<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಮಳೆಯ ಕೊರತೆಯಿಂದ ಉತ್ತರ ಕರ್ನಾಟಕದಲ್ಲಿ ಬಿಕ್ಕಟ್ಟು: ರೈತರ ಬದುಕು ಕಂಗಾಲು

ಮಳೆಯ ಕೊರತೆಯಿಂದ ಉತ್ತರ ಕರ್ನಾಟಕದಲ್ಲಿ ಬಿಕ್ಕಟ್ಟು: ರೈತರ ಬದುಕು ಕಂಗಾಲು
Summary: This time, the monsoon rains have failed in North Karnataka, and agricultural activities have been severely hampered due to lack of rain. The sown crops have reached the stage of drying up without water, and farmers are facing serious difficulties. The condition of the food grains is becoming difficult day by day due to the cost of sowing, water scarcity and weather anomalies. This time, the monsoon has brought disappointment to the farmers who were expecting rain.

Belagavi News:

ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದ ರೈತರ ಸಮುದಾಯ ತೀವ್ರ ಸಂಕಷ್ಟಕ್ಕೆ ಸುಲುಕಿದೆ. ಮಳೆಗಾಲ ಆರಂಭವಾಗಿ ಸುಮಾರು 15 ದಿನಗಳಾದರೂ ವಾಡಿಕೆಯಂತೆ ಸಮರ್ಪಕ ಮಳೆಯಾಗಿದೆ, ಬಿತ್ತನೆ ಮಾಡಿದ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಿದೆ.

ಬಾಗಲಕೋಟೆ, ಧಾರವಾಡ, ವಿಜಯಪುರ ಮತ್ತು ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಹಿನ್ನಡೆಯಾಗಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿ ಆಕಾಶವನ್ನು ನೋಡುವಂತಾಗಿದೆ. ಬಿತ್ತನೆಗೆ ಖರ್ಚು ಮಾಡಿದ ಹಣ, ಬೀಜ ಮತ್ತು ಗೊಬ್ಬರದ ವೆಚ್ಚ ಎಲ್ಲವು ವ್ಯರ್ಥವಾಗುವ ಭೀತಿ ರೈತರನ್ನು ಕಾಡುತ್ತಿದೆ.

ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಆರಂಭವಾಗದ ಕಾರಣ ಕೆರೆ- ಕೊಳಗಳ ನೀರಿನ ಮಟ್ಟವು ಕುಸಿಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ನೀರನ್ನು ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಹವಾಮಾನ ವೈಪರಿತ್ಯದ ಪರಿಣಾಮ ರೈತರ ಬದುಕು ಅನಿಶ್ಚಿತತೆಯತ್ತ ಸಾಗುತ್ತಿದ್ದು, ಸರ್ಕಾರದಿಂದ ತುರ್ತು ಪರಿಹಾರ ಕ್ರಮಗಳ ನಿರೀಕ್ಷಿ ಹೆಚ್ಚಾಗಿದೆ.

Sponsored

ಮುಂಗಾರು ಮಳೆಯ ಕೊರತೆಯ ನಡುವೆಯೇ ಜಿಲ್ಲೆಯ ಗದಗ ತಾಲೂಕಿನ ತಗಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿರುವ ಈ ಸಣ್ಣ ಗ್ರಾಮಕ್ಕೆ ಈಗ ಒಂದೇ ಒಂದು ಬೋರ್ ವೆಲ್ ಆಸರೆಯಾಗಿದ್ದು, ಅದೇ ನೀರಿನ ಮೇಲೆಯೇ ಸಂಪೂರ್ಣ ಗ್ರಾಮ ಅವಲಂಬಿತವಾಗಿದೆ.

ಆದರೆ ಆ ಬೋರ್ ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮಸ್ಥರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ದೀರ್ಘಕಾಲ ಈ ನೀರನ್ನು ಬಳಸುವುದರಿಂದ ಹಲ್ಲು ಹಾಗೂ ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಸ್ಪಂದನೆ ದೊರೆಯಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನೆ ಮನೆಗೆ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ' ಜಲ ಜೀವನ್ ಮಿಷನ್ ' ಯೋಜನೆಯೂ ಈ ಗ್ರಾಮದಲ್ಲಿ ಇನ್ನು ಜಾರಿಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಳೆ ಕೊರತೆಯಿಂದ ಕೃಷಿ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಕುಡಿಯುವ ನೀರಿನ ತೀವ್ರ ಸಮಸ್ಯೆಯೂ ಸೇರಿರುವುದು ಗ್ರಾಮಸ್ಥರ ಬದುಕನ್ನು ಮತ್ತಷ್ಟು ಕಷ್ಟಕರವಾಗಿಸಿದೆ. ರಾಜ್ಯ ಸರ್ಕಾರ ಈ ಎರಡು ಜಲ ಸಂಕಷ್ಟವನ್ನು ತುರ್ತುವಾಗಿ ಪರಿಹರಿಸಲು ಕ್ರಮ ಕೈಗೊಳ್ಳ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Sponsored

Also Read:

16 ವರ್ಷದ ಬಾಲಕನಿಂದ ತ್ರಿವಳಿ ಕೊಲೆ : ಅಣ್ಣ, ಅತ್ತಿಗೆ ಮತ್ತು ಮಗುವಿನ ಹತ್ಯೆ, ಬೆಚ್ಚಿಬಿದ್ದ ಜನರು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online