಬೆಂಗಳೂರು ಕೂಡ ಬೇಡ, ನಮಗೆ ಕೆಂಪೇಗೌಡರ ಬೆಂಗಳೂರು ಸಾಕು, ಕೆಂಗಲ್ ಹನುಮಂತಯ್ಯ ಅವರ ಬೆಂಗಳೂರು ಸಾಕು, ಕೊನೆಗೆ ಎಸ್ಎಂ ಕೃಷ್ಣ ಅವರ ಬೆಂಗಳೂರು ಆದರೂ ಸಾಕು " ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಹಾಗು ಭ್ರಷ್ಟಾಚಾರದ ವಿಚಾರವನ್ನು ಎತ್ತಿ ಹಿಡಿದ ಅವರು.

"ಪೊಲೀಸರು ನ್ಯಾಯ ವ್ಯವಸ್ಥೆಯಲ್ಲಿ ಕರ್ನಾಟಕ ದೇಶದಲ್ಲೇ ಮಾದರಿ ಎಂದು ಪೋಸ್ಟ್ ಹಾಕುತ್ತಾರೆ. ಆದರೆ ಕಾನೂನು ವ್ಯವಸ್ಥೆ ವಿಚಾರದಲ್ಲಿ ದೇವರಿಗೆ ಪ್ರೀತಿ. ಅಧಿಕಾರಿಗಳು ಲಂಚ ಪಡೆದು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಲುಕುವ ವಿಡಿಯೋಗಳು ವೈರಲ್ ಆಗಿವೆ" ಎಂದು ಟೀಕಿಸಿದರು. ಮುಂದುವರೆದು, "ಹಿಂದೆ ಡಬಲ್ ಅಡಿಯಲ್ಲಿ ಲಂಚ ಪಡೆಯುತ್ತಿದ್ದರು. ಆದರೆ ಈಗಸಿಎಆರ್ ಗ್ರೌಂಡ್ಗೆ ಕರೆಯಿಸಿಕೊಂಡು ಲಂಚ ಪಡೆಯುತ್ತಿದ್ದಾರೆ.

ಇದು ಅತ್ಯಂತ ಮುಜುಗರದ ಸಂಗತಿ" ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿಕೆಶಿ ಕುರಿತು ವ್ಯಂಗ್ಯವಾಡಿದ ಅವರು," ಒಂದಿನ 2.5 ಲಕ್ಷ ಹಾಕಿಕೊಂಡು ತಿರುಗುತ್ತಿದ್ದ ಡಿಕೆಶಿ ಈಗ ಕಾಣೆಯಾಗಿದ್ದಾರೆ, ಅವರನ್ನು ನೋಡಿದರೆ ಪುನೀತ್ ರಾಜಕುಮಾರ್ ಅವರಂತೆ ಮಾಯವಾದರು, ನಮ್ಮ ಡಿಕೆ ಶಿವಕುಮಾರ್ ಕಾಣದಂತೆ ಮಾಯವಾದರು ಅನಿಸುವಂಥಾಗಿದೆ ಎಂದು ಲೇವಾಡಿ ಮಾಡಿದರು. ವಿಪಕ್ಷದ ಈ ಹೇಳಿಕೆಗಳು ಬೆಂಗಳೂರು ಅಭಿವೃದ್ಧಿ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ವಿಚಾರದಲ್ಲಿ ಮತ್ತಷ್ಟು ಕಾವೇರಿಸುವ ಸೂಚನೆ ನೀಡಿವೆ.

ಆರ್. ಅಶೋಕ್ ತೀವ್ರ ಅಸಮಾಧಾನ ಹೊರಹಾಕಿದರು : ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದ ಅಧಿಕಾರಿಗಳ ಮೇಲೆ ದೌರ್ಜನ್ಯ ಹಾಗೂ ಅಸಮರ್ಪಕ ಆಡಳಿತ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಉದಾಹರಣೆಯಾಗಿ ಹಲವು ಅಧಿಕಾರಿಗಳ ಸಹಜ ಸಾವಿನ ಪ್ರಕರಣಗಳನ್ನು ಸ್ಮರಿಸಿದರು. ಅಶೋಕ್ ಹೇಳಿಕೆ ಪ್ರಕಾರ,


"ಅಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ 9 ಅಧಿಕಾರಿಗಳು ಲೆಟರ್ ಬರೆದು ಆತ್ಮಹತ್ಯೆ ಮಾಡಿದ್ದಾರೆ. 15ಕ್ಕೂ ಹೆಚ್ಚು ಅಧಿಕಾರಿಗಳ ಸಾವಾಗಿದೆ. ವಾಲ್ಮೀಕಿ ಹಗರಣದಲ್ಲಿ ಅಧಿಕಾರಿ ಚಂದ್ರಶೇಖರ್ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಾಗಡಿ ಶಾಸಕ ಬಾಲಕೃಷ್ಣ ತಹಸಿಲ್ದಾರ್ ಗೆ ಚಪ್ಪಲಿ ಹೊಡೆಸುತ್ತೇನೆ ಎಂದಿದ್ದಾರೆ.

