<?= $pageTitle ?>
Logo
ಮುಖಪುಟ ಓದುವುದು ಕೇಳು
Technology

ಚೀನಾಗೆ ಶಾಕ್ ಕೊಟ್ಟ ಭಾರತ

ಚೀನಾಗೆ ಶಾಕ್ ಕೊಟ್ಟ ಭಾರತ
Summary: ಭಾರತ ಎಲೆಕ್ಟ್ರಿಕ್ ವಾಹನ ಭಾಗ ತಯಾರಿಕೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಚೀನಾಗೆ ಶಾಕ್ ಕೊಟ್ಟಿದ್ದು, ದೇಶಿಯ ಉತ್ಪಾದನೆಯಿಂದ ಆಮದಿಗೆ Goodbye ಹೇಳುವ ಪರಿಸ್ಥಿತಿ ಸೃಷ್ಟ ವಾಗಿದೆ.
belagavi news:
ಭಾರತ EV ಉದ್ಯಮದಲ್ಲಿ ಮುನ್ನಡೆ ಹಿಡಿಯುತ್ತಿದ್ದು, ಹೊಸ ತಂತ್ರಜ್ಞಾನ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಯ ದಿಕ್ಕಿನಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯಿಂದ ಭಾರತ EV Manufacturing ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದೆ.

Electric Vehicle Components: ಬಜೆಟ್ 2026 ರಿಂದ ದಕ್ಷಿಣ ಭಾರತದ ಕೈಗಾರಿಕಾ ವಲಯದಲ್ಲಿ ದೊಡ್ಡ ಬದಲಾವಣೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಇದರ ಪರಿಣಾಮವಾಗಿ ದಕ್ಷಿಣ ಭಾರತದ ಕೈಗಾರಿಕಾ ವಲಯದಲ್ಲಿ, ವಿಶೇಷವಾಗಿ ತೆಲುಗು ರಾಜ್ಯಗಳು, ತಮಿಳುನಾಡು ಮತ್ತು ಕೇರಳದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುವುದು ಸ್ಪಷ್ಟವಾಗಿದೆ.

ಈ ಬಜೆಟ್ ನಲ್ಲಿ "ಚೀನಾ ಮಾದರಿಯಲ್ಲಿ ಭಾರತವನ್ನು ಉತ್ಪಾದನೆಯಲ್ಲಿ ಮುಂಚೂಣಿಗೆ ತರುವ" ಗುರಿಯನ್ನು ಸರ್ಕಾರದಿಂದ ದಿಟ್ಟವಾಗಿ ಮುಂದಿಟ್ಟಿದ್ದು, ವಿದೇಶಿ ಆಮದಿಗಳ ಮೇಲೆ ಅವಲಂಬನೆ ಕಡಿಮೆ ಮಾಡಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ ಆಟೋಮೊಬೈಲ್, ಎಲೆಕ್ಟ್ರಿಕ್ ವಾಹನ EV ಭಾಗಗಳು ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆ ವಲಯಗಳಿಗೆ ಬೃಹತ ಹಣ ಹಂಚಿಕೆ ಮಾಡಲಾಗಿದೆ.
ಈ ನಿರ್ಧಾರಗಳಿಂದಾಗಿ EV Components Manufacturing, ಉದ್ಯೋಗ ಸೃಷ್ಟಿ ಸ್ಥಳೀಯ ಕೈಗಾರಿಕೆಗಳ ವಿಸ್ತರಣೆ ಮತ್ತು ರಫ್ತು ಸಾಮರ್ಥ್ಯದಲ್ಲಿ ಮಹತ್ವದ ಏರಿಕೆ ನಿರೀಕ್ಷಿಸಲಾಗುತ್ತಿದೆ. ದಕ್ಷಿಣ ಭಾರತದ ಕೈಗಾರಿಕಾ ಹಬ್ ಗಳು ಹೇಗೆ ರೂಪಾಂತರಗೊಳ್ಳಲಿದೆ. ಯಾವ ವಲಯಗಳಿಗೆ ಹೆಚ್ಚು ಲಾಭ ಸಿಗಲಿದೆ ಎಂಬ ಸಂಪೂರ್ಣ ವಿವರಗಳು ಇಲ್ಲಿ.

