<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಚಿರಂಜೀವಿ ಸಿನಿಮಾದಲ್ಲಿ ರಚಿತಾ ರಾಮ್ ? ಹೊಸ ಅಪ್ಡೇಟ್ ಫ್ಯಾನ್ಸ್ ನಲ್ಲಿ ಕುತೂಹಲ

ಚಿರಂಜೀವಿ ಸಿನಿಮಾದಲ್ಲಿ ರಚಿತಾ ರಾಮ್ ? ಹೊಸ ಅಪ್ಡೇಟ್ ಫ್ಯಾನ್ಸ್ ನಲ್ಲಿ ಕುತೂಹಲ
Summary: Is it possible that Rachita Ram will act in Chiranjeevi's new movie? This news has created a lot of curiosity in Tollywood and Sandalwood. Let's see if this news of Rachita Ram is true..

Belagavi news:

ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ "ಮೆಗಾ 158" ಸಿನಿಮಾದ ಬಗ್ಗೆ ದಿನಕ್ಕೊಂದು ಹೊಸ ಅಪ್ಡೇಟ್ಗಳು ಹೊರ ಬರುತ್ತಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ನಿರ್ದೇಶಕ ಬಾಬಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಎಲ್‌ಪಿಬಿ ಈ ಚಿತ್ರದಲ್ಲಿ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹರಡಿದ್ದು, ಅವರ ಸಿನಿಮಾಗಳಲ್ಲಿ ಹೆಮ್ಮೆ ಮತ್ತು ಸಂಭ್ರಮ ಮೂಡಿಸಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತವಾಗಿ ಘೋಷಣೆ ಹೊರ ಬಂದಿಲ್ಲ.

"ಕೆವಿಎನ್ ಪ್ರೊಡಕ್ಷನ್" ಸಂಸ್ಥೆಯು ಈ ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದು, ಫ್ಯಾನ್ - ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಚಿರಅವರವಿ ಮತ್ತು ನಿರ್ದೇಶಕ ಬಾಬಿ ಅವರ ಹಿಂದಿನ "ವಾಲ್ಟೆರ್ ವೀರಯ್ಯ" ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈ ಜೋಡಿ ಮತ್ತೆ ಒಂದಾಗಿರುವುದು ಚಿತ್ರರಸಿಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಚಿತ್ರತಂಡವು ತಮಿಳುನಾಡಿನ ಪ್ರಕೃತಿ ರಮಣೀಯ ತಾಣ ಪೊಳ್ಳಾಚಿಯಲ್ಲಿ ಚಿತ್ರಿಕರಣವನ್ನು ಬಿರುಸಿನಿಂದ ಮುಂದುವರಿಸುತ್ತಿದೆ. ಆಕ್ಷನ್ ಮತ್ತು ಎಂಟರ್ಟೈನ್ಮೆಂಟ್ ನಿಶ್ರಿತ ಈ ಸಿನಿಮಾ ದೊಡ್ಡಮಟ್ಟದಲ್ಲಿ ರೂಪಗೊಳ್ಳುತ್ತಿದೆ ಎಂಬ ಮಾಹಿತಿ ಹೊರ ಬಂದಿದೆ.

ರಚಿತಾ ರಾಮ್ ಅವರ ಪಾತ್ರದ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಸಿನಿಪ್ರಿಯರು ಆತುರದಿಂದ ಕಾಯುತ್ತಿದ್ದಾರೆ. ಈ ಸುದ್ದಿ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಎರಡರಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ "ಮೆಗಾ 158" ಸಿನಿಮಾ ಈಗಾಗಲೇ ಮಲ್ಟಿ ಸ್ಟಾರ್ ರ ಚಿತ್ರವಾಗಿ ರೂಪಗೊಳ್ಳುತ್ತಿದೆ ಎಂಬ ಚರ್ಚೆಯ ನಡುವೆ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಈ ಬಿಗ್ ಬಜೆಟ್ ಚಿತ್ರಕ್ಕೆ ಕನ್ನಡ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಹರಡುತ್ತಿದೆ.

ಇತ್ತೀಚೆಗೆ ರಜನಿಕಾಂತ್ ನಟನೆಯ "ಕೂಲಿ" ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರದ ಮೂಲಕ ಗಮನ ಸೆಳೆದಿದ್ದ ರಚಿತಾ ರಾಮ್, ಇದೀಗ ಚಿರಂಜೀವಿ ಸಿನಿಮಾದಲ್ಲಿ ಅತ್ಯಂತ ಪ್ರಮುಖ ಹಾಗೂ ಬಲಿಷ್ಠ ಪಾತ್ರವನ್ನು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಪಾತ್ರ ಕಥೆಯಲ್ಲಿ ಪ್ರಮುಖ ತಿರುವು ನೀಡುವಂತದ್ದು ಎಂದು ಮೂಲಗಳು ಸೂಚಿಸುತ್ತೇವೆ.

ಮೂಲಗಳ ಪ್ರಕಾರ, ಈ ವಿಶೇಷ ಪತ್ರಕ್ಕಾಗಿ ಮೊದಲು ಮಲಯಾಳಂ ನಟಿ ಹನಿ ರೋಸ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಅವರು ಆರಂಭದಲ್ಲಿ ಆಸಕ್ತಿ ತೋರಿದರೂ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದೀಗ ಆಸ್ಥಾನಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಗಾಸಿಪ್ ಹರಡಿದೆ.

ಚಿತ್ರದ ಶೂಟಿಂಗ್ ಸದ್ಯ ತಮಿಳುನಾಡಿನ ಪೊಳ್ಳಾಚಿಯಲ್ಲಿ ನಡೆಯುತ್ತಿದ್ದು, ಮುಂದಿನ ಶೆಡ್ಯೂಲ್ ನಲ್ಲಿ ರಚಿತಾ ರಾಮ್ ಚಿತ್ರತಂಡವನ್ನು ಸೇರಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ.

ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕಾಂಬಿನೇಶನ್ ನ ಈ ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಪ್ರತಿದಿನವೂ ಹೊಸ ಅಪ್ಡೇಟ್ಗಳು ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸುತ್ತಿವೆ.

'ಮೇಘ 158' ಚಿತ್ರದಲ್ಲಿ ಸ್ಟಾರ್ ನಟಿಯರ ದಂಡು :

ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ 'ಮೆಗಾ 158' ಸಿನಿಮಾ ಕುರಿತು ಹೊಸ ಅಪ್ಡೇಟ್ಗಳು ಹೊರ ಬರುತ್ತಿದ್ದು, ಚಿತ್ರವು ಕೇವಲ ಆಕ್ಷನ್ ಎಂಟರ್ಟೈನ್ರ್ ಮಾತ್ರವಲ್ಲದೆ ಬಲಿಷ್ಠ ಮಹಿಳಾ ಪಾತ್ರಗಳಿಗೂ, ಸಮಾನ ಮಹತ್ವ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಿದೆ.

ನಿರ್ದೇಶಕ ಬಾಬಿ ಈ ಬಾರಿ ಕಥೆಯಲ್ಲಿ ನಾಯಕಿಯರ ಪಾತ್ರಗಳಗೆ ಹೆಚ್ಚಿನ ತೂಕ ನೀಡಿದ್ದು, ಈಗಾಗಲೇ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಹಾಗೂ ಮಲಯಾಳಂ ನ ಉದಯೋನ್ಮುಖ ನಟಿ ಅನಸ್ವರ ರಾಜನ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂಲಗಳ ಪ್ರಕಾರ, ಅನಸ್ವರ ರಾಜನ್ ಅವರು ಚಿರಂಜೀವಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಗ್ಲಾಮರಸ್ ನಟಿ ನಿವೇತಾ ಪೆತುರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಈ ಮೂಲಕ 'ಮೆಗಾ 158' ಸಿನಿಮಾ ಬಹು ತಾರಾ ಬಳಗದ ಮಲ್ಟಿಸ್ಟಾರ್ರ ಪ್ರಾಜೆಕ್ಟ್ ಆಗಿ ರೂಪಗೊಳ್ಳುತ್ತಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಕಥೆಯಲ್ಲಿ ಮಹಿಳಾ ಪಾತ್ರಗಳಿಗೆ ನೀಡಿರುವ ಮಹತ್ವವು ಚಿತ್ರವನ್ನು ಇನ್ನಷ್ಟು ವಿಭಿನ್ನವಾಗಿಸಲಿದೆ ಎಂದು ಚಿತ್ರರಂಗದ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಇದೇ ವೇಳೆ, ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ "ಕೆವಿಎನ್ ಪ್ರೊಡಕ್ಷನ್" ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ತೆಲುಗು ಚಿತ್ರರಂಗಕ್ಕೆ ಅಧಿಕೃತ ಪ್ರವೇಶವು ಆಗಿದೆ. ವೆಂಕಟ್ ಕೆ ನಾರಾಯಣ್ ಮತ್ತು ಲೋಕೇಶ್ ಅವರು ಜಂಟಿಯಾಗಿ ಈ ಬಿಗ್ ಬಜೆಟ್ ಆಕ್ಷನ್ ಎಂಟರ್ಟೈನರ್ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ತಮನ್ ಎಸ್. ಸಂಗೀತ ನೀಡುತ್ತಿದ್ದು, ಜೈಲರ್ ಖ್ಯಾತಿಯ ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಈ ತಾಂತ್ರಿಕ ತಂಡದ ಜೊತೆಗೆ ಸಿನಿಮಾ ಮತ್ತಷ್ಟು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.

Also Read:

ಅಗ್ನಿವೀರ್ ಗಳ 7ನೇ ತಂಡಕ್ಕೆ ಅದ್ದೂರಿ ಬೀಳ್ಕೊಡುಗೆ: ಬೆಳಗಾವಿಯಲ್ಲಿ ಸಾರಂಗ ತಂಡದ ಆಕರ್ಷಕ ಏರ್ ಶೋ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online