<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

717 ಮಧ್ಯದಂಗಡಿಗಳು ಮುಚ್ಚಲು ಆದೇಶ: ಸಿಎಂ ವಿಜಯ್ ಕಠಿಣ ಕ್ರಮ

717 ಮಧ್ಯದಂಗಡಿಗಳು ಮುಚ್ಚಲು ಆದೇಶ: ಸಿಎಂ ವಿಜಯ್ ಕಠಿಣ ಕ್ರಮ
Summary: CM Vijay has ordered closure of 717 hawkers near temples, bus stands and schools. This important step has been taken keeping in mind the safety of public places and the social environment.

BELAGAVI NEWS :

ಚೆನ್ನೈ (ತಮಿಳುನಾಡು): ವಿಜಯ್ ಅವರು ಮುಖ್ಯಮಂತ್ರಿ ಸ್ಥಾನ ಸ್ವೀಕರಿಸಿದ ನಂತರ ಸಾರ್ವಜನಿಕ ಕಲ್ಯಾಣದ ಹಲವು ಕ್ರಮಗಳಿಗೆ ಚಾಲನೆ ನೀಡುತ್ತಿದ್ದು, ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಇರುವ 717 ಸರ್ಕಾರಿ ಸ್ವಾಮ್ಯದ ಟಿಎಎಸ್ ಎಂಎಸಿ ಮಧ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಂದಿನ ಎರಡು ವಾರಗಳೊಳಗೆ ಮುಚ್ಚುವಂತೆ ಆದೇಶಿಸಿದ್ದಾರೆ.

ಈ ಕುರಿತು ಸರ್ಕಾರದಿಂದ ಅಧಿಕೃತ ಪ್ರತಿಕ ಪ್ರಕಟಣೆ ಹೊರಡಿಸಲಾಗಿದ್ದು, ಸಾರ್ವಜನಿಕ ಹಿತ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಪೂಜಾ ಸ್ಥಳಗಳು, ಶಾಲೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪ ಮಧ್ಯದಂಗಡಿಗಳಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸದ್ಯ ರಾಜ್ಯದಲ್ಲಿ ಒಟ್ಟು 4,765 ಚಿಲ್ಲರೆ ಮಧ್ಯದ ಅಂಗಡಿಗಳನ್ನು ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ( TASMAC) ನಿರ್ವಹಿಸುತ್ತಿದೆ. ಇವುಗಳಲ್ಲಿ ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಅಂಗಡಿಗಳನ್ನು ಗುರುತಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಅದರಂತೆ 717 ಚಿಲ್ಲರೆ ಮಧ್ಯದ ಅಂಗಡಿಗಳು ಗುರುತಿಸಲ್ಪಟ್ಟಿವೆ.

Sponsored

ಗುರುತಿಸಲಾದ 717 ಅಂಗಡಿಗಳಲ್ಲಿ ಪೂಜಾ ಸ್ಥಳಗಳ ಸಮೀಪ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ 186 ಅಂಗಡಿಗಳು ಮತ್ತು ಬಸ್ ನಿಲ್ದಾಣಗಳ ಸಮೀಪ 255 ಅಂಗಡಿಗಳು ಸೇರಿವೆ.

ತಮಿಳುನಾಡು ಸರ್ಕಾರಿ TASMAC ಮಧ್ಯದಂಗಡಿಗಳಿಂದ ಮಹತ್ವದ ಆದಾಯ ಬರುತ್ತಿದ್ದರು, ಸಾರ್ವಜನಿಕ ಹಿತ ಶಕ್ತಿ ಮತ್ತು ಸಾಮಾಜಿಕ ಒತ್ತಡದ ಹಿನ್ನೆಲೆಯಲ್ಲಿ ಈ ಅಂಗಡಿಗಳನ್ನು ಮುಚ್ಚುವಂತೆ ಪಕ್ಷಾತೀತವಾಗಿ ಹಲವು ಬೇಡಿಕೆಗಳು ವ್ಯಕ್ತವಾಗುತ್ತಿವೆ.

ರಾಜ್ಯದಲ್ಲಿನ ತಮಿಳುನಾಡು ರಾಜ ಮಾರುಕಟ್ಟೆ ನಿಗಮ ಲಿಮಿಟೆಡ್ (ಟಿಎಎಸ್ ಎಂಎಸಿ) ಕೂಡ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿದೆ. ಕಳೆದ ವರ್ಷ ಟಿಎಎಸ್ ಎಂಎಸಿ ಹಾಗೂ ಸಂಬಂಧಿತ ಸಂಸ್ಥೆಗಳ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡ್ಡಿಯಲ್ಲಿ ತನಿಖಾ ಸಂಸ್ಥೆ ರಾಜ್ಯದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತ್ತು.

ಈ ನಡುವೆ ವಿಜಯ ನೇತೃತ್ವದ ತಮಿಗಳ ವೆಟ್ರಿ ಕಳಗಂ (TVK) ತನ್ನ ಪ್ರಣಾಳಿಕೆಯಲ್ಲಿ ಮಾದಕ ದ್ರವ್ಯ ಮುಕ್ತ ತಮಿಳುನಾಡು ನಿರ್ಮಿಸುವ ಭರವಸೆಯನ್ನು ನೀಡಿದೆ.

Sponsored

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವಿಜಯ್, ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಿದ್ದು, ಅವರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ' ಸಿಂಗಪ್ಪೆನ್ ವಿಶೇಷ ಕಾರ್ಯಪಡೆ' ಯನ್ನು ರಚಿಸಿದ್ದಾರೆ.

Also Read:

ಅಸ್ಸಾಂನಲ್ಲಿ ಇಂದು ಹಿಮಂತ್ ಬಿಸ್ವಾ ಶರ್ಮಾ ಪ್ರಮಾಣವಚನ : ಬಿಜೆಪಿ ನಾಯಕರ ಮಹಾಸಂಗಮ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online