<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

'ಟಾಕ್ಸಿಕ್' ಬಿಡುಗಡೆ ಬಗ್ಗೆ ಗೊಂದಲ:ಬಾಕ್ಸ್ ಆಫೀಸ್ ಪಂಡಿತನ ಹೇಳಿಕೆ ತಪ್ಪು ಎಂದು ಸ್ಪಷ್ಟನೆ

'ಟಾಕ್ಸಿಕ್' ಬಿಡುಗಡೆ ಬಗ್ಗೆ ಗೊಂದಲ:ಬಾಕ್ಸ್ ಆಫೀಸ್ ಪಂಡಿತನ ಹೇಳಿಕೆ ತಪ್ಪು ಎಂದು ಸ್ಪಷ್ಟನೆ
Summary: A statement made by a box office pundit regarding the reshoot of the movie 'Toxic' and its release next year has now caused controversy. This information was later clarified to be false, increasing the confusion related to the film.

BELAGAVI NEWS :

ಯಶ್ ಅಭಿನಯದ 'ಟ್ಯಾಕ್ಸಿಕ್' ಸಿನಿಮಾ ಮುಂದಕ್ಕೆ ಹೋಗಿದೆ, ರೀಶೂಟ್ ನಡೆಯುತ್ತಿದೆ ಎಂಬ ಕಾಲಿವುಡ್ ವದಂತಿಗಳಿಗೆ ನಿರ್ಮಾಣ ಸಂಸ್ಥೆ ನೀಡಿದೆ.

'ಟಾಕ್ಸಿಕ್' ಸಿನಿಮಾ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಿದ್ದ ಎಂದು ಹೇಳಲಾಗುತ್ತಿದೆ.ಕೆಲವರು ರೀಶೂಟ್ ನಡೆಯುತ್ತಿದೆ ಹಾಗೂ ರಿಲೀಸ್ ಮುಂದೂಡಲಾಗಿದೆ ಎಂದು ಹೇಳಿದರು,ಈ ಎಲ್ಲಾ ವರದಿಗಳನ್ನು ನಿರ್ಮಾಪಕರು ನಿರಾಕರಿಸಿದ್ದಾರೆ.ಚಿತ್ರವನ್ನು ವಿಶ್ವಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ಸೂಕ್ತ ಯೋಜನೆಯೊಂದಿಗೆ ಕೆಲಸ ಮುಂದುವರೆದಿದೆ ಎಂದು ತಂಡ ತಿಳಿಸಿದೆ. ಅದಕ್ಕಾಗಿ ಸಮಯ ತೆಗೆದುಕೊಳ್ಳಲಾಗುತ್ತಿದ್ದು,ಇದು ಸಾಮಾನ್ಯ ಉತ್ಪಾದನಾ ಪ್ರಕ್ರಿಯೆ ಭಾಗವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದೇ ವೇಳೆ,ವದಂತಿಗಳನ್ನು ಹಬ್ಬಿಸಿದ ಕೆಲವರು ಬಳಿಕ ತಮ್ಮ ಹೇಳಿಕೆಗಳನ್ನು ಹಿಂದಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.'ಟಾಕ್ಸಿಕ್'ಸಿನಿಮಾದ ಬಗ್ಗೆ ತಪ್ಪು ಮಾಹಿತಿ ಹರಡಬಾರದು ಎಂದು ನಿರ್ಮಾಣ ತಂಡ ಮನವಿ ಮಾಡಿದೆ.ಕಾಲಿವುಡ್ ಸಿನಿಮಾ ಬಗ್ಗೆ ಅಪ್ಡೇಟ್ ಕೊಡುವ 'ವಲೈ ಪೆಚು' ಅವರು 'ಟಾಕ್ಸಿಕ್' ಮುಂದಕ್ಕೆ ಹೋಗಲಿದೆ ಎಂದು ಹೇಳಿದ್ದರಂತೆ.ಈ ವಿಷಯವನ್ನು ಆದರಿಸಿ, ಕಾಲಿವುಡ್ ಬಾಕ್ಸ್ ಆಫೀಸ್ ಬಗ್ಗೆ ಮಾಹಿತಿ ನೀಡುವ ಕ್ರಿಸ್ಟೋಫರ್ ಕನಗರಾಜ್ ಅವರು ಟ್ರೀಟ್ ಮಾಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ"ಕನಗರಾಜ್ ಟ್ವೀಟ್ ಮಾಡಿದ್ದಾರೆ" ಎಂಬ ರೀತಿಯಲ್ಲಿ ಒಂದು ಸುದ್ದಿ ವೈರಲ್ ಆಗಿತ್ತು.ಅದರಲ್ಲಿ ಕನಗರಾಜ್ ಅವರು,ನಟ ಯಶ್ ಅವರಿಗೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಅಸಮಾಧಾನ ಇದೆ ಎಂಬ ಕಾರಣದಿಂದ ನೂರು ದಿನಗಳ ರೀಶೂಟ್ ಮಾಡಲು ಯೋಜನೆ ಇದೆ ಹಾಗೂ ಸಿನಿಮಾ 2027ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಮಾಹಿತಿ "ವಲೈ ಪೆಚು" ಹೇಳಿಕೆ ಆಧಾರಿತ ಎಂದು ಕೂಡ ಹೇಳಲಾಗಿತ್ತು.

ಆದರೆ ನಂತರ ಈ ಸುದ್ದಿಯನ್ನು ನಿರ್ಮಾಣ ಸಂಸ್ಥೆ ಮತ್ತು ಸಂಬಂಧಿತ ಮೂಲಗಳು ಸ್ಪಷ್ಟವಾಗಿ ತಳ್ಳಿ ಹಾಕಿವೆ. "ವಲೈ ಪೆಚು" ಹಬ್ಬಿಸಿರುವ ಸುದ್ದಿ ಸುಳ್ಳು" ಎಂದು ಅಧಿಕೃತವಾಗಿ ತಿಳಿಸಲಾಗಿದೆ.ಇದರ ಮೂಲಕ ಈ ವದಂತಿಗೆ ಅಂತ್ಯವಾಗಿದೆ.

ಈ ನಡುವೆ,ಇದು ಸಿನಿಮಾದ ಸುತ್ತ ಜನಪ್ರಿಯತೆ ಅಥವಾ ಕುತೂಹಲ ಹೆಚ್ಚಿಸಲು ಉದ್ದೇಶಿತವಾದ ತಪ್ಪು ಮಾಹಿತಿ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮಿಳು ಚಿತ್ರರಂಗ ಮತ್ತು ಕನ್ನಡ ಚಿತ್ರರಂಗದ ಹೋಲಿಕೆಯನ್ನು ಮಾಡುತ್ತಾ ವಿಭಿನ್ನ ಪಾತ್ರಗಳನ್ನು ಅಭಿವ್ಯಕ್ತ ವ್ಯಕ್ತಪಡಿಸುತ್ತಿದ್ದಾರೆ.

ಅವರ ಮಾತು ಪ್ರಕಾರ,ತಮಿಳುನಾಡಿನಲ್ಲಿ ಇತ್ತೀಚಿಗೆ ಯಾವುದೇ ದೊಡ್ಡ ಮಟ್ಟದ ಪ್ಲಾನ್ ಇಂಡಿಯಾ ಸಿನಿಮಾ ನಿರೀಕ್ಷಿಸರ ರೀತಿಯಲ್ಲಿ ಸಾವಿರ ಕೋಟಿ ಕ್ಲಬ್ ಗೆ ಹೋಗಿಲ್ಲ ಎಂಬುದನ್ನು ಉಲ್ಲೇಖಿಸಿ,ಕನ್ನಡ ಸಿನಿಮಾಗಳ ಬೆಳವಣಿಗೆಯನ್ನು ಕೆಲವರು ಗಮನಾರ್ಹವಾಗಿ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ,ಕನ್ನಡ ಸಿನಿಮಾ ಒಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಯಶಸ್ಸು ಸಾಧಿಸುತ್ತಿರುವುದನ್ನು ಕೆಲವರು ಮೆಚ್ಚುಗೆಯೊಂದಿಗೆ ನೋಡುತ್ತಿದ್ದರೆ, ಮತ್ತೊಂದೆಡೆ ಇಂತಹ ಯಶಸ್ಸನ್ನು ಸುತ್ತಮುತ್ತಲಿನ ಚಿತ್ರರಂಗಗಳು ಹೇಗೆ ಸ್ವೀಕರಿಸುತ್ತಿವೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಒಟ್ಟಿನಲ್ಲಿ,ಇದು ಸ್ಪರ್ಧೆ,ಅಭಿಪ್ರಾಯಗಳು ಮತ್ತು ಸೋಶಿಯಲ್ ಮೀಡಿಯಾ ಚರ್ಚೆಗಳ ನಡುವೆ ರೂಪುಗೊಂಡಿರುವ ವಿಚಾರವಾಗಿದ್ದು,ಅಧಿಕೃತ ಹೇಳಿಕೆಗಳಿಗಿಂತ ಹೆಚ್ಚು ಜನರ ವೈಯಕ್ತಿಕ ಅಭಿಪ್ರಾಯಗಳಾಗಿ ಕಾಣುತ್ತಿದೆ.

Also Read:

ಸರ್ಕಾರಿ ಯೋಜನೆಗಳ ಅನುಷ್ಠಾನ ಪರಿಶೀಲನೆ :ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online