ರಾಜೀವ್ ಗೌಡ ಹೇಳಬಾರದ ಪದಗಳೆಲ್ಲ ಹೇಳಿದ್ದಾರೆ". ಇನ್ನು "ಅಕ್ರಮ ವಲಸಿಗರ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಅಶೋಕ್, ಅಕ್ರಮ ಬಾಂಗ್ಲಾದೇಶ ವಲಸಿಗರ ಬಗ್ಗೆ ಪ್ರಶ್ನೆ ಮಾಡಿದ ಪುನೀತ್ ಕೆರೆಹಳ್ಳಿ ಅವರನ್ನು ಜೈಲಿಗೆ ಹಾಕುತ್ತಾರೆ. ರಾಜ್ಯದ ಹಲವೆಡೆ ಬಾಂಗ್ಲಾದೇಶಗರು ವಾಸಿಸುತ್ತಿದ್ದಾರೆ. ಕಡಿಮೆ ಕೂಲಿಗೆ ಕೆಲಸ ಕೊಡಲಾಗುತ್ತಿದೆ, ಆದರೆ ಕೆಲವು ಪ್ರದೇಶಗಳಲ್ಲಿ ಇದರಿಂದ ಕ್ರೈಮ್ ರೇಟ್ ಹೆಚ್ಚಾಗಿದೆ" ಎಂದು ದೂರಿದರು. ಆಡಳಿತ ವೈಫಲ್ಯ ಅಧಿಕಾರಿಗಳ ಸುರಕ್ಷತೆ ಮತ್ತು ವಲಸಿಗರ ನಿಯಂತ್ರಣ ಸಂಬಂಧಿತ ಸಮಸ್ಯೆಗಳನ್ನು ಸಾರ್ವಜನಿಕ ಗಮನಕ್ಕೆ ತಂದಿವೆ.

‘ಇದು 80 ಪರ್ಸೆಂಟ್ ಸರ್ಕಾರ : ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮುಂದಿಟ್ಟುಕೊಂಡು, ವಿಪಕ್ಷ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿ,ಕಾಂಟ್ರಾಕ್ಟರ್ ಅಸಮಾಧಾನ ಹಾಗೂ ಇಲಾಖೆಗಳ ಸ್ಥಿತಿಗತಿಗಳ ಕುರಿತು ಅವರು ಕಟುವಾಗಿ ಟೀಕಿಸಿದರು. ಸಭೆಯಲ್ಲಿ ಮಾತನಾಡಿದ ಅಶೋಕ್ :"ನಮ್ಮ ಸರ್ಕಾರದ ವಿರುದ್ಧ ಕೆಂಪಣ್ಣ ಆರೋಪ ಮಾಡಿದಾಗ, ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅವರನ್ನು ಪ್ರತಿದಿನ ಕರೆಸಿಕೊಳ್ಳುತ್ತಿದ್ದರು.

ಆದರೆ ಕೆಂಪಣ್ಣ ಸತ್ತಾಗ ಅವರ ಮುಖ ನೋಡಲು ಸಿದ್ಧರಾಮಯ್ಯರಾಗಲಿ ,ಕಾಂಗ್ರೆಸ್ ನಾಯಕರಾಗಲಿ ಹೋಗಲಿಲ್ಲ" ಎಂದು ಆರೋಪಿಸಿದರು.ಇನ್ನೂ ಬ್ರಷ್ಟಾಚಾರದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಗುರುತಿಸಿಕೊಂಡ ಅವರು ನಮ್ಮ ಸರಕಾರದ ಮೇಲೆ ನೀವು 40% ಆರೋಪ ಮಾಡಿದ್ದೀರಿ, ಆದರೆ ನಿಮ್ಮ ಸರ್ಕಾರದಲ್ಲಿ 80% ಆರೋಪವಿದೆ. ಕಾಂಟ್ರಾಕ್ಟರ್ ಗಳು ನಿಮ್ಮ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನಗರಾಭಿವೃದ್ಧಿ ಸಚಿವ ಇಲಾಖೆಯಲ್ಲಿ ಮಧ್ಯವರ್ತಿಗಳೇ ತುಂಬಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಆರೋಪಗಳು ಕೇವಲ ರಾಜ್ಯ ಮಟ್ಟಕ್ಕೆ ಸೀಮಿತವಲ್ಲ ಎಂದು ಹೇಳಿದವರು."ಈ ಭ್ರಷ್ಟಾಚಾರದ ಆರೋಪ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೂ ಹೋಗಿದೆ "ಎಂದು ಹೇಳಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಶ್ರಿ ಅವರನ್ನು ಸರ್ವೇ ಅಧಿಕಾರಿಗಳು ಅಲೆದಾಡಿಸಿರುವ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್, “ಕಲಾವಿದರು ಮತ್ತು ಮಾಜಿ ಸಂಸದರಿಗೇ ಈ ರೀತಿಯಾದರೆ, ಜನಸಾಮಾನ್ಯರ ಪಾಡೇನು?” ಎಂದು ಪ್ರಶ್ನಿಸಿದರು. ಮುಂದುವರೆದು,

