<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಹಾರ್ಮುಜ್ ಜಲಸಂಧಿಯಲ್ಲಿ ಸಂಘರ್ಷ ತೀವ್ರ; ಇರಾನ್ ಕ್ರಮಕ್ಕೆ ಅಮೆರಿಕದ ಭೀಕರ ದಾಳಿ

ಹಾರ್ಮುಜ್ ಜಲಸಂಧಿಯಲ್ಲಿ ಸಂಘರ್ಷ ತೀವ್ರ; ಇರಾನ್ ಕ್ರಮಕ್ಕೆ ಅಮೆರಿಕದ ಭೀಕರ ದಾಳಿ
Summary: Tensions in the Middle East have further increased due to attacks on ships in the Strait of Hormuz. In response to this development, the US has launched a major military operation, creating an atmosphere of anxiety in the region.

elagavi News :

ಟೆಹ್ರಾನ್ ( ಇರಾನ್): ಹಾರ್ಮುಜ್ ಜಲಸಂಧಿಯಲ್ಲಿ ಸೋಮವಾರ ರಾತ್ರಿ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ, ಬುಧವಾರ ಮುಂಜಾನೆ ಅಮೆರಿಕ ಸೇನೆ ಇರಾನ್ ನ ಹಲವು ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್ ನಲ್ಲಿರುವ ಗುರಿಗಳ ಮೇಲೆ ಇರಾನ್ ದಾಳಿ ನಡೆಸುವುದಾಗಿ ವರದಿಗಳು ತಿಳಿಸಿವೆ.

ಅಮೆರಿಕದ ದಾಳಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಇರಾನ್, ಈ ಕ್ರಮಕ್ಕೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆಯಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಮಧ್ಯಪ್ರಾಚ್ಯದಲ್ಲಿ ಹೊಸ ಸಂಘರ್ಷ ಭುಗಿಲೇಳುವ ಆತಂಕ ವ್ಯಕ್ತವಾಗಿದೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಇರಾನ್ ನ ಶಸ್ತ್ರಾಸ್ತ್ರ ಉಡಾವಣಾ ಕೇಂದ್ರಗಳು, ವಾಯು ರಕ್ಷಣಾ ನೆಲೆಗಳು ಸೇರಿದಂತೆ ಹಲವು ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಈ ಕಾರ್ಯಚರಣೆ ಹಲವು ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕದ 5ನೇ ನೌಕಾಪಡೆಯ ನೆಲೆಯಾಗಿರುವ ಬಹ್ರೇನ್ ಹಾಗೂ ಅಮೆರಿಕದ ಸೇನಾ ನೆಲೆಗಳು ಹೊಂದಿರುವ ಕುವೈತ್ ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಎಚ್ಚರಿಕೆ ಘೋಷಿಸಲಾಗಿದೆ.

ಈ ದಾಳಿಯನ್ನು ಖಂಡಿಸಿರುವ ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಉನ್ನತ ಸಮಾಲೋಚಕ ಮಹಮ್ಮದ್ ಬಘರ್ ಗಾಲಿಬಾಫ್, ಅಮೆರಿಕದ ಕ್ರಮವು ಉಭಯ ದೇಶಗಳ ನಡುವಿನ ಪ್ರಮುಖ ತಿಳುವಳಿಕೆ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಬೆದರಿಕೆ ಮತ್ತು ಒತ್ತಡದ ರಾಜಕೀಯದಿಂದ ಯಾವುದೇ ಫಲ ಸಿಗುವುದಿಲ್ಲ. ಇರಾನ್ ಇಂತಹ ಕ್ರಮಗಳಿಗೆ ಮಣಿಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ದಾಳಿಯ ಬಳಿಕ ಬಹ್ರೇನ್ ಸೈರನ್ ಗಳು ಮೊಳಗಿದ್ದು, ಪರಿಸ್ಥಿತಿ ಕುರಿತು ಆ ದೇಶದ ಆಂತರಿಕ ಸಚಿವಾಲಯ ಎಕ್ಸ್ ನಲ್ಲಿ ಮಾಹಿತಿ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಾಗರಿಕರು ಹಾಗೂ ವಿದೇಶಿ ನಿವಾಸಿಗಳು ಸಮೀಪದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ, ಅಮೆರಿಕದ ದಾಳಿಯ ಹಿನ್ನೆಲೆಯಲ್ಲಿ ಕುವೈತ್ ಕೂಡ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಕುವೈತ್ ವಾಯು ರಕ್ಷಣಾ ಪಡೆಗಳು ಸಂಭವನೀಯ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ವೈಮಾನಿಕ ಬೆದರಿಕೆಯನ್ನು ಎದುರಿಸಲು ರಕ್ಷಣಾ ವ್ಯವಸ್ಥೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಮೇಲು ಅದರ ಪರಿಣಾಮ ಕಾಣಿಸಿಕೊಳ್ಳತೊಡಗಿದೆ. ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಹಾಗೂ ಅಮೆರಿಕ - ಇರಾನ್ ನಡುವಿನ ಸೇನಾ ಕ್ರಮಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 2ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಜಾಗತಿಕ ತೈಲ ಪೂರೈಕೆ ಮೇಲಿನ ಆಂತರಿಕದಿಂದ ಮುಂದಿನ ದಿನಗಳಲ್ಲಿ ಇಂಧನ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಳಿತ ಉಂಟಾಗುವ ಸಾಧ್ಯತೆ ಇದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online