Belagavi News:
ಮಳೆಗಾಲ ಆರಂಭವಾಗುತ್ತಿದ್ದಂತೆ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಸಮಯದಲ್ಲಿ ನಮ್ಮ ದೈನಂದಿನ ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಸಣ್ಣ ಅಜಾಗರೂಕತೆಯು ಸೋಂಕು, ಜೀರ್ಣಕ್ರಿಯೆ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.
ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ಆಹಾರ ಬೇಗ ಕೆಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೊರಗಿನ ಆಹಾರ ಸೇವನೆ, ಸ್ವಚ್ಛತೆ ಇಲ್ಲದ ಆಹಾರ ಪದಾರ್ಥಗಳು ಹಾಗೂ ಸರಿಯಾಗಿ ಸಂಗ್ರಹಿಸಿದ ಆಹಾರಗಳಿಂದ ದೂರ ಇರುವುದು ಉತ್ತಮ.
ಹೊರಗಿನ ಆಹಾರ ಸೇವನೆಯನ್ನು ತಪ್ಪಿಸುವುದು ಅಗತ್ಯವಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ, ಹೆಚ್ಚು ಸಮಯ ತೆರೆದಿಟ್ಟಿರುವಂತಹ ತಿಂಡಿ ಪದಾರ್ಥಗಳು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಗೆ ಕಾರಣವಾಗಬಹುದು.
ಹಸಿ ಆಹಾರಗಳ ಬಗ್ಗೆ ಎಚ್ಚರಿಕೆ ಇರುವುದು ಕೂಡ ತುಂಬಾ ಅವಶ್ಯಕ. ಮಳೆಗಾಲದಲ್ಲಿ ಹಸಿ ತರಕಾರಿಗಳು, ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ ಆಗಬಹುದು. ಸೇವಿಸುವ ಮೊದಲು ಸ್ವಚ್ಛವಾಗಿ ತೊಳೆಯುವುದು ಅತ್ಯಗತ್ಯ.
ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಕಡಿಮೆ ಮಾಡಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಇರುವುದರಿಂದ ಹೆಚ್ಚು ಎಣ್ಣೆಯುಕ್ತ ಮತ್ತು ಖರೀದ ಆಹಾರಗಳನ್ನು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಇಂತಹ ಆಹಾರಗಳ ಸೇವನೆ ನಿಯಂತ್ರಿಸುವುದು ಉತ್ತಮ.
ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದಿರುವವರಿಗೆ ಇಲ್ಲಿದೆ ನೋಡಿ ಸೂಕ್ತ ಪರಿಹಾರ:
ಮಳೆಗಾಲದಲ್ಲಿ ಬಿಸಿ ಮತ್ತು ತಾಜಾ ಆಹಾರ ಸೇವಿಸುವುದು, ಶುದ್ಧ ನೀರು ಕುಡಿಯುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಪೌಷ್ಟಿಕ ಆಹಾರ ಸೇವಿಸುವುದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸುವ ಮೂಲಕ ಮಳೆಗಾಲದ ಸೋಂಕುಗಳಿಂದ ದೂರ ಇರಬಹುದು. ಆರೋಗ್ಯಕರ ಆಹಾರ ಪದ್ಧತಿ ಮತ್ತು ಎಚ್ಚರಿಕೆಯ ಜೀವನ ಶೈಲಿ ಈ ಋತುವಿನಲ್ಲಿ ಅತ್ಯಂತ ಮುಖ್ಯವಾಗಿದೆ.
ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ - ಶಂಕು ತಡೆಗಟ್ಟಲು ಆರೋಗ್ಯಕರ ಆಹಾರ ಪದ್ಧತಿ ಮುಖ್ಯ :
ಮಳೆಗಾಲವು ಬೇಸಿಗೆಯ ಬಿಸಿಲಿನಿಂದ ನೆಮ್ಮದಿ ನೀಡಿದರು, ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂದ್ರಗಳ ಬೆಳವಣಿಗೆ ವೇಗವಾಗುತ್ತದೆ. ಇದರಿಂದ ಹೊಟ್ಟೆ ನೋವು, ಅಜೀರ್ಣ, ಆಹಾರ ವಿಷಬಾಧೆ ಸೇರಿದಂತೆ ಹಲವು ಸೋಂಕುಗಳ ಅಪಾಯ ಹೆಚ್ಚಾಗಬಹುದು.
ಮಳೆಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಸರಿಯಾದ ಆಹಾರ ಆಯ್ಕೆ ಮಾಡಿದಿದ್ದರೆ ಸಣ್ಣ ನಿರ್ಲಕ್ಷವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.
ಮಳೆಗಾಲದಲ್ಲಿ ತಪ್ಪಿಸಬೇಕಾದ ಆಹಾರಗಳು :
ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಮಾರಾಟವಾಗುವ ತೆರೆದ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು. ದೀರ್ಘಕಾಲ ತೆರೆದಿಟ್ಟಿರುವ ತಿಂಡಿಗಳಲ್ಲಿ ಬ್ಯಾಕ್ಟಿರಿಯ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಮುಂಚಿತವಾಗಿ ಕತ್ತರಿಸಿ ಇಟ್ಟಿರುವ ಹಣ್ಣುಗಳು ಹಾಗೂ ಸ್ವಚ್ಛವಾಗಿ ಸಂಗ್ರಹಿಸದ ಆಹಾರಗಳು ಅಪಾಯವನ್ನು ಹೆಚ್ಚಿಸಬಹುದು. ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯದೆ ಸೇವಿಸುವುದು ಕೂಡ ಆರೋಗ್ಯಕ್ಕೆ ಹಾನಿಕರವಾಗಬಹುದು.
ಕಚ್ಚಾ ಸಲಾಡ್, ಸರಿಯಾಗಿ ಬೇಯದ ಮಾಂಸಹಾರ ಹಾಗೂ ತಾಜಾ ಅಲ್ಲದ ಆಹಾರಗಳಿಂದ ದೂರವಿರುವುದು ಉತ್ತಮ. ಇಂತಹ ಆಹಾರಗಳು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಹೆಚ್ಚು ಎಣ್ಣೆ ಮತ್ತು ಮಸಾಲೆಯುಕ್ತ ಆಹಾರಕ್ಕೆ ಎಚ್ಚರ :
ಮಳೆಗಾಲದಲ್ಲಿ ಜೀರ್ಣಕ್ರಿಯ ಸಾಮಾನ್ಯಕ್ಕಿಂತ ನಿಧಾನವಾಗಬಹುದು. ಈ ಸಮಯದಲ್ಲಿ ಹೆಚ್ಚು ಎಣ್ಣೆಯಲ್ಲಿ ಕರೆದ ಆಹಾರ, ಅತಿಯಾದ ಮಸಾಲೆ ಪದಾರ್ಥಗಳು ಹೊಟ್ಟೆಯ ತೊಂದರೆ ಉಂಟು ಮಾಡಬಹುದು. ಹೊಟ್ಟೆ ಉಬ್ಬರ, ಅಜೀರ್ಣ ಹಾಗೂ ಅಸಹಜತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು? :
ಮಳೆಗಾಲದಲ್ಲಿ ಮನೆಯಲ್ಲೇ ತಯಾರಿಸಿದ ಬಿಸಿ ಮತ್ತು ತಾಜಾ ಆಹಾರ ಸೇವಿಸುವುದು ಉತ್ತಮ. ಶುದ್ಧ ನೀರು ಕುಡಿಯುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಆಹಾರವನ್ನು ಸರಿಯಾಗಿ ಸಂಗ್ರಹಿಸುವುದು ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಸಮರ್ಪಕ ನಿದ್ರೆ ಮತ್ತು ಸ್ವಚ್ಛ ಜೀವನ ಶೈಲಿಯಿಂದ ಮಳೆಗಾಲದ ಸೋಂಕುಗಳಿಂದ ದೂರ ಇರಬಹುದು. ಮಳೆಗಾಲದಲ್ಲಿ ಆಹಾರದ ಬಗ್ಗೆ ಎಚ್ಚರಿಕೆ ವಹಿಸುವುದು ಆರೋಗ್ಯ ಕಾಪಾಡಿಕೊಳ್ಳುವ ಪ್ರಮುಖ ಹೆಜ್ಜೆಯಾಗಿದೆ.
