ಪತ್ನಿ, ಅತ್ತೆಯನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕ
ಮಾಜಿ ಸೈನಿಕನೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುರುದಾಸ್ಪುರ (ಪಂಜಾಬ್):
ಆರೋಪಿ ಪ್ರಸ್ತುತ ಜೈಲೊಂದರ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ಗುಥಿ ಗ್ರಾಮಕ್ಕೆ ಹೋಗಿ ಸರ್ಕಾರಿ ಎಕೆ-47 ಗನ್ನಿಂದ ಗುಂಡು ಹಾರಿಸಿ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಯ ನಂತರ, ಆರೋಪಿ ಗುರುಪ್ರೀತ್ ಸಿಂಗ್ ಸ್ಥಳದಿಂದ ಪರಾರಿಯಾಗಿ ಗುರುದಾಸ್ಪುರದ ಸರ್ಕಾರಿ ಕ್ವಾರ್ಟರ್ಸ್ನಲ್ಲಿ ಅಡಗಿಕೊಂಡಿದ್ದನು. ಪೊಲೀಸರು ಆತನನ್ನು ಬಂಧಿಸಲು ತೆರಳಿದಾಗ, ಆತ ತಾನೂ ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಶರಣಾಗುವಂತೆ ಒಂದು ಗಂಟೆ ಕಾಲ ಮನವಿ ಮಾಡಿದರೂ ಸಹ, ಶರಣಾಗುವ ಬದಲು, ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
"ಗುರುಪ್ರೀತ್ ಹಾಗೂ ಅಕ್ವಿಂದರ್ ಕೌರ್ 2016ರಲ್ಲಿ ವಿವಾಹವಾಗಿದ್ದರು. ಆತ ಮಾನಸಿಕ ಅಸ್ವಸ್ಥನಾಗಿದ್ದು, ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ನಾವು ಪೊಲೀಸರಿಗೆ ಹಲವಾರು ಬಾರಿ ದೂರು ನೀಡಿದ್ದೆವು. ಮಹಿಳಾ ಆಯೋಗಕ್ಕೂ ದೂರು ಕೊಟ್ಟಿದ್ದೆವು. ಆದರೂ ಸಹ ಆತ ತನ್ನ ವರ್ತನೆ ಬದಲಿಸಿರಲಿಲ್ಲ. 2020ರಲ್ಲಿ ನನ್ನ ಸಹೋದರ ನಿಧನರಾದ ಬಳಿಕ, ನನ್ನ ತಾಯಿಯು ನನ್ನ ಸಹೋದರಿ ಅಕ್ವಿಂದರ್ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಗುರುಪ್ರೀತ್ ಫೋನ್ನಲ್ಲಿಯೂ ಸಹ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಆದರೆ ಅವನು ನಿಜವಾಗಿಯೂ ಕೊಲೆ ಮಾಡುತ್ತಾನೆ ಎಂದು ನಮಗೆ ತಿಳಿದಿರಲಿಲ್ಲ" ಮೃತ ಅಕ್ವಿಂದರ್ ಕೌರ್ ಅವರ ಸಹೋದರಿ ಆರೋಪ ಮಾಡಿದ್ದಾರೆ.
ಪಂಜಾಬ್ನ ಗುರುದಾಸ್ಪುರದಲ್ಲಿ ಮಾಜಿ ಸೈನಿಕನೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಜರುಗಿದೆ. ಗುರುಪ್ರೀತ್ ಸಿಂಗ್ ಎಂಬ ಮಾಜಿ ಸೈನಿಕ ತನ್ನ ಪತ್ನಿ ಅಕ್ವಿಂದರ್ ಕೌರ್ ಮತ್ತು ಅತ್ತೆ ಗುರ್ಜಿತ್ ಕೌರ್ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಗುರುದಾಸ್ಪುರದ ಎಸ್ಎಸ್ಪಿ ಆದಿತ್ಯ, "ಆರೋಪಿ ಗುರುಪ್ರೀತ್ ಸಿಂಗ್ ಗುರುದಾಸ್ಪುರದ ನಿವಾಸಿಯಾಗಿದ್ದು, ಸೇನೆಯಿಂದ ನಿವೃತ್ತರಾಗಿದ್ದರು. ಗುರುದಾಸ್ಪುರದ ಕೇಂದ್ರ ಕಾರಾಗೃಹದಲ್ಲಿ ಕಾವಲುಗಾರನಾಗಿ ಕರ್ತವ್ಯದಲ್ಲಿದ್ದರು. ಆತ ತನ್ನ ಪತ್ನಿ ಮತ್ತು ಅತ್ತೆಯನ್ನು ಕೊಂದಿದ್ದಾನೆ ಎಂದು ನಮಗೆ ತಡರಾತ್ರಿ ಮಾಹಿತಿ ಬಂದಿತು. ಆದ್ದರಿಂದ ನಾವು ಆತನನ್ನು ಬಂಧಿಸಲು ವಿವಿಧ ತಂಡಗಳ ಮೂಲಕ ತನಿಖೆಯನ್ನು ಪ್ರಾರಂಭಿಸಿದೆವು. ಪೊಲೀಸರು ಸುಮಾರು ಒಂದು ಗಂಟೆ ಶರಣಾಗುವಂತೆ ಮನವಿ ಮಾಡಿದರು. ಆದರೆ ಆತ ಸ್ವತಃ ಗುಂಡು ಹಾರಿಸಿಕೊಂಡ" ಎಂದು ಮಾಹಿತಿ ನೀಡಿದರು.
ಬೆಳಗಿನಜಾವ 3 ಗಂಟೆಗೆ ಮನೆ ಬಳಿ ಬಂದ ಆತ ಕಾಂಪೌಂಡ್ ಹತ್ತಿ ಒಳಗೆ ಪ್ರವೇಶಿಸಿದ್ದಾನೆ. ಬಾಗಿಲು ತೆರೆಯುವಂತೆ ಹೇಳಿದ್ದು, ಅಕ್ವಿಂದರ್ ಕೌರ್ ಬಂದು ಬಾಗಿಲು ಓಪನ್ ಮಾಡುತ್ತಿದ್ದಂತೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಕುಸಿದುಬಿದ್ದಳು.
ನಂತರ, ನೆಲದ ಮೇಲೆ ಮಲಗಿದ್ದ ಆಕೆಯ ತಾಯಿಗೂ ಗುಂಡು ಹಾರಿಸಿದ್ದಾನೆ. ಬಳಿಕ ಗುರುಪ್ರೀತ್ ಇಲ್ಲಿನ ಫ್ಲಾಟ್ಗಳಲ್ಲಿ ಅಡಗಿಕೊಂಡಿದ್ದ. ಪೊಲೀಸರು ಶರಣಾಗಲು ಮನವಿ ಮಾಡಿದಾಗ, ಮಾಧ್ಯಮಗಳಿಗೆ ಕರೆ ಮಾಡಲು ಹೇಳಿದ್ದಾನೆ. ನಾವು ಇಲ್ಲಿಗೆ ಬಂದಾಗ, ಗುರುಪ್ರೀತ್ ಕೂಡ ಗುಂಡು ಹಾರಿಸಿಕೊಂಡ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಇನ್ನಷ್ಟು ಓದಿರಿ :
ನಿಗದಿತ ದಿನಾಂಕದಂತೆ ಕೆಎಸ್ಸಿಎ ಚುನಾವಣೆ ನಡೆಸಲು ಹೈಕೋರ್ಟ್ ನಿರ್ದೇಶನ