<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ರಾಜ್ಯಸಭೆಗೆ ದೇವೇಗೌಡರ ಪುನರ್ ಆಯ್ಕೆ ಬಗ್ಗೆ ಭಿನ್ನ ಮಾತುಗಳು: ಎಚ್ಡಿಕೆ ಕೊಟ್ಟ ಸ್ಪಷ್ಟನೆ ಏನು?

ರಾಜ್ಯಸಭೆಗೆ ದೇವೇಗೌಡರ ಪುನರ್ ಆಯ್ಕೆ ಬಗ್ಗೆ ಭಿನ್ನ ಮಾತುಗಳು: ಎಚ್ಡಿಕೆ ಕೊಟ್ಟ ಸ್ಪಷ್ಟನೆ ಏನು?
Summary: The issue of former Prime Minister HD Deve Gowda's re-election to the Rajya Sabha has caused a huge debate in the political circles. Amidst the different statements of the two leaders, the clarification given by HD Kumaraswamy has created new curiosity.

belagavi news :

ಕರ್ನಾಟಕ ರಾಜ್ಯಸಭೆ ಸ್ಥಾನ ವಿಚಾರದಲ್ಲಿ ಇದೀಗ ಹೊಸ ರಾಜಕೀಯ ಚರ್ಚೆ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮರು ಆಯ್ಕೆಯ ಕುರಿತು ಗೊಂದಲ ಇನ್ನು ಮುಂದುವರೆದಿದೆ."ರಾಜ್ಯಸಭೆಗೆ ನನ್ನನ್ನು ಪುನರ್ ಆಯ್ಕೆ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟ ವಿಚಾರ" ಎಂದು ದೇವೇಗೌಡರು ಹೇಳಿಕೆ ನೀಡಿದ್ದರು.

ಇದಕ್ಕೆ ಭಿನ್ನವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ೆಚ್ಡಿ ಕುಮಾರಸ್ವಾಮಿ,"ಕೇವಲ 18 ಶಾಸಕರನ್ನು ಇಟ್ಟುಕೊಂಡು ರಾಜ್ಯಸಭಾ ಸ್ಥಾನ ಬಯಸುವುದು ಸರಿಯಲ್ಲ"ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಎರಡು ಹೇಳಿಕೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಜೆಡಿಎಸ್ ಬಿಜೆಪಿ ಮೈತ್ರಿ ಸಮೀಕರಣ, ರಾಜ್ಯಸಭೆ ಚುನಾವಣೆ ಲೆಕ್ಕಾಚಾರ ಹಾಗೂ ದೇವೇಗೌಡರ ಮುಂದಿನ ರಾಜಕೀಯ ನಡೆ ಕುರಿತು ಹಲವಾರು ಶುರುವಾಗಿದ್ದೆ. ಕುಮಾರಸ್ವಾಮಿ ಹೇಳಿಕೆಯಿಂದ ಪಕ್ಷದೊಳಗಿನ ನಿಲುವಿನ ಬಗ್ಗೆ ಹೊಸ ಪ್ರಶ್ನೆಗಳು ಎದ್ದಿವೆ. ಕರ್ನಾಟಕ ರಾಜ್ಯಸಭೆ ಚುನಾವಣೆಯ ರಾಜಕೀಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Sponsored

ಮುಂದಿನ ತಿಂಗಳು ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಚಟುವಟಿಕೆಗಳು ಜೋರಾಗಿವೆ . ವಿವಿಧ ಪಕ್ಷಗಳ ನಾಯಕರಗಳ ನಡುವೆ ರಾಜ್ಯಸಭೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ.

ಈ ನಡುವೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪುನರ್ ಆಯ್ಕೆ ವಿಚಾರ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ದೇವೇಗೌಡರು ಸ್ವತಹ ನೀಡಿದ ಹೇಳಿಕೆಯಿಂದ ಅವರು ಮತ್ತೆ ರಾಜ್ಯಸಭೆಗೆ ಹೋಗುವ ಆಸಕ್ತಿ ಹೊಂದಿರುವುದು ಸ್ಪಷ್ಟವಾಗಿತ್ತು.

ಆದರೆ, ಈ ಬೆಳವಣಿಗೆ ನಡುವೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅಚ್ಚರಿಕೆಯ ಹೇಳಿಕೆ ನೀಡಿದ್ದು, ಹೊಸ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ."ಕೆರೆವಲ 18 ಶಾಸಕರನ್ನು ಇಟ್ಟುಕೊಂಡು ರಾಜ್ಯಸಭಾ ಸ್ಥಾನ ಬಯಸುವುದು ಸರಿಯಲ್ಲ"ಎಂಬ ಕುಮಾರಸ್ವಾಮಿ ಮಾತುಗಳು.

ಎಚ್ ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ನಾರಾಯಣ ಕೊರಗಪ್ಪ ಮತ್ತು ಈರಣ್ಣ ಕಡಾಡಿ ಅವರ ಸದಸ್ಯತ್ವದ ಅವಧಿ, ಮುಂದಿನ ತಿಂಗಳು (ಜೂನ್ 25) ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹಲವು ನಾಯಕರು ಲಾಬಿ ನಡೆಯುತ್ತಿದ್ದಾರೆ. ಬಿಜೆಪಿ ಒಂದು ಮತ್ತು ಕಾಂಗ್ರೆಸ್ ಮೂರು ಸೀಟನ್ನು, ಈಗಿನ ಸಂಖ್ಯಾಬಲದ ಆಧಾರದ ಮೇಲೆ ಗೆಲ್ಲಬಹುದು. ಬಿಜೆಪಿಯಿಂದ ಡಿ ವಿ ಸದಾನಂದ ಗೌಡ ಮತ್ತು ಜೆಡಿಎಸ್ ನಿಂದ ಎಸ್ ಡಿ ದೇವೇಗೌಡ, ಆಕಾಂಕ್ಷಿಗಳಾಗಿದ್ದರು. ಆದರೆ, ದೇವೇಗೌಡರ ಪುತ್ರ ಕುಮಾರಸ್ವಾಮಿ ಹೇಳಿಕೆ ಅಚ್ಚರಿಯನ್ನು ಮೂಡಿಸಿದೆ.

Sponsored

"ನನಗೆ ವಯಸ್ಸಾಗಿದ್ದರು ಮನೆಯಲ್ಲಿ ಕೂರುವ ಜಾಯಮಾನದವನು ನಾನಲ್ಲ" ಎಂದು ಹೇಳಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ತಮ್ಮ ರಾಜ್ಯಸಭೆ ಪುನರ್ ಆಯ್ಕೆ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟಿರುವುದಾಗಿ ತಿಳಿಸಿದರು.

"ನಾನು ಸಾಮಾನ್ಯ ಬಡ ರೈತ ಕುಟುಂಬದಿಂದ ಬಂದವನು. ಹೋರಾಟದ ಹಿನ್ನೆಲೆಯಲ್ಲಿ ಬೆಳೆದ ನಾನು ಪ್ರಧಾನಿಯಾಗಿಯೂ ಕೆಲಸ ಮಾಡಿದ್ದೇನೆ"ಎಂದು ದೇವೇಗೌಡರು ಹೇಳಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತು. ರಾಜ್ಯಸಭೆಗೆ ಮತ್ತೆ ಆಯ್ಕೆಯಾಗುವ ಕುರಿತು ಬಿಜೆಪಿ ವರಿಷ್ಠರ ಜೊತೆ ಒಂದು ಹಂತದ ಮಾತುಕತೆ ಕೂಡ ನಡೆದಿದೆ ಎಂದು ಮಾಹಿತಿ ಹರಡಿತು.

"ದೇವೇಗೌಡರ ಮರು ಆಯ್ಕೆ ಸಂಬಂಧ ಯಾರೊಂದಿಗೂ ಯಾವುದೇ ಚರ್ಚೆ ನಡೆದಿಲ್ಲ"ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆ ಚುನಾವಣೆಯನ್ನು ಸುತ್ತುವರಿದ ರಾಜಕೀಯ ಚರ್ಚೆಗಳ ನಡುವೆ ಕುಮಾರಸ್ವಾಮಿ ನೀಡಿದ ಈ ಹೇಳಿಕೆ ಹೊಸ ಕುತೂಹಲಕ್ಕೆ ಕಾರಣವಾಗಿದೆ.

"ಜೆಡಿಎಸ್ ನ ಕೇವಲ 18 ಶಾಸಕರನ್ನು ಇಟ್ಟುಕೊಂಡು ರಾಜ್ಯಸಭೆಗೆ ಎಚ್ ಡಿ ದೇವೇಗೌಡ ಅವರನ್ನು ಕಳುಹಿಸುವ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ. ಈ ವಿಚಾರದಲ್ಲಿ ನಾನಾಗಲಿ ಅಥವಾ ದೇವೇಗೌಡರಾಗಲಿ ಯಾರ ಬಡಿಯುಮಾತುಕತೆ ನಡೆಸಿಲ್ಲ"ಎಂದು ಅವರು ಹೇಳಿದ್ದಾರೆ.

Sponsored

ಈ ಹೇಳಿಕೆಯಿಂದ ದೇವೇಗೌಡರ ಪುನರ್ ಆಯ್ಕೆ ವಿಚಾರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಮಿಶ್ರಣಗಳ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಎದ್ದಿವೆ. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುವ ವಿಚಾರದಲ್ಲಿ ಬಿಜೆಪಿ ಒಳಗೂ ಗೊಂದಲವಿದೆ ಎಂಬ ರಾಜಕೀಯ ವಲಯದ ಚರ್ಚೆಗಳು ಜೋರಾಗಿದೆ.

