<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಕರೂರ್ ದುರಂತ ಸಂತ್ರಸ್ತರ ಮನೆಗೆ ಸಿಎಂ ವಿಜಯ್ ಭೇಟಿ : ಕುಟುಂಬಸ್ಥರಿಗೆ ಉದ್ಯೋಗ ಪತ್ರ ವಿತರಣೆ

ಕರೂರ್ ದುರಂತ ಸಂತ್ರಸ್ತರ ಮನೆಗೆ ಸಿಎಂ ವಿಜಯ್ ಭೇಟಿ : ಕುಟುಂಬಸ್ಥರಿಗೆ ಉದ್ಯೋಗ ಪತ್ರ ವಿತರಣೆ
Summary: CM Vijay will visit Karur stampede victims' families today to help them and will hand over employment letters to the families. This is a significant step taken by the government after the incident.

Belagavi News :

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೆರವು ನೀಡುವ ಭಾಗವಾಗಿ ತಮಿಳುನಾಡು ಮುಖ್ಯಮಂತ್ರಿ, ಸಿಎಂ ಜೋಸೆಫ್ ವಿಜಯ್ ಅವರು ಇಂದು 32 ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಜಯ್ ಅವರು ಇದೇ ಮೊದಲ ಬಾರಿಗೆ ಕರೂರ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ 2025ರ ಸೆಪ್ಟೆಂಬರ್ 27ರಂದು ಅವರು ಭಾಗವಹಿಸಿದ್ದ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಡಿಎಂಕೆ ಮೃತಪಟ್ಟ 41 ಮಂದಿಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.

ಕಾಲ್ತುಳಿತ ದುರಂತದ ಬಳಿಕ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಕುಟುಂಬಗಳ ಸದಸ್ಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕ್ರಮದ ಭಾಗವಾಗಿ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ.

Sponsored

ಸಿಎಂ ವಿಜಯ್ ಅವರ ಕರೂರ್ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದ್ದು, ಕಾರ್ಯಕ್ರಮದ ಸಿದ್ಧತೆಗಳು ಪೂರ್ಣಗೊಂಡಿವೆ.

ಕರೂರ್ ಭೇಟಿ - ಸಿಎಂ ವಿಜಯ್ ಕಾರ್ಯಕ್ರಮಕ್ಕೆ 5000 ಮಂದಿಗೆ ಮಾತ್ರ ಅವಕಾಶ, 1,700 ಕೋಟಿ ರೂ. ಯೋಜನೆಗೆ ಶಂಕುಸ್ಥಾಪನೆ :

ಕರೂರ್ ಕಾಲ್ತುಳಿತದ ದುರಂತದ ಸಂತ್ರಸ್ತ ಕುಟುಂಬಗಳಿಗೆ ನೇಮಕಾತಿ ಪತ್ರ ವಿತರಿಸಲು ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಕಾರ್ಯಕ್ರಮಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆ ಹಾಗೂ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಮಾಹಿತಿ ನೀಡಿದ್ದು, ಕ್ಯೂಆರ್ ಕೋಡ್ ಹೊಂದಿರುವ ಪ್ರವೇಶ ಪಾಸ್ ಇರುವ 5,000 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

Sponsored

ಕಾರ್ಯಕ್ರಮಕ್ಕೆ ಆಗಮಿಸುವವರು ಪೊಲೀಸ್ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಜನರಟನೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದೇ ವೇಳೆ , ಲೋಕೋಪಯೋಗಿ ಮತ್ತು ಕ್ರೀಡಾಭಿರುದ್ಧಿ ಸಚಿವ ಆದವ್ ಅರ್ಜುನ್ ಮಾತನಾಡಿ, ಕಲ್ತುಡಿತದಲ್ಲಿ ಗಾಯಗೊಂಡವರ ಅಂತಿಮ ಪಟ್ಟಿಯನ್ನು ಸರ್ಕಾರ ಪರಿಶೀಲಿಸಿ, ದೃಢಪಡಿಸಿದೆ ಎಂದು ಹೇಳಿದ್ದಾರೆ.

