<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಡಿಜಿಟಲ್ ಇಂಡಿಯಾ 11ನೇ ವರ್ಷಾಚರಣೆ: ಮೋದಿ ಸಂದೇಶವೇನು?

ಡಿಜಿಟಲ್ ಇಂಡಿಯಾ 11ನೇ ವರ್ಷಾಚರಣೆ: ಮೋದಿ ಸಂದೇಶವೇನು?
Summary: On the occasion of the completion of 11 years of the Digital India programme, Prime Minister Narendra Modi expressed his views on the achievements and impact of the scheme. He said that the scheme has played a significant role in the digital transformation of the country. The expansion of digital services, increase in the use of technology and availability of simple services to citizens are the major achievements of the scheme.

Belagavi News :

11 Years of Digital India: ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ತನ್ನ 11ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತ ತನ್ನ ಡಿಜಿಟಲ್ ಪರಿವರ್ತನೆಯ ಮುಂದಿನ ಹಂತಕ್ಕೆ ಪ್ರವೇಶಿಸಲು ಸಜ್ಜಾಗುತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಮುಂಬರುವ ದಶಕದಲ್ಲಿ ಕೃತಕ ಬುದ್ಧಿಮತ್ತೆ (AI) ಸೆಮಿಕಂಡಕ್ಟರ್ ಗಳು, ಕ್ವಾಂಟಮ್ ತಂತ್ರಜ್ಞಾನ ಹಾಗೂ ಸ್ಥಳೀಯ ಇಲೆಕ್ಟ್ರಾನಿಕ್ಸ್ ಉತ್ಪಾದನೆಗಳು ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಸ್ತಂಭಗಳಾಗಿವೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. ಈ ಕ್ಷೇತ್ರಗಳು ದೇಶವನ್ನು ಮುಂದಿನ ಟ್ರಿಲಿಯನ್ ಡಾಲರ್ ಆರ್ಥಿಕ ಮೈಲಿಗಲ್ಲಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ದೇಶದ ಆಡಳಿತ, ಸೇವಾ ವಿತರಣಾ ವ್ಯವಸ್ಥೆ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ ಎಂದು ಸಹ ಸಚಿವಾಲಯ ವಿವರಿಸಿದೆ.

ಮೋದಿ ಹೇಳಿದ್ದೇನು? ಡಿಜಿಟಲ್ ಇಂಡಿಯಾ ಉಪಕ್ರಮವು ಆರಂಭವಾಗಿ 11 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಈ ಯೋಜನೆಯು ಆಡಳಿತ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸಿದ್ದು, ನಾಗರಿಕರನ್ನು ಸಬಲೀಕರಣಗೊಳಿಸಿದೆ ಹಾಗೂ ಸಮಗ್ರ ಅಭಿವೃದ್ಧಿಯನ್ನು ವೇಗಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಡೆರಹಿತ ಡಿಜಿಟಲ್ ಪಾವತಿಗಳು ಮತ್ತು ನೇರ ಪ್ರಯೋಜನ ವರ್ಗಾವಣೆ (DBT) ವ್ಯವಸ್ಥೆಗಳು ಫಲಾನುಭವಿಗಳಿಗೆ ಪಾರದರ್ಶಕವಾಗಿ ನೆರವು ತಲುಪಲು ಸಹಾಯ ಮಾಡಿವೆ ಎಂದು ಅವರು ತಿಳಿಸಿದ್ದಾರೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ವಿಸ್ತರಣೆ ಮೂಲಕ ತಂತ್ರಜ್ಞಾನವು ' ಜೀವನದ ಸುಲಭತೆ ' ಹೆಚ್ಚಿಸುವ ಶಕ್ತಿಶಾಲಿ ಸಾಧನವಾಗಿ ರೂಪುಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ ಯೋಜನೆ ಗ್ರಾಮೀಣ ಪ್ರದೇಶಗಳು ಹಾಗೂ ಟಿಯರ್- 2 ಮತ್ತು ಟಿಯರ್ - 3 ನಗರಗಳಿಗೆ ನವೀನತೆಯ ಅಲೆಯನ್ನು ತಂದುಕೊಟ್ಟಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಯುವ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು ಮತ್ತು ನವೀನತಾವಾದಿಗಳು ದೇಶದ ವಿವಿಧ ಸವಾಲುಗಳಿಗೆ ಪರಿಹಾರಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನಿ ಮೋದಿ, ಈ ಯೋಜನೆಯು ಶಿಕ್ಷಣ, ಆರೋಗ್ಯ, ಕೃಷಿ, ವಾಣಿಜ್ಯ ಹಾಗೂ ಸಾರ್ವಜನಿಕ ಸೇವಾ ವಿತರಣಾ ಕ್ಷೇತ್ರಗಳನ್ನು ಬಲಪಡಿಸಿದೆ ಎಂದಿದ್ದಾರೆ.

