Belagavi News:
ಕಾವೇರಿ ನದಿ ನೀರು ಹಂಚಿಕೆ ವಿವಾದದ ನಡುವೆಯೇ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಬಂಧದಲ್ಲಿ ಹೊಸ ಬೆಳವಣಿಗೆ ಕಾಣಿಸಿಕೊಳ್ಳುತ್ತಿದೆ. ಹಲವು, ವರ್ಷಗಳಿಂದ ಮುಂದುವರೆದಿರುವ ಕಾವೇರಿ ನೀರಿನ ಹಂಚಿಕೆ ವಿಚಾರಕ್ಕೆ ಸಂತಾನದ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ನಡುವೆ ಮಹತ್ವದ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ನಡುವೆ ಕಾವೇರಿ ನೀರು ಹಂಚಿಕೆ, ರೈತರ ಹಿತಾಸಕ್ತಿ ಮತ್ತು ಉಭಯ ರಾಜ್ಯಗಳ ಸಹಕಾರದ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ. ಈ ಸಭೆಯು ಕಾವೇರಿ ವಿವಾದಕ್ಕೆ ಹೊಸ ದಿಕ್ಕು ನೀಡಬಹುದೇ ಎಂಬ ಕುತೂಹಲ ಎರಡು ರಾಜ್ಯಗಳಲ್ಲಿ ಮೂಡಿದೆ.
ಕಾವೇರಿ ನೀರಿನ ಹಂಚಿಕೆ ಸಂಬಂಧಿತ ಬಿಕ್ಕಟ್ಟಿಗೆ ಸಂವಾದದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಈ ಮಾತುಕತೆಯನ್ನು ನೋಡಲಾಗುತ್ತಿದ್ದು, ಫಲಿತಾಂಶದತ್ತ ರೈತರು ಮತ್ತು ಸಾರ್ವಜನಿಕರು ಚಿತ್ತ ನೆಟ್ಟಿದ್ದಾರೆ.
Cauvery Water Dispute - ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ; ಆ. 3 ರಂದು ವಿಧಾನಸೌಧದಲ್ಲಿ ಕರ್ನಾಟಕ - ತಮಿಳುನಾಡು ಮಹತ್ವದ ಸಭೆ :
ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರ ಸ್ವರೂಪ ಪಡೆಯುತ್ತಿದೆ. ಬೆಳವಣಿಗೆಯ ನಡುವೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಂಧಾನ ಪ್ರಯತ್ನಕ್ಕೆ ವೇದಿಕೆ ಸಿದ್ದವಾಗಿದ್ದು, ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ನೇರ ಮಾತುಕತೆಗೆ ಮುಂದಾಗಿದ್ದಾರೆ.
ಆಗಸ್ಟ್ 3 ರಂದು ಮಧ್ಯಾಹ್ನ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಮಾತುಕತೆಯ ಫಲಿತಾಂಶದತ್ತ ರೈತರು ಹಾಗೂ ಎರಡು ರಾಜ್ಯಗಳ ಜನರು ಕಾತುರದಿಂದ ಕಾಯುತ್ತಿದ್ದಾರೆ.
Cauvery Talks - ಆ. 3 ರ ಕರ್ನಾಟಕ - ತಮಿಳುನಾಡು ಸಭೆಗೆ ಭರ್ಜರಿ ಸಿದ್ಧತೆ ; ವಿಧಾನಸೌಧದಲ್ಲಿ ಅಂತಿಮ ಸಿದ್ಧತಾ ಕಾರ್ಯ ಚುರುಕು :
ಕಾವೇರಿ ನದಿ ನೀರು ಹಂಚಿಕೆ ಕುರಿತು ಆಗಸ್ಟ್ ಮೂರರಂದು ನಡೆಯಲಿರುವ ಕರ್ನಾಟಕ ಮತ್ತು ತಮಿಳುನಾಡು ಉನ್ನತ ಮಟ್ಟದ ಸಭೆಗೆ ವಿಧಾನಸೌಧದಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಭೆ ನಡೆಯಲಿರುವ ಸಮ್ಮೇಳನ ಸಭಾಂಗಣದಲ್ಲಿ ಸ್ವಚ್ಛತೆ, ಎಸಿ ಕ್ಲೀನಿಂಗ್, ನೆಲಹಾಸು ಬದಲಾವಣೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗುತ್ತಿದೆ.
ಉಭಯ ರಾಜ್ಯಗಳ ಬಾವುಟಗಳು ಹಾಗೂ ಅಧಿಕೃತ ಲಾಂಛನಗಳನ್ನು ಅಳವಡಿಸುವ ಕಾರ್ಯವು ನಡೆಯುತ್ತಿದ್ದು, ಸಭಾಂಗಣವನ್ನು ವಿಶೇಷವಾಗಿ ಸಜ್ಜುಗೊಳಿಸಲಾಗುತ್ತಿದೆ. ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸೇರಿ ಒಟ್ಟು 25 ಮಂದಿಗೆ ಹಾಸನ ವ್ಯವಸ್ಥೆ ಮಾಡಲಾಗಿದೆ.
ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ನಡೆಯಲಿರುವ ಈ ಮಹತ್ವದ ಸಭೆಯ ಎರಡು ರಾಜ್ಯಗಳ ಜನರು ಹಾಗೂ ರೈತರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ
Also Read :
Tumakuru Drought : ಬರಗಾಲದ ಹೊಡೆತಕ್ಕೆ ತುಮಕೂರು ತತ್ತರ - ಸಂಪೂರ್ಣ ಬತ್ತಿದ್ದ ನೂರಾರು ಕೆರೆಗಳು