BELAGAVI NEWS :
Cristiano Ronaldo : ನಿವೃತ್ತಿ ಪ್ರಶ್ನೆಗೆ ಮೀರಿದ ರೊನಾಲ್ಡೊ! ಮಾಧ್ಯಮಗಳ ವಿರುದ್ಧ ಆಕ್ರೋಶ, ಸ್ಪೇನ್ ಪಂದ್ಯಕ್ಕೂ ಮುನ್ನ ಖಡಕ್ ಉತ್ತರ.
Cristiano Ronaldo News: 2026ರ ಫಿಫಾ ವಿಶ್ವಕಪ್ ಅಂತಿಮ ಹಂತಕ್ಕೆ ಕಾಲಿಟ್ಟಿದ್ದು, ಜಾಗತಿಕ ಫುಟ್ಬಾಲ್ ಅಭಿಮಾನಿಗಳ ಗಮನ ಈಗ ಪೋರ್ಚುಗಲ್ ತಂಡದತ್ತ ನೆಟ್ಟಿದೆ. ಬಲಿಷ್ಠ ಸ್ಪೇನ್ ವಿರುದ್ಧದ ಹೈ ವೋಲ್ಟೇಜ್ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮಾಧ್ಯಮಗಳ ಪ್ರಶ್ನೆಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿ ಸುದ್ದಿಯಲ್ಲಿದ್ದಾರೆ.
ಡಲ್ಲಾಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೊನಾಲ್ಡೊ ಅವರನ್ನು ಅವರ ಭವಿಷ್ಯ, ನಿವೃತ್ತಿ ಹಾಗೂ ಇತ್ತೀಚಿನ ಫಾರ್ಮ್ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಹಲವು ವರ್ಷಗಳಿಂದ ವಿಶ್ವ ಫುಟ್ಬಾಲ್ ನಲ್ಲಿ ಅಗ್ರ ಆಟಗಾರನಾಗಿ ಗುರುತಿಸಿಕೊಂಡಿರುವ ರುನಾಲ್ಡೊ, ಈ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದರು.
ವಿಶೇಷವಾಗಿ ನಿವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೊನಾಲ್ಡೊ, ತಮ್ಮ ಸಂಪೂರ್ಣ ಗಮನ ವಿಶ್ವಕಪ್ ಮತ್ತು ತಂಡದ ಯಶಸ್ಸಿನ ಮೇಲೆ ಇದೆ ಎಂದು ಸ್ಪಷ್ಟಪಡಿಸಿದರು. ಇಂತಹ ಪ್ರಶ್ನೆಗಳು ತಂಡದ ಮಹತ್ವದ ಪಂದ್ಯಕ್ಕೂ ಮುನ್ನ ಅನಗತ್ಯ ಚರ್ಚೆಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
2026ರ ಫಿಫಾ ವಿಶ್ವಕಪ್ ನಲ್ಲಿ ಪೋರ್ಚುಗಲ್ ತಂಡದ ಪ್ರದರ್ಶನ ಈಗಾಗಲೇ ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿದ್ದು,ಸ್ಪೇನ್ ವಿರುದ್ಧದ ಫ್ರೀ-ಕ್ವಾಟರ್ ಫೈನಲ್ ಪಂದ್ಯವು ಟೂರ್ನಿಯ ಅತ್ಯಂತ ರೋಚಕ ಹಣಾಹಣಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಈ ಪಂದ್ಯದಲ್ಲಿ ರೊನಾಲ್ಡೊಅವರ ನಾಯಕತ್ವ ಮತ್ತು ಅನುಭವ ಪೋರ್ಚುಗಲ್ ಗೆ ಪ್ರಮುಖ ಬಲವಾಗಿದೆ.
ರೊನಾಲ್ಡೊ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಮತ್ತು ಫುಟ್ಬಾಲ್ ವಿಶ್ಲೇಷಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಎಲ್ಲರೂ ಗಮನ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರೊನಾಲ್ಡೋ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರತ್ತ ನೆಟ್ಟಿದೆ.
Cristiano Ronaldo News: '23 ವರ್ಷಗಳಿಂದ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದೀರಿ' - ಮಾಧ್ಯಮಗಳಿಗೆ ರೋನಾಲ್ಡೊ ಖಡಕ್ ತಿರುಗೇಟು
Cristiano Ronaldo News : 2026 ಫಿಫಾ ವಿಶ್ವಕಪ್ ನ ಫ್ರೀ ಕ್ವಾಟರ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಪ್ರಭಾವಿ ಮಾಧ್ಯಮಗಳ ಪ್ರಶ್ನೆಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿ ಗಮನ ಸೆಳೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ, "ಪೋರ್ಚುಗಲ್ ತಂಡದ ಆರಂಭಿಕ 11 ಆಟಗಾರರ ಪಟ್ಟಿಯಲ್ಲಿ ನಿಮ್ಮ ಸ್ಥಾನ ಕುರಿತು ನಿರಂತರ ಟೀಕೆಗಳು ಮತ್ತು ಸಂಶಯಗಳನ್ನು ನೀವು ಹೇಗೆ ಎದುರಿಸುತ್ತೀರಿ?" ಎಂದು ಪ್ರಶ್ನಿಸಲಾಗಿದೆ.
ಈ ಪ್ರಶ್ನೆಗೆ ಸ್ಪಷ್ಟ ಅಸಮಾಧಾನ ವ್ಯಕ್ತಪಡಿಸಿದ ರೊನಾಲ್ಡೊ, "ಕಳೆದ 23 ವರ್ಷಗಳಿಂದ ನೀವು ನನ್ನ ಫುಟ್ಬಾಲ್ ವೃತ್ತಿ ಜೀವನವನ್ನು ಮುಗಿಸಲು ಪ್ರಯತ್ನಿಸುತ್ತಿದ್ದೀರಿ. ಆದರೆ ಇದು ವ್ಯರ್ಥ ಮತ್ತು ಸಮಯದ ಪೋಲು ಎಂಬುದು ಈಗಾಗಲೇ ನಿಮಗೆ ಅರ್ಥವಾಗಿರಬೇಕು", ಎಂದು ತೀಕ್ಷ್ಣವಾಗಿ ಉತ್ತರಿಸಿದರು.
ಇದೇ ವೇಳೆ, 41 ನೇ ವಯಸ್ಸಿನಲ್ಲಿ ವಿಶ್ವಕಪ್ ಆಡುತ್ತಿರುವುದು ನಿಮ್ಮ ವೃತ್ತಿ ಜೀವನದ ಅತ್ಯಂತ ಕಠಿಣ ಸವಾಲೇ? ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ರೊನಾಲ್ಡೊ, ವಯಸ್ಸಿಗಿಂತ ಪ್ರದರ್ಶನವೇ ಮುಖ್ಯ ಎಂದು ಒತ್ತಿ ಹೇಳಿದರು.
"ನಾನು ಮೊದಲಿನಂತೆ ಆಡುತ್ತಿಲ್ಲ ಎಂಬುದು ನಿಜ. ಆದರೆ ಅದರಿಂದ ನಾನು ಕೆಟ್ಟದಾಗಿ ಕಾಣುತ್ತಿದ್ದೇನೆ ಎಂದರ್ಥವಲ್ಲ. ಈ ವಿಶ್ವಕಪ್ ನಲ್ಲೇ ಈಗಾಗಲೇ ಮೂರು ಗೋಲುಗಳನ್ನು ಗಳಿಸಿದ್ದೇನೆ. ನನ್ನ ಪ್ರದರ್ಶನವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದೆ," ಎಂದು ಆತ್ಮವಿಶ್ವಾಸದಿಂದ ಹೇಳಿದರು.