ಮಧ್ಯಾಹ್ನ 12:30 ಸುಮಾರಿಗೆ ಅಟ್ಲಾಸ್ ಸಭಾಂಗಣದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸಿಎಂ ವಿಜಯ್ ಅವರು ಮಾನವಸಿಯಲ್ಲಿ ₹ 1,700 ಕೋಟಿ ವೆಚ್ಚದ ಎವರ್ವಾನ್ ಕೊಥಾರಿ ಫುಡ್ ವೇರ್ ಪ್ರೈವೇಟ್ ಲಿಮಿಟೆಡ್ ನ ಹೊಸ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಯೋಜನೆಯಿಂದ ಸ್ಥಳೀಯವಾಗಿ 13,500 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.

Sponsored

ಕರೂರ್ ಕಾಲ್ತುಳಿತ ಸಂತ್ರಸ್ತ ಕುಟುಂಬಗಳಿಗೆ ಸಿಎಂ ವಿಜಯ್ ನೆರವು - ಪರಿಹಾರದಿಂದ ನೋವು ಕಡಿಮೆಯಾಗದು ಎಂದು ಕಾಂಗ್ರೆಸ್ ಸಂಸದೆ ಜೋತಿಮಣಿ :

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ೪೧ ಮಂದಿಯ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇಂದು ಕರೂರ್ ಗೆ ಭೇಟಿ ನೀಡುತ್ತಿದ್ದಾರೆ.

ತಿರುಚಿರಾಪಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ವಿಜಯ್ ಅವರು ಕರೂರ್ ಗೆ ಆಗಮಿಸಿದ್ದು, ಮನವಿಯ ನೆರವು ನೀಡಲು ಕರೂರ್ ಜಿಲ್ಲಾ ಕಲೆಕ್ಟರೇಟ್ ನಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ದುರಂತದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ 41 ಕುಟುಂಬಗಳನ್ನು ವರ್ಣನಾತೀತ ಎಂದು ಕರೂರ್ ಕಾಂಗ್ರೆಸ್ ಸಂಸದೆ ಜೋತಿಮಣಿ ಹೇಳಿದ್ದಾರೆ. ಯಾವುದೇ ಪರಿಹಾರದಿಂದಲೂ ಸಂತ್ರಸ್ತ ಕುಟುಂಬಗಳ ಕಣ್ಣೀರನ್ನು ಸಂಪೂರ್ಣವಾಗಿ ವರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Sponsored

ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಜೋತಿಮಣಿ, ಒಂದೇ ಉದ್ಯೋಗ ನೇಮಕಾತಿಯಿಂದ ಕಳೆದುಕೊಂಡ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಇಂದು ಇಂದು ಆ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಹಲವರು ತಮ್ಮ ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದರು. ಹೀಗಾಗಿ ಕುಟುಂಬಗಳಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದೆ ವೇಳೆ , ಮುಖ್ಯಮಂತ್ರಿ ವಿಜಯ್ ಅವರ ಕರೂರ್ ಭೇಟಿ ರಾಜಕೀಯ ಉದ್ದೇಶ ಹೊಂದಿದೆ ಎಂಬ ವಿರೋಧ ಪಕ್ಷಗಳ ಆರೋಪಗಳ ನಡುವೆಯೂ, ರಾಜ್ಯ ಸರ್ಕಾರದ ನಿರ್ಧಾರವನ್ನು ಜೋತಿ ಮಣಿ ಸಮರ್ಥಿಸಿಕೊಂಡಿದ್ದಾರೆ. ಕರುರ್ ಕಾಲ್ತುಡಿತ ಪ್ರಕರಣದ ತನಿಖೆ ವಿಚಾರದಲ್ಲೂ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online