<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

FBI Action: ಅಮೆರಿಕದ ಡ್ರಗ್ಸ್ ಪ್ರಕರಣದಲ್ಲಿ ಹರ್ಮನ್ ವೀರ್ ವಿರುದ್ಧ ಲುಕ್ ಔಟ್ ನೋಟಿಸ್

FBI Action: ಅಮೆರಿಕದ ಡ್ರಗ್ಸ್ ಪ್ರಕರಣದಲ್ಲಿ ಹರ್ಮನ್ ವೀರ್ ವಿರುದ್ಧ ಲುಕ್ ಔಟ್ ನೋಟಿಸ್
Summary: The FBI has issued a lookout notice against Indian national Harman Veer in connection with a drug smuggling case in the US. The investigation into the case has intensified and the US investigative agency has taken action to gather information about the accused.

Belagavi News:

ವಾಷಿಂಗ್ಟನ್ (ಅಮೆರಿಕ): ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಭಾರತೀಯ ಪ್ರಜೆ ಹರ್ಮನ್ ವೀರ್ ಸಿಂಗ್ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಕೆನಡಾ ಮೂಲದ ರವೀಂದರ್ ಧಂಡಾ ಗ್ಯಾಂಗ್ ಗಾಗಿ ಮಾದಕ ವಸ್ತು ಸಾಗಣೆ ಹಾಗೂ ವಿತರಣೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಹರ್ಮನ್ ವೀರ್ ಸಿಂಗ್ ವಿರುದ್ಧ ಕೇಳಿಬಂದಿದೆ.

ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್ ಪುರಿಯಾ ಮತ್ತು ರವೀಂದರ್ ಧಂಡಾ ನೇತೃತ್ವದ ಸಂಘಟಿತ ಅಪರಾಧ ಜಾಲಗಳನ್ನು ಗುರಿಯಾಗಿಸಿಕೊಂಡು ಎಫ್ ಬಿಐ ನಟಿಸುತ್ತಿರುವ ' ಆಪರೇಷನ್ ಹಾರ್ಡ್ ಬಾಲ್' ಕಾರ್ಯಾಚರಣೆಯ ಭಾಗವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಎಫ್ ಬಿಐ ಪ್ರಕಟಣೆಯ ಪ್ರಕಾರ, ಹರ್ಮನ್ ಸಿಂಗ್ ಮಾದಕವಸ್ತುಗಳ ವಿತರಣೆ ಮತ್ತು ರಫ್ತು ಪೂರೈಕೆಯ ಪಿತೂರಿಯಲ್ಲಿ ಭಾಗಿಯಾಗಿದ್ದು, ಅಂತಾರಾಷ್ಟ್ರೀಯ ಅಪರಾಧ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಹೀಗಾಗಿ ಆತ ಎಫ್ ಬಿಐಗೆ ಬೇಕಾಗಿರುವ ವ್ಯಕ್ತಿ ಎಂದು ತಿಳಿಸಲಾಗಿದೆ.

ಕೆನಡಾದ ವ್ಯಾಂಕೋವರ್ ಮೂಲದ ರವೀಂದರ್ ಧಂಡಾ ಸಂಘಟಿತ ಅಪರಾಧ ಗುಂಪು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ನಡುವೆ ಕೊಕೈನ್ ಹಾಗೂ ಮೆಥಾಂಫೆಟಮೈನ್ ಮಾದಕವಸ್ತುಗಳ ಕಳ್ಳ ಸಾಗಣೆಯಲ್ಲಿ ತೊಡಗಿದೆ ಎಂದು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ, ಲಾಸ್ ಏಂಜಲೀಸ್ ಜಿಲ್ಲಾ ನ್ಯಾಯಾಲಯಗಳು ಹರ್ಮನ್ ಸಿಂಗ್ ಬಂಧನಕ್ಕಾಗಿ ಅರೆಸ್ಟ್ ವಾರಂಟ್ ಜಾರಿ ಮಾಡಿವೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಅಮೆರಿಕ, ಕೆನಡಾ ಮತ್ತು ಯುರೋಪ್ ನ ಕಾನೂನು ಜಾರಿ ಸಂಸ್ಥೆಗಳು ಭಾರತ ಮೂಲದ ಮೂರು ಅಂತಾರಾಷ್ಟ್ರೀಯ ಸಂಘಟಿತ ಅಪರಾಧ ಜಾಲಗಳಿಗೆ ಸಂಬಂಧಿಸಿದ 24 ಮಂದಿಯನ್ನು ಬಂಧಿಸಿವೆ. ಇವರಲ್ಲಿ 11 ಮಂದಿ ಕ್ಯಾಲಿಫೋರ್ನಿಯಾ ಮೂಲದವರು ಎನ್ನಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ "ಆಪರೇಷನ್ ಹಾರ್ಡ್ ಬಾಲ್" ಅಡಿಯಲ್ಲಿ ಒಟ್ಟು 37 ಮಂದಿಯ ವಿರುದ್ಧ ಆರೋಪಗಳನ್ನು ದಾಖಲಿಸಿದೆ.

"ಏನಿದು ಆಪರೇಷನ್ ಹಾರ್ಡ್ ಬಾಲ್?"

ಲಾರೆನ್ಸ್ ಬಿಷ್ಣೋಯ್ ಅಪರಾಧ ಜಾಲ ಮತ್ತು ಅದರ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಗುರಿಯಾಗಿಸಿಕೊಂಡು ಎಫ್ ಬಿಐ ನಡೆಸುತ್ತಿರುವ ದೀರ್ಘಾವಧಿಯ ತನಿಖಾ ಕಾರ್ಯಾಚರಣೆಯೇ ' ಆಪರೇಷನ್ ಹಾರ್ಡ್ ಬಾಲ್ ' ಈ ಕಾರ್ಯಾಚರಣೆಯಲ್ಲಿ ಬಿಷ್ಣೋಯ್ ಜಾಲ, ಜಗ್ಗು ಭಗವಾನ್ ಪುರಿಯಾ ಗ್ಯಾಂಗ್ ಮತ್ತು ರವೀಂದರ್ ಧಂಡಾ ನೇತೃತ್ವದ ಕಳ್ಳಸಾಗಣೆ ಜಾಲಗಳನ್ನು ಗುರಿಯಾಗಿಸಲಾಗಿದೆ.

ಈ ಸಂಘಟನೆಗಳು ಸುಲಿಗೆ, ಉದ್ದೇಶಿತ ಹತ್ಯೆಗಳು, ಗುಂಡಿನ ದಾಳಿಗಳು, ಬಲವಂತದ ಹಣ ವಸೂಲಿ ಹಾಗೂ ಅಂತರರಾಷ್ಟ್ರೀಯ ಗಡಿಗಳ ಮೂಲಕ ದೊಡ್ಡ ಪ್ರಮಾಣದ ಮಾದಕವಸ್ತು ಕಳ್ಳಸಾಗಾಣೆ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ಆರೋಪಗಳಿವೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online