2026 ರ ಫಿಫಾ ವಿಶ್ವ ಕಪ್ ನಲ್ಲಿ ರೊನಾಲ್ಡೊ ಅವರ ಪ್ರದರ್ಶನ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಸ್ಪೇನ್ ವಿರುದ್ಧದ ಮಹತ್ವದ ಫ್ರೀ- ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರ ನಾಯಕತ್ವ ಮತ್ತು ಗೋಲು ಗಳಿಸುವ ಸಾಮರ್ಥ್ಯದ ಮೇಲೆ ಪೋರ್ಚುಗಲ್ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ರೊನಾಲ್ಡೊ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Cristiano Ronaldo : ನಿವೃತ್ತಿ ಪ್ರಶ್ನೆಗೆ ಸ್ಪಷ್ಟ ಉತ್ತರ, ಟೀಕೆಗಳ ಬಗ್ಗೆ ಬಾವುಕಮಾತು - ರೊನಾಲ್ಡೊ ಹೇಳಿದ್ದೇನು?
Cristiano Ronaldo : 2026ರ ಫಿಫಾ ವಿಶ್ವಕಪ್ ನ ಫ್ರೀ ಕ್ವಾಟರ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೋ ತಮ್ಮ ಭವಿಷ್ಯ, ನಿವೃತ್ತಿ ಹಾಗೂ ಟೀಕೆಗಳ ಕುರಿತು ಮುಕ್ತವಾಗಿ ಮಾತನಾಡಿ ಗಮನ ಸೆಳೆದಿದ್ದಾರೆ.
ಸುದ್ದಿಗೋಷ್ಠಿಯ ವೇಳೆ ಖ್ಯಾತ ಕ್ರೀಡಾ ಪತ್ರಕರ್ತ ಮಾರ್ಸೆಲೊ ಬೆಕ್ಲರ್ ಅವರನ್ನು ಗುರುತಿಸಿದ ರೊನಾಲ್ಡೋ, "ಆ ಹುಡುಗನಿಗೆ ಮೈಕ್ ಕೊಡಿ. ಅವನಿಗೆ ನಾನೆಂದರೆ ಇಷ್ಟವಿಲ್ಲ. ನನಗೆ ಜನರ ಮುಖಗಳು ಚೆನ್ನಾಗಿ ನೆನಪಿರುತ್ತವೆ," ಎಂದು ನಗುತ್ತಲೇ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು. ಈ ಮಾತು ಕೇಳಿ ಸುದ್ದಿಗೋಷ್ಠಿಯಲ್ಲಿ ನಗೆಗಡಲು ಮೂಡಿತು.
ನಿವೃತ್ತಿ ಕುರಿತ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ,"ಮಾಧ್ಯಮಗಳ ಒತ್ತಡಕ್ಕೆ ಮಣಿದು ನಾನು ಎಂದಿಗೂ ನಿವೃತ್ತಿ ಘೋಷಿಸುವುದಿಲ್ಲ. ನನಗೆ ಸರಿಯಾದ ಸಮಯ ಬಂದಿದೆ ಎಂದು ಅನಿಸಿದಾಗ ಮಾತ್ರ ಫುಟ್ಬಾಲ್ ಗೆ ವಿದಾಯ ಹೇಳುತ್ತೇನೆ," ಎಂದು ಸ್ಪಷ್ಟಪಡಿಸಿದರು.