“ಆ ಎಡಿಎಲ್ಆರ್ ಕೂಡಲೇ ಸಸ್ಪೆಂಡ್ ಮಾಡಬೇಕು, ಈ ಮೂಲಕ ಸಾಧನದಲ್ಲಿ ರಾಜ್ಯದ ಜನತೆಗೆ ಸ್ಪಷ್ಟ ಸಂದೇಶ ರವಾನೆ ಆಗಬೇಕು "ಎಂದು ಸರ್ಕಾರವನ್ನು ಒತ್ತಾಯಿಸಿದರು. ವಿಪಕ್ಷ ನಾಯಕನ ಈ ಹೇಳಿಕೆಗಳು ಬ್ರಷ್ಟಾಚಾರ ಆಡಳಿತ ವೈಫಲ್ಯ ಮತ್ತು ಜನಸಾಮಾನ್ಯರ ಹಕ್ಕುಗಳ ವಿಚಾರದಲ್ಲಿ ರಾಜ್ಯ ರಾಜಕಾರಣ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿವೆ.

ಸದನದಲ್ಲಿ ನೆಹರು-ಗಾಂಧಿ ಯೋಜನೆಗಳ ವಾದ: ವಿಧಾನಸಭೆಯಲ್ಲಿ ನೆಹರು ಕುಟುಂಬದ ಯೋಜನೆಗಳು ಮತ್ತು ಮಹಾತ್ಮ ಗಾಂಧಿ ಹೆಸರು ಬಳಕೆಯನ್ನು ಚರ್ಚೆ ತೀವ್ರ ಗಂಭೀರವಾಗಿ ನಡೆಯಿತು. ಸದಸ್ಯರು 3 ಮೀಟರ್ ಉದ್ದದ ದೊಡ್ಡಪಟ್ಟಿ ಪ್ರದರ್ಶನ ಮಾಡಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಓದಿ ತಿಳಿಯಿರಿ.

ಸದಸ್ಯ ಪ್ರದೀಪ್ ಈಶ್ವರ್ ಟಾಂಗ್ ಮಾತನಾಡಿ, "ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಸದನದಲ್ಲಿ ಓದಿ ಹೇಳಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಾದ ನಂತರ ಸಚಿವ ಭೈರತಿ ಸುರೇಶ್ ಮೊಬೈಲ್ ಮೂಲಕ ಮಹಾತ್ಮ ಗಾಂಧಿ ಹೆಸರಿನ ಯೋಜನೆಯನ್ನು ಓದಿದರು.

ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ಮಧ್ಯಪ್ರವೇಶಿಸಿ ತೀವ್ರ ಟೀಕೆ ಯೊಂದಿಗೆ ಹೇಳಿದರು. ಗಾಂಧಿನಗರದ ವಾರ್ಡ್ ಗೆ ಗಾಂಧಿ ಹೆಸರು ಬದಲಿಸಿ ನೆಹರು ಹೆಸರಿಟ್ಟಿದ್ದಾರೆ. ಇದು ಎಂತಹ ಗಾಂಧಿ ಪ್ರೀತಿ 454 ಯೋಜನೆಗಳಲ್ಲಿ ನೆಹರು ಕುಟುಂಬದ ಹೆಸರು ಬಳಸಲಾಗಿದೆ. ಇದರಿಂದ ಗಾಂಧೀಜಿ ಪ್ರೇಮ ಎಷ್ಟು ಅಂತ ಗೊತ್ತಾಗುತ್ತದೆ. ಇದನ್ನು ಇಲ್ಲಿಗೆ ಬಿಡ್ತೀನಿ. ಸಿಎಂ ಅವರೇ ಉತ್ತರ ಕೊಡಲಿ. ಈ ವಿವಾದವು ವಿಧಾನಸಭೆಯಲ್ಲಿ ಗಾಂಧಿ ಮತ್ತು ನೆಹರು ಕುಟುಂಬದ ಹೆಸರು ಬಳಕೆಯ ಕುರಿತಂತೆ ರಾಜಕೀಯ ತೀವ್ರತೆಯನ್ನು ಉಂಟು ಮಾಡಿದೆ.

ಇನ್ನಷ್ಟು ಓದಿರಿ:
ಚೀನಾಗೆ ಶಾಕ್ ಕೊಟ್ಟ ಭಾರತ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online