Belagavi News:
NEET UG 2026 ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮೂಲದ ವಿದ್ಯಾರ್ಥಿ ಅಯಾನ್ ಯೂಸುಫ್ ವಿದೇಶಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ. ಸೌದಿ ಅರೇಬಿಯಾದಲ್ಲಿ ವ್ಯಾಸಂಗ ಮಾಡುತ್ತಿರುವ ಅಯಾನ್ ಅವರ ಈ ಸಾಧನೆ ಇದೀಗ ಶಿಕ್ಷಣ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ವೈದ್ಯಕೀಯ ಪ್ರವೇಶಕ್ಕೆ ಆದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯಾದ NEET UG 2026 ರಲ್ಲಿ ವಿದೇಶಿ ವಿಭಾಗದಲ್ಲಿ ಟಾಪರ್ ಆಗಿರುವ ಅಯಾನ್ ಯೂಸುಫ್, ಕಠಿಣ ಸ್ಪರ್ಧೆಯ ನಡುವೆಯೂ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಅವರ ಯಶಸ್ಸು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಅಯಾನ್, ಸೌದಿ ಅರೇಬಿಯಾದಲ್ಲಿ ಶಿಕ್ಷಣ ಪಡೆಯುತ್ತಿದ್ದು, ನಿರಂತರ ಪರಿಶ್ರಮ, ಶಿಸ್ತು ಬದ್ಧ ಅಧ್ಯಯನ ಮತ್ತು ಸ್ಪಷ್ಟ ಗುರಿಯೊಂದಿಗೆ ಈ ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಕುಟುಂಬದವರು , ಶಿಕ್ಷಕರು ಹಾಗೂ ಕನ್ನಡಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
NEET UG 2026 ಫಲಿತಾಂಶದಲ್ಲಿ ವಿದೇಶಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಅಯಾನ್ ಯೂಸುಫ್ ಅವರ ಸಾಧನೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಉನ್ನತ ಮ ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಅವರ ಯಶಸ್ಸು ಸ್ಪೂರ್ತಿದಾಯಕ ಉದಾಹರಣೆಯಾಗಿದೆ.
NEET UG 2026 - ಸೌದಿಯಲ್ಲಿ ಮಿಂಚಿದ ದಕ್ಷಿಣ ಕನ್ನಡದ ಪ್ರತಿಭೆ ; ವಿದೇಶಿ ವಿಭಾಗದಲ್ಲಿ ಅಯಾನ್ ಯೂಸುಫ್ ಟಾಪರ್ :
ನೀಟ್ ಯುಜಿ 2026 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು , ವಿದೇಶಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದ ಮಹಮದ್ ಅಯಾನ್ ಯೂಸುಫ್ ಕೊಳ್ನಾಡ್ ಅಗ್ರಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಶೇಕಡ 99.92 ಪರ್ಸೆಂಟೈಲ್ ಸಾಧನೆ ಮಾಡುವ ಮೂಲಕ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಮೈಲಿಗಲ್ಲು ನಿರ್ಮಿಸಿದ್ದಾರೆ.
ವಿದೇಶದಲ್ಲಿ ವ್ಯಾಸಂಗ ಮಾಡುತ್ತಾ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅಯಾನ್, ಪರಿಶ್ರಮ, ಶಿಸ್ತು ಮತ್ತು ನಿರಂತರ ಅಧ್ಯಯನದ ಮೂಲಕ ಈ ಯಶಸ್ಸು ಗಳಿಸಿದ್ದಾರೆ. ಅವರ ಸಾಧನೆಗೆ ಕುಟುಂಬದವರು, ಶಿಕ್ಷಕರು, ಸ್ನೇಹಿತರು ಹಾಗೂ ಅನಿವಾಸಿ ಭಾರತೀಯ ಸಮುದಾಯದಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
NEET UG 2026 ಫಲಿತಾಂಶದಲ್ಲಿ ವಿದೇಶಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಅಯಾನ್ ಯೂಸುಫ್ ಅವರ ಸಾಧನೆ, ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹೊಸ ಸ್ಪೂರ್ತಿಯಾಗಿದ್ದು, ಕನ್ನಡಿಗರ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
NEET UG 2026 ಟಾಪರ್ ಅಯಾನ್ ಯೂಸುಫ್ ಗೆ ಮತ್ತೊಂದು ಹೆಗ್ಗಳಿಕೆ - ಸಿಬಿಎಸ್‌ಸಿ 12ನೇ ವಿಜ್ಞಾನ ವಿಭಾಗದಲ್ಲೂ ಅಗ್ರಸ್ಥಾನ :
NEET UG 2026 ಪರೀಕ್ಷೆಯಲ್ಲಿ ವಿದೇಶಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದ ಮೊಹಮ್ಮದ್ ಅಯಾನ್ ಯೂಸುಫ್ ಕೊಳ್ನಾಡ್ ಮತ್ತೊಂದು ಗಮನಾರ್ಹ ಸಾಧನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು CBSE 12ನೇ ತರಗತಿ ವಿಜ್ಞಾನ ವಿಭಾಗದಲ್ಲೂ ಟಾಪರ್ ಆಗಿ ಹೊರಹಮ್ಮಿ ತಮ್ಮ ಶೈಕ್ಷಣಿಕ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸೌದಿ ಅರೇಬಿಯಾದ ಅಲ್ - ಜುಬೈಲ್ ನ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಯಾಗಿರುವ ಅಯಾನ್, ನಿರಂತರ ಪರಿಶ್ರಮ, ಸಿಸ್ತುಬದ್ಧ ಅಭಿಯಾನ ಮತ್ತು ಅತ್ಯುತ್ತಮ ಸಾಧನೆಯ ಮೂಲಕ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾದರಿಯಾಗಿದ್ದಾರೆ.
ಅಯಾನ್ ಅವರ ಈ ಅಪೂರ್ವ ಸಾಧನೆಯನ್ನು ಶ್ಲಾಘಿಸಿರುವ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್, ವಿದ್ಯಾರ್ಥಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಶಾಲೆಯು ಅವರ ಪರಿಶ್ರಮ, ಶೈಕ್ಷಣಿಕ ಶ್ರದ್ಧೆ ಹಾಗೂ ಸಾಧನೆಯನ್ನು ಮೆಚ್ಚಿ, ಮುಂದಿನ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ ಜೀವನಕ್ಕೆ ಶುಭ ಹಾರೈಸಿದೆ.
CBSE 12ನೇ ತರಗತಿ ಟಾಪರ್ ಹಾಗೂ NEET UG 2026 ವಿದೇಶಿ ವಿಭಾಗದ ಟಾಪರ್ ಎಂಬ ಎರಡು ಮಹತ್ವದ ಸಾಧನೆಗಳನ್ನು ಒಂದೇ ವರ್ಷದಲ್ಲಿ ದಾಖಲಿಸಿರುವ ಅಯಾನ್ ಯೂಸುಫ್, ದಕ್ಷಿಣಕನ್ನಡ ಪಾತ್ರವಲ್ಲದೆ ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ಹೆಮ್ಮೆ ತಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದಾರೆ.