belagavi news :
ಸಾನ್ವಿ ಸುದೀಪ ಅವರು ತಮ್ಮ ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಚಿತ್ರ ವೈರಲ್ ಆಗುತ್ತಿದ್ದಂತೆ ಕೆಲ ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು,"ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಳ್ಳಬಾರದಿತ್ತು", "ಭಕ್ತಿ ಮನಸ್ಸಿನಲ್ಲಿ ಇರಬೇಕು"ಎಂಬಂತೆ ಟೀಕೆಗಳನ್ನು ಮಾಡಿದ್ದಾರೆ. ಈ ಟೀಕೆಗಳಿಗೆ ಇದೀಗ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಖಡಕ್ ಪ್ರತಿಕ್ರಿಯೆ ನೀಡಿದು, ವಯಕ್ತಿಕ ನಂಬಿಕೆ ಮತ್ತು ಭಕ್ತಿಯ ವಿಭಕ್ತಿಯನ್ನು ಗೌರವಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ವ್ಯಕ್ತಿಯ ಆಧ್ಯಾತ್ಮಿಕ ಭಾವನೆಗಳನ್ನು ರಚಿಸುವುದು ಸರಿಯಲ್ಲ ಎಂಬ ಸಂದೇಶವು ಅವರ ಹೇಳಿಕೆಯಲ್ಲಿ ವ್ಯಕ್ತವಾಗಿದೆ. ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಮತ್ತು ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ ಅವರು ಇತ್ತೀಚೆಗೆ ತಮ್ಮ ಬೆನ್ನಿನ ಮೇಲೆ ವಿಘ್ನ ವಿನಾಶಕ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಾರಿ ಚರ್ಚೆ ಆರಂಭವಾಗಿದೆ. ಕೆಲವು ನೆಟ್ಟಿಗರು "ದೇವರ ಚಿತ್ರವನ್ನು ದೇಹದ ಮೇಲೆ ಬಿಡಿಸಿಕೊಳ್ಳಬಹುದೇ?",,ಪೂಜೆ ವೇಳೆ ಮಡಿ- ಮೈಲಿಗೆ ಪಾಲಿಸುತ್ತೇವೆ,ದೇಹದ ಮೇಲೆ ದೇವರ ಚಿತ್ರ ಹಾಕುವುದು ಸರಿಯೇ","ಗಣಪತಿಯ ಟ್ಯಾಟೂ ಬೆನ್ನಿನ ಮೇಲೆ ಹಾಕಿಸಿಕೊಳ್ಳಬಾರದು"ಎಂಬಂತೆ ವಿವಿಧ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಟೀಕೆ ಹಾಗೂ ಟ್ರೋಲ್ ಮಾಡಿದ್ದಾರೆ. ಈ ವಿವಾದದ ನಡುವೆ ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸಾನ್ವಿ ಸುದೀಪ್ ಪರವಾಗಿ ಕಡಕ್ ಪ್ರತಿಕ್ರಿಯೆ ನೀಡಿದ್ದು, ವೈಯಕ್ತಿಕ ನಂಬಿಕೆ ಮತ್ತು ಭಕ್ತಿಯ ಅಭಿವ್ಯಕ್ತಿಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಅವರು ಫೇಸ್ ಬುಕ್ ನಲ್ಲಿ ಸಾನ್ವಿ ಸುದೀಪ ಪರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಾನ್ವಿ ಸುದೀಪ ಅವರ ಗಣೇಶ ಟ್ಯಾಟೂ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಟ್ರೋಲ್ ಗಳಿಗೆ ಅವರು ಖಡಕ್ ಉತ್ತರ ನೀಡಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಅವರು "ಆಕೆಯ ದೇಹ.... ದೇವರು ಎಂದರೆ ಅತ್ಯಂತ ಖಾಸಗಿ, ಅದು ಅಂತರಂಗದ ಅನುಭವ"ಎಂದು ಹೇಳಿದ್ದು, ವೈಯಕ್ತಿಕ ನಂಬಿಕೆ ಮತ್ತು ಭಕ್ತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಅವರು ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಉದಾಹರಣೆಗಳನ್ನು ಉಲ್ಲೇಖಿಸಿ, ಭಕ್ತಿ ಮತ್ತು ದೇವರ ಕಲ್ಪನೆ ವ್ಯಕ್ತಿಗತ ಅನುಭವವಾಗಿದ್ದು ಅದನ್ನು ಪ್ರಶ್ನಿಸುವುದು ಅನಗತ್ಯ ಎಂದು ತಿರುಗೇಟು ನೀಡಿದ್ದಾರೆ. ಅಕ್ಕಮಹಾದೇವಿ ಹಾಗೂ ಶೈವಭಕ್ತಿ ಪರಂಪರೆಯ ಉದಾಹರಣೆಗಳನ್ನು ಉಲ್ಲೇಖಿಸಿದ ಚಂದ್ರಚೂಡ, ದೇವರನ್ನು ನೋಡುವ ದೃಷ್ಟಿಕೋನವೇ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ಈ ಫೇಸ್ ಬುಕ್ ಇದೀಗ ಸಮಾಜಗಳಲ್ಲಿ ವೈರಲ್ ಆಗಿದ್ದು, ಸಾನ್ವಿ ಸುದೀಪ್ ಪರವಾಗಿ ಚಂದ್ರಚೂಡ ನಿಂತಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ.
