belagavi news:
ಬೆಂಗಳೂರು: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷ ಈ ಬಾರಿ ತಮಿಳುನಾಡಿನಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ನಾಯಕ ನಟ ಹಾಗೂ ರಾಜಕೀಯ ನಾಯಕ ಜೋಸೆಫ್ ವಿಜಯ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ವಿಧಾನಸೌಧಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಇದ್ದ ಕಾರಣ ವಿಜಯ್ ಅವರ ಪಕ್ಷವು ಮುನ್ನಡೆ ಸಾಧಿಸಿರುವುದು ಗಮನಾರ್ಹ ಎಂದು ಹೇಳಿದರು. ಇದೇ ವೇಳೆ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಕಂಡು ಬಂದಿರುವುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇರಳದಲ್ಲಿ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಹಾಗೂ ಅಸ್ಸೋಂನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ ಎಂದು ಅವರು ಹೇಳಿದರು. ಜನರ ಆಶೀರ್ವಾದವನ್ನು ಸ್ವೀಕರಿಸುತ್ತೇನೆ 3 ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷಕ್ಕೆ ಮೊದಲು ನೆಲೆ ಇರಲಿಲ್ಲ ಎಂದು ಹೇಳಿದವರು ಕೇರಳದಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ದೊರೆತಿದೆ ಎಂದರು. ಉಪಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಸಿದ್ದರಾಮಯ್ಯ ದಾವಣಗೆರೆಯಲ್ಲಿ ನಮ್ಮ ಕಾರಣದಿಂದಲೇ ಲೀಡ್ ಕಡಿಮೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ದಾವಣಗೆರೆಯಲ್ಲಿ ಗೆಲವು ಸಾಧಿಸುತೇವೆ ಮತ್ತು ಬಾಗಲಕೋಟೆಯಲ್ಲಿ ಕೂಡ ಜಯಗಳಿಸಿದ್ದೇವೆ ಎಂದು ಇದೆ ವೇಳೆ ಹೇಳಿದರು.
ತಮಿಳುನಾಡಿನ ಕ್ಷಿಪ್ರ ರಾಜಕೀಯ ಬದಲಾವಣೆಯಲ್ಲಿ ಜನಪ್ರಿಯ ನಟ ವಿಜಯ್ ಅವರು ಟಿವಿಕೆ ಪಕ್ಷ ಭರ್ಜರಿ ಸಾಧನೆ ಮಾಡಿದೆ. 100 ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಡಿಎಂಕೆ, ಎಡಿಎಂ ಕೆ ಗಳನ್ನು ಧೂಳಿಪಟ ಮಾಡಿದೆ. ಈ ಮೂಲಕ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ನತ್ತ (118) ಅವರ ಪಕ್ಷ ಮುನ್ನುಗ್ಗುತ್ತಿದೆ.
ನಿಜವಾದ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಭವಿಷ್ಯ: ನಟನೆಯ ಮೂಲಕ ಜನಮಾಸನದಲ್ಲಿ ಗಾಢ ಪ್ರಭಾವ ಬೀರುವ ಹಾಗೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಇದೀಗ ರಾಜಕೀಯದಲ್ಲಿ ಮಹತ್ವದ ಯಶಸ್ಸಿನ ಹೊಸ್ತಿಲಲ್ಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆಕ್ಸಿಸ್ ಮೈ ಇಂಡಿಯಾ ಹೊರತಾಗಿ ಬಹುತೇಕ ಎಲ್ಲಾ ಸಮೀಕ್ಷೆಗಳು ವಿಜಯ ನೇತೃತ್ವದ ಪಕ್ಷಕ್ಕೆ ಅಧಿಕಾರ ಹಿಡಿಯುವಷ್ಟು ಸ್ಥಾನಗಳು ಸಿಗುವುದಿಲ್ಲ ಎಂದು ಅಂದಾಜು ಮಾಡಿದ್ದವು.
ವಿವಾದಗಳನ್ನು ಮೆಟ್ಟಿ ನಿಂತ 'ಜನನಾಯಕ': ಆದರೆ ಎಲ್ಲಾ ಲೆಕ್ಕಾಚಾರಗಳನ್ನು ಮೀರಿಸಿ, ವಿಜಯ್ ತಮ್ಮ ಪಕ್ಷವನ್ನು ಏಕಾಂಗಿಯಾಗಿ ಅಧಿಕಾರದ ಗದ್ದುಗೆಯ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ. ಡಿಎಂಕೆ ನೇತೃತ್ವದ ಸರ್ಕಾರದ ಆಡಳಿತದ ಸವಾಲುಗಳು,'ಜನನಾಯಕ' ಸಿನಿಮಾ ಸಂಬಂಧಿತ ವಿವಾದಗಳು ಹಾಗೂ ವೈಯಕ್ತಿಕ ಜೀವನದ ಚರ್ಚೆಗಳನ್ನೆಲ್ಲ ಮೆಟ್ಟಿ ನಿಂತ ಅವರು ಈಗ ಅಮೋಘ ಮುನ್ನಡೆಯ ಸಂಭ್ರಮದಲ್ಲಿದ್ದಾರೆ.
ಮತವಾಗಿ ಬದಲಾದ ಅಭಿಮಾನ: ಸದ್ಯದ ಟ್ರೆಂಡ್ ನ ಪ್ರಕಾರ, ವಿಜಯ್ ಅವರ ಟಿವಿಕೆ ಪಕ್ಷ - 106 ಸ್ಥಾನ, ಎಡಿಎಂಕೆ- 64, ಡಿಎಂಕೆ -43, ಕಾಂಗ್ರೆಸ್ - 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸ್ಪಷ್ಟ ಬಹುಮತಕ್ಕೆ ಬೇಕಾದ 118 ಕ್ಕೆ ವಿಜಯ್ ಗೆ ಇನ್ನು 12 ಸ್ಥಾನಗಳು ಬೇಕಾಗಿವೆ. ವಿಜಯ್ ಹೊರತಾಗಿ ಯಾವುದೇ ಪಕ್ಷಗಳು ದೊಡ್ಡ ಯಶಸ್ಸು ಸಾಧಿಸಿಲ್ಲ. ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
Also Read: