<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Technology

ಪ್ರವಾಸಿಗರ ಅನುಕೂಲಕ್ಕೆ ಡಿಜಿಟಲ್ ಕ್ರಾಂತಿ: ಒಂದೇ ಕ್ಲಿಕ್ ಗೆ ಲಭ್ಯ 'ನಮ್ಮ ಗೈಡ್'

ಪ್ರವಾಸಿಗರ ಅನುಕೂಲಕ್ಕೆ ಡಿಜಿಟಲ್ ಕ್ರಾಂತಿ: ಒಂದೇ ಕ್ಲಿಕ್ ಗೆ ಲಭ್ಯ 'ನಮ್ಮ ಗೈಡ್'
Summary: Karnataka tourism will get a new technology-based touch, and from now on, a high-tech digital service called 'Namma Guide' will be available to tourists with a single click. This system will help in easily getting information, guidance, facilities and necessary details of tourist destinations. Measures are being implemented with the aim of making the tourist experience even more smooth and attractive.

BELAGAVI NEWS :

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಜಾಗತಿಕ ಮಟ್ಟದ ಕೊಂಡೊಯ್ಯುವ ಹಾಗೂ ದೇಶ- ವಿದೇಶಗಳ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.

ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಸಮೃದ್ದ ಇತಿಹಾಸ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳ ಮಾಹಿತಿಯನ್ನು ಪರಿಣಾಮಕಾರಿಯಾಗಿ ಪ್ರವಾಸಿಗರಿಗೆ ತಲುಪಿಸುವ ಸಲುವಾಗಿ 'ನಮ್ಮ ಗೈಡ್' (Namma Guide) ಎಂಬ ಅತ್ಯಾಧುನಿಕ ಡಿಜಿಟಲ್ ವೇದಿಕೆಯನ್ನು ರೂಪಿಸಲು ಮುಂದಾಗಿದೆ.

ಈ ಆನ್ಲೈನ್ ವೇದಿಕೆಯ ಮೂಲಕ ಪ್ರವಾಸಿಗರು ಕರ್ನಾಟಕದ ವಿವಿಧ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ಸಾಂಸ್ಕೃತಿಕ ವೈಶಿಷ್ಟ್ಯಗಳು ಹಾಗೂ ಅಗತ್ಯ ಪ್ರವಾಸ ಮಾಹಿತಿ ಕುರಿತು ಒಂದೇ ಕ್ಲಿಕ್ ನಲ್ಲಿ ವಿವರಗಳನ್ನು ಪಡೆಯಬಹುದಾಗಿದೆ. ಪ್ರವಾಸಿಗರ ಅನುಭವವನ್ನು ಮತ್ತಷ್ಟು ಸುಗಮ, ಮಾಹಿತಿ ಸಮೃದ್ಧ ಹಾಗೂ ತಂತ್ರಜ್ಞಾನ ಸ್ನೇಹಿಯನ್ನಾಗಿಸುವ ಉದ್ದೇಶದಿಂದ ಈ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

Sponsored

' ನಮ್ಮ ಗೈಡ್' ಸೇವೆಯು ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವುದರ ಜೊತೆಗೆ, ಕರ್ನಾಟಕವನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಇನ್ನಷ್ಟು ಪ್ರಮುಖ ಸ್ಥಾನಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದೆ.

ಕರ್ನಾಟಕ ಸರ್ಕಾರ ರೂಪಿಸುತ್ತಿರುವ 'ನಮ್ಮ ಗೈಡ್' ಡಿಜಿಟಲ್ ವೇದಿಕೆಯು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ. ಈ ಆನ್ಲೈನ್ ಆ್ಯಪ್ ಮೂಲಕ ಪ್ರವಾಸಿಗರು ಅಧಿಕೃತ ಹಾಗೂ ನೋಂದಾಯಿತ ಸ್ಥಳೀಯ ಗೈಡ್ ಗಳನ್ನು ಸುಲಭವಾಗಿ ಕಾಯ್ದಿರಿಸಬಹುದಾಗಿದೆ.

ಪ್ರವಾಸಿ ತಾಣಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ವಿಶೇಷತೆಗಳ ಕುರಿತು ನಿಖರ ಮಾಹಿತಿ ಪಡೆಯಲು ಈ ವೇದಿಕೆ ಸಹಕಾರಿಯಾಗಲಿದ್ದು, ದೇಶಿ ಹಾಗೂ ವಿದೇಶಿ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಸಮೃದ್ಧಗೊಳಿಸಲಿದೆ. ಪ್ರವಾಸಿಗರಿಗೆ ವಿಶ್ವಾಸಾರ್ಹ ಮಾರ್ಗದರ್ಶನ ಒದಗಿಸುವುದರ ಜೊತೆಗೆ, ಸ್ಥಳೀಯ ಸಂಸ್ಕೃತಿಯ ಬಗ್ಗೆ ಆಳವಾಗಿ ಅರಿವು ಮೂಡಿಸಲು ಸಹ ನೆರವಾಗಲಿದೆ.