ಸಾನ್ವಿ ಸುದೀಪ್ ಅವರ ಗಣೇಶ ಟ್ಯಾಟೂ ವಿಚಾರ ಸಂಬಂಧಿಸಿ ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಮುಂದುವರೆದಿವೆ. ಕೆಲ ನೆಟ್ಟಿಗರು ಟ್ರೊಲ್ ಮಾಡುತ್ತಿದ್ದರೆ, ಮತ್ತೊಂದೆಡೆ ಹಲವರು ಅವರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಚಕ್ರವರ್ತಿ ಚಂದ್ರಚೂಡ ಅವರ ಹೇಳಿಕೆಗೆ ಸಂಬಂಧಿಸಿದಂತೆ ನೆಟ್ಟಿದರು"ಟೀಕಿಸುವ ಕಿಡಿಗೇಡಿಗಳಿಗೆ ನೀವೇ ಸರಿ.... ಇಂಥವರಿಗೆ ನಿಮ್ಮ ಸಾಲುಗಳೇ ಚಪ್ಪಲಿಯಲ್ಲಿ ಸುತೊಡೆದ ಶಾಲುಗಳು"ಎಂದು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ ಸಾನ್ವಿ ಸುದೀಪ್ ಪರವಾಗಿ ಹಲವರು ಪಾಸಿಟಿವ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ."ದೇವರಿಗೆ ನಮಸ್ಕರಿಸಿ ಕೆಲಸ ಆರಂಭಿಸಿದರು ಎಲ್ಲವೂ ಸುಗಮವಾಗುತ್ತದೆ, ದೇವರಿದ್ದಾನೆ" ಎಂಬಂತೆ ಭಕ್ತಿಯ ದೃಷ್ಟಿಯಿಂದ ಕಾಮೆಂಟ್ಗಳು ಹರಿದಾಡುತ್ತಿವೆ. ಮತ್ತೊಬ್ಬರು"ಇಡೀ ದೇಹವನ್ನೇ ದೇವರೇ ಸೃಷ್ಟಿಸಿದ್ದಾನೆ ಅಂದರೆ ದೇವರ ಚಿತ್ರ ದೇಹದ ಮೇಲೆ ಇದ್ದರೆ ಏನು ತಪ್ಪು? ದೇವರೇ ಕೊಟ್ಟ ದೇಹದಲ್ಲಿ ದೇವರಿಗೆ ಜಾಗ ಕೊಟ್ಟರೆ ತಪ್ಪೇನು?"ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ರೀತಿಯಾಗಿ ಸಾನ್ವಿ ಸುದೀಪ್ ಅವರ ಟ್ಯಾಟೂ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಕ್ತಿಯ ನಂಬಿಕೆ ಮತ್ತು ವಯಕ್ತಿಕ ಅಭಿವ್ಯಕ್ತಿಯ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು.
Also Read:
ಮೋದಿ ಹೇಳಿಕೆಗೆ ಪ್ರತಿಕ್ರಿಯೆ: BMTC ಬಸ್ ನಲ್ಲಿ ಪ್ರಯಾಣ ಮಾಡಿದ ವ್ಯಕ್ತಿ