BELAGAVI NEWS :
ಅಯೋಧ್ಯೆ,ಅಯೋದ್ಯ ರಾಮ ಮಂದಿರ ದೇಣಿಗೆ ಸುತ್ತಲಿನ ವಿವಾದಗಳು ತೀವ್ರ ಗೊಳ್ಳುತ್ತಿರುವ ನಡುವೆಯೇ ಶ್ರೀರಾಮ ಜನ್ಮ ಭೂಮಿ ತೀರ್ಥ ಟ್ರಸ್ಟ್ ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅವರು ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಭಾವುಕ ಪತ್ರವನ್ನು ಬರೆದಿದ್ದಾರೆ.
ದೇಣಿಗೆ ಕಳ್ಳತನದ ಆರೋಪಗಳು ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ,ಟ್ರಸ್ಟ್ ನ ಮಹತ್ವದ ಹೈ ವೋಲ್ಟೇಜ್ ಸಭೆಗೆ ಕೆಲವೇ ಗಂಟೆಗಳ ಮುನ್ನ ಈ ಪತ್ರ ಹೊರ ಬಿದ್ದಿದೆ .ಪತ್ರದಲ್ಲಿ ಟ್ರಸ್ಟ್ ನ ಕಾರ್ಯವೈಕರಿ, ದೇಣಿಗೆ ಸಂಗ್ರಹ ಮತ್ತು ನಿರ್ವಹಣೆಯ ಪಾರದರ್ಶಕತೆ ಕುರಿತು ಪ್ರಶ್ನೆ ನೀಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ರಾಮ ಮಂದಿರದ ಎಣಿಕೆ ವಿಷಯವು ಮತ್ತೆ ಸಾರ್ವಜನಿಕ ಚರ್ಚೆಯ ಕೇಂದ್ರ ಬಿಂದುವಾಗಿದೆ. ಸರ್ಕಾರದ ಪ್ರತಿಕ್ರಿಯೆ ಮತ್ತು ಮುಂದಿನ ಕಲಿಕಾ ಕ್ರಮಗಳತ್ತ ಎಲ್ಲರ ಗಮನ ಹರಿದಿದೆ.
ರಾಮ ಮಂದಿರದ ದೇಣಿಗೆ ಸುತ್ತಲಿನ ಆರೋಪಗಳು ತೀವ್ರ ಚರ್ಚೆಗೆ ಕಾರಣವಾಗಿರುವ ನಡುವೆಯೇ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅವರು ತಮ್ಮ ಪತ್ರದ ಮೂಲಕ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ದೇಣಿಗೆ ದುರುಪಯೋಗದ ಆರೋಪಗಳಿಂದ ತಮಗೆ ತೀವ್ರ ನೋವು ಉಂಟಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಅವರು, "ರಾಮಲಲ್ಲಾ ಮಂದಿರದ ದೇಣಿಗೆಯಲ್ಲಿ ಕಳ್ಳತನ ನಡೆದಿದೆ ಎಂಬ ಆರೋಪ ಕೇಳಿ ನನಗೆ ತೀವ್ರ ದುಃಖವಾಗಿದೆ. ಇದು ಕೋಟ್ಯಾಂತರ ಭಕ್ತರ ನಂಬಿಕೆಯ ವಿಷಯ. ಈ ಪಾಪದ ಕೃತ್ಯ ಎಸಗಿದ ಯಾರಿಗಾದರೂ ಕಠಿಣ ಶಿಕ್ಷೆ ಆಗಬೇಕು" ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿರುವ ಅವರು, ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. "ಪಾಪ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ಭಗವಾನ್ ರಾಮನ ಹೆಸರನ್ನು ಯಾವುದೇ ವಯಕ್ತಿಕ ಲಾಭ ಅಥವಾ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂದು ಕೂಡ ಮಹಾಂತ ನೃತ್ಯ ಗೋಪಾಲ್ ದಾಸ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಪತ್ರ ಇದೀಗ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ
