<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ದುನಿಯಾ ವಿಜಯ್ ಪ್ರತಿಭೆಗೆ ಫಿದಾ ಆದ ಪರಭಾಷಾ ಸೂಪರ್ ಸ್ಟಾರ್

ದುನಿಯಾ ವಿಜಯ್ ಪ್ರತಿಭೆಗೆ ಫಿದಾ ಆದ ಪರಭಾಷಾ ಸೂಪರ್ ಸ್ಟಾರ್
Summary: A famous foreign language star has praised the performance and personality of famous Kannada actor Duniya Vijay. These words of appreciation expressed about him have now gone viral on social media and have caught the attention of fans.

Belagavi news:

ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ವ್ಯಕ್ತಿತ್ವ. ಸಿನಿಮಾಗಳಲ್ಲಿ ಡ್ಯೂಪ್ ಮತ್ತು ಫೈಟರ್ ಆಗಿ ವೃತ್ತಿ ಜೀವನ ಆರಂಭಿಸಿದ ವಿಜಯ್, ತಮ್ಮ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಸಿನಿ ಪ್ರೇಮದ ಮೂಲಕ ಇಂದು ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಸಣ್ಣ ಪುಟ್ಟ ಪಾತ್ರಗಳಿಂದ ಆರಂಭವಾದ ಅವರ ಸಿನಿ ಪಯಣ, ನಾಯಕ ನಟರಾಗಿ ಬೆಳೆದು ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಕೇವಲ ಕನ್ನಡಕ್ಕೆ ಸೀಮಿತವಾಗದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ದುನಿಯಾ ವಿಜಯ್, ತಮ್ಮ ಅಭಿನಯದಂತೆ ಪರಭಾಷಾ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇದೀಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಖ್ಯಾತ ನಟರೊಬ್ಬರು ವಿಜಯ್ ಅವರ ಪ್ರತಿಭೆ ಮತ್ತು ಹೋರಾಟದ ಬದುಕನ್ನು ಕೊಂಡಾಡಿದ್ದು, ಈ ವಿಚಾರ ಸಿನಿ ಪ್ರೇಮಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Sponsored

ದುನಿಯಾ ವಿಜಯ್ ಅವರ ಸಾಧನೆ ಕನ್ನಡ ಚಿತ್ರರಂಗದ ಕಲಾವಿದರಿಗೆ ಸ್ಪೂರ್ತಿಯಾಗಿದ್ದು, ಶೂನ್ಯದಿಂದ ಆರಂಭಿಸಿ ರಮದ ಮೂಲಕ ಯಶಸ್ಸಿನ ಶಿಖರ ತಲುಪಿದ ಅವರ ಪಯಣ ಅನೇಕ ಯುವ ಕಲಾವಿದರಿಗೆ ಮಾದರಿಯಾಗಿದೆ. ಪರಭಾಷಾ ಸ್ಟಾರ್ ನೆಟರಿಂದ ವ್ಯಕ್ತವಾಗಿರುವ ಈ ಮೆಚ್ಚುಗೆ, ವಿಜಯ್ ಅವರ ಜನಪ್ರಿಯತೆ ಗಡಿಗಳನ್ನು ದಾಟಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ದುನಿಯಾ ವಿಜಯ್ ಅವರನ್ನು ಕೊಂದಾಡಿದ ವಿಜಯ್ ಸೇತುಪತಿ :

ದುನಿಯಾ ವಿಜಯ್ ಅಭಿನಯದ ತೆಲುಗಿನ ಬಹುನಿರೀಕ್ಷಿತ "ಸ್ಲಮ್ ಡಾಗ್" ಸಿನಿಮಾ ಇದೀಗ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ತಮಿಳು ಸ್ಟಾರ್ ನಟ ವಿಜಯ್ ಪತಿ ನಾಯಕನಾಗಿ ನಟಿಸಿದ್ದು, ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ದುನಿಯಾ ವಿಜಯ್ ಅವರ ಪಾತ್ರಕ್ಕೆ ವಿಶೇಷ ಮಹತ್ವ ನೀಡಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಟೀಸರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ಸೇತುಪತಿ, ದುನಿಯಾ ವಿಜಯ್ ಅವರ ಪ್ರತಿಭೆ ಶಿಸ್ತು ಮತ್ತು ವ್ಯಕ್ತಿತ್ವವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

Sponsored

"ಬಹಳ ವರ್ಷಗಳ ಹಿಂದೆ ನಾನು ಕನ್ನಡ ಸಿನಿಮಾದ ಚಿತ್ರೀಕರಣಕ್ಕಾಗಿ ಬಂದಿದ್ದಾಗ "ದುನಿಯಾ" ಸಿನಿಮಾ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿತ್ತು. ಆಗಲೇ ದುನಿಯಾ ವಿಜಯ್ ಅವರ ಬಗ್ಗೆ ತಿಳಿದುಕೊಂಡಿದ್ದೆ. ಈಗ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಾಗ, ಸೆಟ್ ನಲ್ಲಿ ಅವರ ಶಿಸ್ತು ಮತ್ತು ಕೆಲಸದ ಬದ್ಧತೆ ನೋಡಿ ಆಶ್ಚರ್ಯವಾಯಿತು" ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.