ಭಾರತವು ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್ ಗಳು ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ತಂತ್ರಜ್ಞಾನವು ಮಾನವೀಯತೆಯ ಸೇವೆಗೆ ಬಳಕೆಯಾಗುವ ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಸಬಲೀಕರಣ ನೀಡುವ ಭವಿಷ್ಯ ನಿರ್ಮಿಸುವತ್ತ ಸರ್ಕಾರದ ಗಮನ ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಎಸ್. ಕೃಷ್ಣನ್ ಹೇಳಿದ್ದೇನು?

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ 11ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್, ಕಳೆದ ದಶಕದಲ್ಲಿ ನಿರ್ಮಿಸಲಾದ ಡಿಜಿಟಲ್ ಪರಿಸರ ವ್ಯವಸ್ಥೆಯು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸುವ ಗುರಿಗೆ ಬಲವಾದ ಅಭಿಪ್ರಾಯ ಹಾಕಿದೆ ಎಂದು ಹೇಳಿದ್ದಾರೆ.

ಸರ್ಕಾರವು ಈಗ ಸುಧಾರಿತ ತಂತ್ರಜ್ಞಾನಗಳು, ದೇಶೀಯ ಉತ್ಪಾದನೆ ಹಾಗೂ ಜಾಗತಿಕ ಮಟ್ಟದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(DPI) ವಿಸ್ತರಣೆಯ ಮೇಲೆ ಗಮನಹರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಡಿಜಿಟಲ್ ಇಂಡಿಯಾ ಈಗ ಕೇವಲ ಇಂಟರ್ನೆಟ್ ಸಂಪರ್ಕಕ್ಕೆ ಸೀಮಿತವಾಗಿಲ್ಲ, ಅದು ಉತ್ತಮ ಆಡಳಿತ, ಆಡಳಿತ ಒಳಗೊಳ್ಳಿಕೆ, ಉತ್ಪಾದನೆ ಹಾಗೂ ದೊಡ್ಡ ಪ್ರಮಾಣದ ನವೀನತೆಯ ಮೂಲಾಧಾರವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ 1.028 ಶತಕೋಟಿಗೂ ಹೆಚ್ಚು ಇಂಟರ್ನೆಟ್ ಸಂಪರ್ಕಗಳು ಹಾಗೂ 995.6 ಮಿಲಿಯನ್ ಬ್ರಾಡ್ ಬ್ಯಾಂಡ್ ಚಂದಾದಾರರು ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಜೊತೆಗೆ 5G ಸೇವೆಗಳು 99.9% ಜಿಲ್ಲೆ ಗಳಿಗೆ ವಿಸ್ತರಿಸಿರುವುದಾಗಿ ಮಾಹಿತಿ ನೀಡಲಾಗಿದೆ.

ಇದೇ ವೇಳೆ 2014 ರಲ್ಲಿ ಸುಮಾರು ₹270 ಇದ್ದ 1 GB ಮೊಬೈಲ್ ಡೇಟಾ ದರವು ಈಗ ₹8 ರಿಂದ ₹10 ಕ್ಕೆ ಇಳಿದಿದ್ದು, ಭಾರತವನ್ನು ವಿಶ್ವದ ಅತ್ಯಂತ ಕೈಗೆಟುಕುವ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿಸಿದೆ ಎಂದು ಎಸ್. ಕೃಷ್ಣನ್ ತಿಳಿಸಿದ್ದಾರೆ.

ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಗೆ ₹ 1.25 ಲಕ್ಷ ಕೋಟಿ ಅನುಮೋದನೆ: ಡಿಜಿಟಲ್ ಭಾರತದತ್ತ ದೊಡ್ಡ ಹೆಜ್ಜೆ

ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿಯೊಂದಿಗೆ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಅಡಿಯಲ್ಲಿರುವ ವೆಚ್ಚ ಹಣಕಾಸು ಸಮಿತಿಯು ಭಾರತ ಸೆಮಿಕಂಡಕ್ಟರ್ ಮಿಷನ್ (ISM) 2.0ಗಾಗಿ ₹1.25 ಲಕ್ಷ ಕೋಟಿ ಬಜೆಟ್ ಪ್ರಸ್ತಾವನೆಯನ್ನು ಅನುಮೋದಿಸಿದೆ.

ಈಗ ಪ್ರಸ್ತಾವನೆ ಈಗ ಅಂತಿಮ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಇರಲಿದೆ. ಹಿಂದಿನ ISM 1.0 ಗೆ ನೀಡಲಾದ ₹ 76,000 ಕೋಟಿ ಹೋಲಿಸಿದರೆ ಇದು ಬಹಳ ದೊಡ್ಡ ಮಟ್ಟದ ಹೆಚ್ಚಳವಾಗಿದ್ದು, ಈ ಯೋಜನೆಯ ಮಹತ್ವವನ್ನು ತೋರಿಸುತ್ತದೆ.

ಈ ಮಿಷನ್ ಮೂಲಕ ಭಾರತದಲ್ಲಿ ಚಿಪ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದು, ದೇಶೀಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರಮುಖ ಹಬ್ ಆಗಿ ಸ್ಥಾಪಿಸುವುದು ಸರ್ಕಾರದ ಗುರಿಯಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online