belagavi news :
ಬೆಂಗಳೂರು ಮೇ 12: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಮಿತವಾಗಿ ಬಳಸುವಂತೆ ಹಾಗೂ ಸಾರ್ವಜನಿಕ ಸಾರಿಗೆಯಾದ ಮೆಟ್ರೋ ಮತ್ತು ಬಸ್ ಗಳನ್ನು ಹೆಚ್ಚಾಗಿ ಬಳಸುವಂತೆ ನೀಡಿದ ಕರೆಗೆ ಬೆಂಗಳೂರಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.
ನಗರದಲ್ಲಿ ಹಲವಾರು ಪ್ರಯಾಣಿಕರು ವೈಯಕ್ತಿಕ ವಾಹನಗಳ ಬದಲು BMTC ಬಸ್ಗಳನ್ನು ಮತ್ತು ಮೆಟ್ರೋ ಸೇವೆಗಳನ್ನು ಆಯ್ಕೆ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ. ಈ ಮೂಲಕ ಇಂಧನ ಉಳಿತಾಯ ಹಾಗೂ ಪರಿಸರ ಸುರಕ್ಷತೆಗೆ ಸಹಕಾರಿಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಪ್ರಯಾಣಿಕ ಮಂಜುನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ಪಾಲಿಸಿ BMTC ಬಸ್ ನಲ್ಲಿ ಪ್ರಯಾಣಿಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮತ್ತೊಬ್ಬ ಪ್ರಯಾಣಿಕರು ತಮ್ಮ ಬೈಕ್ ಬಿಟ್ಟು ಮೆಟ್ರೋದಲ್ಲಿ ಕಚೇರಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಸುವುದರಿಂದ ವೈಯಕ್ತಿಕವಾಗಿ ಸಮಯ ಮತ್ತು ಹಣ ಉಳಿತಾಯವಾಗುತ್ತಿದ್ದು ಇಂಧನ ಬಳಕೆ ಕಡಿಮೆಯಾಗುವ ಮೂಲಕ ಪರಿಸರ ಸುರಕ್ಷತೆಗೆ ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯವು ವ್ಯಕ್ತವಾಗುತ್ತಿದೆ.
ಅಲ್ಲದೆ, ದೇಶದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಇಂದು ಸಹಕಾರಿ ಯಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಹಾಗೂ ಇಂಧನದ ಬೆಲೆ ಏರಿಕೆಗಳನ್ನು ಗಮನಿಸಿದಾಗ, ಸಾರ್ವಜನಿಕ ಸಾರಿಗೆ ಬಳಕೆಯ ಈ ಸಲಹೆ ದೇಶದ ಆರ್ಥಿಕತೆಗೆ ಅತ್ಯಂತ ಮಹತ್ವ ಅದು ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿಯವರ ಸಲಹೆಗಳು ದೇಶ ಮತ್ತು ಜನರ ಹಿತಕ್ಕಾಗಿಯೇ ಇರುತ್ತವೆ ಎಂಬ ವಿಶ್ವಾಸವನ್ನು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಾರಿಗೆ (ಪಬ್ಲಿಕ್ ಟ್ರಾನ್ಸ್ಪೋರ್ಟ್) ಬಳಕೆ ಇಂಧನ ಉಳಿತಾಯಕ್ಕೆ ಅತ್ಯುತ್ತಮ ಮಾರ್ಗವಾಗಿದ್ದು, ಪರಿಸರ ಸುರಕ್ಷತೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
Also Read:
ಇರಾನ್ - ಚೀನಾ ತೈಲ ವ್ಯವಹಾರ ಬಯಲಿಗೆ: 12 ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಘೋಷಣೆ