<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಸಕ್ಕರೆ ಬೆಲೆ ಏರಿಕೆ ನಡುವೆ ಕೇಂದ್ರ ಸರ್ಕಾರದಿಂದ ರಫ್ತು ನಿಷೇಧ ಆದೇಶ

ಸಕ್ಕರೆ ಬೆಲೆ ಏರಿಕೆ ನಡುವೆ ಕೇಂದ್ರ ಸರ್ಕಾರದಿಂದ ರಫ್ತು ನಿಷೇಧ ಆದೇಶ
Summary: In order to maintain sugar availability and price control in the domestic market, the central government has issued a significant order banning sugar exports with immediate effect. This decision has triggered a debate among the sugar industry, farmers and the trade community and is likely to have a major impact on the market.

Belagavi news:

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಮತ್ತು ಆಹಾರ ಭದ್ರತೆ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷದ ಸೆಪ್ಟೆಂಬರ್ 30ರವರೆಗೆ ಸಕ್ಕರೆ ರಫ್ತನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಮೇ 13 ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಹೊರಡಿಸಿದ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ.

ಆದರೆ ಸುಂಕ ದರ ಕೋಟಾ (TRQ) ಯೋಜನೆಯಡಿ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕಕ್ಕೆ ರಫ್ತು ಮಾಡಲಾಗುವ ಸಕ್ಕರೆಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು DGFT ಸ್ಪಷ್ಟಪಡಿಸಿದೆ.

ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ ಹಾಗೂ ಸಂಸ್ಕರಿಸಿದ ಸಕ್ಕರೆ ಸೇರಿದಂತೆ ITC (HS) ಕೋಡ್ ಗಳ ಅಡಿಯಲ್ಲಿ ವರ್ಗೀಕರಿಸಲಾದ ವಿವಿಧ ಸಕ್ಕರೆ ಉತ್ಪನ್ನಗಳ ರಫ್ತಿಗೆ ಈ ತಾತ್ಕಾಲಿಕ ನಿರ್ಬಂಧ ಪರಿಣಾಮ ಬೀರುವುದಾಗಿ DGFT ತಿಳಿಸಿದೆ.

Sponsored

ದೇಶಿಯ ಪೂರೈಕೆಯನ್ನು ಸಮತೋಲನದಲ್ಲಿಡುವುದು, ಸಕ್ಕರೆ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಹಾಗೂ ಮುಂದಿನ ಎರಡು ವರ್ಷಗಳ ಆಹಾರ ಭದ್ರತೆಯನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿರ್ಧಾರದಿಂದ ಸಕ್ಕರೆ ಉದ್ಯಮ, ರಫ್ತು ವಲಯ ಹಾಗೂ ರೈತ ಸಮುದಾಯದಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು, ಮಾರುಕಟ್ಟೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಐಟಿಸಿ ( ಎಚ್ಎಸ್) ಕೋಡ್ ಗಳಾದ 1701 14 90 ಮತ್ತು 1701 99 90 ಅಡಿ ಸಕ್ಕರೆ ರಫ್ತು ನೀತಿಯನ್ನು ನಿರ್ಬಂಧಿತ ದಿಂದ ನಿಷೇಧಿತ ಎಂದು ತಿದ್ದುಪಡಿ ಮಾಡಲಾಗಿದೆ. ಸೆಪ್ಟೆಂಬರ್ 30, 2026ರವರೆಗೆ ತಕ್ಷಣದಿಂದ ಜಾರಿಯ ಬರುವಂತೆ ಅಥವಾ ಮುಂದಿನ ಆದೇಶಗಳವರೆಗೆ ಯಾವುದೇ ಮೊದಲೋ ಅಲ್ಲಿಯವರೆಗೆ ನಿಷೇಧಿಸಲಾಗಿದೆ ಎಂದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಕ್ಕರೆ ರಫ್ತು ನಿಷೇಧ ಘೋಷಿಸಿದರು ಕೇಂದ್ರ ಸರ್ಕಾರ ಕೆಲವು ಅಂತಾರಾಷ್ಟ್ರೀಯ ಬಾಧ್ಯತೆಗಳು ಹಾಗೂ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ ನಿರ್ದಿಷ್ಟ ವಿನಾಯಿತಿಗಳನ್ನು ನೀಡಿದೆ. CXL ಮತ್ತು TRQ ಕೋಟಾಗಳ ಅಡಿಯಲ್ಲಿ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕಕ್ಕೆ ರಫ್ತು ಮಾಡಲಾಗುವ ಸಕ್ಕರೆಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Sponsored