ಆದರೆ ಇದೇ ವೇಳೆ,2026 ರ ಫಿಫಾ ವಿಶ್ವಕಪ್ ತನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಟೂರ್ನಿ ಆಗಲಿದೆ ಎಂಬುದನ್ನು ಅವರು ಖಚಿತಪಡಿಸಿದ್ದರು. ಈ ಹೇಳಿಕೆ ವಿಶ್ವದಾದ್ಯಂತ ಫುಟ್ಬಾಲ್ ಅಭಿಮಾನಿಗಳಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
ತಮ್ಮ ವಿರುದ್ಧ ನಿರಂತರವಾಗಿ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದರು ರೋನಾಲ್ಡೊ, "ಈ ವಯಸ್ಸಿನಲ್ಲಿಯೂ ನನ್ನ ಮೇಲೆ ಟೀಕೆಗಳು ಬರುತ್ತಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಯಾಕೆಂದರೆ ಟೀಕೆಗಳೇ ಒಬ್ಬ ಆಟಗಾರನನ್ನು ಇನ್ನಷ್ಟು ಉತ್ತಮವಾಗಿ ಬೆಳೆಯಲು ಪ್ರೇರೇಪಿಸುತ್ತವೆ", ಎಂದು ಭಾವುಕರಾಗಿ ಹೇಳಿದರು.
41ನೇ ವಯಸ್ಸಿನಲ್ಲೂ ವಿಶ್ವಕಪ್ ವೇದಿಕೆಯಲ್ಲಿ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ರೋನಾಲ್ಡೊ ಅವರು ಆತ್ಮವಿಶ್ವಾಸ, ಅನುಭವ ಮತ್ತು ನಾಯಕತ್ವ ಪೋರ್ಚುಗಲ್ ತಂಡಕ್ಕೆ ದೊಡ್ಡ ಬಲವಾಗಿದೆ. ಸ್ಪೇನ್ ವಿರುದ್ಧದ ಮಹತ್ವದ ಫ್ರೀ ಕಾಟನ್ ಫೈನಲ್ ಪಂದ್ಯಕ್ಕೂ ಮುನ್ನ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫುಟ್ಬಾಲ್ ಅಭಿಮಾನಿಗಳ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
2026 ರ ಫಿಫಾ ವಿಶ್ವಕಪ್ ನಲ್ಲಿ ಪೋರ್ಚುಗಲ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಕನಸು ರೊನಾಲ್ಡೋ ಅವರ ಮುಂದಿದೆ. ವಿಶ್ವ ಟ್ರೋಫಿ ಎತ್ತಿ ಹಿಡಿದು ಫುಟ್ಬಾಲ್ ಗೆ ವಿದಾಯ ಹೇಳುವುದು ಅವರ ಬಹುಕಾಲದ ಗುರಿಯಾಗಿದ್ದು, ಇದೇ ತಮ್ಮ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಎಂಬುದನ್ನು ಅವರು ಈಗಾಗಲೇ ಖಚಿತಪಡಿಸಿದ್ದಾರೆ.
ಆದರೆ ಆ ಕನಸು ನನಸಾಗಬೇಕಾದರೆ ಪೋರ್ಚುಗಲ್ ಇನ್ನೂ ನಾಲ್ಕು ನಿರ್ಣಾಯಕ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಪ್ರತಿಯೊಂದು ಪಂದ್ಯಕೂ ಈಗ 'ಮಾಡು ಇಲ್ಲವೇ ಮಡಿ' ಎಂಬ ಪರಿಸ್ಥಿತಿಯಲ್ಲಿದ್ದು, ರೊನಾಲ್ಡೊ ಅವರ ಅನುಭವ, ನಾಯಕತ್ವ ಮತ್ತು ಗೋಲು ಗಳಿಸುವ ಸಾಮರ್ಥ್ಯ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
ವಿಶ್ವದ ಕೋಟ್ಯಾಂತರ ಫುಟ್ಬಾಲ್ ಅಭಿಮಾನಿಗಳ ಕನ್ನು ಈಗ ಪೋರ್ಚುಗಲ್ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮೇಲಿದ್ದು, ಈ ವಿಶ್ವಕಪ್ ಅವರ ಸುದೀರ್ಘವ ವೃತ್ತಿ ಜೀವನಕ್ಕೆ ಐತಿಹಾಸಿಕ ಅಂತ್ಯ ಬರೆಯುತ್ತದೆಯೇ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.