ರಾಮಮಂದಿರದ ನಿನಗೆ ಕಳ್ಳತನ ಆರೋಪಗಳ ಕುರಿತು ವಿಶೇಷ ಕಲಿಕಾ ತಂಡ ತನಿಖೆ ಮುಂದುವರಿಸುತ್ತಿರುವ ನಡುವೆಯೇ ಶ್ರೀರಾಮ ಜನ್ಮಭೂಮಿತ ಕ್ಷೇತ್ರ ಟ್ರಸ್ಟ್ ನ ಮಹತ್ವದ ತುರ್ತು ಸಭೆ ಇಂದು ಮಧ್ಯಾನ ಮೂರು ಗಂಟೆಗೆ ಅಯೋಧ್ಯೆಯ ಮಣಿ ರಾಮ್ ದಾಸ್ ಛವಾನಿನಲ್ಲಿ ನಡೆಯಲಿದೆ. ಈ ಸಭೆ ಟ್ರಸ್ಟ್ ನ ಮುಂದಿನ ಕಾರ್ಯ ನಿರ್ವಹಣೆ ಮತ್ತು ದೇಣಿಗೇ ನಿರ್ವಹಣಾ ವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಸಭೆಯ ಪ್ರಮುಖ ಅಜೆಂಡದಲ್ಲಿ ಹಲವು ಮಹತ್ವದ ವಿಷಯಗಳು ಸೇರಿವೆ. ಮೊದಲನೆಯದಾಗಿ, ಜೂನ್ 26ರಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದಲ್ಲದೆ, ದೇಣಿಗೆ ಕಳ್ಳತನದ ಆರೋಪಗಳ ಕುರಿತು ಎಸ್ಐಟಿ ಸಿದ್ಧಪಡಿಸಿರುವ ಮಧ್ಯಂತರ ವರದಿಯನ್ನು ಸಭೆಯಲ್ಲಿ ಪರಿಶೀಲಿಸುವ ಸಾಧ್ಯತೆ ಇದೆ. ತನಿಖೆಯ ಪ್ರಗತಿ ಮತ್ತು ಮುಂದಿನ ಕ್ರಮಗಳ ಕುರಿತು ಟ್ರಸ್ಟ್ ಸದಸ್ಯರು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಾರದರ್ಶಕತೆ ಹೆಚ್ಚಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ದೇಣಿಗೆ ಪೆಟ್ಟಿಗೆಗಳ ಹಣ ಎಣಿಕೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಫೂಲ್‌ಪ್ರೂಫ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಕೂಡ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ತುರ್ತು ಸಭೆಯ ಫಲಿತಾಂಶ ದತ್ತ ದೇಶಾದ್ಯಂತ ಭಕ್ತರು ಮತ್ತು ರಾಜಕೀಯ ವಲಯದ ಗಮನ ಹರಿದಿದೆ.
ಶ್ರೀರಾಮ ಮಂದಿರದ ದೇನಿಗೆ ಸುತ್ತಲಿನ ವಿವಾದದ ಹಿನ್ನೆಲೆ ಇದೀಗ ಮತ್ತಷ್ಟು ತೀವ್ರಗೊಂಡಿದೆ.ರಾಮ ಮಂದಿರದ ಕಾಣಿಕೆ ಪೆಟ್ಟಿಗೆಯಲ್ಲಿದ್ದ ಸುಮಾರು 7 ರಿಂದ 7.5ಕೋಟಿ ರೂ.ಹಣ ಪಟ್ಟಿಯಾಗಿದೆ ಎಂಬ ಆರೋಪವನ್ನು ಮೊದಲು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಮಾಡಿದ್ದರು. ಈ ಆರೋಪಗಳು ಆರಂಭದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ನಿರಾಕರಿಸಲ್ಪಟ್ಟಿದ್ದವು.
ಆದರೆ ನಂತರ ವಿರೋಧ ಪಕ್ಷಗಳ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ತನಿಖೆಗೆ ಆದೇಶಿಸಿತು. ತನಿಖೆಯ ಮೇಲೆ ಹಣದ ಅಕ್ರಮ ಮತ್ತು ಅವ್ಯವಹಾರ ನಡೆದಿರುವ ಶಂಕೆ ಬಲವಾಗಿದ್ದು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಈ ಎಲ್ಲ ಘಟನೆಗಳ ಹಿನ್ನೆಲೆ ಇಂದಿನ ಟ್ರಸ್ಟ್ ತುರ್ತು ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಮುಂದಿನ ನಿರ್ಧಾರಗಳು ಹಾಗೂ ಎಸ್ಐಟಿ ವರದಿಗಳ ಬೆಳವಣಿಗೆಗಳತ್ತ ಇಡೀ ದೇಶಗಳ ಗಮನ ಹರಿದಿದೆ.