belagavai news :
ದೇಶದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳಗೊಂಡಿದೆ.ಈ ಬಾರಿ ಪ್ರತಿ ಸಿಲೆಂಡರ್ ಗೆ₹29ರಷ್ಟು ಏರಿಕೆ ಮಾಡಲಾಗಿದ್ದು,ಹೊಸ ದರಗಳು ಜೂನ್ 7 ರಿಂದಲೇಜಾರಿಗೆ ಬಂದಿವೆ ಎಂದು ಉದ್ಯಮ ಮೂಲಗಳು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಈ ಪರಿಷ್ಕರಣಿಯ ನಂತರ,ದೆಹಲಿಯಲ್ಲಿ14.2ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆ ₹913 ರಿಂದ ₹942ಕ್ಕೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆ ಆಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಸ್ಥಿರತೆ ಮತ್ತು ಪೂರೈಕೆ ಬಿಕ್ಕಟ್ಟು ಪ್ರಮುಖ ಕಾರಣಗಳಾಗಿ ಹೇಳಲಾಗುತ್ತಿದೆ.
ದರ ಏರಿಕೆಯಿಂದ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ.ಈಗಾಗಲೇ ಪೆಟ್ರೋಲ್,ಡಿಸೈನ್ ಮತ್ತು ಸಿ.ಎನ್.ಜಿ ಬೆಲೆಗಳ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಏರಿಕೆ ಮತ್ತೊಂದು ಹೊರೆ ಎಂದು ಪರಿಗಣಿಸಲಾಗುತ್ತಿದೆ.
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮ ಅವರ ಪ್ರಕಾರ,ದೇಶಿಯ ಎಲ್‌ಪಿಜಿ ಮಾರಾಟದಲ್ಲಿ ತೈಲ ಕಂಪನಿಗಳಿಗೆ ಇನ್ನೂ ಪ್ರತಿ ಸಿಲೆಂಡರ್ ಗೆ ಸುಮಾರು ₹700 ರಷ್ಟು ನಷ್ಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಇದರ ಪರಿಷ್ಕರಣಿ ಭಾಗಶಃ ನಷ್ಟವನ್ನು ಸರಿದೂಗಿಸುವ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂಧನ ದರಗಳ ನಿರಂತರ ಏರಿಕೆಯಿಂದ ವೆಚ್ಚಗಳು ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಒತ್ತಡ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಾಂಶಗಳು:
ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ₹29 ಹೆಚ್ಚಳವಾಗಿದೆ.
ದೆಹಲಿಯಲ್ಲಿ ಸಿಲೆಂಡರ್ ಬೆಲೆ₹942ಕ್ಕೆ ಬಾರಿ ಏರಿಕೆ ಕಂಡಿದೆ.
ಟೈಲರ್ ಕಂಪನಿಗಳ ಅಂಡರ್-ರಿಕವರಿ ವೆಚ್ಚ ಇನ್ನೂ ಸುಮಾರು₹700 ಇದೆ.
ಜಾಗತಿಕ ಬಿಕ್ಕಟ್ಟಿನ ಪರಿಣಾಮ
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ನಿರಂತರ ಸಂಘರ್ಷದಿಂದಾಗಿ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ಮೇಲೆ ಭಾರಿ ಒತ್ತಡ ಉಂಟಾಗಿದೆ.ಇದರ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗುತ್ತಿದ್ದು,ಅದೇ ನೇರವಾಗಿ ದೇಶಿಯ ಎಲ್‌ಪಿಜಿ ದರಗಳ ಮೇಲು ಪರಿಣಾಮ ಬೀರುತ್ತಿದೆ.
ಇಂಧನ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ಅಸ್ಥಿರತೆಯೇ ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದ್ದು,ಮುಂದಿನ ದಿನಗಳಲ್ಲೂ ಜಾಗತಿಕ ಪರಿಸ್ಥಿತಿ ಆಧಾರದಲ್ಲಿ ಬೆಲೆಗಳಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಇದೆ.