ಇದಲ್ಲದೆ, ಭೌತಿಕ ರಫ್ತು ಪ್ರಕ್ರಿಯೆಯಲ್ಲಿ ಈಗಾಗಲೇ ಇರುವ ಸರಕುಗಳಿಗೆ ಕೇಂದ್ರ ಸರ್ಕಾರ ಪರಿವರ್ತನಾ ವ್ಯವಸ್ಥೆಗಳನ್ನು ಘೋಷಿಸಿದೆ. ಅದಿ ಸೂಚನೆ ಪ್ರಕಟಿಸುವ ದಿನಾಂಕಕ್ಕೂ ಮೊದಲು ಹಡಗಿಗೆ ಸಕ್ಕರೆ ಲೋಡ್ ಮಾಡಿರುವ ಸಾಗಣೆಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಶಿಪ್ಪಿಂಗ್ ಬಿಲ್ ಸಲ್ಲಿಸಿರುವ ಹಾಗೂ ನಿಗದಿತ ರೋಟೇಶನ್ ಸಂಖ್ಯೆಯೊಂದಿಗೆ ಭಾರತೀಯ ಬಂದರುಗಳಲ್ಲಿ ಈಗಾಗಲೇ ಬರ್ತಿಂಗ್ ಅಥವಾ ಲಂಗರು ಹಾಕಿರುವ ಹಡಗುಗಳಿಗೆ ರಫ್ತು ಮಾಡಲು DGFT ಅನುಮತಿ ನೀಡಿದೆ. ಇದರಿಂದ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ರಫ್ತುದಾರರಿಗೆ ಭಾಗಶಃ ನಿರಾಳತೆ ಸಿಕ್ಕಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಕಾಪಾಡುವುದು ಹಾಗೂ ಆಹಾರ ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದ್ದು, ರಫ್ತು ವಲಯ ಮತ್ತು ಸಕ್ಕರೆ ಉದ್ಯಮದಲ್ಲಿ ಈ ನಿರ್ಧಾರ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಸಕ್ಕರೆ ರಫ್ತು ನಿಷೇಧಕ್ಕೆ ಸಂಬಂಧಿಸಿದ ಈ ಸೂಚನೆ ಹೊರಬಂದ ಬಳಿಕ, ಸಂಬಂಧಪಟ್ಟ ಬಂದರು ಪ್ರಾಧಿಕಾರದಿಂದ ಬರ್ತಿಂಗ್ ಅಥವಾ ಅಂಕರಿಂಗ್ ಕುರಿತು ದೃಢೀಕರಣ ದೊರೆತನಂತರವೇ ಹಡುವುಗಳಲ್ಲಿ ಸಕ್ಕರೆ ಲೋಡ್ ಮಾಡಲು ಅನುಬೋಧನೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Sponsored

ಇದಲ್ಲದೆ, ಕಸ್ಟಮ್ಸ್ ಅಥವಾ ಕಸ್ಟೋಡಿಯನ್ ಗಳಿಗೆ ಈಗಾಗಲೇ ಹಸ್ತಾಂತರಿಸಲಾದ ಹಾಗೂ ಪರಿಶೀಲಿಸಬಹುದಾದ ಪುರಾವೆಗಳೊಂದಿಗೆ ಎಲೆಕ್ಟ್ರಾನಿಕ್ ವ್ಯವಸ್ಥೆಗಳಲ್ಲಿ ನೋಂದಾಯಿಸಲಾದ ಸರಕುಗಳಿಗೆ ತಕ್ಷಣದ ನಿಷೇಧ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಇದರಿಂದ ಈಗಾಗಲೇ ರಫ್ತು ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ವ್ಯಾಪಾರಿಗಳಿಗೆ ಕೆಲಮಟ್ಟಿನ ನಿರಾಳತೆ ಸಿಕ್ಕಿದೆ.

ಆದರೆ, ಆಯಾ ದೇಶಗಳ ಸರ್ಕಾರದಿಂದ ಅಧಿಕೃತ ವಿನಂತಿ ಬಂದಲ್ಲಿ, ಅವರ ಆಹಾರ ಭದ್ರತಾ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ನಿರ್ದಿಷ್ಟ ದೇಶಗಳಿಗೆ ಸಕ್ಕರೆ ರಫ್ತು ಮಾಡಲು ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ತನ್ನ ಆದೇಶವನ್ನು ಉಲ್ಲೇಖಿಸಿದೆ.

ದೇಶೀಯ ಸಕ್ಕರೆ ಪೂರೈಕೆ, ಬೆಲೆ ನಿಯಂತ್ರಣ ಮತ್ತು ಆಹಾರ ಭದ್ರತೆ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದ್ದು, ಸಕ್ಕರೆ ಉದ್ಯಮ ಹಾಗೂ ರಫ್ತು ವಲಯದಲ್ಲಿ ಈ ನಿರ್ಧಾರ ದೊಡ್ಡ ಚರ್ಚೆಗೆ ಕಾರಣವಾಗಿದೆ.

Also Read:

Sponsored

ರೈತನ ಬಳಿ ಲಂಚಕ್ಕೆ ಬೇಡಿಕೆ: ₹30 ಸಾವಿರ ಪಡೆಯುವಾಗ ಸಿಕ್ಕಿಬಿದ್ದ ಕಂದಾಯ ಅಧಿಕಾರಿಗಳು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online