<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಇರಾನ್ - ಚೀನಾ ತೈಲ ವ್ಯವಹಾರ ಬಯಲಿಗೆ: 12 ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಘೋಷಣೆ

ಇರಾನ್ - ಚೀನಾ ತೈಲ ವ್ಯವಹಾರ ಬಯಲಿಗೆ: 12 ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಘೋಷಣೆ
Summary: The US government has taken a significant step ahead of President Donald Trump's visit to China. Through this move, the US has accused some entities and individuals of allowing illegal or unauthorized income to flow through.

belagavi news :

ಅಮೇರಿಕಾ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಅವರ ಚೀನಾ ಬೇಟಿಗೆ ಸಿದ್ಧತೆ ನಡೆಯುತ್ತಿರುವ ಮಧ್ಯೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಇರಾನ್ ನಿಂದ ಚೀನಾಕೆ ತೈಲ ಮಾರಾಟ ಮತ್ತು ಸಾಗಾಣಿಗೆ ನೆರವಾಗುತ್ತಿದ್ದ 12 ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಅಮೆರಿಕ ಸರ್ಕಾರ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಅಮೆರಿಕ ಖಜಾನೆ ಇಲಾಖೆಯೂ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ ತನ್ನ ತೈಲ ಮಾರಾಟ ಚಟುವಟಿಕೆಗಳನ್ನು ಮರೆಮಾಚಿ, ತನಿಖೆಗೆ ಅದರಿಂದ ದೊರೆಯುತ್ತಿರುವಾಗ ಆದಾಯವನ್ನು ಇರಾನ್ ಆಡಳಿತಕ್ಕೆ ಒದಗಿಸಲು ಈ ಕಂಪನಿಗಳ ಜಾಲವನ್ನು ಬಳಸುತ್ತಿದೆ ಎಂದು ಆರೋಪಿಸಿದೆ.

ಹೊಸ ನಿರ್ಬಂಧಗಳ ಪಟ್ಟಿಯಲ್ಲಿ ಇರಾನ್ ಮೂಲದ ಮೂವರು ವ್ಯಕ್ತಿಗಳು ಹಾಗೂ ಹಾಂಕಾಂಗ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿರುವ 9 ಕಂಪನಿಗಳು ಸೇರಿವೆ. ಈ ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಅಮೆರಿಕಾದ ಯಾವುದೇ ಸಂಸ್ಥೆಗಳು ಅಥವಾ ನಾಗರಿಕರು ವ್ಯವಹಾರ ನಡೆಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಖಜಾನೆ ಇಲಾಖೆ ಸ್ಪಷ್ಟಪಡಿಸಿದೆ.

ಅನೇಕವು ಟ್ರೆಹಾನ್ ಸರ್ಕಾರ ಮತ್ತು ಇರಾನಿನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಹೊಸ ನಿರ್ಬಂಧಗಳನ್ನು ಇನ್ನಷ್ಟು ಬಿಗಿ ಗೊಳಿಸಿದೆ. ಈ ಕ್ರಮವು ಇರಾನಿನ ಶಸ್ತ್ರಾಸ್ತ್ರ ಕಾರ್ಯಕ್ರಮಗಳು, ಭಯೋತ್ಪಾದಕ ಪ್ರಾಕ್ಸಿ ಗಳು ಹಾಗೂ ಪರಮಾಣು ಯೋಜನೆಗಳಿಗೆ ಹಣಕಾಸು ಹರಿವನ್ನು ಕಡಿತಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಅಮೇರಿಕಾ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಹೇಳಿರುವಂತೆ, ಇರಾನ್ ತನ್ನ ಸೇವಾ ಸಾಮರ್ಥ್ಯವನ್ನು ಮರು ಸಂಘಟಿಸಲು ಹಾಗೂ ವಿವಿಧ ಚಟುವಟಿಕೆಗಳಿಗೆ ಹಣ ಒದಗಿಸಲು ಅಕ್ರಮ ಮಾರ್ಗದರ್ಶನಗಳನ್ನು ಒದಗಿಸುತ್ತಿದೆ. ಎಂಬ ಕಾರಣದಿಂದ ಈ ಆರ್ಥಿಕ ಒತ್ತಡ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇರಾನ್ ಬಹುಪಾಲು ತೈಲ ರಫ್ತು ಏಷ್ಯಾಕೆ ಸಾಗುತ್ತಿದ್ದು ಚೀನಾದ ಅತಿ ದೊಡ್ಡ ಆಮದುದಾರರ ರಾಷ್ಟ್ರವಾಗಿದೆ. ಬೀಜಿಂಗ್ ಈಗ ಪ್ರಯಾಣುನ ಪ್ರಮುಖ ವ್ಯಾಪಾರ ಪಾಲುದಾರವಾಗಿಯೂ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ತೈಲ ರಾಜಕೀಯದಲ್ಲಿ ಚೀನಾದ ಪಾತ್ರವು ಗಮನ ಸೆಳೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಅಮೆರಿಕ ಅಧ್ಯಕ್ಷರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಮಾತ್ರದ ಮಾತುಕತೆಗಾಗಿ ಬೀಜಿಂಗ್ ಗೆ ಭೇಟಿ ನೀಡಲಿದ್ದಾರೆ. ಈ ಮಹತ್ವದ ಬೇಟಿಗೆ ಮುನ್ನವೇ ಅಮೆರಿಕ ಈ ನಿರ್ಬಂಧ ಕ್ರಮಕೈಗೊಂಡಿರುವುದು ಅಂತರಾಷ್ಟ್ರೀಯ ರಾಜಕೀಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಸಂಘರ್ಷವೂ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಅಸ್ಥಿರತೆಯನ್ನುಂಟುಮಾಡಿದೆ.

ಈ ಪರಿಸ್ಥಿತಿಯಲ್ಲಿ ಪ್ರಧಾನ ಪ್ರಮುಖ ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವುದು ತೈಲ ಮತ್ತು ಅನಿಲ ಸಾಗಾಣಿಗೆ ಅಡ್ಡಿಪಡಿಸುವಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮಾರ್ಗದ ಮೂಲಕ ವಿಶ್ವದ ಒಟ್ಟು ತೈಲ ಮತ್ತು ಅನಿಲದ ಸುಮಾರು ಐದನೆಯ ಭಾಗವು ಸಾಗುತ್ತದೆ. ಜಾಗತಿಕ ಪೂರೈಕೆ ಕೊರತೆಯನ್ನು ಸಾಗಿಸುವ ಉದ್ದೇಶದಿಂದ ಅಮೆರಿಕವು ಈ ವರ್ಷದ ಮಾರ್ಚಿನಲ್ಲಿ ಇರಾನ್ ತೈಲದ ಮೇಲಿನ ಕೆಲವು ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿತು. ಆದರೆ ನಂತರದ ತಿಂಗಳುಗಳಲ್ಲಿ ಮತ್ತೆ ನೀತಿಯನ್ನು ಬದಲಿಸಿ ನಿರ್ಬಂಧಗಳನ್ನು ಬಿಗಿಗೊಳಿಸಿದೆ.

Also Read:

717 ಮಧ್ಯದಂಗಡಿಗಳು ಮುಚ್ಚಲು ಆದೇಶ: ಸಿಎಂ ವಿಜಯ್ ಕಠಿಣ ಕ್ರಮ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online