ಸೆಮಿಕಂಡಕ್ಟರ್ ಕಾಂತ್ರಿ: ನಿರ್ಮಲಾ ಸೀತಾರಾಮನ್ ಬಜೆಟ್ ಮಾಸ್ಟರ್ ಪ್ಲಾನ್

ಕಳೆದ ಕೆಲವು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಕಾರ್ತಿನಿಂದ ಹಿಡಿದು ಸ್ಮಾರ್ಟ್ ಫೋನ್ ಗಳವರೆಗೆ ಎಲ್ಲ ವಲಯಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಸೆಮಿಕಂಡಕ್ಟರ್ ಚೀಪ್ ಗಳ ಕೊರತೆ. ಇದುವರೆಗೆ ಭಾರತ ಈ ಅಗತ್ಯಕ್ಕಾಗಿ ಜಪಾನ್, ತೈವಾನ್ ಮತ್ತು ಚೀನಾ ದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿತ್ತು .

ಈ ಜಾಗತಿಕ ಪ್ರಾವಬ್ಯವನ್ನು ಮುರಿಯುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟಿನಲ್ಲಿ ದಿಟ್ಟ 'ಸೆಮಿಕಂಡಕ್ಟರ್ ಮಾಸ್ಟರ್ ಪ್ಲಾನ್' ಅನ್ನು ಘೋಷಿಸಿದ್ದಾರೆ. ಈ ವಲಯಕ್ಕೆ ಹಿಂದೆ ರೂ.22,000 ಕೋಟಿ ಹಂಚಿಕೆ ಮಾಡಲಾಗಿದ್ದಾರೆ ಈ ಬಾರಿ ಅದನ್ನು ರೂ. 40,000 ಕೋಟಿಗೆ ದ್ವಿಗುಣಗೊಳಿಸಲಾಗಿದೆ.

ಈ ಮಹತ್ವದ ನಿರ್ಧಾರದಿಂದಾಗಿ ದೇಶಿಯವಾಗಿ ಸಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿದ್ದು ವಾಹನ ತಯಾರಿಕೆ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಅಗತ್ಯವಿರುವ ಚೀಪುಗಳನ್ನು ಭಾರತದಲ್ಲಿ ತಯಾರಿಸುವ ಸಾಧ್ಯತೆ. ನಿರ್ಮಾಣವಾಗಿದೆ ಇದರಿಂದ ಭವಿಷ್ಯದಲ್ಲಿ ವಾಹನಗಳ ಬೆಲೆ ಕಡಿಮೆಯಾಗುವಿಕೆ ಡೆಲಿವರಿ ಕಾಯುವ ಅವಧಿ ಇಳಿಕೆ ಮತ್ತು ಉದ್ಯೋಗವಕಾಶಗಳು ಹೆಚ್ಚಳ ನಿರೀಕ್ಷಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ರೇರ್ ಅರ್ಥ ಮ್ಯಾಗ್ನೆಟ್ ಕಾರಿಡಾರ್: EV ಉದ್ಯಮದಲ್ಲಿ ಮಹತ್ವದ ತಿರುವು

ಪ್ರಸ್ತುತ ಇಡೀ ಜಗತ್ತು ಎಲೆಕ್ಟ್ರಿಕ್ ವಾಹನಗಳ EV ಬಳಕೆಯತ್ತ ವೇಗವಾಗಿ ಮುನ್ನುಗ್ಗುತಿದೆ. EV ಮೋಟಾರ್ ಗಳ ತಯಾರಿಕೆಯಲ್ಲಿ ಬಳಸುವ ಶಾಶ್ವತ ಮ್ಯಾಗ್ನೆಟ್ ಗಳು (Permanent Magnets) ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಇವುಗಳನ್ನು ತಯಾರಿಸಲು ಅಗತ್ಯವಿರುವ ರೇರ್ ಅರ್ಥ ಮ್ಯಾಗ್ನೆಟ್ ಗಳಿಗಾಗಿ ಭಾರತ ಇದುವರೆಗೆ ಚುನಾವಣೆ ಹೆಚ್ಚಾಗಿ ಅವಲಂಬಿಸಿತ್ತು.

ಈ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಬಜೆಟ್ ನಲ್ಲಿ ತಮಿಳುನಾಡು ಕೇರಳ ಮತ್ತು ಒಡಿಶಾ ರಾಜ್ಯಗಳನ್ನು 'ರೇರ್ ಅರ್ಥ್ ಮ್ಯಾಗ್ನೆಟ್ ಕಾರಿಡಾರ್' ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಲಭ್ಯವಿರುವ ಖನಿಜ ಸಂಪತ್ತನ್ನು ಬಳಸಿಕೊಂಡು EV ಮೋಟಾರ್ಗಳನ್ನು ದೇಶಿಯವಾಗಿ ತಯಾರಿಸುವ ಯೋಜನೆ ರೂಪಿಸಲಾಗಿದೆ.
ಈ ಮಹತ್ವದ ನಿರ್ಧಾರದಿಂದ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ದೊಡ್ಡ ಬದಲಾವಣೆ ಆಮದಿಗಳ ಮೇಲಿನ ಅವಲಂಬನೆ ಕಡಿತ ಉತ್ಪಾದನಾ ವೆಚ್ಚ. ಇದಕ್ಕೆ ಹಾಗೂ ಲಕ್ಷಾಂತರ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ. ತಮಿಳನಾಡು ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ EV ಕೈಗಾರಿಕೆ ಹೊಸ ಹಬ್ ಗಳಾಗಿ ರೂಪುಗೊಳ್ಳುವ ಸಾಧ್ಯತೆ ಇದೆ.

ಆಟೋಮೊಬೈಲ್ ಕ್ಷೇತ್ರದಲ್ಲಿ ದಕ್ಷಿಣ ಭಾರತದ ತಮಿಳುನಾಡು ಈಗಾಗಲೇ 'ಏಷ್ಯಾದ ಡೆಟ್ರಾಯಿಟ್' ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಇತ್ತೀಚಿನ ಕೇಂದ್ರ ಬಜೆಟ್ ಹಂಚಿಕೆಗಳ ಪರಿಣಾಮವಾಗಿ ಈ ಪ್ರದೇಶದಲ್ಲಿ ಎಲೆಕ್ಟ್ರಿಕ್ ಅನ್ನು ಬಿಡಿಭಾಗಗಳ ಉತ್ಪಾದನಾ ಘಟಕಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಸಕಾರಾತ್ಮಕ ಪರಿಣಾಮ ಕೇರಳ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೇಲು ಬೀಳಲಿದೆ.

ಈ ರಾಜ್ಯಗಳಲ್ಲಿ 'ಸೆಮಿಕಂಡಕ್ಟರ್ ಗಳು ಮತ್ತು ಮ್ಯಾಗ್ನೆಟ್ ಗಳ ಉತ್ಪಾದನೆ ಪ್ರಾರಂಭವಾದರೆ, EV ಮತ್ತು ವಾಹನ ತಯಾರಿಕೆಯ ಒಟ್ಟಾರೆ ಉತ್ಪಾದನಾ ವೆಚ್ಚದಲ್ಲಿ ಮಹತ್ವದ ಇಳಿಕೆ ಕಂಡು ಬರಲಿದೆ. ಇದರ ಪರಿಣಾಮವಾಗಿ ಕಾರುಗಳು ಮತ್ತು ಬೈಕುಗಳು ಸಾಮಾನ್ಯ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

ಚೀನಾ ತನ್ನ ಬೃಹತ್ ಉತ್ಪಾದನಾ ವಲಯದ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಆಳುತ್ತಿರುವಂತೆ ಭಾರತ ದಕ್ಷಿಣ ರಾಜ್ಯಗಳಲ್ಲಿ ಕೇಂದ್ರಬಿಂದು ಮಾಡಿಕೊಂಡು ಜಾಗತಿಕ ಆಟೋಮೊಬೈಲ್ ಮತ್ತು EV ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲು ಮುಂದಾಗಿದೆ. ಈ ಬೆಳವಣಿಗೆಗಳು ದೇಶದ ಕೈಗಾರಿಕ ಭವಿಷ್ಯಕ್ಕೆ ಹೊಸ ದಿಕ್ಕು ನೀಡಲಿದೆ.