ಎಲ್ ಪಿ ಜಿ ದರ ಏರಿಕೆ:
ಮಾರ್ಚ್ ನಂತರ ಎರಡನೇ ಪರಿಷ್ಕರಣಿ,ನಷ್ಟ ಇನ್ನೂ ಮುಂದುವರಿಕೆ ಇದಕ್ಕೂ ಮುನ್ನ ಮಾರ್ಚ್ ಏಳರಂದು ಪ್ರತಿ ಗ್ರಹ ಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು₹60 ಹೆಚ್ಚಿಸಲಾಗಿತ್ತು. ಇದೀಗ ನಡೆದಿರುವ ಇತ್ತೀಚಿನ₹29 ದೊರೆ ಏರಿಕೆ ತೈಲ ಕಂಪನಿಗಳಿಗೆ ದೇಶಿಯ ಎಲ್‌ಪಿಜಿ ಮಾರಾಟದಲ್ಲಿ ಉಂಟಾಗುತ್ತಿರುವ ನಷ್ಟವನ್ನು ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ದರ ಪರಿಷ್ಕರಣೆ ದೇಶದಾದ್ಯಂತ ಅನ್ವಯವಾಗಲಿದ್ದರೂ,ಸ್ಥಳೀಯ ತೆರಿಗೆಗಳು ಹಾಗೂ ಸಾರಿಗೆ ವೆಚ್ಚಗಳ ವ್ಯತ್ಯಾಸದಿಂದಾಗಿ ಪ್ರತಿ ನಗರದಲ್ಲೂ ಸಿಲಿಂಡರ್ ನ ಅಂತಿಮ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುವ ಸಾಧ್ಯತೆ ಇದೆ.
ಸುಜಾತಾ ಶರ್ಮಾ ಹೇಳಿಕೆ:
ಗುರುವಾರ ನಡೆದ ಅಂತರ್ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮ ಮಾತನಾಡಿದರು.
ಅವರು,ದೇಶಿಯ ಎಲ್‌ಪಿಜಿ ಲಭ್ಯತೆಯನ್ನು ಸಮರ್ಪಕವಾಗಿ ಕಾಯ್ದುಕೊಳ್ಳಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ದೇಶಿಯ ಉತ್ಪಾದನೆ ಹೆಚ್ಚಿಸುವುದು ಹಾಗೂ ಆಮದು ಸರಬರಾಜುನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ವಿವಿಧ ತಂತ್ರಗಳನ್ನು ಅನುಸರಿಸಲಾಗಿದೆ ಎಂದು ಅವರು ಹೇಳಿದರು.
ಗ್ರಾಹಕರಿಗೆ ನಿರಂತರವಾಗಿ ಎಲ್‌ಪಿಜಿ ಪುರೈಕೆ ಮಾಡುವುದೇ ಸರಕಾರದ ಪ್ರಮುಖ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಗೃಹಬಳಕೆಯ ಅಡುಗೆ ಅನಿಲ ಸಿಲೆಂಡರ್ಗಳ ಮೇಲಿನ ಅಂಡರ್-ರಿಕವರಿ ಕುರಿತು ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವ ಸಂಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮ,ತೈಲ ಕಂಪನಿಗಳಿಗೆ ಉಂಟಾಗುತ್ತಿರುವ ನಷ್ಟದ ಕೊರತೆ ಭರ್ತಿ ವೆಚ್ಚ ಇಂದಿಗೂ ಹೆಚ್ಚಿನ ಮಟ್ಟದಲ್ಲೇ ಇದೆ ಎಂದು ತಿಳಿಸಿದ್ದಾರೆ.
ಅವರ ಪ್ರಕಾರ,ಪ್ರತಿಗ್ರಹ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಗೆ ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟ ಸುಮಾರು ₹700 ಆಸು ಪಾಸಿನಲ್ಲೇ ಮುಂದುವರೆದಿದೆ. ಈ ಅಂಡರ್ - ರಿಕವರಿ ವೆಚ್ಚವು ದೇಶಿಯ ಮಾರುಕಟ್ಟೆಯಲ್ಲಿ ಎಲ್ ಪಿ ಜಿ ಮಾರಾಟದ ಬೆಲೆ ಮತ್ತು ನಿಜವಾದ ವೆಚ್ಚದ ನಡುವಿನ ಅಂತರವನ್ನು ತೋರಿಸುತ್ತದೆ.
ಈ ಹಿನ್ನೆಲೆಯಲ್ಲಿ ಇತ್ತೀಚಿನ ದರ ಪರಿಷ್ಕರಣಿಗಳ ಮೂಲಕ ಆರ್ಥಿಕ ಒತ್ತಡವನ್ನು ಭಾಗಶಃ ಮಾತ್ರ ಸರಿದೂಗಿಸಲು ಸಾಧ್ಯವಾಗುತ್ತಿದೆ ಎಂದು ಉದ್ಯಮ ವಲಯಗಳು ಹಾಗೂ ಮೂಲಗಳು ಅಭಿಪ್ರಾಯಪಡುತ್ತಿವೆ.
Also Read:
ಚಿರಂಜೀವಿ ಸಿನಿಮಾದಲ್ಲಿ ರಚಿತಾ ರಾಮ್ ? ಹೊಸ ಅಪ್ಡೇಟ್ ಫ್ಯಾನ್ಸ್ ನಲ್ಲಿ ಕುತೂಹಲ