<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಅಧಿಕಾರ ಖಚಿತ : ಡಿಕೆ ಶಿವಕುಮಾರ್ ಭವಿಷ್ಯ

ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಅಧಿಕಾರ ಖಚಿತ : ಡಿಕೆ ಶಿವಕುಮಾರ್ ಭವಿಷ್ಯ
Summary: DCM DK Shivakumar has made a statement of hope regarding the state politics in 2028. He has expressed confidence that the Congress party will come back to power in the next assembly elections and the government will be formed under our leadership.

belagavi news :

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು 2028ರ ವಿಧಾನಸಭಾ ಚುನಾವಣೆಯ ಕುರಿತು ಭರವಸೆ ಹೇಳಿಕೆ ನೀಡಿದ್ದಾರೆ. "2028ಕ್ಕೆ ರಾಜ್ಯದಲ್ಲಿ ಇದೇ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ"ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಅಮಿತ್ ಶಾ ಅವರು ಬಿಜೆಪಿಗೆ 122 ಸೀಟುಗಳು ಬರುತ್ತವೆ ಎಂದು ಹೇಳಿದ್ದನ್ನು ಉಲ್ಲೇಖಿಸಿ, ತಾವು ಕೂಡ ಹಿಂದೆ ಕಾಂಗ್ರೆಸ್ ಗೆ 136 ಸೀಟುಗಳು ಬರುತ್ತವೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ."ಈಗಲೂ ಹೇಳುತ್ತೇನೆ, ಬರೆದುಕೊಳ್ಳಿ, 2028ಕ್ಕೆ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ"ಎಂದು ಡಿಕೆಶಿ ಬಲವಾಗಿ ಹೇಳಿದ್ದಾರೆ.

ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, 2028 ರ ಚುನಾವಣೆಯ ಕುರಿತ ಚರ್ಚೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

Sponsored

ನೀವು ದೆಹಲಿ ಪ್ರವಾಸ ಮಾಡುತ್ತೀರಾ ಎಂಬ ಪ್ರಶ್ನೆಗೆ,'ನಮ್ಮನ್ನು ಕರೆದರೆ ಹೋಗುತ್ತೇವೆ. ಸುರಜಿವಾಲ ಅವರು ನಿಮಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಅವರು ದೆಹಲಿಗೆ ಬನ್ನಿ ಎಂದರೆ ನಾನು ಹೋಗುತ್ತೇನೆ. ಇಲ್ಲವಾದರೆ ಇಲ್ಲೇ ಉಳಿಯುತ್ತೇನೆ. ಪಕ್ಷ ಕರೆದಾಗ ನಾವು ಹೋಗಲೇಬೇಕಾಗುತ್ತದೆ"ಎಂದು ಉತ್ತರಿಸಿದರು.

ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಯ ಲಾಭ ಸರಿಯಾಗಿ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಕೆಲವು ಫಲಾನುಭವಿಗಳು ಮೃತಪಟ್ಟಿರುವುದು ಹಾಗೂ ಕೆಳಗಡೆ ತಪ್ಪು ದಾಖಲೆಗಳು ಮತ್ತು ಬೇರೆಯವರ ದೂರವಾಣಿ ಸಂಖ್ಯೆಗಳ ಬಳಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ಲೋಪಗಳಿರುವ ಸಾಧ್ಯತೆ ವ್ಯಕ್ತವಾಗಿದೆ.

ಸುಮಾರು 100 ಕೋಟಿ ಎಷ್ಟು ಹಣ ಅನಾರರಿಗೆ ಅಥವಾ ಬೇರೆಯವರಿಗೆ ಹೋಗಿರುವ ಬಗ್ಗೆ ಮಾಹಿತಿ ಇದು, ಇದರ ದುರ್ಬಳಕೆ ತಡೆಯಲು ಸಮಗ್ರ ಪರಿಶೀಲನೆ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ನಿಖರ ದಾಖಲೆ ಸಂಗ್ರಹಿಸುವುದು ಮತ್ತು ಪ್ರತಿ ತಾಲೂಕಿನಲ್ಲಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಗಳ ಲಾಭ ನಿಜವಾದ ಅನುಭವಿಗಳಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ಕಳೆದ ಎರಡು ತಿಂಗಳಿನಿಂದ ತೊಂದರೆ ಆಗುತ್ತಿರುವ ಬಗ್ಗೆ ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲ, ತಮ್ಮ ಸರ್ಕಾರ ಇರುವ ಇತರ ರಾಜ್ಯಗಳಲ್ಲಿಯೂ ಇದೆ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

Sponsored

ಇದೇ ಸಂದರ್ಭದಲ್ಲಿ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಚ್ ಸಿ ಮಾದೇವಪ್ಪ ಅವರು,"ಪದ್ಯಕ್ಕೆ ಸಿಎಂ ಚೇರ್ ನಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ. ಸಿದ್ದರಾಮಯ್ಯ ಎದ್ದಿಲ್ಲ, ಕುಳಿತಿದ್ದಾರೆ, ಕುರ್ಚಿ ಖಾಲಿ ಇಲ್ಲ" ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯ ಒಳ್ಳೆಯದಲಿ ಗಮನ ಸೆಳೆದಿದ್ದು, ನಾಯಕತ್ವದ ಕುರಿತು ನಡೆಯುತ್ತಿರುವ ಚರ್ಚೆಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

Also Read:

ಪಾರ್ಕ್ ನಲ್ಲಿ ಒಂದೊಂದಾಗಿ ಬೀಳುತ್ತಿರುವ ಉಗ್ರರು: ಮಿಸ್ಟೀರಿಯಸ್ ಕಿಲ್ಲರ್ ಕುರಿತು ಚರ್ಚೆ ಜೋರಾಗಿದೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online