<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಇಂಗ್ಲೆಂಡ್ ನೆಲದಲ್ಲಿ ಮಂಧಾನ ನಿರಾಸೆ : ಭಾರತಕ್ಕೆ ದೊಡ್ಡ ತಲೆನೋವು

ಇಂಗ್ಲೆಂಡ್ ನೆಲದಲ್ಲಿ ಮಂಧಾನ ನಿರಾಸೆ : ಭಾರತಕ್ಕೆ ದೊಡ್ಡ ತಲೆನೋವು
Summary: Star batter Smriti Mandhana's failure to deliver the expected performance in England has added to the worries of the Indian team. Mandhana's slump in form ahead of important matches has been a new headache for the team's batting department and has raised concerns among fans.

BELAGAVI NEWS :

2026ರ ಮಹಿಳಾ ಟಿ20 ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಇಂಗ್ಲೆಂಡ್ ನೆಲದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಗೆ ಭಾರತ ಮಹಿಳಾ ತಂಡ ಸಜ್ಜಾಗಿದೆ. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ.ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳು T - ೨೦ ಸರಣಿಯಲ್ಲಿ ೨-೧ ಅಂತರದಲ್ಲಿ ಸೋಲು ಕಂಡಿರುವ ಭಾರತ, ಅಭ್ಯಾಸ ಪಂದ್ಯದಲ್ಲಿಯೂ ಮಿಶ್ರ ಫಲಿತಾಂಶ ದಾಖಲಿಸಿದೆ. ಇದರಿಂದ ತಂಡದ ಸಿದ್ಧತೆಗಳ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ.

ಇದಕ್ಕಿಂತಲೂ ಹೆಚ್ಚಾಗಿ ತಂಡದ ಆಡಳಿತ ಮಂಡಳಿಯನ್ನು ಕಾಡುತ್ತಿರುವುದು ಉಪನಾಯಕ ಸ್ಮೃತಿ ಮಂಧಾನ ಅವರ ಕಳಪೆ ಫಾರ್ಮ. ಭಾರತದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಧಾರ ಸ್ತಂಭವಾಗಿರುವ ಮಂಧಾನ, ಇತ್ತೀಚಿನ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಆರಂಭಿಕ ಆಟಗಾರ್ತಿಯಾಗಿ ಅವರಿಂದ ದೊಡ್ಡ ಇನ್ನಿಂಗ್ಸ್ ಗಳ ನಿರೀಕ್ಷೆ ಇದ್ದರು, ನಿರಂತರ ವೈಫಲ್ಯ ತಂಡದ ಮೇಲೆ ಹೆಚ್ಚುವರಿ ಒತ್ತಡ ತಂದಿದೆ.

ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತದ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಲಿದ್ದು, ಅದಕ್ಕೂ ಮುನ್ನ ಮಂಧಾನ ಲಯ ಕಂಡುಕೊಳ್ಳುವುದು ತಂಡಕ್ಕೆ ಅತ್ಯಗತ್ಯವಾಗಿದೆ. ಅವರು ಉತ್ತಮ ಆರಂಭ ನೀಡದಿದ್ದರೆ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ.

Sponsored

ವಿಶ್ವಕಪ್ನಂತಹ ದೊಡ್ಡ ವೇದಿಕೆಯಲ್ಲಿ ಅನುಭವಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಮಂಧಾನ ಅವರಂತಹ ಸ್ಟಾರ್ ಆಟಗಾರ್ತಿಯರ ಫಾರ್ಮ್ ಕುಸಿತ ಭಾರತ ತಂಡದ ವಿಶ್ವಕಪ್ ಕನಸಿಗೆ ಅಡ್ಡಿಯಾಗುವ ಭೀತಿಯನ್ನು ಹುಟ್ಟು ಹಾಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ತಮ್ಮ ಹಳೆಯ ಲಯಕ್ಕೆ ಮರಳುತ್ತಾರೆ ಎಂಬುದು ಅಭಿಮಾನಿಗಳು ಹಾಗೂ ತಂಡದ ನಿರ್ವಹಣೆಯ ಪ್ರಮುಖ ನಿರೀಕ್ಷೆ ಆಗಿದೆ.

ವಿಶ್ವ ಕಪ್ ಆರಂಭಕ್ಕೂ ಮುನ್ನ ಭಾರತ ತಂಡ ಎದುರಿಸುತ್ತಿರುವ ಈ ಸವಾಲುಗಳನ್ನು ಮೀರಿ ಯಶಸ್ಸಿನ ಹಾದಿ ಹಿಡಿಯಬೇಕಿದೆ. ಮಂಧಾನ ಅವರ ಬ್ಯಾಟ್ ಮತ್ತೆ ಸದ್ದು ಮಾಡಿದರೆ ಮಾತ್ರ ಟೀಮ್ ಇಂಡಿಯಾದ ವಿಶ್ವಕಪ್ ಅಭಿಯಾನಕ್ಕೆ ಬಲ ಸಿಗುತ್ತದೆ.

2026ರ ಟಿ20 ವಿಶ್ವಕಪ್ ನಲ್ಲಿ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮೊದಲು, ಮಂಧಾನ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿರುವುದು ಹೊಸ ತಲೆನೋವು ತಂದಿದೆ. ಇಂಗ್ಲೆಂಡ್ ಪ್ರವಾಸದಿಂದ ಅಭ್ಯಾಸ ಪಂದ್ಯದವರೆಗೆ, ಶೃತಿ ಮಂದಣ್ಣ ಪ್ರತಿ ರಂಗು ಕಷ್ಟ ಪಡುತ್ತಿರುವುದು ಕಂಡುಬಂದಿದೆ, ಇದು ಟೀಮ್ ಇಂಡಿಯಾಕೆ ಎಚ್ಚರಿಕೆಯ ಸಂಕೇತವಾಗಿದೆ.

೨೦೨೬ ಮಹಿಳಾ ಟಿ20 ವಿಶ್ವಕಪ್ ಗೆ ಸಜ್ಜಾಗಲು ಭಾರತ ಮಹಿಳಾ ತಂಡ ಸಾಕಷ್ಟು ಮುಂಚಿತವಾಗಿಯೇ ಇಂಗ್ಲೆಂಡಿಗೆ ತೆರಳಿತು. ಅಲ್ಲಿನ ಪಿಚ್ ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ತಂಡ ಸರಣಿ ಹಾಗೂ ಅಭ್ಯಾಸ ಪಂದ್ಯಗಳನ್ನು ಆಡಿತು. ಆದರೆ ಈ ಪ್ರವಾಸ ತಂಡದ ಉಪನಾಯಕಿ ಸ್ಮೃತಿ ಮಂಧಾನ ಪಾಲಿಗೆ ನಿರಾಸೆಯ ಅಧ್ಯಾಯವಾಗಿ ಪರಿಣಮಿಸಿದೆ.

Sponsored

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ T - ೨೦ ಸರಣಿಯಲ್ಲಿ ಮಂಧಾನ ಅವರ ಬ್ಯಾಟ್ ನಿರೀಕ್ಷಿತ ರೀತಿಯಲ್ಲಿ ಸದ್ದು ಮಾಡಲಿಲ್ಲ. ಮೊದಲ ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ಔಟಾದ ಅವರು, ಎರಡನೇ ಪಂದ್ಯದಲ್ಲಿ 32 ರನ್ ಗಳಿಸಿ ಲಯಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೆ ನಿರ್ಣಾಯಕ ಮೂರನೇ ಪಂದ್ಯಗಳಲ್ಲಿ ಕೇವಲ ಎಂಟು ರನ್ ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಇದರ ಬಳಿಕ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅವರ ಪ್ರದರ್ಶನ ಮಿಶ್ರವಾಗಿದ್ದು. ವೆಸ್ಟ್ ಇಂಡೀಸ್ ವಿರುದ್ಧ 39 ರನ್ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಂತೆ ಕಂಡರು, ಇಂಗ್ಲೆಂಡ್ ವಿರುದ್ಧದ ಎರಡನೆಯ ಅಭ್ಯಾಸ ಪಂದ್ಯದಲ್ಲಿ ಕೇವಲ ೧ ರನ್ ಗೆ ಫೆವಿಲಿಯನ್ ಸೇರಿದರು. ಹೀಗಾಗಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ಅವರ ಫಾರ್ಮ್ ಭಾರತೀಯ ತಂಡದ ನಿರ್ವಹಣೆಗೆ ದೊಡ್ಡ ತಲೆನೋವು ಆಗಿದೆ.

ಭಾರತದ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿರುವ ಮಂಧಾನ ಅವರು ತಂಡದ ಬೆನ್ನೆಲುಬು ಎಂದೇ ಪರಿಗಣಿಸಲಾಗುತ್ತದೆ. ಪವರ್ ಪ್ಲೇನಲ್ಲಿ ವೇಗವಾಗಿ ರನ್ ಕಲೆ ಹಾಕಿ ತಂಡಕ್ಕೆ ಬಲವಾದ ಆರಂಭ ಒದಗಿಸುವ ಜವಾಬ್ದಾರಿಯ ಮೇಲಿದೆ. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಒಂದೇ ಒಂದು ಅರ್ಧಶತಕವೂ ದಾಖಲಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಉತ್ತಮ ಆರಂಭ ಸಿಕ್ಕರು ಅದನ್ನು ದೊಡ್ಡ ಇನ್ನಿಂಗ್ಸ್ಗಳಾಗಿ ಪರಿವರ್ತಿಸಲು ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ವಿಶ್ವಕಪ್ ನಲ್ಲಿ ಭಾರತದ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಲಿದ್ದು, ಈ ಹೈ ವೋಲ್ಟೇಜ್ ಪಂದ್ಯಕೂ ಮುನ್ನ ಮಂಧಾನ ಲಯ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಅವರ ಕಳಪೆ ಫಾರ್ ಮುಂದುವರೆದರೆ ಭಾರತದ ಬ್ಯಾಟಿಂಗ್ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಇದೆ.

Sponsored

ಹೀಗಾಗಿ ವಿಶ್ವಕಪ್ ಅಭಿಯಾನ ಆರಂಭವಾಗುವ ಮುನ್ನವೇ ಮಂಧಾನ ತಮ್ಮ ಹಳೆಯ ಲಯಕ್ಕೆ ಮರಳಬೇಕು ಎಂಬುವುದು ತಂಡದ ನಿರ್ವಹಣೆ ಹಾಗೂ ಅಭಿಮಾನಿಗಳ ಮುಖ್ಯ ನಿರೀಕ್ಷೆಯಾಗಿದೆ. ಅವರ ಬ್ಯಾಟ್ ಸದ್ದು ಮಾಡಿದರೆ ಮಾತ್ರ ಭಾರತ ತಂಡದ ವಿಶ್ವಕಪ್ ಕನಸಿಗೆ ಮತ್ತಷ್ಟು ಬಲ ಸಿಗಲಿದೆ.

Also Read:

ಜನಮನ ಗೆದ್ದ 'ಬೆಳ್ಳೂಡಿ ಕಾಳಿ' ಕಥೆ ಬೆಳ್ಳಿತೆರೆಗೆ ; ಡಾಕ್ಯುಮೆಂಟರಿ ರೂಪದಲ್ಲಿ ಶೀಘ್ರದಲ್ಲೇ ಬಿಡುಗಡೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online