ಮಳೆಗಾಲದ ಆರೋಗ್ಯ ಎಚ್ಚರಿಕೆ - ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಸಂಕಿನಿಂದ ದೂರ ಇರಲು ಹೀಗೆ ಮಾಡಿ :
ಮಳೆಗಾಲದಲ್ಲಿ ವಾತಾವರಣದಲ್ಲಿನ ತೇವಾಂಶ ಹೆಚ್ಚಾಗುವುದರಿಂದ ವಿವಿಧ ರೀತಿಯ ಸಂಕುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಆಹಾರ ಮತ್ತು ನೀರಿನ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಹಾಗೂ ಇತರ ಆರೋಗ್ಯ ತೊಂದರೆಗಳು ಎದುರಾಗಬಹುದು.
ಮಳೆಗಾಲದಲ್ಲಿ ಪದೇ ಪದೇ ಹೊಟ್ಟೆ ನೋವು, ವಾಂತಿ, ಅತಿಸಾರ, ಹೊಟ್ಟೆ ಉಬ್ಬರ, ಜ್ವರ, ದೌರ್ಬಲ್ಯ ಅಥವಾ ಹಸಿವು ಕಡಿಮೆಯಾಗುವುದು ಕಂಡು ಬಂದರೆ ನಿರ್ಲಕ್ಷಿಸಬಾರದು. ಇವು ದೇಹದಲ್ಲಿ ಸೋಂಕು ಉಂಟಾಗಿರುವ ಸೂಚನೆಗಳಾಗಿರಬಹುದು.
ದೇಹದಲ್ಲಿ ನೀರಿನ ಕೊರತೆ, ನಿರಂತರ ಆಯಾಸ ಅಥವಾ ಹಲವು ದಿನಗಳ ಕಾಲ ಆರೋಗ್ಯ ಸಮಸ್ಯೆಗಳು ಮುಂದುವರೆದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಗಳು ಗಂಭೀರವಾಗುವುದನ್ನು ತಡೆಯಬಹುದು.
ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು :
1. ಮಳೆಗಾಲದಲ್ಲಿ ಯಾವಾಗಲೂ ತಾಜಾ ಮತ್ತು ಸ್ವಚ್ಛ ಆಹಾರ ಸೇವಿಸುವುದು ಮುಖ್ಯ. ಊಟದ ಮೊದಲು ಹಾಗೂ ನಂತರ ಕೈಗಳನ್ನು ಚೆನ್ನಾಗಿ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
2. ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ಬಳಸಬೇಕು. ಸಾಕಷ್ಟು ನೀರು ಕುಡಿಯುವುದು ಹಾಗೂ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಆರೋಗ್ಯಕ್ಕೆ ಸಹಾಯಕಾರಿ.
3. ಹೊರಗಿನ ಆಹಾರ ಸೇವನೆಯನ್ನು ಕಡಿಮೆ ಮಾಡುವುದು, ಆಹಾರವನ್ನು ಹೆಚ್ಚು ಸಮಯ ತೆರೆದಿಡದಿರುವುದು ಮತ್ತು ಸರಿಯಾದ ರೀತಿಯಲ್ಲಿ ಸಂಗ್ರಹಿಸುವುದು ಶಂಕು ತಡೆಗಟ್ಟಲು ಸಹಾಯಮಾಡುತ್ತದೆ.
4. ಜೊತೆಗೆ ಸಾಕಷ್ಟು ನಿದ್ರೆ , ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನ ಶೈಲಿಗೆ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ಸಣ್ಣ ಮುನ್ನೆಚ್ಚರಿಕೆಗಳೆ ದೊಡ್ಡ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಬಹುದು.
Also Read:
ಗೃಹಲಕ್ಷ್ಮಿ ಹಣದಲ್ಲಿ ಭಾರಿ ಅಕ್ರಮ ಆರೋಪ; ಎಸ್ಐಟಿ ತನಿಖೆ ನಡೆಸಿ ಎಂದ ಆರ್. ಅಶೋಕ್