ಉತ್ತಮ ಮೂಲ ಸೌಕರ್ಯ ಮತ್ತು ಸರಕು ಸಾಗಣೆ: ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಹೊಸ ಬಲ

ಕೈಗಾರಿಕೆಗಳನ್ನು ಆಕರ್ಷಿಸುವುದರ ಜೊತೆಗೆ ಕೇಂದ್ರ ಬಜೆಟ್ ನಲ್ಲಿ ತಯಾರಿಸಿದ ಸರಕುಗಳನ್ನು ಬಂದರುಗಳಿಗೆ ವೇಗವಾಗಿ ಸಾಗಿಸಲು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಹೈ ಸ್ಪೀಡ್ ರೈಲು ಕಾರಿಡಾರ್ ಗಳು ಎಕ್ ಪ್ರೆಸ್ ವೇ ಸಂಪರ್ಕಗಳು ಮತ್ತು ಲಾಜಿಸ್ಟಿಕ್ಸ್ ಹಬ್ ಗಳು ಸರಕು ಸಾಗಣೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.
ಈ ಕ್ರಮದಿಂದ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾದ ಸರಕುಗಳೊಂದಿಗೆ ಸಮರ್ಥವಾಗಿ ಸ್ಪರ್ಧಿಸಲು ಸಾಧ್ಯವಾಗಲಿದೆ. ಉತ್ಪಾದನಾ ವೆಚ್ಚ ಇಳಿಕೆ, ವೇಗವಾದ ರಫ್ತು ಮತ್ತು ಉತ್ತಮ ಲಾಜಿಸ್ಟಿಕ್ಸ ವ್ಯವಸ್ಥೆ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆಗಳು:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಈ ಬಜೆಟ್ ಕೇವಲ ಅಂಕಿ ಅಂಶಗಳ ಲೆಕ್ಕಚಾರವಲ್ಲ ಬದಲಾಗಿ ದೀರ್ಘಕಾಲೀನ ಕೈಗಾರಿಕಾ ತಂತ್ರ ವಾಗಿದೆ. ಸಮ್ಮಿ ಕಂಡಕ್ಟರ್ ಗಳು ರೇರ್ ಅರ್ಥ್ ಮ್ಯಾಗ್ನೆಟ್ ಗಳು ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಭಾರತವು ಸ್ವಾವಲಂಬನೆ ಸಾಧಿಸುವುದಷ್ಟೇ ಅಲ್ಲದೆ, ಜಗತ್ತಿಗೆ ಸರಬರಾಜು ಮಾಡುವ ಮಟ್ಟವನ್ನು ತಲುಪುವ ಗುರಿ ಹೊಂದಿದೆ.
ಈ ಕೈಗಾರಿಕಾ ಕಾಂತ್ರಿ ಎಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪ್ರಮುಖ ಪಾತ್ರವಹಿಸಲಿದು ದೇಶದ ಉತ್ಪಾದನಾ ಭವಿಷ್ಯಕ್ಕೆ ಹೊಸ ದಿಕ್ಕು ನೀಡಲಿವೆ.

ಇನ್ನಷ್ಟು ಓದಿರಿ:
“ಚಿಕ್ಕಮಗಳೂರಿನ ಬಾಲಕರು ರಾಷ್ಟ್ರ ಮಟ್ಟದ ಲೆಗ್ಬಾಲ್ ಕ್ರಿಕೆಟ್ ಟೂರ್ನಿಗೆ ಆಯ್ಕೆ”
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online