ಇದರೊಂದಿಗೆ ರಾಜ್ಯದ ನೂರಾರು ನೋಂದಾಯಿತ ಪ್ರವಾಸಿ ಮಾರ್ಗದರ್ಶಕರಿಗೆ ನಿರಂತರ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು, ಸ್ಥಳೀಯ ಪ್ರವಾಸೋದ್ಯಮದ ಬೆಳವಣಿಗೆ ಉತ್ತೇಜನ ದೊರೆಯಲಿದೆ. ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದ ಸಮನ್ವಯದ ಈ ಯೋಜನೆ, ಕರ್ನಾಟಕವನ್ನು ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಕ ತಾಣವನ್ನಾಗಿ ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

Sponsored

ಪ್ರಮುಖ ವಿದೇಶಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತಮ್ಮ ಅಗತ್ಯಕ್ಕೆ ತಕ್ಕ ಗೈಡ್ ಗಳನ್ನು ಆನ್ಲೈನ್ ಮೂಲಕವೇ ಮುಂಚಿತವಾಗಿ ಕಾಯ್ದಿರಿಸಬಹುದಾದ ಸುಧಾರಿತ ವ್ಯವಸ್ಥೆ ಜಾರಿಯಲ್ಲಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ವಿಶೇಷ ವೆಬ್ಸೈಟ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ.

' ನಮ್ಮ ಗೈಡ್' ಡಿಜಿಟಲ್ ವೇದಿಕೆಯ ಮೂಲಕ ಪ್ರವಾಸಿಗರು ಅಧಿಕೃತ ಸ್ಥಳೀಯ ಮಾರ್ಗದರ್ಶಕರನ್ನು ಸುಲಭವಾಗಿ ಸಂಪರ್ಕಿಸಿ, ತಾವು ಭೇಟಿ ನೀಡುವ ಪ್ರವಾಸಿ ತಾಣಗಳ ಇತಿಹಾಸ ಸಂಸ್ಕೃತಿಕ ಮಹತ್ವ ಹಾಗೂ ವಿಶೇಷತೆಗಳ ಬಗ್ಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ.

ಈ ತಂತ್ರಜ್ಞಾನ ಆಧಾರಿತ ಯೋಜನೆಯಿಂದ ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ನೂರಾರು ಸ್ಥಳೀಯ ಗೈಡ್ ಗಳಿಗೆ ನಿರಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವುದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಗೈಡ್ ಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಈ ಆ್ಯಪ್ ಪ್ರಮುಖ ಪಾತ್ರ ವಹಿಸಲಿದೆ.

ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಒದಗಿಸುವುದರ ಜೊತೆಗೆ ಸ್ಥಳೀಯ ಪ್ರವಾಸೋದ್ಯಮ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಈ ಯೋಜನೆ ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ನಿರೀಕ್ಷೆ ಮೂಡಿಸಿದೆ.

Sponsored

ಪ್ರಮುಖ ವಿದೇಶಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತಮ್ಮ ಅಗತ್ಯಕ್ಕೆ ತಕ್ಕ ಗೈಡ್ ಗಳನ್ನು ಆನ್ಲೈನ್ ಮೂಲಕವೇ ಮುಂಚಿತವಾಗಿ ಕಾಯ್ದಿರಿಸಬಹುದಾದ ಸುಧಾರಿತ ವ್ಯವಸ್ಥೆ ಜಾರಿಯಲ್ಲಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ವಿಶೇಷ ವೆಬ್ಸೈಟ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ.

ನಮ್ಮ ಗೈಡ್ ಡಿಜಿಟಲ್ ವೇದಿಕೆಯ ಮೂಲಕ ಪ್ರವಾಸಿಗರು ಅಧಿಕೃತ ಸ್ಥಳೀಯ ಮಾರ್ಗದರ್ಶಕರನ್ನು ಸುಲಭವಾಗಿ ಸಂಪರ್ಕಿಸಿ, ತಾವು ಭೇಟಿ ನೀಡುವ ಪ್ರವಾಸಿ ತಾಣಗಳು ಇತಿಹಾಸ, ಸಾಂಸ್ಕೃತಿಕ ಮಹತ್ವ ಹಾಗೂ ವಿಶೇಷತೆಗಳ ಬಗ್ಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ.

ಈ ತಂತ್ರಜ್ಞಾನ ಆಧಾರಿತ ಯೋಜನೆಯಿಂದ ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ನೋಂದಣಿಯಾಗಿರುವ ನೂರಾರು ಸ್ಥಳೀಯ ಗೈಡ್ ಗಳಿಗೆ ನಿರಂತರ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವುದು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಗೈಡ್ ಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಈ ಆ್ಯಪ್ ಪ್ರಮುಖ ಪಾತ್ರ ವಹಿಸಿಲಿದೆ.

ಪ್ರವಾಸಿಗರಿಗೆ ಗುಣಮಟ್ಟದ ಸೇವೆ ಒದಗಿಸುವುದರ ಜೊತೆಗೆ ಸ್ಥಳೀಯ ಪ್ರವಾಸೋದ್ಯಮ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಈ ಯೋಜನೆ. ಕರ್ನಾಟಕದ ಪ್ರವಾಸ ಉದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ನಿರೀಕ್ಷೆ ಮೂಡಿಸಿದೆ.

Sponsored

Also Read:

ವಿದೇಶಿ ದೇಣಿಗೆ ಪಡೆಯುವವರಿಗೆ ಎಚ್ಚರಿಕೆ : ಕೇಂದ್ರ ಸರ್ಕಾರದ ಹೊಸ ರೂಲ್ಸ್ ಜಾರಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online