ಅಲ್ಲದೆ, "ಅವರು ಅತ್ಯಂತ ಪ್ರತಿಭಾವಂತ ನಟ. ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಖುಷಿಯ ವಿಷಯ ಮಾತ್ರವಲ್ಲ, ಅದು ಒಂದು ಗೌರವವು ಹೌದು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕನ್ನಡ ಚಿತ್ರರಂಗದಿಂದ ಆರಂಭಿಸಿ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಗುರುತಿಸಿಕೊಂಡಿರುವ ದುನಿಯಾ ವಿಜಯ್ ಅವರ ಸಾಧನೆಗೆ ಇದೀಗ ಪರಭಾಷಾ ಸ್ಟಾರ್ ನಟರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸವನ್ನು ಮೂಡಿಸಿದೆ. "ಸ್ಲಮ್ ಡಾಗ್ " ಚಿತ್ರದ ಮೂಲಕ ದುನಿಯಾ ವಿಜಯ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುವ ನೀರಿಕ್ಷೆ ಇದೆ.

ದುನಿಯಾ ವಿಜಯ್ ಗೆ ವಿಜಯ್ ಸೇತುಪತಿ ಮೆಚ್ಚುಗೆ - 'ಅವರೊಬ್ಬ ಅದ್ಭುತ ನಟ ಮತ್ತು ಮನುಷ್ಯ' :

Sponsored

ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಅವರ ಪ್ರತಿಭೆ ಮತ್ತು ವೃತ್ತಿಪರತೆಯನ್ನು ತಮಿಳು - ತೆಲುಗು ಚಿತ್ರರಂಗದ ಜನಪ್ರಿಯ ನಟ ವಿಜಯ್ ಸೇತುಪತಿ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ತೆಲುಗಿನ ಬಹು ನಿರೀಕ್ಷಿತ ' ಸ್ಲಂ ಡಾಗ್ ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದವರು, ವಿಜಯ್ ಅವರ ನಟನೆಯ ಶೈಲಿ ಮತ್ತು ಕೆಲಸದ ಬದ್ಧತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

"ಅವರು ಪಾತ್ರಕ್ಕಾಗಿ ತಯಾರಿ ನಡೆಸಿಕೊಳ್ಳುವ ರೀತಿ, ನಿರ್ದೇಶಕರೊಂದಿಗೆ ಚರ್ಚಿಸುವ ವಿಧಾನ ಮತ್ತು ನಿರ್ದೇಶಕರು ಹೇಳಿದ ವಿಚಾರಗಳಿಗೆ ತಮ್ಮದೇ ಆದ ಸ್ಪರ್ಶ ನೀಡುವ ಶೈಲಿ ನನಗೆ ತುಂಬಾ ಇಷ್ಟವಾಯಿತು. ಪ್ರತಿಯೊಂದು ಶಾರ್ಟ್ ನಲ್ಲೂ ಹೊಸತನ ತರುವ ಪ್ರಯತ್ನ ಅವರಲ್ಲಿದೆ. ಅವರೊಬ್ಬ ಅದ್ಭುತ ಮನುಷ್ಯ ಹಾಗೂ ಅದ್ಭುತ ನಟ. ಈ ಸಿನಿಮಾದಲ್ಲಿ ನಮ್ಮೊಂದಿಗೆ ನಟಿಸಿದ್ದಕ್ಕಾಗಿ ವಿಜಯ್ ಸರ್ ಗೆ ಧನ್ಯವಾದಗಳು" ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.

ವಿಜಯ್ ಸೇತುಪತಿ ಮಾತ್ರವಲ್ಲದೆ, 'ಸ್ಲಂ ಡಾಗ್ ' ಚಿತ್ರದ ನಿರ್ದೇಶಕ ಪುರಿ ಜಗನ್ನಾಥ್ ಕೂಡ ದುನಿಯಾ ವಿಜಯ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಅವರ ಪಾತ್ರ ವಿಶೇಷವಾಗಿದ್ದು, ಟೀಸರ್ ನಲ್ಲೇ ಅವರ ಪಾತ್ರದ ಮಹತ್ವ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

'ಸ್ಲಂ ಡಾಗ್ ' ಸಿನಿಮಾ ಬಿಕ್ಷುಕ ಮಾಫಿಯಾದ ಕಥಾಹಂದರವನ್ನು ಒಳಗೊಂಡಿದ್ದು, ವಿಜಯ್ ಸೇತುಪತಿ, ಟಬು , ದುನಿಯಾ ವಿಜಯ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಟೀಸರ್ ಸಿನಿ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಚಿತ್ರ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Sponsored

ಪರಭಾಷಾ ಸ್ಟಾರ್ ಗಳು ಮತ್ತು ನಿರ್ದೇಶಕರಿಂದ ದುನಿಯಾ ವಿಜಯ್ ಅವರಿಗೆ ಸಿಕ್ಕಿರುವ ಈ ಮೆಚ್ಚುಗೆ, ಕನ್ನಡ ನಟನ ಜನಪ್ರಿಯತೆ ಮತ್ತು ಪ್ರತಿಭೆ ಮತ್ತೊಮ್ಮೆ ಸಾಬೀತುಪಡಿಸಿದೆ.

Also Read:

ಆರ್ ಎಸ್ ಎಸ್ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online