BELAGAVI NEWS:
ಟೆಲ್ ಅವೀವ: ಪ್ರಧಾನಿ ಬೆಂಜಮೀನ್ ನೇತನ್ಯಾಹು ನೇತೃತ್ವದ ಸರ್ಕಾರ ತನ್ನ ನಾಲ್ಕು ವರ್ಷಗಳ ಪೂರ್ಣ ಅಧಿಕಾರವಧಿಯನ್ನು ಮುಕ್ತಾಯಗೊಳಿಸುವ ಹಂತದಲ್ಲಿದ್ದು, ದೇಶದಲ್ಲಿ ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಜುಲೈ 12ರಂದು ಹಾಲಿ ನೆಸ್ಸೆಟ್ ತನ್ನ 4 ವರ್ಷಗಳ ಪೂರ್ಣ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲಿದ್ದು, ಲಿಕುಡ್ ಪಕ್ಷದ ಹಿರಿಯ ನಾಯಕ ಓಫಿರ್ ಕಾಟ್ಜ್ ಅವರು ಚುನಾವಣೆಯ ದಿನಾಂಕವನ್ನು ದೃಢಪಡಿಸುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ತಿಳಿಸಿದೆ.
ಈ ಚುನಾವಣೆ ಹಲವು ಕಾರಣಗಳಿಂದ ಐತಿಹಾಸಿಕ ಮಹತ್ವ ಪಡೆದಿದೆ. 1988ರ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ನ ಸಾವರ್ತಿಕ ಚುನಾವಣೆ ಪೂರ್ಣ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಕಳೆದ ಐದು ದಶಕಗಳಲ್ಲಿ ನಾಲ್ಕು ವರ್ಷಗಳ ಪೂರ್ಣ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ನೇತೃತ್ವದ ಆಡಳಿತ ಪಾತ್ರವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬೆಳವಣಿಗೆ ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗುತ್ತಿದ್ದು, ಮುಂಬರುವ ಚುನಾವಣೆಯತ್ತ ದೇಶದ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.
ಇಸ್ರೇಲ್ ಚುನಾವಣೆ: ಜುಲೈ 17 ರಿಂದ ಅಧಿಕೃತ ಪ್ರಕ್ರಿಯೆ ಆರಂಭ, ಸೆಪ್ಟೆಂಬರ್ 7ಕ್ಕೆ ಅಭ್ಯರ್ಥಿಗಳ ಪಟ್ಟಿ ಸಲ್ಲಿಕೆ
ಇಸ್ರೇಲ್ ಮಾಧ್ಯಮಗಳ ವರದಿ ಪ್ರಕಾರ, ನೆಸ್ಸೆಟ್ ಜುಲೈ 17ರಂದು ಅಧಿಕೃತವಾಗಿ ಚುನಾವಣಾ ಪ್ರಕ್ರಿಯೆಗೆ ಪ್ರವೇಶಿಸಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲು ಸೆಪ್ಟೆಂಬರ್ 7ರ ಗಡುವು ನಿಗದಿ ಪಡಿಸಲಾಗಿದೆ.
2022 ರ ಚುನಾವಣೆಯಲ್ಲಿ ವಿವಿಧ ಬಲಪಂಥೀಯ ಪಕ್ಷಗಳು ಒಗ್ಗೂಡಿಸುವ ಮೂಲಕ ಪ್ರಧಾನಿ ಬೆಂಜಮೀನ್ ನೇತನ್ಯಾಹು ರಾಜಕೀಯವಾಗಿ ಭರ್ಜರಿ ಪುನರಾಗಮನ ಮಾಡಿದ್ದರು. ಅವರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಬಳಿಕ ದೇಶದ ಆಡಳಿತದ ಹೊಣೆ ಹೊತ್ತಿತ್ತು.
ಆದರೆ, 2023ರ ಅಕ್ಟೋಬರ್ ನಲ್ಲಿ ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿಯ ನಂತರ ತೀವ್ರ ರಾಜಕೀಯ ಮತ್ತು ಭದ್ರತಾ ಸವಾಲುಗಳನ್ನು ಎದುರಿಸಬೇಕಾಯಿತು. ಈ ದಾರಿಯು ಇಸ್ರೇಲ್ ನ ಭದ್ರತಾ ವ್ಯವಸ್ಥೆ ಮತ್ತು ಸರ್ಕಾರದ ಕಾರ್ಯವೈಕರಿಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ನಡೆಯು ನಡೆಯಲಿರುವ ರಾಷ್ಟ್ರಪತಿಗಳ 2026ರ ಸಾರ್ವತ್ರಿಕ ಚುನಾವಣೆ ನೇತನ್ಯಾಹು ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಮಹತ್ವದ ರಾಜಕೀಯ ಪರೀಕ್ಷೆಯಾಗಿ ಪರಿಣಮಿಸಿದ್ದು, ದೇಶದ ಭವಿಷ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವ ಚುನಾವಣೆಯಾಗಿ ಗಮನ ಸೆಳೆದಿದೆ.
ಚುನಾವಣೆಗೂ ಮುನ್ನ ಬೆಂಜಮೀನ್ ನೇತನ್ಯಾಹುಗೆ ಹೆಚ್ಚಿನ ರಾಜಕೀಯ ಸವಾಲು
ಇಸ್ರೇಲ್ ಪ್ರಧಾನಿ ಬೆಂಜಮೀನ್ ನೇತನ್ಯಾಹು ಚುನಾವಣೆಗು ಮುನ್ನ ಹಲವು ರಾಜಕೀಯ ಮತ್ತು ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದಾರೆ.
2019 ರಿಂದ ಅವರು ಬ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದ ನ್ಯಾಯಾಂಗ ಪ್ರಕ್ರಿಯೆಯನ್ನು ಎದುರಿಸುತ್ತಿದ್ದು, ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಬೆಂಜಮೀನ್ ನೇತನ್ಯಾಹು ಈ ಆರೋಪಗಳನ್ನು ನಿರಾಕರಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ಇದೇ ವೇಳೆ, ಗಾಜಾ ಯುದ್ಧ ಮತ್ತು ಇತರೆ ಸಂಘರ್ಷಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಕ್ರಮಗಳ ಚರ್ಚೆ ನಡೆಯುತ್ತಿದೆ. ಗಾಜಾದಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ಜೀವ ಹಾನಿ ಸಂಭವಿಸಿದ್ದು, ಈ ಕಾರ್ಯಾಚರಣೆಯು ಜಾಗತಿಕ ಮಟ್ಟದಲ್ಲಿ ಈಕೆಗೆ ಗುರಿಯಾಗಿದೆ. ಇರಾನ್ ನೊಂದಿಗೆ ಉಂಟಾದ ಉದ್ವಿಗ್ನತೆಯ ನಿರ್ವಹಣೆಯ ಬಗ್ಗೆಯೂ ಸರ್ಕಾರದ ವಿರುದ್ಧ ವಿರೋಧ ವ್ಯಕ್ತವಾಗಿದೆ.
2023ರ ಅಕ್ಟೋಬರ್ ನಲ್ಲಿ ಹಮಾಸ್ ದಾರಿಯ ನಂತರ ಉಂಟಾದ ಭದ್ರತಾ ವೈಫಲ್ಯಗಳ ಕುರಿತು ದೇಶದೊಳಗೆ ಸಾರ್ವಜನಿಕ ಅಸಮಾಧಾನ ಹೆಚ್ಚಾಗಿದೆ. ವಿವಿಧ ಸಮೀಕ್ಷೆಗಳು ಸರ್ಕಾರದ ಕಾರ್ಯವೈಕರಿ ಕುರಿತು ಮತದಾರರಲ್ಲಿ ಭಿನ್ನಾಭಿಪ್ರಾಯಗಳು ಇರುವುದನ್ನು ಸೂಚಿಸುತ್ತಿದ್ದು, ಪ್ರತಿಪಕ್ಷಗಳು ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿವೆ. ಇನ್ನೊಂದೆಡೆ, ನೇತನ್ಯಾಹು ಬೆಂಬಲಿಗರು ರಾಷ್ಟ್ರೀಯ ಭದ್ರತೆ ಮತ್ತು ಅನುಭವವನ್ನು ಮುಂದಿಟ್ಟು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಬೆಂಜಮೀನ್ ನೇತನ್ಯಾಹು ಅವರ ರಾಜಕೀಯ ಭವಿಷ್ಯ ಬಂದ ನಿರ್ಧರಿಸುವ ಮಹತ್ವದ ಘಟ್ಟವಾಗಿದ್ದು, ದೇಶಿಯ ಹಾಗೂ ಜಾಗತಿಕ ಮಟ್ಟದಲ್ಲಿ ಕುತುಹಲ ಕೆರಳಿಸಿದೆ.