ಗಮನಾರ್ಹವಾಗಿ, ಕಳೆದ ಬಾರಿ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು, ಈ ಬಾರಿ ಅವರ ರಾಜಕೀಯ ಭವಿಷ್ಯ ಯಾವ ದಿಕ್ಕಿಗೆ ಸಾಗಲಿದೆ ಎಂಬುದು ರಾಜ ರಾಜಕೀಯದ ಕುತೂಹಲಕರ ಬೆಳವಣಿಗೆಯಾಗಿ ಪರಿಣಮಿಸಿದೆ.

18 ಶಾಸಕರನ್ನು ಇಟ್ಟುಕೊಂಡು ನಿರೀಕ್ಷೆ ಮಾಡುವುದು ತಪ್ಪು-ಕುಮಾರಸ್ವಾಮಿ:

Sponsored

ನಮ್ಮದು ಬಿಜೆಪಿ ಮತ್ತು ಮೈತ್ರಿ ಇದೆ, ಹಾಗಂತ ರಾಜ್ಯಸಭಾ ಸ್ಥಾನ ನಿರೀಕ್ಷೆ ಮಾಡೋದು ಸರಿಯಲ್ಲ. ಬಿಜೆಪಿಯಲ್ಲಿ ಅವರದ್ದೇ ಆದ ಸಮಸ್ಯೆಗಳು ಇರಲಿದೆ. ಅಲ್ಲಿಯೂ ಆಕಾಂಕ್ಷಿಗಳು ಇದ್ದಾರಲ್ಲವೇ? ಅವರಿಗೆ ರಾಜ್ಯಸಭಾ ಸ್ಥಾನ ತಪ್ಪಿಸಿ, ದೇವೇಗೌಡರಿಗೆ ಕೊಡಬೇಕೆಂಬುದು ಸರಿಯಲ್ಲ. ಹಾಗಾಗಿ, ಈ ಸಂಬಂಧ ನಾವು ಚರ್ಚಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ, ರಾಜ್ಯ ಬಿಜೆಪಿಯಲ್ಲಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ನೀಡುವುದರಲ್ಲಿ ಒಮ್ಮತವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಕುಮಾರಸ್ವಾಮಿ ಹೇಳಿದ್ದಾರೆ.

"ನಾನು ರಾಜ್ಯಸಭಾ ಸ್ಥಾನದ ಆಕಾಂಕ್ಷಿ"ಎಂದು ಮಾಜಿ ಮುಖ್ಯಮಂತ್ರಿ ಡಿವಿ ರೋಡ್ ಸದಾನಂದ ಗೌಡ ಸ್ಪಷ್ಟವಾಗಿ ಹೇಳಿದ್ದಾರೆ. ಮೈಸೂರಿನಲ್ಲಿ ಸೋಮವಾರ (ಮೇ 25) ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯನ್ನು ಸುತ್ತುವರಿದ ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ಚರ್ಚೆ ಹುಟ್ಟು ಹಾಕಿದ

"ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಸೂಕ್ತ ನಿರ್ಧಾರವನ್ನು ದೆಹಲಿಯ ನಮ್ಮ ನಾಯಕರು ತೆಗೆದುಕೊಳ್ಳುತ್ತಾರೆ. ನಾನು ಚುನಾವಣಾ ರಾಜಕೀಯದಿಂದ ಈಗಾಗಲೇ ಹಿಂದಕ್ಕೆ ಸರಿದಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ"ಎಂದು ಸದಾನಂದ ಗೌಡರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮುಂದಿನ ರಾಜ್ಯಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಲೆಕ್ಕಾಚಾರ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಹೇಗೆ ಮಹತ್ವ ಪಡೆದುಕೊಂಡಿದೆ. ಒಪ್ಪಿಗೆ ಇದೆ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮರು ಆಯ್ಕೆ ವಿಚಾರವು ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.

Sponsored

ರಾಜ್ಯಸಭೆ ಸ್ಥಾನಗಳ ಹಂಚಿಕೆ, ಮೈತ್ರಿ ಸಮೀಕರಣಗಳು ಹಾಗೂ ದೆಹಲಿ ನಾಯಕತ್ವದ ಅಂತಿಮ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ಇದೀಗ ರಾಜ್ಯ ರಾಜಕೀಯದಲ್ಲಿ ಹೆಚ್ಚಾಗಿದೆ.

Also Read:

KPCC ಕುರ್ಚಿಗಾಗಿ ಸತೀಶ್ ಜಾರಕಿಹೊಳಿ ರಣತಂತ್ರ? ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಕುತೂಹಲ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online