<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಫ್ರೆಂಚ್ ಅಧ್ಯಕ್ಷರ ಸಿರಿಯಾ ಭೇಟಿ ವೇಳೆ ಆತಂಕ: ಹೋಟೆಲ್ ಸಮೀಪ ಸ್ಪೋಟ, 18 ಜನರಿಗೆ ಗಾಯ

ಫ್ರೆಂಚ್ ಅಧ್ಯಕ್ಷರ ಸಿರಿಯಾ ಭೇಟಿ ವೇಳೆ ಆತಂಕ: ಹೋಟೆಲ್ ಸಮೀಪ ಸ್ಪೋಟ, 18 ಜನರಿಗೆ ಗಾಯ
Summary: A blast has occurred near the hotel where the French president was staying during his visit to Syria, injuring 18 people. Authorities are investigating the cause of the explosion and the security situation. The incident has sparked international concern.

belagavi news :

ಡಮಾಸ್ಕಸ್ ( ಸಿರಿಯಾ) : ಸಿರಿಯಾ ಪ್ರವಾಸದಲ್ಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆನ್ ಮ್ಯಾಕ್ರನ್ ಅವರು ತಂಗಿದ್ದ ಹೋಟೆಲ್ ಸಮೀಪ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾಕ್ರನ್ ಅವರು ಸಿರಿಯಾ ಅಧ್ಯಕ್ಷ ಅಹಮದ್ ಅಲ್ ಶರಾ ಅವರನ್ನು ಭೇಟಿ ಮಾಡಲು ಅಧ್ಯಕ್ಷರ ಅರಮನೆಗೆ ತೆರಳಿದ್ದ ವೇಳೆ, ಅವರು ವಾಸ್ತವ್ಯ ಹೂಡಿದ್ದ ಪೋರ್ ಸೀಸನ್ ಹೋಟೆಲ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಪೋಟದ ಕುರಿತು ಸಿರಿಯಾ ಅಧಿಕಾರಿ ತಕ್ಷಣ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಿರಿಯಾ ಮಾಧ್ಯಮಗಳ ವರದಿ ಪ್ರಕಾರ, ಫ್ರೆಂಚ್ ಅಧ್ಯಕ್ಷರು ಪೋರ್ ಸೀಸನ್ ಹೋಟೆಲ್ ನಲ್ಲಿ ತಂಗಿದ್ದರು. ಆದರೆ, ಮ್ಯಾಕ್ರನ್ ಸುರಕ್ಷಿತವಾಗಿದ್ದು, ಸಿರಿಯಾ ಅಧ್ಯಕ್ಷ ಅಲ್ ಶರಾ ಅವರೊಂದಿಗಿನ ಅವರ ಅಧಿಕೃತ ಭೇಟಿಗಳು ಮುಂದುವರಿದಿವೆ ಎಂದು ಫ್ರೆಂಚ್ ಅಧ್ಯಕ್ಷರ ಕಚೇರಿ ಮೂಲಗಳು ತಿಳಿಸಿವೆ.

ಅಹಮದ್ ಅಲ್ ಶರಾ ಅಧಿಕಾರಕ್ಕೆ ಬಂದವಳಿಕ ಸಿರಿಯಾಗೆ ಭೇಟಿ ನೀಡಿದ ಮೊದಲ ಪಾಶ್ಚಿಮಾತ್ಯ ದೇಶದ ನಾಯಕ ಎಮ್ಯಾನುಯೆನ್ ಮ್ಯಾಕ್ರನ್ ಆಗಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಗೂ ಮುನ್ನ ಈ ಭೇಟಿ ನಡೆದಿದೆ.

ಸಿರಿಯಾ ಮೇಲಿನ ನಿರ್ಬಂಧಗಳನ್ನು ಸಡಿಲಿಸುವಂತೆ ಯುರೋಪ ಆಗುವ ಅಮೆರಿಕವನ್ನು ಪ್ರೇರೇಪಿಸುವ ಪ್ರಯತ್ನಗಳಲ್ಲಿ ಮ್ಯಾಕ್ರನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆರ್ಥಿಕ ನಿಯೋಗದೊಂದಿಗೆ ಡಮಾಸ್ಕಸ್ ಗೆ ಆಗಮಿಸಿರುವ ಅವರು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.

14 ವರ್ಷಗಳ ಯುದ್ಧದ ಬಳಿಕ ಸಿರಿಯಾದ ಪುನರ್ ನಿರ್ಮಾಣಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಮ್ಯಾಕ್ರನ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.

ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ಎರಡು ಸ್ಪೋಟಗಳು ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಸಿರಿಯಾ ಮಾಧ್ಯಮಗಳು ವರದಿ ಮಾಡಿವೆ. ಸಿರಿಯಾ ಆಂತರಿಕ ಸಚಿವರು ನೀಡಿರುವ ಮಾಹಿತಿಯ ಪ್ರಕಾರ, ನಗರದ ಹೃದಯ ಭಾಗದಲ್ಲಿ ಈ ಸ್ಫೋಟಗಳು ನಡೆದಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ವರದಿ ಪ್ರಕಾರ, ಒಂದು ಸ್ಫೋಟವು ಕಸದ ತೊಟ್ಟಿಯಲ್ಲಿ ಹಾಗೂ ಮತ್ತೊಂದು ಸ್ಫೋಟವು ನಿಲ್ಲಿಸಿದ್ದ ಕಾರಿನಲ್ಲಿ ಸಂಭವಿಸಿದೆ. ಘಟನೆ ಬಳಿಕ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತಣಿಕೆ ಆರಂಭಿಸಿವೆ.

ಡಮಾಸ್ಕಸ್ ನ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರೀಯ ವಸ್ತು ಸಂಗ್ರಹಾಲಯ ಹಾಗೂ ಪ್ರವಾಸೋದ್ಯಮ ಕಚೇರಿ ಮುಖ್ಯ ಕಚೇರಿ ಸಮೀಪ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಾಳಿಯ ಕೊನೆಯನ್ನು ಯಾವುದೇ ಸಂಘಟನೆ ಈವರೆಗೆ ಹೊತ್ತುಕೊಂಡಿಲ್ಲ.

ಇತ್ತೀಚೆಗೆ ಡಮಾಸ್ಕಸ್ ನ ಕೆಫೆಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ 10 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯ ಬೆನ್ನೆಲ್ಲೆ ರಾಜಧಾನಿಯಲ್ಲಿ ಮತ್ತೊಂದು ಸ್ಪೋಟ ವರದಿಯಾಗಿರುವುದು ಆತಂಕ ಮೂಡಿಸಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online