Belagavi News:
ಟೆಹ್ರಾನ್ (ಇರಾನ್): ಇರಾನ್ ನ ಹತ್ಯೆಯಾದ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಅಂತಿಮ ನಮನ ಸಲ್ಲಿಸುವ ಮೂರು ದಿನಗಳ ಅಂತ್ಯಕ್ರಿಯೆ ಕಾರ್ಯಕ್ರಮ ಶುಕ್ರವಾರದಿಂದ ಆರಂಭವಾಗಿದೆ. ಕಾರ್ಯಕ್ರಮದ ಮೊದಲ ದಿನವೇ ಅವರ ಪಾರ್ಥಿವ ಶರೀರವಿರುವ ಶವಪೆಟ್ಟಿಗೆಯನ್ನು ಅವರು ಹತ್ಯೆಗೀಡಾದ ಸ್ಥಳಕ್ಕೆ ಕೊಂಡೊಯ್ಯಲಾಗಿದೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ ಕಾಸ್ಟಿಂಗ್ (IRIB) ಮಾಹಿತಿ ಪ್ರಕಾರ, ಪೂರ್ವ ಘೋಷಣೆ ಇಲ್ಲದೆ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಹುತಾತ್ಮ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಂಗ ಪಾರ್ಥಿವ ಶರೀರವನ್ನು ಹತ್ಯ ನಡೆದ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಬೆಂಬಲಿಗರು ನಮನ ಸಲ್ಲಿಸಿದರು.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿರುವಂತೆ, ಜುಲೈ 4 ಮತ್ತು 5ರಂದು ಟೆಹ್ರಾನ್ ನಲ್ಲಿ ಸಾರ್ವಜನಿಕ ಅಂತಿಮ ದರ್ಶನ ಮತ್ತು ವಿದಾಯ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಸುಮಾರು 2ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಸಾರ್ವಜನಿಕ ಶ್ರದ್ಧಾಂಜಲಿ ಸಮಾರಂಭವಾಗುವ ಸಾಧ್ಯತೆಯಿದೆ.
ಈ ನಡವೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಜಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೋಚಿಸಿದ್ದಾರೆ ಎಂದು ಇರಾನ್ ಸರಕಾರ ತಿಳಿಸಿದೆ. ಇಬ್ಬರೂ ಪ್ರಾದೇಶಿಕ ಭದ್ರತೆ, ಹರ್ಮುಜ್ ಜಲಸಂಧಿಯ ಪರಿಸ್ಥಿತಿ, ಲೆಬನಾನ್ ಕದನ ವಿರಾಮ ಹಾಗೂ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳ ಕುರಿತು ಚರ್ಚಿಸಿದ್ದಾರೆ ಎಂದು ಸರ್ಕಾರ ತನ್ನ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಭದ್ರತಾ ಕಾರಣಗಳಿಂದಾಗಿ ಅಲಿ ಖಮೇನಿ ಅವರ ಪುತ್ರ ಹಾಗೂ ಪ್ರಸ್ತುತ ಸರ್ವೋಚ್ಚ ನಾಯಕ ಮೊಜತಬಾ ಖಮೇನಿ ಅಂತ್ಯಕ್ರಿಯೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ನಿಂದ ಉಂಟಾಗಿರುವ ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇರಾನ್ ಅಧಿಕಾರಿಗಳ ಪ್ರಕಾರ, ಎರಡು ದಿನಗಳ ಸಾರ್ವಜನಿಕ ವಿದಾಯ ಮತ್ತು ಅಂತ್ಯಕ್ರಿಯೆ ಸಮಾರಂಭಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು. ಲಕ್ಷಾಂತರ ಜನರು ಭಾಗವಹಿಸುವ ಸಾಧ್ಯತೆಯಿಂದ ರಾಜಧಾನಿ ಟೆಹ್ರಾನ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಐ.ಆರ್.ಜಿ.ಪಿ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಟೆಹ್ರಾನ್ ಕಮಾಂಡ್ ನ ಕಮಾಂಡರ್ ಹಾಗೂ ಅಂತ್ಯಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆಯ ಪ್ರಧಾನ ಕಚೇರಿಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಹಸನ್ ಮಾಹಿತಿ ನೀಡಿದ್ದು, ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಪ್ರೆಸ್ ಟಿವಿ ವರದಿ ಪ್ರಕಾರ, ಟೆಹ್ರಾನ್ ನಲ್ಲಿ ಎರಡು ಪ್ರಮುಖ ಸಮಾರಂಭಗಳನ್ನು ಆಯೋಜಿಸಲಾಗಿದೆ. ಮೊದಲ ಕಾರ್ಯಕ್ರಮದಲ್ಲಿ ಇಮಾಮ್ ಖಮೇನಿ ಗ್ರಾಂಡ್ ಪ್ರಾರ್ಥನಾ ಮೈದಾನದಲ್ಲಿ ಸಾರ್ವಜನಿಕ ವಿದಾಯ ಹಾಗೂ ಅಂತ್ಯಕ್ರಿಯೆಯ ಪ್ರಾರ್ಥನೆ ನಡೆಯಲಿದ್ದು, ಬಳಿಕ ಪ್ರತ್ಯೇಕ ಸ್ಥಳದಲ್ಲಿ ಅಂತಿಮ ಶವಯಾತ್ರೆ ಮತ್ತು ಮೆರವಣಿಗೆ ಆಯೋಜಿಸಲಾಗಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಭಾರತವೂ ಅಧಿಕೃತವಾಗಿ ಭಾಗವಹಿಸುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿಯಂತೆ, ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟ್ಟ ಭಾರತವನ್ನು ಪ್ರತಿನಿಧಿಸಿ ಇರಾನ್ ಗೆ ಭೇಟಿ ನೀಡಿದ್ದಾರೆ.
ಭದ್ರತಾ ದೃಷ್ಟಿಯಿಂದ ಟೆಹ್ರಾನ್ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅಂತ್ಯಕ್ರಿಯೆ ಸಮಾರಂಭಗಳಿಗಾಗಿ ಜ್ಞಾಪಕ ಪೊಲೀಸ್ ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಲಕ್ಷಾಂತರ ಜನರು ಭಾಗವಹಿಸುವ ಸಾಧ್ಯತೆಯಿಂದ ಇದು ಇರಾನ್ ನ ಇತಿಹಾಸದಲ್ಲೇ ಅತಿ ದೊಡ್ಡ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯ ಕ್ರಮಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.