Belagavi News:
ಮುಂಬೈ: ಜೂನ್ 21ರಂದು ನಡೆಯಲಿರುವ NEET - UG ಮರುಪರೀಕ್ಷೆಯಲ್ಲಿ ಭಾಗವಹಿಸಲು ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 18 ವರ್ಷದ ಯುವಕನಿಗೆ ಮುಂಬೈನ ವಿಶೇಷ ಪೋಕ್ಸೋ ನ್ಯಾಯಾಲಯ 4 ದಿನಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಾಧೀಶ ಎಸ್. ಆರ್. ಶರ್ಮಾ ಅವರು ಈ ಆದೇಶ ನೀಡಿದ್ದು, ಆರೋಪಿ ಪ್ರಸ್ತುತ ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಸಂತ್ರಸ್ತೆ ಅಥವಾ ಆಕೆಯ ಕುಟುಂಬದವರಿಗೆ ಯಾವುದೇ ರೀತಿಯ ಬೆದರಿಕೆ, ಕಿರುಕುಳ ಅಥವಾ ಮಾನಹಾನಿ ಮಾಡಬಾರದು ಎಂಬ ಕಟ್ಟು ನಿಟ್ಟಿನ ಷರತ್ತಿನಡಿ ಜಾಮೀನು ನೀಡಲಾಗಿದೆ. ವಿಶೇಷವಾಗಿ, ಸಂತ್ರಸ್ತೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸದೀರುವುದನ್ನು ನ್ಯಾಯಾಲಯ ಪರಿಗಣಿಸಿದೆ.
ಜೂನ್ 18 ರಿಂದ 21ರವರೆಗೆ ನಾಲ್ಕು ದಿನಗಳ ಜಾಮೀನು ನೀಡಲಾಗಿದ್ದು, ₹50,000 ಶೂರಿಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಮರುಪರೀಕ್ಷೆ ಪೂರ್ಣಗೊಂಡ ಬಳಿಕ, ಜೂನ್ 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಮತ್ತೆ ಜೈಲಿಗೆ ಶರಣಾಗುವಂತೆ ನ್ಯಾಯಾಲಯ ಸೂಚಿಸಿದೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅತ್ಯಾಚಾರ ಆರೋಪ ಹಾಗೂ ಪೋಕ್ಸೋ ಕಾಯ್ದೆ -2012ರ ವಿವಿಧ ವಿಧಿಗಳಡಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಈ ಮಧ್ಯಂತರ ಪರಿಹಾರ ನೀಡಿದೆ.
ಜೂನ್ 21 ರಂದು ನಡೆಯಲಿರುವ NEET- UG ಮರುಪರೀಕ್ಷೆಗೆ ಹಾಜರಾಗಲು ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 18 ವರ್ಷದ ಯುವಕನಿಗೆ ಮುಂಬೈನಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 4 ದಿನಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರವಾಗಿ ವಾದಿಸಿದ ವಕೀಲ ಕಪಿಲ್ ವಿಶ್ವಾಸ್ ಜೋಡ್ಜ್ , " ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಉದ್ದೇಶ ಶಿಕ್ಷೆ ಮಾತ್ರವಲ್ಲ, ಆರೋಪಿಗಳ ಪುನರ್ವಸತಿಗೂ ಅವಕಾಶ ಕಲ್ಪಿಸುವುದಾಗಿದೆ. ಬಂಧಿತ ಯುವಕ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು" ಎಂದು ನ್ಯಾಯಾಲಯ ಗಮನ ಸೆಳೆದರು.
ಪ್ರಕರಣದ ವಿಚಾರಣೆ ವೇಳೆ ಆರೋಪಿಯ ಪ್ರೌಢಶಾಲಾ ಪರೀಕ್ಷಾ ಪ್ರಮಾಣಪತ್ರ ಹಾಗೂ NEET ಮರುಪರೀಕ್ಷೆಯ ಪ್ರವೇಶ ಪತ್ರವನ್ನು ಪರಿಶೀಲಿಸಿದ ನ್ಯಾಯಾಲಯ, ತಾತ್ಕಾಲಿಕ ಜಾಮೀನು ನೀಡಲು ಸಮರ್ಪಕ ಆಧಾರಗಳಿವೆ ಎಂದು ಅಭಿಪ್ರಾಯಪಟ್ಟಿತು.
ಆದರೆ, ಜಾಮೀನು ಅವಧಿಯಲ್ಲಿ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ, ಆರೋಪಿ ಯಾವುದೇ ಸಂದರ್ಭದಲ್ಲೂ ಸಂತ್ರಸ್ತೆಯನ್ನು ಸಂಪರ್ಕಿಸಬಾರದು ಎಂದು ಸೂಚಿಸಿದೆ. ಅಲ್ಲದೆ, ಸಾಕ್ಷ್ಯಗಳನ್ನೂ ನಾಶಪಡಿಸುವುದು, ಪ್ರಕರಣಕ್ಕೆ ಸಂಬಂಧಿಸದವರ ಮೇಲೆ ಒತ್ತಡ ಹೇರುವುದು, ಪ್ರಚೋದನೆ ಅಥವಾ ಬೆದರಿಕೆ ಹಾಕುವುದು ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.
ಜೂನ್ 18 ರಿಂದ 21 ರವರೆಗೆ ನಾಲ್ಕು ದಿನಗಳ ಜಾಮೀನು ನೀಡಲಾಗಿದ್ದು, ₹50,000 ಶೂರಿಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಮರು ಪರೀಕ್ಷೆ ಪೂರ್ಣಗೊಂಡ ಬಳಿಕ ಜೂನ್ 22 ರಂದು ಮಧ್ಯಾಹ್ನ 2 ಗಂಟೆಯೊಳಗೆ ಆರೋಪಿ ಮತ್ತೆ ಜೈಲಿಗೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ BNS ಅಡಿಯಲ್ಲಿ ಅತ್ಯಾಚಾರ ಆರೋಪಿ ಹಾಗೂ ಪೋಕ್ಸೋ ಕಾಯ್ದೆ - 2012 ರ ವಿವಿಧ ವಿಧಿಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Also Read:
Air quality Update : ಬೆಂಗಳೂರು ಮತ್ತು ಕರಾವಳಿ ಪ್ರದೇಶದಲ್ಲಿ ಶುದ್ಧ ಗಾಳಿ, ಧಾರವಾಡದಲ್ಲಿ ಮಾಲಿನ್ಯ ಹೆಚ್ಚಳ