BELAGAVI NEWS :
ಶಿವಮೊಗ್ಗ,ಜೂನ್ 22 : 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಕೇಳಿ ಬಂದಿದ್ದ 'ಕುದುರೆ ವ್ಯಾಪಾರ' ಆರೋಪ ಇದೀಗ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮಾಜಿ ಸಚಿವ ಹಾಗೂ ಬಿಜೆಪಿಯಿಂದ ಉಚ್ಛಾಟಿತರಾಗಿರುವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ರಾಜಕೀಯದಲ್ಲಿ ಹೊಸ ಚಂಚಲನ ಮೂಡಿಸಿದೆ.
2019ರ ಜುಲೈ 23ರಂದು 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತ್ತು. ಬಳಿಕ ಜುಲೈ 26ರಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ ಬಿಜೆಪಿ ಸರ್ಕಾರ ರಚಿಸಿದ್ದರು.
ಆ ಸಮಯದಲ್ಲಿ ಬಿಜೆಪಿ ಶಾಸಕರ ಖರೀದಿ ಹಾಗೂ ಕುದುರೆ ವ್ಯಾಪಾರ ನಡೆಸಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಗಂಭೀರ ಆರೋಪ ಮಾಡಿದ್ದವು. ಆದರೆ ಬಿಜೆಪಿ ನಾಯಕರು ಆ ಆರೋಪಗಳನ್ನು ನಿರಂತರವಾಗಿ ತಳ್ಳಿ ಹಾಕುತ್ತಾ ಬಂದಿದ್ದರು.
ಆದರೆ ಇದೀಗ ಪರಿಸರ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಆಣೆ - ಪ್ರಮಾಣ ಮಾಡುವ ನಿರ್ಧಾರಕ್ಕೆ ಅ ಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, "ಹಿಂದೆ 17 ಕಾಂಗ್ರೆಸ್ ಶಾಸಕರಿಗೆ ಹಣ ನೀಡಿ ಖರೀದಿಸಿ ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೆವು. ಆ ನಿರ್ಧಾರದಿಂದ ನಮಗೆ ತಾತ್ಕಾಲಿಕ ಜಯ ಸಿಕ್ಕಂತಾದರೂ, ಅಂತಿಮವಾಗಿ ಅದೇ ನಮ್ಮ ಸರ್ಕಾರ ಹಾಳಾಗಲು ಕಾರಣವಾಯಿತು" ಎಂದು ಹೇಳಿರುವ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.
ಈಶ್ವರಪ್ಪ ಅವರ ಈ ಹೇಳಿಕೆ 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿದ್ದ ಆರೋಪಗಳಿಗೆ ಹೊಸ ಬಲ ನೀಡಿದಂತಾಗಿದ್ದು,ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ 'ಆಪರೇಷನ್ ಕಮಲ'ಮತ್ತು ಸರ್ಕಾರ ಪತನದ ವಿಚಾರವನ್ನು ಮುನ್ನಡೆಗೆ ತಂದಿದೆ.
ಈ ಹೇಳಿಕೆ ಕುರಿತು ಬಿಜೆಪಿ ನಾಯಕರು ಹೇಗೆ ಪ್ರತಿಕ್ರಿಸುತ್ತಾರೆ ಹಾಗೂ ಕಾಂಗ್ರೆಸ್ ಜೆಡಿಎಸ್ ಯಾವ ರೀತಿಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.
ಪರಿಸರ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ಆರೋಪದ ವಿಚಾರವಾಗಿ ಧರ್ಮಸ್ಥಳದಲ್ಲಿ ಆಣೆ - ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿಯಿಂದ ಉಚ್ಚಾಟರಾಗಿರುವ ಕೆ.ಎಸ್.ಈಶ್ವರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
"ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಧಾರ್ಮಿಕ ಕ್ಷೇತ್ರಗಳನ್ನು ರಾಜಕೀಯ ವಿವಾದಗಳಿಗೆ ಬಳಬಾರದು"ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ವೇಳೆ ಅವರು ಹಿಂದಿನ ಶಿವಮೊಗ್ಗ ವಾರ್ಡ್ ಚುನಾವಣೆಯ ಘಟಣೆಯನ್ನು ಉದಾರಣೆಯಾಗಿ ಉಲ್ಲೇಖಿಸಿದರು. "ಒಬ್ಬ ಅಭ್ಯರ್ಥಿ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೋ ಹಾಗೂ ಐದು ರೂಪಾಯಿ ನೀಡಿ ಮತ ಹಾಕುವಂತೆ ಆಣೆ- ಪ್ರಮಾಣ ಮಾಡಿಸಿದ್ದ.ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೋ ಜೊತೆ 10 ರೂಪಾಯಿ ನೀಡಿ ಮತ ಕೇಳಿದ್ದ.ಕೊನೆಗೆ 10 ರೂಪಾಯಿ ಕೊಟ್ಟ ಅಭ್ಯರ್ಥಿ ಗೆದ್ದ.ಇಂತಹ ಆಣೆ- ಪ್ರಮಾಣವುಗಳಿಗೆ ಯಾವುದೇ ಅರ್ಥವಿಲ್ಲ"ಎಂದು ವ್ಯಂಗ್ಯವಾಡಿದರು.
ಅಡ್ಡ ಮತದಾನ ವಿಚಾರದಲ್ಲಿ ಬಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವನ್ನು ಈಶ್ವರಪ್ಪ ಮಾಡಿದ್ದಾರೆ. "ಈ ಪ್ರಕರಣವನ್ನು ಕೇವಲ ಆನೆ ಪ್ರಮಾಣದ ಮೂಲಕ ಮುಚ್ಚಿಹಾಕುವ ಬದಲು, ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು. ಸತ್ಯಂಶ ಹೊರ ಬರಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಈಶ್ವರಪ್ಪ ಅವರ ಹೇಳಿಕೆ ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಯ ಕಾರಣವಾಗಿದ್ದು, ಪರಿಷತ್ ಚುನಾವಣೆ ಅಡ್ಡ ಮತದಾನ ಪ್ರಕರಣ ಮತ್ತಷ್ಟು ರಾಜಕೀಯ ತಾಪಮಾನ ಹೆಚ್ಚಿಸಿದೆ.
Also Read:
ಕನ್ನಡ ಕಡ್ಡಾಯ ಆದೇಶಕ್ಕೆ ಎಂಇಎಸ್ ಆಕ್ರೋಶ : ಬೆಳಗಾವಿಯಲ್ಲಿ ಉದ್ವಿಗ್ನತೆ